ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 15 ರ ಬುಧವಾರದಂದು ಸುಮಾರು 8.5 ಕೋಟಿ ಅರ್ಹ ರೈತರಿಗೆ 18,000 ಕೋಟಿ ರೂಪಾಯಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತನ್ನು ಬಿಡುಗಡೆ ಮಾಡಿದರು. ಜಾರ್ಖಂಡ್‌ನ ಖುಂಟಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ.
ಈವರೆಗೆ ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಸರ್ಕಾರವು ಒಟ್ಟು 2.75 ಲಕ್ಷ ಕೋಟಿ ರೂಪಾಯಿಗಳನ್ನು ಫಲಾನುಭವಿಗಳಿಗೆ ವರ್ಗಾಯಿಸಿದೆ. ಫೆಬ್ರವರಿ 2023 ರಲ್ಲಿ ಪಿಎಂ ಕಿಸಾನ್‌ನ 13 ನೇ ಕಂತು ಬಿಡುಗಡೆಯಾಗಿದ್ದು, ಅದಾದ ಐದು ತಿಂಗಳ ಬಳಿಕ 14 ನೇ ಕಂತು ಜುಲೈನಲ್ಲಿ ಬಿಡುಗಡೆಯಾಯಿತು. 11 ನೇ ಕಂತು ಮೇ 2022 ರಲ್ಲಿ ಬಿಡುಗಡೆಯಾಯಿತು.

ಏನಿದು ಪಿಎಂ ಕಿಸಾನ್ ಯೋಜನೆ?
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ, ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳನ್ನು ಪಡೆಯಬಹುದಾಗಿದೆ. ಅಂದರೆ ವಾರ್ಷಿಕವಾಗಿ ಒಟ್ಟಾಗಿ 6,000 ರೂಪಾಯಿ ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ನೀಡಲಾಗುತ್ತದೆ.
ಸಾಮಾನ್ಯವಾಗಿ ಈ ಮೂರು ಕಂತುಗಳಲ್ಲಿ ಮೊದಲ ಕಂತನ್ನು ಏಪ್ರಿಲ್-ಜುಲೈ ನಡುವೆ, ಎರಡನೇ ಕಂತನ್ನು ಆಗಸ್ಟ್-ನವೆಂಬರ್ ನಡುವೆ ಮತ್ತು ಮೂರನೇ ಕಂತನ್ನು ಡಿಸೆಂಬರ್-ಮಾರ್ಚ್ ನಡುವೆ ಜಮೆ ಮಾಡಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಪ್ರಾರಂಭಿಸಲಾಯಿತು.
ಖಾತೆಗೆ ಹಣ ಬಂದಿದೆಯೇ ಚೆಕ್ ಮಾಡಿ
ಹಂತ 1: ಮೊದಲು PM ಕಿಸಾನ್ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ
ಹಂತ 2: ಬಲ ಭಾಗದಲ್ಲಿರುವ Know Your Status ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಹಂತ 3: ನಿಮ್ಮ ರಿಜಿಸ್ಟ್ರೇಷನ್ ಸಂಖ್ಯೆಯನ್ನು, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ, Get Data ಎಂಬುವುದನ್ನು ಆಯ್ಕೆ ಮಾಡಿ
ಹಂತ 4: ಬಳಿಕ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ
ಹಣ ಬಂದಿಲ್ಲದಿದ್ದರೆ ದೂರು ನೀಡುವುದು ಹೇಗೆ?
ಒಂದು ವೇಳೆ ನಿಮಗೆ ಹನ್ನೊಂದನೇ ಕಂತಿನ ಹಣ ಜಮೆ ಆಗಿಲ್ಲದಿದ್ದರೆ, ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ ಇಮೇಲ್ ಕೂಡಾ ಮಾಡಬಹುದು. [email protected] ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿಗೆ ಹಣವನ್ನು ಸ್ವೀಕರಿಸದ ಕಾರಣವನ್ನು ನೀವು ಕೇಳಬಹುದು.
ಇಮೇಲ್ ಐಡಿ: [email protected]. ಮತ್ತು [email protected]
ಸಹಾಯವಾಣಿ ಸಂಖ್ಯೆ: 011-24300606,155261
ಟೋಲ್-ಫ್ರೀ ಸಂಖ್ಯೆ: 1800-115-526


Click it and Unblock the Notifications