ನೀವು ಒಂದು ಸುರಕ್ಷಿತ ಹಾಗೂ ಖಚಿತವಾದ ಹೂಡಿಕೆಯನ್ನು ಹುಡುಕುತ್ತಿದ್ದರೆ ನಿಮ್ಮ ಸ್ಥಿರ ಠೇವಣಿ (Fixed Deposit) ಒಂದು ಉತ್ತಮ ಆಯ್ಕೆಯಾಗಿದೆ.
ಹೌದು,ಷೇರು ಮಾರುಕಟ್ಟೆಯ ಏರಿಳಿತಗಳ ಭಯವಿಲ್ಲದೆ ಸುರಕ್ಷಿತವಾದ ಹೂಡಿಕೆ ಮಾಡಿ ಖಚಿತವಾದ ಆದಾಯವನ್ನು ಗಳಿಸಲು ಬಯಸುವವರಿಗೆ ಈ ಯೋಜನೆ ಅತಿ ಮುಖ್ಯವಾದ ಯೋಜನೆ ಎಂದೇ ಹೇಳಬಹುದು. ಅದರಲ್ಲೂ ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗೆ ವಿಶೇಷವಾದ ಎಫ್‌ಡಿ ಯೋಜನೆಯನ್ನು ಪರಿಚಯವನ್ನು ಮಾಡಿದೆ. ಈ ಎಫ್‌ಡಿಗಳ ಮೂಲಕ ನೀವು ಹೆಚಚ್ಇನ ಬಡ್ಡಿಯನ್ನು ಪಡೆದುಕೊಳ್ಳಬಹುದು.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ಗ್ರಾಹಕರಿಗಾಗಿ 390 ದಿನಗಳ ವಿಶೇಷ ಅವಧಿಯ ಸ್ಥಿರ ಠೇವಣಿ ಯೋಜನೆಯಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚಿನ ಅವಧಿಗೆ ಹಣವನ್ನು ಠೇವಣಿ ಇಟ್ಟು,ನೀವು ಹೆಚ್ಚಿನ ಹಣವನ್ನು ಸಂಪಾದನೆಯನ್ನು ಮಾಡಬಹುದು. ಸಾಮಾನ್ಯವಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಬೇರೆ ಬೇರೆ ಬಡ್ಡಿದರಗಳನ್ನು ನೀಡಲಾಗುತ್ತದೆ ಇದರಿಂದಾಗಿ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ ಸಿಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು ಕಡತಗೊಳಿಸಿದ ನಂತರ ಬ್ಯಾಂಕ್‌ಗಳ ಎಫ್ ಡಿ ಬಡ್ಡಿದರಗಳಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ವಿವಿಧ ಸ್ಥಿರ ಠೇವಣಿಗಳ ಮೇಲೆ ಶೇ 3.25 ರಿಂದ ಶೇ 7.2 ವರೆಗೆ ಬಡ್ಡಿಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಅದರಲ್ಲೂ 390 ದಿನಗಳ ಈ ವಿಶೇಷ ಯೋಜನೆಗೆ ಆಕರ್ಷಕ ಬಡ್ಡಿದರವನ್ನು ಕೂಡ ನಿಗದಿ ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಯೋಜನೆಯಲ್ಲಿ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕವಾಗಿ ಶೇ 6.70 ಬಡ್ಡಿ ದೊರೆಯುತ್ತದೆ. ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ವಾರ್ಷಿಕವಾಗಿ ಶೇ 7.20 ಬಡ್ಡಿ ಸಿಗಲಿದೆ.
ಸಾಮಾನ್ಯ ಗ್ರಾಹಕರು 390 ದಿನಗಳ ಸ್ಥಿರ ರೇವಣಿ ಯೋಜನೆಯಲ್ಲಿ 3,00,000 ರೂ. ಗಳ ಹಣವನ್ನು ಹೂಡಿಕ ಮಾಡಿದ್ದರೆ ಇವರಿಗೆ ಶೇ 6.70 ಬಡ್ಡಿ ಸೇರಿ ಮೆಚ್ಯೂರಿಟಿ ಅವಧಿಯ ನಂತರ ನಿಮಗೆ ಒಟ್ಟು 3,22,073 ರೂ. ಹಣ ದೊರೆಯುತ್ತದೆ. ಅಂದರೆ, ಬಡ್ಡಿಯ ರೂಪದಲ್ಲಿ ನಿಮಗೆ 22,073 ರೂ ಲಾಭ ನಿಮ್ಮ ಕೈ ಸೇರುತ್ತದೆ.
ಹಿರಿಯ ನಾಗರಿಕರಾಗಿ 3 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಅವರಿಗೆ ಬಡ್ಡಿ ದರ ಶೇ. 7.20 ಸಿಗುತ್ತದೆ.ನಿಮ್ಮ ಖಾತೆಗೆ ಒಟ್ಟು 3,23,768 ಹಣ ಜಮಾ ಆಗುತ್ತದೆ. ಅಂದರೆ, ನಿಮಗೆ ಸಿಗುವ ಬಡ್ಡಿಯ ಮೊತ್ತ 23,768. ಸಾಮಾನ್ಯ ಗ್ರಾಹಕರಿಗಿಂತ ಸುಮಾರು 1,700 ಹೆಚ್ಚಿನ ಲಾಭವನ್ನು ಹಿರಿಯ ನಾಗರಿಕರು ಪಡೆದುಕೊಳ್ಳಬಹುದು.
ಅಲ್ಪಾವಧಿಗೆ ಹಣವನ್ನು ಮಾಡಬೇಕೆಂದುಕೊಂಡವರಿಗೆ ಈ ಯೋಜನೆ ಉತ್ತಮವಾದ ಆಯ್ಕೆಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಇರುವಂತಹ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಲಾಭವನ್ನು ಗಳಿಸುವುದರ ಜೊತೆಗೆ ಹೆಚ್ಚಿನ ಸುರಕ್ಷಿತ ಕೂಡ ಸಿಗುತ್ತದೆ.
ನೀವು ಎಲ್ಲಿ ಹಣವನ್ಉ ಹೂಡಿಕೆ ಮಾಡಬೇಕೆಂದುಕೊಂಡರೆ ಅವರು ಹೇಳುವ ಎಲ್ಲಾ ಅಂಶಗಳನ್ನು ಗಮನದಲಿಟ್ಟುಕೊಂಡು ಹೂಡಿಕೆ ಮಾಡುವುದು ಉತ್ತಮ ಹೇಳಬಹುದು.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications