ಭವಿಷ್ಯ ನಿಧಿ ಖಾತೆಯು ನಮಗೆ ನಿವೃತ್ತಿ ಮೊತ್ತ ಉಳಿತಾಯಕ್ಕೆ ಅತೀ ಉತ್ತಮವಾದ ಯೋಜನೆಯಾಗಿದೆ. ನಿಮ್ಮ ಪಿಎಫ್ ಖಾತೆಗೆ ಹಣವು ಜಮೆ ಮಾಡಿದಿದ್ದರೆ, ನೀವು ಉದ್ಯೋಗ ಮಾಡುವ ಸಂಸ್ಥೆಯು ನಿಮ್ಮ ಆರ್ಥಿಕ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದಂತೆ ಆಗುತ್ತದೆ.
ಹಾನಿಯನ್ನು ತಪ್ಪಿಸಲು ಸಂಸ್ಥೆಗಳು ಇಪಿಎಫ್ ಬಾಕಿಗಳನ್ನು ಸಕಾಲಿಕವಾಗಿ ಪಾವತಿಸುತ್ತಿದೆಯೇ ಎಂದು ನಾವು ಖಚಿತಪಡಿಸಬೇಕಾಗುತ್ತದೆ. ನಾವು ಈ ಬಗ್ಗೆ ಆಗಾಗ ಪರಿಶೀಲನೆ ಮಾಡಬೇಕು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಒತ್ತಾಯಿಸುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಯು ಕೆಲವು ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿನ ಉದ್ಯೋಗಿಗಳಿಗೆ ಕಡ್ಡಾಯ ಕೊಡುಗೆ ಭವಿಷ್ಯ ನಿಧಿ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಇಪಿಎಫ್‌ಗೆ ಕೊಡುಗೆ ನೀಡುತ್ತಾರೆ. ಇಪಿಎಫ್ ಖಾತೆಯಲ್ಲಿ ಸಂಗ್ರಹವಾದ ಮೊತ್ತವನ್ನು ಉದ್ಯೋಗಿಗೆ ನಿವೃತ್ತಿಯ ಸಮಯದಲ್ಲಿ ಅಥವಾ ಸೇವೆಯಿಂದ ಕೊನೆಯಾಗುವ ಸಮಯದಲ್ಲಿ ಪಾವತಿಸಲಾಗುತ್ತದೆ.
ಉದ್ಯೋಗದಾತರಿಂದ ಪಿಎಫ್ ಜಮೆ ವಿಳಂಬ
ಇಪಿಎಫ್‌ಒ ನಿಗದಿಪಡಿಸಿದ ದರಗಳ ಪ್ರಕಾರ, ಕೊಡುಗೆಗಳನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡದ ಉದ್ಯೋಗದಾತರು ಹಾನಿ ಮತ್ತು ಬಾಕಿ ಮೊತ್ತದ ಮೇಲಿನ ಬಡ್ಡಿಯನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ. ಉದ್ಯೋಗಿಯು ತನ್ನ ಪಿಎಫ್ ಮೊತ್ತವನ್ನು ಸಂಬಳದಿಂದ ಕಡಿತಗೊಳಿಸಿ, ಇಪಿಎಫ್ ಖಾತೆಯಲ್ಲಿ ಜಮೆ ಮಾಡದಿದ್ದರೆ ಇಪಿಎಫ್‌ಒಗೆ ದೂರು ಸಲ್ಲಿಸಬಹುದು.
