ನಮ್ಮ ಮೆಟ್ರೋ ಬೆಂಗಳೂರು ಮತ್ತು ಬೆಂಗಳೂರು ಹೊರ ಪ್ರದೇಶದ ಜನರಿಗೂ ಮೆಟ್ರೋ ಸೌಲಭ್ಯ ಲಭ್ಯವಾಗುವಂತೆ ಮಾಡಲು ಎಲ್ಲ ಪ್ರಯತ್ನವನ್ನು ಮಾಡುತ್ತಿದೆ. ಪ್ರಸ್ತುತ ಗ್ರೀನ್ ಮತ್ತು ಪರ್ಪಲ್ ಲೇನ್ ಮೆಟ್ರೋಗಳಿದೆ. ಆದರೆ ಈ ಮತ್ತೆ ಹಲವಾರು ಹೊಸ ಲೇನ್‌ಗಳ ಆರಂಭದ ತಯಾರಿ ನಡೆಯುತ್ತಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮತ್ತೊಂದು ಮೈಲಿಗಲ್ಲಿನಲ್ಲನ್ನು ತೆಗೆದುಕೊಂಡಿದೆ. ಈಗಾಗಲೇ ರೆಡ್, ಎಲ್ಲೋ ಲೇನ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಪಿಂಕ್ ಲೇನ್ ಬಗ್ಗೆ ನಿಮಗೆ ತಿಳಿದಿದೆಯೇ?. ಇದರ ನಿರ್ಮಾಣ ಕಾರ್ಯ ಈಗಾಗಲೇ ಶೇಕಡ 95 ರಷ್ಟು ನಡೆದಿದೆ ಎಂದು ವರದಿಯಾಗಿದೆ.

ಪಿಂಕ್ ಮೆಟ್ರೋ ಲೇನ್ ಮಾಹಿತಿ
ಹೊಸ ಪಿಂಕ್ ಮೆಟ್ರೋ ಯೋಜನೆಯು ಕಾಳೇನ ಅಗ್ರಹಾರದಿಂದ ಎಂಜಿ ರಸ್ತೆ ಮತ್ತು ಟ್ಯಾನರಿ ರಸ್ತೆ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದೆ. 24 ಸುರಂಗಗಳಿದ್ದು, 21.26 ಕಿಮೀ ಪಿಂಕ್ ಲೇನ್ ಮೆಟ್ರೋದಲ್ಲಿ ಟನಲ್ ಬೋರಿಂಗ್ ಮೆಷಿನ್ ತುಂಗಾದಿಂದ ಪೂರ್ಣಗೊಂಡ 21 ನೇ ಸುರಂಗ ಯೋಜನೆಯಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ತ್ವರಿತವಾಗಿ ಇದರ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಬೆಂಗಳೂರು ಪಿಂಕ್ ಲೇನ್ ಮೆಟ್ರೋ ಯೋಜನೆಯು 21.26 ಕಿಲೋಮೀಟರ್‌ಗಳಷ್ಟು ವಿಸ್ತರಿಸಿದೆ. 13.76 ಕಿಲೋಮೀಟರ್ ಅಂಡರ್‌ಗ್ರೌಂಡ್ ವಿಭಾಗ ಮತ್ತು 7.5-ಕಿಲೋಮೀಟರ್ ಎತ್ತರದ ವಿಭಾಗವನ್ನು ಒಳಗೊಂಡಿದೆ.
ಈ ಟ್ರ್ಯಾಕ್ 18 ನಿಲ್ದಾಣಗಳನ್ನು ಒಳಗೊಂಡಿದೆ, ಅವುಗಳಲ್ಲಿ 12 ಅಂಡರ್‌ಗ್ರೌಂಡ್ ಆಗಿದೆ. ವರದಿಗಳ ಪ್ರಕಾರ, ಟಿಬಿಎಂ ತುಂಗಾ 401 ದಿನಗಳಲ್ಲಿ 1,184.4 ಮೀಟರ್ ಕೊರೆಯಲಾಗಿದೆ. ಪಿಂಕ್ ಲೇನ್ ಮೆಟ್ರೋದ ಹೊಸ ಮಾರ್ಗವು ಕಾಳೇನ ಅಗ್ರಹಾರ, ಬನ್ನೇರುಘಟ್ಟ ರಸ್ತೆ ಮತ್ತು ನಾಗವಾರದಂತಹ ಸ್ಥಳಗಳ ಮೂಲಕ ಪ್ರಯಾಣಿಕರನ್ನು ಹತ್ತಿಸುತ್ತದೆ. ಅಂದರೆ ಈ ಸ್ಥಳದವರಿಗೆ ಅಧಿಕ ಸಹಾಯವಾಗಲಿದೆ.
"ಟಿಬಿಎಂ ತನ್ನ ನಿಗದಿತ ಉದ್ದದಲ್ಲಿ ಹೆಚ್ಚಾಗಿ ಸುರಂಗ ಹೊಂದಿದೆ. ಪ್ರಸ್ತುತ ಕೋರ್ ಕಟಿಂಗ್, ಡ್ರಿಲ್ಲಿಂಗ್ ಹೋಲ್ಸ್ ಮತ್ತು ಇತರ ಕೆಲಸಗಳಲ್ಲಿ ತೊಡಗಿದೆ. ಇದರ ಕಾರ್ಯ ಬುಧವಾರ ಕೆಜಿ ಹಳ್ಳಿವರೆಗೆ ತಲುಪಲಿದೆ," ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿಬಿಎಂ ತುಂಗಾ ಮತ್ತು ಟಿಬಿಎಂ ರುದ್ರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ ಕೆಲಸ ಮಾಡುತ್ತಿದೆ. ವರದಿಗಳ ಪ್ರಕಾರ, ಎಲ್ಲಾ ಸಿವಿಲ್ ಮತ್ತು ಟ್ರ್ಯಾಕ್ ಹಾಕುವ ಕೆಲಸಗಳು ಮುಂದಿನ ವರ್ಷದ ದ್ವಿತೀಯಾರ್ಧದೊಳಗೆ ಪೂರ್ಣಗೊಳ್ಳಲಿದೆ.


Click it and Unblock the Notifications