ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯವನ್ನು ಹೆಚ್ಚಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಪ್ರಾರಂಭಿಸಿರುವ ಭಾರತ ಸರ್ಕಾರದ ಯೋಜನೆಯಾಗಿದೆ. ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣವನ್ನು ತಡೆಯುವ ನಿಟ್ಟಿನಲ್ಲಿ ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಮೂಲ ಉದ್ದೇಶವಾಗಿದೆ.
ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡುವ ಮೂಲಕ, ಈ ಯೋಜನೆ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧೀಯ ವೆಚ್ಚಗಳಿಗೆ ಸಂಬಂಧಿಸಿದ ಆರ್ಥಿಕ ಒತ್ತಡವನ್ನು ನಿವಾರಿಸಲು ಉದ್ದೇಶಿಸಿದೆ ಮತ್ತು ಅದರಿಂದಾಗುವ ಪರಿಣಾಮಗಳನ್ನು ತಗ್ಗಿಸುತ್ತದೆ. ಈ ಯೋಜನೆ ತಾಯಿಯಾಗುವ ಮಹಿಳೆಗೆ ಹೇಗೆ ಪ್ರಯೋಜನಕಾರಿ ಮತ್ತು ಅದರ ಪ್ರಭಾವಗಳ ವಿವರ ಇಲ್ಲಿದೆ.

ಪಿಎಂಎಂವಿವೈ ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅಥವಾ ಪಿಎಂಎಂವಿವೈ ಯೋಜನೆಯ ಚೌಕಟ್ಟಿನೊಳಗೆ ಬರುವ ಅರ್ಹ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೂರು ಕಂತುಗಳಲ್ಲಿ ಒಟ್ಟು 5000 ರೂಪಾಯಿ ನಗದು ಸಹಾಯಧನವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಗರ್ಭಧಾರಣೆಯ ನೋಂದಣಿಯ ಹಂತದಲ್ಲಿ ಆರಂಭಿಕ ಕಂತಿನ ರೂಪದಲ್ಲಿ 1,000 ರೂಪಾಯಿ ಅನ್ನು ನೀಡಲಾಗುತ್ತದೆ.
ಇನ್ನು ಎರಡನೇ ಕಂತಿನ 2000 ರೂಪಾಯಿ ಸಹಾಯಧನವನ್ನು ಗರ್ಭಧಾರಣೆಯ 6 ತಿಂಗಳ ನಂತರ ಕನಿಷ್ಠ ಒಂದು ಬಾರಿ ಪ್ರಸವಪೂರ್ವ ವೈದ್ಯಕೀಯ ತಪಾಸಣೆಯ ನಂತರ ಪಾವತಿಸಲಾಗುತ್ತದೆ. ಮಗುವಿನ ಜನನ ಅಧಿಕೃತವಾಗಿ ನೋಂದಣಿಯ ನಂತರ ಮೂರನೇ ಮತ್ತು ಅಂತಿಮ ಕಂತು 2,000 ರೂಪಾಯಿ ಪಾವತಿಸಲಾಗುತ್ತದೆ.
ಪಿಎಂಎಂವಿವೈಗೆ ಯಾರು ಅರ್ಹರು?
ದಿನಕೂಲಿ ಗಳಿಸುವ ಅಥವಾ ಆರ್ಥಿಕವಾಗಿ ಅಬಲರಾಗಿರುವ ಮಹಿಳೆಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಪರಿಚಯಿಸಲಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಆಗುವ ವೇತನ ನಷ್ಟವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಮಾತ್ರವಲ್ಲದೇ ಈ ಅವಧಿಯಲ್ಲಿ ಮಹಿಳೆಯರಿಗೆ ಅಗತ್ಯವಾದ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಗೆ ಸಹಾಯಕವಾಗುತ್ತದೆ.
ಈ ಯೋಜನೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಉದ್ಯೋಗದಲ್ಲಿರುವ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.ಇದಲ್ಲದೆ, ಈ ಯೋಜನೆಯಡಿಯಲ್ಲಿ ಉಳಿದಿರುವ ಮೊದಲ ಮಗು ಮಾತ್ರ ಪ್ರಯೋಜನಗಳಿಗೆ ಅರ್ಹವಾಗಿರುತ್ತದೆ ಅಂದರೆ ಫಲಾನುಭವಿಯು ಯೋಜನೆಯಡಿ ಒಮ್ಮೆ ಮಾತ್ರ ಪ್ರಯೋಜನಗಳನ್ನು ಪಡೆಯಲು ಅರ್ಹನಾಗಿರುತ್ತಾಳೆ.
ಪಿಎಂಎಂವಿವೈ ಯೋಜನೆ ಭಾರತದಲ್ಲಿ ತಾಯಿಯ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಈ ಕಾರ್ಯಕ್ರಮವು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆ ಪಡೆದುಕೊಳ್ಳಲು ಸಹಾಯ ಮಾಡಿದೆ. ಮಾತ್ರವಲ್ಲದೇ ಅಪೌಷ್ಟಿಕತೆಯಿಂದಾಗುವ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡಿದ್ದು ಒಟ್ಟಾರೆ ಶಿಶು ಮತ್ತು ತಾಯಿಯ ಆರೋಗ್ಯವನ್ನು ಸುಧಾರಿಸಿದೆ.
ಇದಲ್ಲದೆ, ಯೋಜನೆಯಿಂದ ದೊರಕುವ ಆರ್ಥಿಕ ಪ್ರೋತ್ಸಾಹ ಗರ್ಭಿಣಿಯರು ಮತ್ತು ಅವರ ಕುಟುಂಬಗಳ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಿದೆ. ಚಿಕಿತ್ಸೆ ಮತ್ತು ಔಷಧಿ ವೆಚ್ಚಗಳ ಹೆಚ್ಚುವರಿ ಒತ್ತಡವಿಲ್ಲದೆ ವಿಶ್ರಾಂತಿ ಮತ್ತು ಸ್ವಯಂ-ಆರೈಕೆಯ ಮೇಲೆ ಕೇಂದ್ರೀಕರಿಸಲು ಈ ಯೋಜನೆ ಉಪಕಾರಿಯಾಗಿದೆ. ಪ್ರಧಾನ ಮಂತ್ರಿ ಮಾತೃ ಯೋಜನೆಯ ವಿವರವಾದ ಮಾಹಿತಿ ಪಡೆಯಲು ನಿಮ್ಮ ಸಮೀಪದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಆಶಾ ಕಾರ್ಯಕರ್ತೆಯರ ಸಹಾಯವನ್ನೂ ಪಡೆಯಬಹುದಾಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications