ನಿವೃತ್ತಿ ಎಂದರೆ ದುಡಿಮೆಯ ಮೂಲಕ ಗಳಿಸುವ ಅವಧಿಯ ಅಂತ್ಯ ಎಂದು ಹೇಳಬಹುದು. ಹಾಗಾಗಿ ನಿವೃತ್ತಿಯ ನಂತರ ಬಂಡವಾಳ ಹೂಡುವುದು ಅನೇಕರಿಗೆ ದೊಡ್ಡ ಸವಾಲು. ನಿಯಮಿತ ಆದಾಯದ ಅನುಪಸ್ಥಿತಿಯಲ್ಲಿ, ಒಬ್ಬರು ಇತರರನ್ನು ಅವಲಂಬಿಸಿರಬೇಕು ಅಥವಾ ಒಬ್ಬರ ಅಗತ್ಯಗಳಲ್ಲೇ ರಾಜಿ ಮಾಡಿಕೊಳ್ಳಬೇಕು. ಆದ್ದರಿಂದ, ನಿಯಮಿತ ಆದಾಯದ ಮೂಲ ನಮಗೆ ಹಣಕಾಸಿನ ಸ್ವಾತಂತ್ರ್ಯ ಮತ್ತು ಸ್ವಾವಲಂಬಿ ನಿಯಮಗಳ ಮೇಲೆ ಬದುಕುವ ಸ್ವಾತಂತ್ರ್ಯವನ್ನು ಖಚಿತ ಪಡಿಸುತ್ತದೆ. ಭಾರತದ ಹಣಕಾಸು ಯೋಜನೆಗಳು ಇನ್ನೂ ಬಹಳ ದೂರ ಸಾಗಬೇಕಿದೆ. ಏಕೆಂದರೆ ನಿವೃತ್ತಿಯ ನಂತರ ಜನರು ಉಳಿತಾಯ ಹೂಡಿಕೆ ಮಾಡುವಾಗ ಎಫ್‌ಡಿ ಹೊರತುಪಡಿಸಿ ಬೇರೆ ಆಯ್ಕೆಗಳ ಬಗ್ಗೆ ಯೋಚಿಸುವುದೇ ಇಲ್ಲ.
ಆರೋಗ್ಯ-ಆರೈಕೆ ವೆಚ್ಚಗಳು ಹೆಚ್ಚಾಗುತ್ತಿದ್ದು, ಮಕ್ಕಳ ಮೇಲಿನ ಆರ್ಥಿಕ ಅವಲಂಬನೆಯು ಕ್ಷೀಣಿಸುತ್ತಿರುವ ಸಮಯದಲ್ಲಿ, ನಿಮ್ಮ ಆದಾಯದ ಏಕೈಕ ಮೂಲವಾದ ನಿಮ್ಮ ನಿವೃತ್ತಿಯ ಜೀವನವು ಹೆಚ್ಚಿನದನ್ನು ಮಾಡುವ ಅಗತ್ಯತೆಗಳಿವೆ. ಅದಕ್ಕಾಗಿ ಬ್ಯಾಂಕ್ ನಲ್ಲಿ ಎಫ್‌ಡಿ ಹೂಡಿಕೆಗೆ ಪರ್ಯಾಯವಾಗಿ ಹೂಡಿಕೆ ಮಾಡುವ ಹಲವು ಯೋಜನೆಗಳಿವೆ. ಇದರಿಂದ ಹೆಚ್ಚಿನ ಪ್ರಯೋಜನಗಳನ್ನೂ ಪಡೆಯಬಹುದಾಗಿದೆ.
ನಿವೃತ್ತಿಯ ಜೀವನದ ನಂತರ ಆರ್ಥಿಕ ಸಬಲತೆ ಕಾಣುವುದು ಹೇಗೆ? ಎಂಬ ಗೊಂದಲಕ್ಕೆ ಪರಿಹಾರ ಇಲ್ಲಿದೆ. ಹಾಗಾಗಿ, ನಾವು ಕೆಲವು ಆದ್ಯತೆಯ ಪೂರ್ವ-ನಿವೃತ್ತಿಯ ಹೂಡಿಕೆ ಆಯ್ಕೆಗಳು ಮತ್ತು ನಿವೃತ್ತಿಯ ನಂತರದ ಹೂಡಿಕೆಯ ಆಯ್ಕೆಗಳನ್ನು ಇಲ್ಲಿ ನೋಡಬಹುದಾಗಿದೆ.
