ಸ್ವಂತ ಮನೆ ಖರೀದಿ ಬಹಳಷ್ಟು ಜನರ ಜೀವನ ಕನಸಾಗಿರುತ್ತದೆ. ಇದು ನಮ್ಮ ಜೀವನದ ಅತ್ಯಂತ ನಿರ್ಣಾಯಕ ನಿರ್ಧಾರಗಳಲ್ಲಿ ಒಂದಾಗಿದೆ ಮಾತ್ರವಲ್ಲದೇ ಇದು ಭಾವನಾತ್ಮಕವಾಗಿ ಮತ್ತು ಆರ್ಥಿಕ ವಿಚಾರವಾಗಿ ಬಹಷ್ಟು ಒತ್ತಡವನ್ನು ಉಂಟುಮಾಡುತ್ತದೆ.
ಇನ್ನು ಮನೆ ಖರೀದಿ ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಮಹತ್ವದಾಗಿರುತ್ತದೆ. ಯಾಕೆಂದರೆ , ಸಿಟಿಯಲ್ಲಿ ಭೂಮಿಯ ಕೊರತೆ ಕಾರಣದಿಂದ ಮನೆ ನಿರ್ಮಿಸುವುದನ್ನು ಸವಾಲಾಗಿ ಪರಿಣಮಿಸುತ್ತದೆ. ಇದೇ ಕಾರಣದಿಂದ ಖರೀದಿದಾರರು ಸಾಮಾನ್ಯವಾಗಿ ಸೊಸೈಟಿ ಅಥವಾ ಫ್ಲಾಟ್‌ಗಳು/ ಅಪಾರ್ಟ್‌ಮೆಂಟ್‌ಗಳತ್ತ ಆಕರ್ಷಿತರಾಗುತ್ತಾರೆ.

ಆದರೆ ನಗರ ಹೊರತುಪಡಿಸಿದರೆ ಇತರರು ಇಂಡಿಪೆಂಡೆಟ್ ಮನೆಯ ಕಡೆ ಹೆಚ್ಚು ಒಲವು ತೋರುತ್ತಾರೆ. ಮನೆ ಖರೀದಿ ವೇಳೆ ಸಂಭಾವ್ಯ ನಷ್ಟಗಳನ್ನು ತಪ್ಪಿಸುವ , ನಿಮ್ಮ ಸಮಯ ಮತ್ತು ಶ್ರಮ ಉಳಿಸುವ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಅಂಶಗಳು ಇಲ್ಲಿದೆ.
ಭಾವನಾತ್ಮಕ ಮತ್ತು ಆರ್ಥಿಕ ಅಂಶಗಳು
ಮನೆಯನ್ನು ಖರೀದಿಸುವುದು ಭಾವನಾತ್ಮಕ ಮಾತ್ರವಲ್ಲದೇ, ಆರ್ಥಿಕ ಹೂಡಿಕೆಯೂ ಆಗಿದೆ. ಮನೆ ಖರೀದಿ ಭದ್ರತೆಯನ್ನು ನೀಡುತ್ತದೆ. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಇದು ಹಣಕಾಸಿನ ಬದ್ಧತೆ (financial commitment) ಕೂಡಾ ಆಗಿರುತ್ತದೆ. ಬಹಳಷ್ಟು ಜನರಿಗೆ ಒಂದಕ್ಕಿಂತ ಹೆಚ್ಚಿನ ಮನೆಗಳನ್ನು ಕೊಂಡುಕೊಳ್ಳಲು ಸಾಧ್ಯವಾಗದ ಕಾರಣ, ಮೊದಲ ಬಾರಿಗೆ ಮನೆ ಖರೀಸುವಾಗ ಖರೀದಿದಾರರು ಭಾವನಾತ್ಮಕ ಮತ್ತು ಆರ್ಥಿಕ ಅಂಶಗಳನ್ನು ಪರಿಗಣಿಸಬೇಕು.
