ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಹಾಗೆಯೇ ಹಲವಾರು ಅಂಚೆ ವಿತರಣಾ ಸೇವೆಗಳನ್ನು ಇಂಡಿಯಾ ಪೋಸ್ಟ್ ಒದಗಿಸುತ್ತದೆ. ಆದರೆ ಬ್ಯಾಂಕಿಂಗ್ ಸೇವೆಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರಿಗೆ ಅಂಚೆ ಕಚೇರಿ ಆಧಾರವಾಗಿದೆ. ಭಾರತ ಅಂಚೆ ದೇಶದಾದ್ಯಂತ ಬೃಹತ್ ಜಾಲವನ್ನು ಹೊಂದಿದೆ.
ಇದೀಗ, ತನ್ನ ಗ್ರಾಹಕರನ್ನು ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದಂತಹ ಘಟನೆಗಳಿಂದ ರಕ್ಷಿಸುವ ಸಲುವಾಗಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕೇವಲ 399 ರೂಪಾಯಿ ಮತ್ತು 299 ರೂಪಾಯಿಗೆ ಆಕಸ್ಮಿಕ ವಿಮಾ ಪಾಲಿಸಿಯನ್ನು ಹೊರತಂದಿದೆ. ಈ ಯೋಜನೆ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಜೀವನವು ಅನಿಶ್ಚಿತವಾಗಿದೆ. ಅಪಘಾತಗಳು ಯಾರಿಗಾದರೂ ಯಾವಾಗ ಬೇಕಾದರೂ ಸಂಭವಿಸಬಹುದು. ನಾವು ಅಪಘಾತವಾದಾಗ ಆಸ್ಪತ್ರೆ ವೆಚ್ಚ ನಿರ್ವಹಣೆಗೆಂದು ಹಣವನ್ನು ಉಳಿತಾಯ ಮಾಡಿಕೊಂಡಿರುತ್ತೇವೆಯೇ?.
ಆದರೆ ನೀವು ಈ ವಿಮೆಯ ಮೂಲಕ ಇಂತಹ ಆಕಸ್ಮಿಕ ಸಂದರ್ಭದಲ್ಲಿ ವಿಮಾ ರಕ್ಷಣೆಯನ್ನು ಪಡೆಯಲು ಸಾಧ್ಯವಾಗುತ್ತದೆ. 18-65 ವರ್ಷ ವಯಸ್ಸಿನ ಗ್ರಾಹಕರು ಅಗತ್ಯವಿರುವ ಪ್ರೀಮಿಯಂ ಪಾವತಿಸುವ ಮೂಲಕ ಒಂದು ವರ್ಷದವರೆಗೆ ಈ ಎರಡು ಪಾಲಿಸಿಗಳ ಪ್ರಯೋಜನಗಳನ್ನು ಪಡೆಯಬಹುದು.
399 ರೂಪಾಯಿ ವಿಮಾ ಯೋಜನೆ
399 ರೂಪಾಯಿಯ ಪ್ರೀಮಿಯಂ ಯೋಜನೆಯು ನಿಮಗೆ ಒಂದು ವರ್ಷಕ್ಕೆ ವಿಮಾ ಕವರೇಜ್ ಅನ್ನು ನೀಡುತ್ತದೆ. ಆಕಸ್ಮಿಕ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ ಮತ್ತು ಆಕಸ್ಮಿಕವಾಗಿ ಅಂಗವಿಕಲತೆ ಮತ್ತು ಪಾರ್ಶ್ವವಾಯು ಸಂಭವಿಸಿದಲ್ಲಿ ನಿಮಗೆ 10 ಲಕ್ಷ ರೂಪಾಯಿ ನೀಡುವ ಭರವಸೆಯನ್ನು ಈ ವಿಮೆ ನೀಡುತ್ತದೆ.
ಐಪಿಡಿಯಲ್ಲಿ ಆಕಸ್ಮಿಕ ವೈದ್ಯಕೀಯ ವೆಚ್ಚವಿದ್ದಲ್ಲಿ 60,000 ರೂಪಾಯಿ ಮತ್ತು ಒಡಿಪಿಯಲ್ಲಿ 30,000 ರೂಪಾಯಿವರೆಗೆ ಆಕಸ್ಮಿಕ ವೈದ್ಯಕೀಯ ವೆಚ್ಚವನ್ನು ಕ್ಲೈಮ್ ಮಾಡಬಹುದು. ನೀವು ಆಸ್ಪತ್ರೆಯಲ್ಲಿದ್ದರೆ, ಹತ್ತು ದಿನಗಳವರೆಗೆ ದಿನಕ್ಕೆ 1000 ರೂಪಾಯಿ ಲಭ್ಯವಾಗುತ್ತದೆ.