1. ಹಿರಿಯ ನಾಗರಿಕರ ಉಳಿತಾಯ ಯೋಜನೆ:
ಹಿರಿಯ ನಾಗರಿಕ ಉಳಿತಾಯ ಯೋಜನೆಯು (ಎಸ್‌ಸಿಎಸ್‌ಎಸ್) ಯೋಜನೆಯು ಹೆಚ್ಚಿನ ಉಳಿತಾಯ ಬಯಸುವವರಿಗೆ ಸೂಕ್ತವಾಗಿದೆ. ಅಲ್ಲದೆ ಹಣದುಬ್ಬರವನ್ನು ನಿಯಂತ್ರಿಸುವ ಮತ್ತು ಆದಾಯವನ್ನು ನಿಯಮಿತವಾಗಿ ಸರಿದೂಗಿಸಲು ಭರವಸೆ ನೀಡುವ ಸ್ಥಿರ ಆದಾಯ ದರವಾಗಿದೆ. ಪ್ರಸ್ತುತ ಈ ಬಡ್ಡಿದರವು ಶೇ.7.4 ಹೊಂದಿಸುವ ಜೊತೆಗೆ ಸ್ಥಿರವಾದ ಠೇವಣಿಯನ್ನು ನೀಡುವುದಕ್ಕಿಂತ ಹೆಚ್ಚಾಗಿರುತ್ತದೆ. ಇದರಲ್ಲಿ ಸ್ವೀಕರಿಸಿದ ಬಡ್ಡಿ ದರಕ್ಕೆ ತೆರಿಗೆ ವಿಧಿಸಲಾಗುತ್ತದೆ. ಸಂಗೀತ ಸೆಕ್ಷನ್ (ಕಲಂ ಅಥವಾ ವಿಧಿ) 80ಸಿ ಅಡಿಯಲ್ಲಿ ಯೋಜನೆ ಅಡಿ ಠೇವಣಿ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಖಾತೆ ತೆರೆಯಲು ಕನಿಷ್ಠ ಮೊತ್ತದ ಹೂಡಿಕೆ ಮಿತಿಯನ್ನು 1,000 ರೂ.ಗೆ ನಿಗದಿಪಡಿಸಲಾಗಿದೆ. ಆರಂಭಿಕ ಅವಧಿಯು 5 ಮತ್ತು 3 ವರ್ಷಗಳಿಗೆ ಇರುತ್ತದೆಂದು. ಆದರೂ ನಿಮ್ಮ ಹೂಡಿಕೆ ಮೊತ್ತವು 15 ಲಕ್ಷ ಮೀರುವಂತಿಲ್ಲ. ಒಂದು ವೇಳೆ 60 ವರ್ಷ ಮೇಲ್ಪಟ್ಟವರಾಗಿದ್ದರೆ, ನಿಮ್ಮ ಪಾಲುದಾರರೊಂದಿಗೆ ಜಂಟಿ ಖಾತೆ ತೆರೆಯಲೂ ಅವಕಾಶ ಇರುತ್ತದೆ.
02. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ:
ಈ ಯೋಜನೆಯು ವರ್ಷಗಳ ಅವಧಿಯನ್ನು ಹೊಂದಿರಲಿದೆ. ಏಕ ಖಾತೆದಾರರಿಗೆ 4.5 ಲಕ್ಷ ಹಾಗೂ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಜಂಟಿ ಖಾತೆ ಮೂಲಕ ಪಾತಿಸುವುದಿದ್ದಲ್ಲಿ 9 ಲಕ್ಷ ರೂ. ಹೂಡಿಕೆ ಮಿತಿ ಇರಲಿದೆ. ಶೆ.6.6 ಕಡಿಮೆ ಬಡ್ಡಿದರದಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಇದು ಸರ್ಕಾರಿ ಪ್ರಾಯೋಜಿತ ಯೋಜನೆ ಆಗಿರುವುದರಿಂದ ಇದರ ಸುರಕ್ಷತಾ ಅಂಶಗಳು ಪ್ರಬಲವಾಗಿಯೇ ಇವೆ. ಹಣ ವಂಚನೆಗೆ ಒಳಗಾಗುವ ಪ್ರಮೇಯ ಬರುವುದಿಲ್ಲ. ಈ ಯೋಜನೆ ಯಾವುದೇ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ನೀಡುವುದಿಲ್ಲ ಎಂಬುದನ್ನು ಹೊರತುಪಡಿಸಿದರೆ, ಉಳಿದೆಲ್ಲ ವಿಧಾನಗಳಲ್ಲೂ ಸೂಕ್ತ ಲಾಭ ಒದಗಿಸುವ ಸಾಮರ್ಥ್ಯದ ಯೋಜನೆಯಾಗಿದೆ.
