ಯಾರೇ ಆದರೂ ಕೂಡಾ ಪ್ರಸ್ತುತ ವಿಮಾ ಪಾಲಿಸಿಯು ಅತೀ ಮುಖ್ಯವಾಗುತ್ತದೆ. ಯಾವುದೇ ಆರೋಗ್ಯ ಸಮಸ್ಯೆ, ಅಪಘಾತವಾದ ಸಂದರ್ಭದಲ್ಲಿ ನಮಗೆ ಕಾಡುವ ಆರ್ಥಿಕ ಮುಗ್ಗಟ್ಟಿನಿಂದ ನಮ್ಮನ್ನು ಸುರಕ್ಷಿತಗೊಳಿಸುವುದು ಆರೋಗ್ಯ, ಜೀವ, ಅಪಘಾತ ವಿಮೆಯಾಗಿದೆ.
ಆದರೆ ವಿಮೆ ಎಂದಾಗ ನಾವು ಅಧಿಕ ಪಾವತಿ ಮಾಡಬೇಕಾಗುತ್ತದೆ ಎಂಬ ಆತಂಕ ಎಲ್ಲರ ಬಳಿ ಇರುತ್ತದೆ. ಆದರೆ ನೀವು ಕಡಿಮೆ ಹಣವನ್ನು ಕಟ್ಟಿ ಅಧಿಕ ಮೊತ್ತದ ವಿಮಾ ಸುರಕ್ಷತೆಯನ್ನು ಪಡೆಯಲು ಸಾಧ್ಯವಿದೆ ಎಂಬುವುದು ನಿಮಗೆ ತಿಳಿದಿದೆಯೇ?. ಅಂತಹ ವಿಮೆಯನ್ನು ನಮಗೆ ಅಂಚೆ ಕಚೇರಿ ನೀಡುತ್ತದೆ. ಇಲ್ಲಿದೆ ವಿವರ ಮುಂದೆ ಓದಿ....

ಅಂಚೆ ಕಚೇರಿಯ ಸುರಕ್ಷಾ ಪಾಲಿಸಿ
ನೀವು ಅಂಚೆ ಕಚೇರಿಯ ಸಮೂಹ ಅಪಘಾತ ಸುರಕ್ಷಾ ಪಾಲಿಸಿಯನ್ನು ಖರೀದಿ ಮಾಡಿದರೆ, ನೀವು ಕಡಿಮೆ ಮೊತ್ತದಲ್ಲಿಯೇ ಅಪಘಾತ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಸಮಗ್ರ ಅಪಘಾತ ಸುರಕ್ಷೆಯೊಂದಿಗೆ ನೀವು ಒಂದು ಅಪಘಾತದಿಂದ ಉಂಟಾಗುವ ದೈಹಿಕ ಹಾಗೂ ಹಣಕಾಸಿನ ಅಡಚಣೆಗಳನ್ನು ಎದುರಿಸಲು ಸನ್ನದ್ಧರಾಗಿರಬಹುದಾಗಿದೆ.
399 ರೂಪಾಯಿಯ ವಿಮಾ ಪಾಲಿಸಿ
* ತೆರಿಗೆಯ ಬಳಿಕ ಪ್ರೀಮಿಯಂ 399 ರೂಪಾಯಿ
* ಅಪಘಾತದಲ್ಲಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಕವರೇಜ್ ಇದೆ.
* ಶಾಶ್ವತ ಸಂಪೂರ್ಣ ವೈಕಲ್ಯವಾದರೂ 10 ಲಕ್ಷ ರೂಪಾಯಿ ಕವರೇಜ್ ಇದೆ.
* ಶಾಶ್ವತ ಭಾಗಶಃ ವೈಕಲ್ಯವಾದರೂ ಹತ್ತು ಲಕ್ಷ ರೂಪಾಯಿ ಕವರೇಜ್ ಇದೆ.
* ಅಪಘಾತದಿಂದ ಅಂಗಾಂಗಛೇದನ ಮತ್ತು ಪಾರ್ಶ್ವವಾಯು ಹತ್ತು ಲಕ್ಷ ರೂಪಾಯಿ ಕವರೇಜ್ ಇದೆ.
* ಅಪಘಾತವಾಗಿ ಒಳರೋಗಿ ವಿಭಾಗದಲ್ಲಿದ್ದರೆ, ವೈದ್ಯಕೀಯ ವೆಚ್ಚಗಳು ಕೂಡಾ ಕವರ್ ಆಗುತ್ತದೆ. 60 ಸಾವಿರ ರೂಪಾಯಿವರೆಗೆ ಅಥವಾ ನೈಜ ಕ್ಲೇಮ್‌ಗಳು, ಈ ಪೈಕಿ ಯಾವುದು ಕಡಿಮೆಯೋ ಆ ಮೊತ್ತ ಇರುತ್ತದೆ.
* ಅಪಘಾತವಾದ ಬಳಿಕ ಹೊರರೋಗಿಯಾಗಿದ್ದರೆ ವೈದ್ಯಕೀಯ ವೆಚ್ಚಗಳು ಕವರ್ ಆಗುತ್ತದೆ. ಹೊರರೋಗಿಯಾಗಿದ್ದರೆ 30 ಸಾವಿರ ರೂಪಾಯಿವರೆಗೆ ಅಥವಾ ಕ್ಲೇಮ್‌ನ ಮೊತ್ತ ಎಷ್ಟು ಇದೆಯೋ, ಈ ಪೈಕಿ ಯಾವುದು ಕಡಿಮೆ ಅಷ್ಟು ಕವರ್ ಆಗುತ್ತದೆ.