ನಿಮ್ಮ ಉದ್ಯೋಗದಾತರು ನಿಮ್ಮ ಪಿಎಫ್ ಕೊಡುಗೆಗಳನ್ನು ಮಾಡಿಲ್ಲವೇ ಎಂದು ಪರಿಶೀಲನೆ ಮಾಡುವುದು ಮೊದಲ ಹಂತವಾಗಿದೆ. ಇಪಿಎಫ್‌ಒ ಸದಸ್ಯ ಪೋರ್ಟಲ್ ಮೂಲಕ ಅಥವಾ ನಿಮ್ಮ ಪಿಎಫ್ ಕಛೇರಿಯನ್ನು ಸಂಪರ್ಕಿಸುವ ಮೂಲಕ ನೀವು ನಿಮ್ಮ ಪಿಎಫ್ ಖಾತೆಯ ಹೇಳಿಕೆಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಉದ್ಯೋಗದಾತರು ಇಪಿಎಫ್‌ಒಗೆ ಪಾವತಿಸಬೇಕಾದ ಹಾನಿ, ಬಡ್ಡಿ
ಕೊಡುಗೆಗಳನ್ನು ಸರಿಯಾದ ಸಮಯಕ್ಕೆ ಜಮೆ ಮಾಡದ ಉದ್ಯೋಗದಾತರು ಅಥವಾ ಸಂಸ್ಥೆಯು ಸೆಕ್ಷನ್ 14B ಅಡಿಯಲ್ಲಿ ಹಾನಿಯನ್ನು ಮತ್ತು ಸೆಕ್ಷನ್ 7Q ಅಡಿಯಲ್ಲಿ ಬಡ್ಡಿಯನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ. ಹಾನಿಗಳನ್ನು ಈ ಕೆಳಗಿನ ದರಗಳಲ್ಲಿ ವಿಧಿಸಲಾಗುತ್ತದೆ.
* 2 ತಿಂಗಳಿಗಿಂತ ಕಡಿಮೆ ಅವಧಿಯಾದರೆ ವಾರ್ಷಿಕ ಶೇಕಡ 5 ಬಡ್ಡಿ
* 2-4 ತಿಂಗಳುಗಳಾದರೆ ವಾರ್ಷಿಕ ಶೇಕಡ 10 ಬಡ್ಡಿ
* 4-6 ತಿಂಗಳುಗಳಾದರೆ ವಾರ್ಷಿಕ ಶೇಕಡ 15 ಬಡ್ಡಿ
* 6 ತಿಂಗಳಿಗಿಂತ ಹೆಚ್ಚಾದರೆ ವಾರ್ಷಿಕ ಶೇಕಡ 25 ಬಡ್ಡಿ
ದೂರು ನೀಡುವುದು ಹೇಗೆ?
ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿ: ದೂರು ಸಲ್ಲಿಸಲು ಅತ್ಯಂತ ಅನುಕೂಲಕರ ಮಾರ್ಗವೆಂದರೆ ಇಪಿಎಫ್ ಪೋರ್ಟಲ್ ಆಗಿದೆ. ನಿಮ್ಮ ಯುಎಎನ್ (ಯುನಿವರ್ಸಲ್ ಖಾತೆ ಸಂಖ್ಯೆ), ಉದ್ಯೋಗದಾತರ ಕೋಡ್ ಅನ್ನು ನಮೂದಿಸುವ ಮೂಲಕ, ನಿಮ್ಮ ಕುಂದುಕೊರತೆಯ ಸ್ವರೂಪ ಸೇರಿದಂತೆ ನಿಮ್ಮ ವಿವರಗಳನ್ನು ಒದಗಿಸುವ ಮೂಲಕ ನೀವು ದೂರನ್ನು ನೋಂದಾಯಿಸಬಹುದು.
ಲಿಖಿತ ದೂರು ಸಲ್ಲಿಸಿ: ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಪಿಎಫ್ ಪ್ರಾದೇಶಿಕ ಕಚೇರಿಗೆ ಲಿಖಿತ ದೂರನ್ನು ಸಲ್ಲಿಸಬಹುದು. ದೂರನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ತಿಳಿಸಬೇಕು. ಇದು ನಿಮ್ಮ ವಿವರಗಳು, ಉದ್ಯೋಗದಾತರ ವಿವರಗಳು, ಕುಂದುಕೊರತೆಯ ಸ್ವರೂಪ ಮತ್ತು ಪೂರಕ ಸಾಕ್ಷ್ಯಗಳನ್ನು ಒಳಗೊಂಡಿರಬೇಕು.


Click it and Unblock the Notifications