03. ಪ್ರಧಾನ ಮಂತ್ರಿ ವಯ ವಂದನ ಯೋಜನೆ:
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (ಪಿಎಂವಿವಿವೈ) ಯೋಜನೆಯು ಹೂಡಿಕೆ ವಿಧಾನದ ಮತ್ತೊಂದು ಪರ್ಯಾಯ ವಾಗಿದೆ. ಇದು 10 ವರ್ಷಗಳ ಅವಧಿಗ ಶೇ.7.4 ರಷ್ಟು ಸ್ಥಿರ ಮಾಸಿಕ ಪಿಂಚಣಿ ದರವನ್ನು ಒದಗಿಸುತ್ತದೆ. ಈಗಾಗಲೇ ಈ ಯೋಜನೆಯನ್ನು 2023ರ ಮಾರ್ಚ್ 31ರ ವರೆಗೆ ವಿಸ್ತರಿಸಲಾಗಿದೆ. ಈ ಖಾತೆಯನ್ನು ತೆರೆಯಲು 60 ವರ್ಷ ಅಥವಾ ಇದಕ್ಕಿಂತಲೂ ಮೇಲ್ಪಟ್ಟವರಾಗಿರಬೇಕು. ಇದರ ಹೂಡಿಕೆ ಮಾಡಲು ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿ ಮಾಡುವ ವಿಧಾನಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಇದರಿಂದ ತೆರಿಗೆ ಪ್ರಯೋಜನ ಇರುವುದಿಲ್ಲ. ಆದರೂ, ಈ ಹೂಡಿಕೆಯಿಂದ ಮೂರು ವರ್ಷಗಳ ನಂತರ ಶೇ.75 ಪ್ರತಿಶತದಷ್ಟು ಹಣವನ್ನು ಸಾಲವಾಗಿ ಪ್ರಡೆಯಬಹುದು. ನಂತರ ಹೂಡಿಕೆ ಮಾಡಿದ ಹಣವನ್ನು ಪಾವತಿಸದ ಸಾಲದ ಮೊತ್ತಕ್ಕೆ ಅನ್ವಯಿಸಲಾಗುತ್ತದೆ. ಜೊತೆಗೆ ವೈದ್ಯಕೀಯ ಚಿಕಿತ್ಸೆಗಳಿಗೆ ಅಥವಾ ತುರ್ತು ಸಂದರ್ಭಗಳಲ್ಲಿ ಹೂಡಿಕೆಯನ್ನು 10 ವರ್ಷಗಳ ಮೊದಲೇ ಹಿಂತೆಗೆದುಕೊಳ್ಳುವುದಿದ್ದಲ್ಲಿ ಶೇ.2 ರಷ್ಟು ಹೂಡಿಕೆ ಕಡಿತಗೊಳಿಸಲಾಗುತ್ತದೆ.
4. ಸಂರಕ್ಷಿತ(Conservative) ನಿಧಿ:
ಇದು ನಿವೃತ್ತಿ ನಂತರದ ಹೂಡಿಕೆಯ ಮತ್ತೊಂದು ವಿಧಾನವಾಗಿದೆ. ಶೇ.85-90 ಪ್ರತಿಶತ ಸಾಲ ಮತ್ತು ಶೇ.5-10 ಪ್ರತಿಶತದಷ್ಟು ಈಕ್ವಿಟಿಯ ಆಸ್ತಿ ಹಂಚಿಕೆಯನ್ನು ಹೊಂದಿರುವ ಹಾಗೂ ಪ್ರಾಥಮಿಕ ಬಂಡವಾಳ ಸಂರಕ್ಷಣೆಗೆ ಸಂಬಂಧಿಸಿದ ಹಣಕಾಸು ನಿಧಿ ಇದಾಗಿದೆ. ಹೂಡಿಕೆದಾರರು ಉತ್ತಮ ಗುಣಮಟ್ಟದ ಈಕ್ವಿಟಿಗೆ ಹೊಂದಿಕೊಳ್ಳುವುದರಿಂದ ಅವರು ಶುದ್ಧ ಸಾಲನಿಧಿಯಲ್ಲಿ ಹೂಡಿಕೆ ಮಾಡುವುದಕ್ಕಿಂತಲೂ ಹೆಚ್ಚಿನ ಆದಾಯ ಪಡೆಯಬಹುದು. ಸ್ಥಿರವಾದ ಆದಯ ಬಯಸುವವರಿಗೆ, ದೀರ್ಘಾವಧಿಯ ಹಣಕಾಸಿನ ಉದ್ದೇಶ ಹೊಂದವರಿಗೆ ಅಥವಾ ಕಡಿಕೆ ರಿಸ್ಕ್ ಇರುವವರಿಗೆ ಇದು ಸೂಕ್ತವಾಗಿರುತ್ತದೆ. ಒಂದು ವೇಳೆ ಹೆಚ್ಚಿನ ಸ್ಥಿರ ಆದಾಯದ ಮಾನ್ಯತೆ ಹೊಂದಿದ್ದರೆ, ಅಲ್ಪಾವಧಿಯ ನಿಧಿಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು.
