ಅಂಚೆಕಚೇರಿಯ ಯೋಜನೆಗಳು ಸ್ಥಿರ ಠೇವಣಿಗಳಂತಹ ಯೋಜನೆಯ ಮೂಲಕ ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಇಲ್ಲಿ ನಿಮ್ಮ ಹೂಡಿಕೆಯ ಹಣವನ್ನು ಇಟ್ಟರೆ ನಿಮ್ಮ ಹಣದ ಮೇಲೆ ಹೆಚ್ಚು ಆಕರ್ಷಕ ಬಡ್ಡಿದರಗಳು ಸಿಗುತ್ತೇವೆ. ಮ್ಯೂಚುಯಲ್ ಫಂಡ್, ಬ್ಯಾಂಕ್‌ಗಳು ಇತರೆ ಹೂಡಿಕೆಯ ವಿಧನಗಳಿಂದ ನೀವು ಹೂಡಿಕೆ ಹೂಡಿಕೆ ಮಾಡವ ಮೊದಲು ನಿಮ್ಮಗೆ ಅಂಚೆಕಚೇರಿಯ ಸ್ಥಿರ ಠೇವಣಿಗಳು ಉತ್ತಮ ಆಯ್ಕೆಯಾಗಿವೆ.

ಭಾರತೀಯ ಅಂಚೆ ಕಚೇರಿಯ ಸ್ಥಿರ ಠೇವಣಿಗಳು ಹೆಚ್ಚಿನ ಸುರಕ್ಷಿತಯ ಜೊತೆಗೆ ಸರ್ಕಾರಿ ಬೆಂಬಲ ಸಹ ಕೂಡ ಸಿಗುತ್ತದೆ.ಅಂಚೆ ಕಚೇರಿಯ ಸ್ಥಿರ ಠೇವಣಿಯ ಮೇಲೆ 18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆಯೂ ಕೂಡ ಹೂಡಿಕೆ ಮಾಡಬಹುದು. ಅಂಚೆ ಕಚೇರಿಯು ನೀಡುವ ಸ್ಥಿರ ಠೇವಣಿ ಯೋಜನೆಗಳು ಯಾವುದೇ ಆಪಾಯವನ್ನು ಹೊಂದಿಲ್ಲ. ಸ್ಥಿರ ಠೇವಣಿ ಯೋಜನೆಯನ್ "ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್" ಎಂದೂ ಕೂಡ ಕಡೆಯಲಾಗುತ್ತದೆ. ಇದು ನಿಯಮಿತ ಸ್ಥಿರ ಠೇವಣಿಗಳಂತೆ ಕಾರ್ಯನಿರ್ವಹಿಸದೇ, ನಾಲ್ಕು ವಿಭಿನ್ನ ಅವಧಿಯವರೆಗೂ ನೀವು ಇಲ್ಲಿ ಹಣವನ್ನು ಹೂಡಿಕೆ ಮಾಡಬಹುದು.
ಈ ಸ್ಥಿರ ಠೇವಣಿ ಯೋಜನೆಯಡಿಯಲ್ಲಿ 1, 2, 3 ಮತ್ತು 5 ವರ್ಷಗಳ ಅವಧಿಗಳಿಗೆ ಬಡ್ಡಿದರಗಳು ಲಭ್ಯವಾಗಿದೆ. ಹೂಡಿಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಅವಧಿಗಳಿಗೆ ಅನ್ವಯಿಸುವ ಬಡ್ಡಿದರಗಳ ವಿವರ ಈ ಕೆಳಗಿನಂತೆ ಇದೆ..
ಅಂಚೆ ಕಚೇರಿಯು ನಾಲ್ಕು ವಿಭಿನ್ನ ಬಡ್ಡಿದರಗಳನ್ನು ನೀಡುತ್ತದೆ. ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ಶೇ. 6.9 ರಷ್ಟು ಬಡ್ಡಿ ನಿಮ್ಮಗೆ ಸಿಗುತ್ತದೆ. ಎರಡು ವರ್ಷಗಳ ಅವಧಿಗೆ ಶೇ. 7.0 ರಷ್ಟು,ಮೂರು ವರ್ಷಗಳ ಅವಧಿಗೆ ಶೇ. 7.1 ರಷ್ಟು ಬಡ್ಡಿ ಲಭ್ಯವಿದೆ. ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡುವವರಿಗೆ ವರ್ಷಕ್ಕೆ ಶೇ. 7.5 ರಷ್ಟು ಬಡ್ಡಿ ನಿಮ್ಮಗೆ ಸಿಗುತ್ತದೆ.
