ಈ ಹಿಂದೆ ಸಾಮಾನ್ಯವಾಗಿ ಅಂಚೆ ಕಚೇರಿ ಟರ್ಮ್ ಡೆಪಾಸಿಟ್‌ಗಳು ನಾವು ಬ್ಯಾಂಕ್‌ನ ಫಿಕ್ಸಿಡ್ ಡೆಪಾಸಿಟ್‌ಗಳಿಗೆ ಹೋಲಿಕೆ ಮಾಡಿದಾಗ ಕಡಿಮೆ ಬಡ್ಡಿದರವನ್ನು ಹೊಂದಿರುವ ಯೋಜನೆಯಾಗಿದೆ. ಆದರೆ ಕೇಂದ್ರ ಸರ್ಕಾರವು ಸತತ ಮೂರು ಬಾರಿಗೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು ಏರಿಕೆ ಮಾಡಿದ ಬಳಿಕ ಈ ವಿದ್ಯಮಾನವೇ ಬದಲಾವಣೆಯಾಗಿದೆ. ಪ್ರಸ್ತುತ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಹಾಗೂ ಅಂಚೆ ಕಚೇರಿ ಉಳಿತಾಯ ಯೋಜನೆ ಬಡ್ಡಿದರದ ನಡುವೆ ಸ್ಪರ್ಧೆ ಉಂಟಾಗಿದೆ.
ಇತ್ತ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವೂ ಏರುತ್ತಿದೆ, ಅತ್ತ ಅಂಚೆ ಕಚೇರಿ ಉಳಿತಾಯ ಯೋಜನೆ ಬಡ್ಡಿದರ ಹೆಚ್ಚಾಗಿದೆ. ಸಣ್ಣ ಉಳಿತಾಯ ಯೋಜನೆ ಅಡಿಯಲ್ಲಿ ಬರುವ ಅಂಚೆ ಕಚೇರಿಯ 2 ವರ್ಷದ ಟರ್ಮ್ ಡೆಪಾಸಿಟ್ ಮೇಲಿನ ಬಡ್ಡಿದರವು ಪ್ರಸ್ತುತ ಶೇಕಡ 6.9 ಆಗಿದೆ. ಇದೇ ಬಡ್ಡಿದರವನ್ನು ಪ್ರಸ್ತುತ ಹಲವಾರು ಬ್ಯಾಂಕುಗಳಲ್ಲಿ ಫಿಕ್ಸಿಡ್ ಡೆಪಾಸಿಟ್ ಮೇಲೆ ನೀಡಲಾಗುತ್ತದೆ. ಆರ್‌ಬಿಐ ಮೇ 2022ರಿಂದ ಸತತ ಆರು ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಬ್ಯಾಂಕುಗಳು ಸಾಲದ ಬಡ್ಡಿದರದ ಜೊತೆಗೆ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಕೂಡಾ ಏರಿಕೆ ಮಾಡಿದೆ.

ಬ್ಯಾಂಕ್‌ನಲ್ಲಿ ದರ ಬದಲಾವಣೆ
ಮೇ 2022ರಿಂದ ಫೆಬ್ರವರಿ 2023ರವರೆಗೆ ಜಾರಿಗೆ ಬರುವಂತೆ ಬ್ಯಾಂಕ್‌ಗಳಲ್ಲಿ ಹೊಸದಾಗಿ ಮಾಡಲಾಗುವ ಠೇವಣಿಗಳ ಮೇಲಿನ ವೇಟೆಂಡ್ ಅವರೇಜ್ ಡೊಮೆಸ್ಟಿಕ್ ಟರ್ಮ್ ಡೆಪಾಸಿಟ್ ರೇಟ್ (ಡಬ್ಲ್ಯೂಎಡಿಟಿಡಿಆರ್) 222 ಮೂಲಾಂಕ ಏರಿಕೆ ಮಾಡಲಾಗಿದೆ. ಇದರಲ್ಲಿ ಚಿಲ್ಲರೆ ಮತ್ತು ಬೃಹತ್ ಮೊತ್ತವು ಒಳಗೊಂಡಿದೆ. ವರ್ಷದ ಮೊದಲಾರ್ಧದಲ್ಲಿ ಅಧಿಕ ಡೆಪಾಸಿಟ್ ಮೇಲೆ ಹೆಚ್ಚು ಗಮನಹರಿಸಿದೆ. ಆದರೆ ಎರಡನೇ ಹಣಕಾಸು ವರ್ಷದಲ್ಲಿ ಬ್ಯಾಂಕುಗಳು ಇದು ಬದಲಾವಣೆಯಾಗಿದೆ. ಹೊಸದಾಗಿ ಮಾಡಲಾಗುವ ಡೆಪಾಸಿಟ್ ದರವನ್ನು 77 ಬಿಪಿಎಸ್ ಹೆಚ್ಚಿಸಲಾಗಿದೆ. ಹೊಸದಾಗಿ ಮಾಡಲಾಗುವ ರಿಟೇಲ್ ಡೆಪಾಸಿಟ್ ದರವನ್ನು 122 ಬಿಪಿಎಸ್ ಏರಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.