* ಶೈಕ್ಷಣಿಕ ಪ್ರಯೋಜನವೂ ಕೂಡಾ ಇದೆ. ಆಕಸ್ಮಿಕ ಮರಣ / ಶಾಶ್ವತ ಸಂಪೂರ್ಣ ಅಂಗವೈಕಲ್ಯವಾದಲ್ಲಿ ಸಂಪೂರ್ಣ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. ಗರಿಷ್ಠ ಇಬ್ಬರು ಮಕ್ಕಳಿಗೆ ವಿಮಾ ಮೊತ್ತದ ಶೇಕಡ 10 ರಷ್ಟು ಅಥವಾ 1 ಲಕ್ಷ ರೂಪಾಯಿ ಅಥವಾ ನೈಜ ಮೊತ್ತ, ಇವುಗಳನ್ನು ಯಾವುದು ಕಡಿಮೆಯೋ ಅದು ಲಭ್ಯವಾಗುತ್ತದೆ.
* ನೀವು ಆಸ್ಪತ್ರೆಯಲ್ಲಿದ್ದರೆ, ಹತ್ತು ದಿನಗಳವರೆಗೆ ದಿನಕ್ಕೆ 1000 ರೂಪಾಯಿ ಲಭ್ಯವಾಗುತ್ತದೆ.
* ಕುಟುಂಬದವರಿಗೆ ಸಾರಿಗೆ ವೆಚ್ಚ ಕೂಡಾ ಕವರ್ ಆಗುತ್ತದೆ. 25 ಸಾವಿರ ರೂಪಾಯಿ ಅಥವಾ ನೈಜ ಮೊತ್ತ, ಇವುಗಳಲ್ಲಿ ಯಾವುದು ಕಡಿಮೆಯೋ ಅದು ಕವರ್ ಆಗುತ್ತದೆ.
* ಅಂತಿಮ ಸಂಸ್ಕಾರಕ್ಕೆ ನೆರವು ಲಭ್ಯವಾಗಲಿದೆ. ಐದು ಸಾವಿರ ರೂಪಾಯಿ ಅಥವಾ ನೈಜ ಮೊತ್ತದಲ್ಲಿ ಯಾವುದು ಕಡಿಮೆಯೋ ಅದು ಲಭ್ಯವಾಗುತ್ತದೆ.
299 ರೂಪಾಯಿಯ ಪಾಲಿಸಿಯಲ್ಲಿ ಏನಿದೆ?
* ತೆರಿಗೆಯ ಬಳಿಕದ ಪ್ರೀಮಿಯಂ 299 ರೂಪಾಯಿ ಆಗಿದೆ.
* ಅಪಘಾತದಲ್ಲಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಕವರೇಜ್ ಇದೆ.
* ಶಾಶ್ವತ ಸಂಪೂರ್ಣ ವೈಕಲ್ಯವಾದರೂ 10 ಲಕ್ಷ ರೂಪಾಯಿ ಕವರೇಜ್ ಇದೆ.
* ಶಾಶ್ವತ ಭಾಗಶಃ ವೈಕಲ್ಯವಾದರೂ ಹತ್ತು ಲಕ್ಷ ರೂಪಾಯಿ ಕವರೇಜ್ ಇದೆ.
* ಅಪಘಾತದಿಂದ ಅಂಗಾಂಗಛೇದನ ಮತ್ತು ಪಾರ್ಶ್ವವಾಯು ಹತ್ತು ಲಕ್ಷ ರೂಪಾಯಿ ಕವರೇಜ್ ಇದೆ.
* ಅಪಘಾತವಾಗಿ ಒಳರೋಗಿ ವಿಭಾಗದಲ್ಲಿದ್ದರೆ, ವೈದ್ಯಕೀಯ ವೆಚ್ಚಗಳು ಕೂಡಾ ಕವರ್ ಆಗುತ್ತದೆ. 60 ಸಾವಿರ ರೂಪಾಯಿವರೆಗೆ ಅಥವಾ ನೈಜ ಕ್ಲೇಮ್‌ಗಳು, ಈ ಪೈಕಿ ಯಾವುದು ಕಡಿಮೆಯೋ ಆ ಮೊತ್ತ ಇರುತ್ತದೆ.
* ಅಪಘಾತವಾದ ಬಳಿಕ ಹೊರರೋಗಿಯಾಗಿದ್ದರೆ ವೈದ್ಯಕೀಯ ವೆಚ್ಚಗಳು ಕವರ್ ಆಗುತ್ತದೆ. ಹೊರರೋಗಿಯಾಗಿದ್ದರೆ 30 ಸಾವಿರ ರೂಪಾಯಿವರೆಗೆ ಅಥವಾ ಕ್ಲೇಮ್‌ನ ಮೊತ್ತ ಎಷ್ಟು ಇದೆಯೋ, ಈ ಪೈಕಿ ಯಾವುದು ಕಡಿಮೆ ಅಷ್ಟು ಕವರ್ ಆಗುತ್ತದೆ.

Click it and Unblock the Notifications