ಅಂಚೆ ಕಚೇರಿ ಸ್ಥಿರ ಠೇವಣಿ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ 1,000 ರೂಪಾಯಿಗಳು ಆಗಿರುತ್ತದೆ. ಈ ಯೋಜನೆಗೆ ಯಾವುದೇ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಗಳಿಲ್ಲ. ಆಸಕ್ತ ಹೂಡಿಕೆದಾರರು ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಸ್ಥಿರ ಠೇವಣಿಗೆ ಖಾತೆಯನ್ನು ತೆರೆಯಬಹುದು.
ನೇರವಾಗಿ ಅಂಚೆ ಕಚೇರಿಗೆ ಭೇಟಿ ನೀಡಿ ಖಾತೆ ತೆರೆಯುವ ವಿಧಾನ ಹೇಗೆ..?
- ನೀವು ಮೊದಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿಯನ್ನು ನೀಡಬೇಕಾಗುತ್ತದೆ.
- ತದನಂತರ "ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆ" ಫಾರ್ಮ್ ಅನ್ನು ಪಡೆದು ಭರ್ತಿ ಮಾಡಬೇಕಾಗುತ್ತದೆ.
- ಅರ್ಜಿಯಲ್ಲಿ ನೀಡಿರುವ ಅಗತ್ಯವಿರುವ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಠೇವಣಿ ಮೊತ್ತ, ಅವಧಿ ಮತ್ತು ಪಾವತಿ ವಿಧಾನದಂತಹ ವಿವರಗಳನ್ನು ನಮೂದನೆ ಮಾಡಬೇಕಾಗುತ್ತದೆ.
- ಗುರುತಿನ ಚೀಟಿ, ವಿಳಾಸ ಪುರಾವೆ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಿ. ಹಣವನ್ನು ನಗದು ಅಥವಾ ಚೆಕ್ ಮೂಲಕ ಪಾವತಿಸಬಹುದು. ಖಾತೆ ತೆರೆದ ನಂತರ, ಸ್ವೀಕೃತಿ ಪತ್ರ ಮತ್ತು ಟೈಮ್ ಡೆಪಾಸಿಟ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
- ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರದ ಹೂಡಿಕೆಗಾಗಿ ಹಲವಾರು ಯೋಜನೆಗಳಿವೆ. ಅವುಗಳಲ್ಲಿ ವಂದನಂ ಎಫ್‌ಡಿ ಮತ್ತು ಎಸ್‌ಸಿಎಸ್‌ಎಸ್ ಪ್ರಮುಖವಾದವು.
ಆನ್‌ಲೈನ್‌ನಲ್ಲಿ ಖಾತೆ ತೆರೆಯುವುದು ಹೇಗೆ..?
- ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ತದ ನಂತರ, 'ಓಪನ್ ಪೋಸ್ಟ್ ಆಫೀಸ್ ಟಿಡಿ ಖಾತೆ' ಆಯ್ಕೆಯನ್ನು ಆಯ್ಕೆ ಮಾಡಿ
- ಠೇವಣಿ ಮೊತ್ತ, ಅವಧಿ ಮತ್ತು ಪಾವತಿ ವಿಧಾನವನ್ನು ನಮೂದಿಸಿ. ಈ ಪ್ರಕ್ರಿಯೆಯು ಖಾತೆ ತೆರೆಯಲು ಸಹಾಯ ಮಾಡುತ್ತದೆ.
- ಅಂಚೆ ಕಚೇರಿಯ ಈ ಯೋಜನೆಯು ಪ್ರಮುಖ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ನಿಮ್ಮಗೆ ನೀಡುತ್ತೇವೆ.


Click it and Unblock the Notifications