ಸ್ಥಳದ ಪ್ರಮುಖ ಪಾತ್ರವಹಿಸುತ್ತದೆ:
ಯಶಸ್ವಿ ಖರೀದಿಯ ಮೂಲಾಧಾರ "ಸ್ಥಳ" ವಾಗಿದೆ. ಮನೆ ಖರೀದಿಸುವ ಸ್ಥಳದ ಬಗ್ಗೆ ಸರಿಯಾದ ಮಾಹಿತಿಯಿಲ್ಲದ ನಿರ್ಧಾರವು ಮುಂದೆ ಖರೀದಿದಾರರ ಮೇಲೆ ಗಮನಾರ್ಹ ಪರಿಣಾಮಗಳು ಬೀರಬಹುದು. ಅಗತ್ಯ ಸೌಕರ್ಯಗಳು ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ, ಅಭಿವೃದ್ಧಿಯಾಗದ ಪ್ರದೇಶದಲ್ಲಿ ಮನೆಯನ್ನು ಆಯ್ಕೆ ಮಾಡುವುದು ಆರ್ಥಿಕವಾಗಿ ಕಡಿಮೆ ವೆಚ್ಚದಾಯವಾಗಿದ್ದರೂ, ದೀರ್ಘಾವಧಿಯಲ್ಲಿ ಇದು ವೆಚ್ಚಗಳನ್ನು ಹೆಚ್ಚಿಸಲು ಕಾರಣವಾಗಬಹುದು. ಇದರ ಬದಲಾಗಿ ಬೆಳವಣಿಗೆ ಸಾಮರ್ಥ್ಯವಿರುವ ಸ್ಥಳವನ್ನು ಆಯ್ಕೆ ಮಾಡಿದರೆ , ಮುಂದೆ ಸ್ಥಳದ ಮೌಲ್ಯ ಹೆಚ್ಚಬಹುದು ಮಾತ್ರವಲ್ಲದೇ ಉತ್ತಮ ಗುಣಮಟ್ಟದ ಜೀವನ ನಡೆಸಬಹುದಾಗಿದೆ.
ಸಾಲಕ್ಕಾಗಿ ಪೌಂಡೇಶನ್ ಹಾಕಿಕೊಳ್ಳುವುದು ಅಗತ್ಯ:
ಮನೆ ಖರೀದಿ ವೇಳೆ ವೆಚ್ಚದ ಶೇಕಡ 10-20 ರಷ್ಟು ಡೌನ್ ಪೇಮೆಂಟ್ ಅಗತ್ಯವಿರುತ್ತದೆ. ಉಳಿದ ಹಣವನ್ನು ಬ್ಯಾಂಕ್ ಲೋನ್ ಮುಖಾಂತರ ನೀಡುತ್ತದೆ. ಆದರೆ ಹೋಮ್ ಲೋನ್‌ಗೆ ಪೂರ್ವ-ಅನುಮೋದನೆಯು ಅಗತ್ಯವಿರುತ್ತದೆ. ಯಾಕೆಂದರೆ ಹೋಮ್ ಲೋನ್ ಗಳು ದೊಡ್ಡ ಮೊತ್ತವಾಗಿರುವುದರಿಂದ ಖರೀದಿದಾರರ ಮರುಪಾವತಿ ಸಾಮರ್ಥ್ಯವನ್ನು ಬ್ಯಾಂಕ್ ಅಳೆಯುತ್ತದೆ. ಜೊತೆಗೆ ನಿಮ್ಮ ಬಜೆಟ್‌ನಲ್ಲಿ ಮನೆಗಳನ್ನು ಅನ್ವೇಷಿಸಲು ಇದರಿಂದ ಅನೂಕೂಲವಾಗಲಿದೆ. ನಿಮಗೆ ಅನುಕೂಲಕರವಾಗಿರುವ ಸಾಲದ ನಿಯಮಗಳಿಗಾಗಿ ಬೇರೆ ಬೇರೆ ಬ್ಯಾಂಕ್‌ಗಳು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳೊಂದಿಗೆ ಪರಿಶೀಲಿಸಿಕೊಳ್ಳುವುದು ಸೂಕ್ತ.