299 ರೂಪಾಯಿ ವಿಮಾ ಯೋಜನೆ
299 ರೂಪಾಯಿಯ ಮೂಲ ವಿಮಾ ಯೋಜನೆಯ ಭಾಗವಾಗಿ ಅಂಚೆ ಕಚೇರಿ ಆಕಸ್ಮಿಕ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ ಮತ್ತು ಆಕಸ್ಮಿಕ ಅಂಗವಿಕಲತೆ ಮತ್ತು ಪಾರ್ಶ್ವವಾಯು ಆದರೆ 10 ಲಕ್ಷ ರೂಪಾಯಿ ವಿಮಾ ರಕ್ಷಣೆಯನ್ನು ನೀಡುತ್ತದೆ.
ಈ ಪಾಲಿಸಿಯಲ್ಲಿ ಪ್ರೀಮಿಯಂ 399 ರೂಪಾಯಿ ಯೋಜನೆಯಡಿಯಲ್ಲಿ ಶಿಕ್ಷಣ ಪ್ರಯೋಜನ, ಆಸ್ಪತ್ರೆಯಲ್ಲಿ ದೈನಂದಿನ ಖರ್ಚಿಗೆ ನಗದು, ಕುಟುಂಬ ಸಾರಿಗೆ ಪ್ರಯೋಜನಗಳು ಮತ್ತು ಕೊನೆಯ ವಿಧಿಗಳ ಪ್ರಯೋಜನಗಳಂತಹ ಪ್ರಯೋಜನಗಳನ್ನು ಇರುವುದಿಲ್ಲ. 299 ರೂಪಾಯಿಯ ಯೋಜನೆಗೆ ಐಪಿಡಿಯಲ್ಲಿ ಆಕಸ್ಮಿಕ ವೈದ್ಯಕೀಯ ವೆಚ್ಚಕ್ಕೆ 60 ಸಾವಿರ ರೂಪಾಯಿ, ಒಪಿಡಿಯಲ್ಲಿ ಆಕಸ್ಮಿಕ ವೈದ್ಯಕೀಯ ವೆಚ್ಚಕ್ಕೆ 30 ಸಾವಿರ ರೂಪಾಯಿ ಲಭ್ಯವಾಗುತ್ತದೆ.
399 ರೂಪಾಯಿ ಯೋಜನೆಯ ಪ್ರಯೋಜನಗಳು
* ಅಪಘಾತದ ಸಾವು: ಅಪಘಾತದ ದಿನಾಂಕದ 365 ದಿನಗಳಲ್ಲಿ ಅಪಘಾತದಿಂದ ಮರಣವಾದರೆ, ಕವರೇಜ್ ಮಿತಿಯು ವಿಮಾ ಮೊತ್ತದ ಶೇಕಡ 100 ಆಗಿದೆ.
* ಆಕಸ್ಮಿಕ ಪಾರ್ಶ್ವವಾಯು: ಅಪಘಾತದ ಸಂಭವಿಸಿದ 365 ದಿನಗಳಲ್ಲಿ ಪಾರ್ಶ್ವವಾಯುವಾದಲ್ಲಿ ಕವರೇಜ್ ಲಾಭ ಲಭ್ಯವಾಗುತ್ತದೆ.
* ಶಿಕ್ಷಣ ಪ್ರಯೋಜನ: ಆಕಸ್ಮಿಕ ಮರಣ / ಶಾಶ್ವತ ಸಂಪೂರ್ಣ ಅಂಗವೈಕಲ್ಯವಾದಲ್ಲಿ ಸಂಪೂರ್ಣ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ ಪೂರ್ಣ ಸಮಯದ ವಿದ್ಯಾರ್ಥಿಯಾಗಿರುವ ಅರ್ಹ ಮಗುವಿಗೆ ವಿಮೆ ಪಾವತಿಸಲಾಗುತ್ತದೆ.
* ಶಾಶ್ವತ ಅಂಗವೈಕಲ್ಯ: ಇದು ಸಂಪೂರ್ಣ ಅಸಾಮರ್ಥ್ಯವನ್ನು ಕವರ್ ಮಾಡುತ್ತದೆ. ಅಪಘಾತದ ದಿನಾಂಕದ 365 ದಿನಗಳಲ್ಲಿ ಸಂಭವಿಸಿದರೆ ಮಾತ್ರ ಇದು ಲಭ್ಯವಾಗುತ್ತದೆ. ಕವರೇಜ್ ಮಿತಿಯು ವಿಮಾ ಮೊತ್ತದ ಶೇಕಡ 100 ಆಗಿದೆ.
ಅಂಚೆ ಕಚೇರಿ ಅಪಘಾತ ವಿಮಾ ಪಾಲಿಸಿಯು ಆತ್ಮಹತ್ಯೆ, ಮಿಲಿಟರಿ ಸೇವೆಗಳು ಅಥವಾ ಕಾರ್ಯಾಚರಣೆಗಳು, ಯುದ್ಧ, ಕಾನೂನುಬಾಹಿರ ಕೃತ್ಯ, ಬ್ಯಾಕ್ಟೀರಿಯಾದ ಸೋಂಕು, ರೋಗ, ಏಡ್ಸ್, ಅಥವಾ ಇತರೆ ಆರೋಗ್ಯ ಸಮಸ್ಯೆಗೆ ಕವರ್ ಆಗುವುದಿಲ್ಲ.


Click it and Unblock the Notifications