5. ಬ್ಯಾಂಕ್ ನಿಯಮಿತ ಹೂಡಿಕೆ (ಎಫ್‌ಡಿ):
ನಿವೃತ್ತಿ ಜೀವನಕ್ಕಾಗಿ ಉಳಿತಾಯದ ಹೂಡಿಕೆ ಮಾಡಲು ಇದು ಸಾಮಾನ್ಯ ಆಯ್ಕೆಯಾಗಿದೆ. ಎಫ್‌ಡಿ ಹೂಡಿಕೆಯು ಭದ್ರತೆಯನ್ನು ಹೊಂದಿರುವುದರಿಂದ ಹಾಗು ಚ್ಚಿನ ಜನರು ಸುಲಭವಾಗಿ ಈ ವಿಧಾನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಸ್ವಲ್ಪ ಹಳೆಯ ಹೂಡಿಕೆ ವಿಧಾನ ಆಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಬಡ್ಡಿದರವೂ ಕಡಿಮೆಯಾಗಿದೆ.
ಬ್ಯಾಂಕ್ ಠೇವಣಿಗಳು ಅವಧಿಯಲ್ಲಿ ಅನುಕೂಲ ಒದಗಿಸುತ್ತದೆ. ಹಾಗಾಗಿ ನಿರ್ದಿಷ್ಟ ಅವಧಿಗೆ ಹಣವನ್ನು ಲಾಕ್ ಮಾಡುವ ಬದಲು, ಹೂಡಿಕೆದಾರರು ಅನೇಕ ಮೆಚ್ಯುರಿಟಿಗಳಲ್ಲಿ ಹಣವನ್ನು ವಿತರಿಸಬಹುದು. ಇದು ಹೂಡಿಕೆಯ ಅಪಾಯವನ್ನು ನಿಯಂತ್ರಿಸುತ್ತದೆ.
ಎಫ್‌ಡಿ ಹೂಡಿಕೆಯಲ್ಲಿ ತೆರಿಗೆ ಹಣ ಉಳಿಸಲು ಬಯಸುವವರಿಗೆ 5 ವರ್ಷದ ಈ ಹೂಡಿಕೆ ಉತ್ತಮ ಪರ್ಯಾಯ ವಿಧಾನವಾಗಿದೆ. ಇಲ್ಲಿ ಮಾಡಿದ ಹೂಡಿಕೆಯು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ. ಆದಾಗ್ಯೂ, ಅಂತಹ ಠೇವಣಿಯು 5 ವರ್ಷಗಳ ನಿರ್ಬಂಧಿತ ಅವಧಿ ಹೊಂದಿರುವುದರಿಂದ ಮುಂಚಿತವಾಗಿ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಬಡ್ಡಿ ಆದಾಯವು ತೆರಿಗೆಗೆ ಒಳಪಟ್ಟಿದ್ದರೂ, ತಪ್ಪಿಸಿದ ತೆರಿಗೆಯ ಮೊತ್ತವನ್ನು ಹೂಡಿಕೆಯ ವರ್ಷದಲ್ಲಿ ಕನಿಷ್ಠವಾಗಿ ಬಡ್ಡಿದರದದೊಂದಿಗೆ ಸರಿದೂಗಿಸಲಾಗುತ್ತದೆ.
More From GoodReturns

Retirement with Savings Tips: ನಿವೃತ್ತಿ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ಈ ಸ್ಕೀಮ್ನಲ್ಲಿ ಇನ್ವೆಸ್ಟ್ ಮಾಡಿ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ



Click it and Unblock the Notifications