ಇತರ ಹೆಚ್ಚುವರಿ ವೆಚ್ಚಗಳ ನಿರ್ವಹಣೆ:
ಡೌನ್ ಪೇಮೆಂಟ್ ಮತ್ತು ಗೃಹಸಾಲದ ಹೊರತಾಗಿಯೂ ಮನೆ ಖರೀದಿ ವೇಳೆ ಇತರ ವೆಚ್ಚಗಳಿರುತ್ತದೆ. ನೋಂದಣಿ, ನಿರ್ವಹಣೆ ಮತ್ತು ಇತರ ವೆಚ್ಚಗಳಿವೆ. ಸಾಲದ ಮೊತ್ತವನ್ನು ಮೀರಿ ಈ ವೆಚ್ಚಗಳಿಗೆ ಸಿದ್ಧರಾಗಿರುವುದು ಸೂಕ್ತ. ಕೆಲವರು ಡೌನ್ ಪೇಮೆಂಟ್‌ಗಳಿಗಾಗಿ ವೈಯಕ್ತಿಕ ಸಾಲಗಳನ್ನು ಆಶ್ರಯಿಸುತ್ತಾರೆ, ಇದು ಮುಂದೆ ಹಣಕಾಸಿನ ಒತ್ತಡಕ್ಕೆ ಕಾರಣವಾಗಬಹುದು. ಇದರ ಬದಲು ಈ ರೀತಿಯಾಗಿ ಅಧಿಕ ಸಾಲ ಪಡೆದುಕೊಳ್ಳುವ ಮೊದಲು ನೀವು ಅಗತ್ಯ ಹಣವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.
ಬಿಲ್ಡರ್‌ಗಳು ಮತ್ತು ಡೀಲರ್‌ಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ:
ಬಿಲ್ಡರ್‌ಗಳು ಮತ್ತು ಪ್ರಾಪರ್ಟಿ ಡೀಲರ್‌ಗಳೊಂದಿಗೆ ಎಂದಿಗೂ ಎಚ್ಚರಿಕೆಯಿಂದ ತೊಡಗಿಸಿಕೊಳ್ಳುವುದು ಉತ್ತಮ. ಏಕೆಂದರೆ ಕೆಲ ವರ್ಷಗಳ ಹಿಂದೆ ಮನೆಗಳನ್ನು ಬುಕ್ ಮಾಡಿದರೂ ಜನರು ಸ್ವಾಧೀನಪಡಿಸಿಕೊಳ್ಳಲು ಆಗದ ಹಲವು ನಿದರ್ಶನಗಳಿವೆ. ಹೀಗಾಗಿ ಅನಿರೀಕ್ಷಿತ ಆರ್ಥಿಕ ಅಸ್ಥಿರತೆಯನ್ನು ಬಾರದಂತೆ, ಬಿಲ್ಡರ್‌ಗಳು ಮತ್ತು ಪ್ರಾಪರ್ಟಿ ಡೀಲರ್ ಗಳ ಭರವಸೆಗಳ ಬದಲು ನೀವೇ ಕೊಂಚ ರಿಸರ್ಚ್ ಮಾಡಿಕೊಳ್ಳುವುದು ಸೂಕ್ತ. ಕನಸಿನ ಮನೆಯ ಮಾಲೀಕರಾಗುವ ಪ್ರಯಾಣದಲ್ಲಿ ಎಚ್ಚರಿಕೆ ಮತ್ತು ಪೂರ್ವ ಸಿದ್ಧತೆ ಅಗತ್ಯವಾಗಿದೆ. ಆರ್ಥಿಕತೆ ಮತ್ತು ಭಾವನೆ, ವಿವೇಕವನ್ನು ಸಮತೋಲನಗೊಳಿಸುವುದು ಬುದ್ಧಿವಂತ ಹೂಡಿಕೆ ಕಾರಣವಾಗಲಿದೆ.


Click it and Unblock the Notifications