ಸಣ್ಣ ಉಳಿತಾಯ ಯೋಜನೆಗಳ ದರ ಬದಲಾವಣೆ
ಸಣ್ಣ ಉಳಿತಾಯ ಯೋಜನೆಯ ಬಡ್ಡಿದರವನ್ನು 2022-23 ಹಣಕಾಸು ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರವು 10-30 ಬಿಪಿಎಸ್ ಹೆಚ್ಚಳ ಮಾಡಿದೆ. ಹಾಗೆಯೇ 2022-23 ಹಣಕಾಸು ವರ್ಷದ ಜನವರಿಯಿಂದ ಮಾರ್ಚ್‌ಗೆ ಅಂತ್ಯವಾಗುವ ತ್ರೈಮಾಸಿಕದಲ್ಲಿ 20-110 ಬಿಪಿಎಸ್ ಹೆಚ್ಚಳ ಮಾಡಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ 10-70 ಬಿಪಿಎಸ್ ದರ ಏರಿಕೆ ಮಾಡಲಾಗಿದೆ. ಅದಕ್ಕೂ ಮುನ್ನ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡದರವನ್ನು 9 ತ್ರೈಮಾಸಿಕಗಳ ಕಾಲ ಸ್ಥಿರವಾಗಿರಿಸಲಾಗಿತ್ತು.
ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 2022ರಿಂದ ಆರಂಭಿಸಿ ಈವರೆಗೆ ಒಟ್ಟು ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಮೇ ತಿಂಗಳಿನಲ್ಲಿ ಆರ್‌ಬಿಐ 40 ಮೂಲಾಂಕ ದರ ಏರಿಕೆ ಮಾಡಿದೆ. ಜೂನ್‌ನಲ್ಲಿ ನಡೆದ ಅನಿಗಧಿತ ಸಭೆಯ ಬಳಿಕ ಆರ್‌ಬಿಐ 40 ಬಿಪಿಎಸ್ ದರ ಹೆಚ್ಚಳ ಮಾಡಿದೆ. ಅದಾದ ಬಳಿಕ ಸತತವಾಗಿ ಎರಡು ತಿಂಗಳು ಎಂದರೆ ಆಗಸ್ಟ್‌ನಲ್ಲಿ ಹಾಗೂ ಸೆಪ್ಟೆಂಬರ್‌ನಲ್ಲಿ 50 ಮೂಲಾಂಕ ದರ ಏರಿಕೆ ಮಾಡಿದೆ. ಡಿಸೆಂಬರ್‌ನಲ್ಲಿ 35 ಬಿಪಿಎಸ್, ಫೆಬ್ರವರಿಯಲ್ಲಿ 25 ಬಿಪಿಎಸ್ ದರ ಏರಿಕೆ ಮಾಡಿದ್ದ ಆರ್‌ಬಿಐ ಏಪ್ರಿಲ್ ಎಂಪಿಸಿ ಸಭೆಯ ಬಳಿಕ ಯಾವುದೇ ದರ ಏರಿಕೆ ಮಾಡಿಲ್ಲ.
ಸಾಮಾನ್ಯವಾಗಿ ರೆಪೋ ದರ ಏರಿಕೆ ಮಾಡಿದರೆ ಸಾಲದ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಕೂಡಾ ಏರಿಕೆ ಮಾಡಲಾಗುತ್ತದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವು ಏರಿಕೆಯಾಗುತ್ತಿದ್ದಂತೆ ಇವೆರಡರ ನಡುವೆ ಸ್ಪರ್ಧೆ ಕಾಣಿಸಿಕೊಂಡಿದೆ. ಮೂರು ಬಾರಿ ಸಣ್ಣ ಉಳಿತಾಯ ಯೋಜನೆ ಬಡ್ಡಿದರ ಏರಿಸಿದ ಬಳಿಕ ಬಡ್ಡಿದರ ಶೇಕಡ 6.9ರಷ್ಟಿದೆ. ಈ ನಡುವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರ ಶೇಕಡ 6.8ರಷ್ಟಿದೆ. ಎರಡು ವರ್ಷದಿಂದ ಮೂರು ವರ್ಷದ ಒಳಗಿನ ಎಫ್‌ಡಿ ಮೇಲೆ ಶೇಕಡ 7ರಷ್ಟು ಬಡ್ಡಿದರವಿದೆ.


Click it and Unblock the Notifications