ನಾವು ಹೂಡಿಕೆಯನ್ನು ಮಾಡಲು ಬಯಸಿದರೆ ನಮಗೆ ಎಂದಿಗೂ ಕೂಡಾ ನಾವು ಎಲ್ಲಿ ಮಾಡುವ ಹೂಡಿಕೆ ಅತೀ ಸುರಕ್ಷಿತ ಎಂದು ನೋಡುತ್ತೇವೆ. ಹಾಗೆ ನೋಡಿದಾಗ ನಮ್ಮ ಮುಂದೆ ಬರುವ ಆಯ್ಕೆಗಳು ಸುರಕ್ಷಿತ ಹೂಡಿಕೆ ಆಯ್ಕೆಗಳಾದ ಅಂಚೆ ಕಚೇರಿ ಹೂಡಿಕೆ ಯೋಜನೆಗಳು ಆಗಿದೆ.
ಅಂಚೆ ಕಚೇರಿಯಲ್ಲಿ ಹಲವಾರು ಹೂಡಿಕೆ ಆಯ್ಕೆಗಳು ಇದೆ. ಅದರಲ್ಲಿ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಡಿ, ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಅದೇ ಸಮಯದಲ್ಲಿ, ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಪ್ರಸ್ತುತ ಬಡ್ಡಿ ದರವು ವಾರ್ಷಿಕವಾಗಿ ಶೇಕಡ 7.4 ಆಗಿದೆ.

5 ವರ್ಷಗಳ ಮೆಚ್ಯೂರಿಟಿ ಅವಧಿಯ ಬಳಿಕ ಒಟ್ಟು ಅಸಲು ಮೊತ್ತವನ್ನು ಹಿಂಪಡೆಯಬಹುದು. ಇದನ್ನು ಇನ್ನೂ 5-5 ವರ್ಷಗಳವರೆಗೆ ವಿಸ್ತರಿಸಬಹುದು. ಪ್ರತಿ 5 ವರ್ಷಗಳ ನಂತರ, ಮೂಲ ಮೊತ್ತವನ್ನು ಹಿಂಪಡೆಯಲು ಅಥವಾ ಯೋಜನೆಯನ್ನು ವಿಸ್ತರಿಸಲು ಆಯ್ಕೆ ಇರುತ್ತದೆ. ನೀವು ಈ ಖಾತೆಯಲ್ಲಿ ಪಡೆಯುವ ಬಡ್ಡಿಯನ್ನು ಪ್ರತಿ ತಿಂಗಳು ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗೆ ಪಾವತಿಸಲಾಗುತ್ತದೆ.
ನೀವು ನಿಮ್ಮ ಸಂಗಾತಿಯೊಂದಿಗೆ ಲಾಭವನ್ನು ಪಡೆಯುವಿರಿ
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಮಾಸಿಕ ಆದಾಯವನ್ನು ಖಾತರಿಪಡಿಸಲಾಗುತ್ತದೆ. ಪತಿ ಪತ್ನಿ ಜಂಟಿ ಖಾತೆ ತೆರೆದು ಅದರಲ್ಲಿ 15 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಇದರ ಮೇಲೆ ಬಡ್ಡಿಯನ್ನು ಶೇಕಡ 7.4ರ ಬಡ್ಡಿದರದಂತೆ ವಾರ್ಷಿಕ 1,11,000 ರೂಪಾಯಿ ಪಡೆಯಬಹುದಾಗಿದೆ. ಇದನ್ನು 12 ತಿಂಗಳಿಗೆ ಭಾಗಿಸಿದರೆ ಪ್ರತಿ ತಿಂಗಳು 9250 ರೂಪಾಯಿ ಆದಾಯ ಸಿಗುತ್ತದೆ.
ಅಂಚೆ ಕಚೇರಿ ನಿಯಮಗಳ ಪ್ರಕಾರ, ಎಐಎಸ್‌ನಲ್ಲಿ ಎರಡು ಅಥವಾ ಮೂರು ಜನರು ಜಂಟಿ ಖಾತೆಯನ್ನು ತೆರೆಯಬಹುದು. ಖಾತೆಗೆ ಬಂದ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮನಾಗಿ ನೀಡಲಾಗುತ್ತದೆ. ಜಂಟಿ ಖಾತೆಯನ್ನು ಯಾವುದೇ ಸಮಯದಲ್ಲಿ ಒಂದೇ ಖಾತೆಯಾಗಿ ಪರಿವರ್ತಿಸಬಹುದು. ಏಕ ಖಾತೆಯನ್ನು ಜಂಟಿ ಖಾತೆಯಾಗಿಯೂ ಪರಿವರ್ತಿಸಬಹುದು.
ಯಾರು ಈ ಖಾತೆ ತೆರೆಯಬಹುದು?
ದೇಶದ ಯಾವುದೇ ನಾಗರಿಕರು ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. ಮಗುವಿನ ಹೆಸರಲ್ಲೂ ಖಾತೆ ತೆರೆಯಬಹುದು. ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆಯಿದ್ದರೆ, ಪೋಷಕರು ಅಥವಾ ಕಾನೂನು ಪಾಲಕರು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಮಗುವಿಗೆ 10 ವರ್ಷ ವಯಸ್ಸಾದಾಗ, ಖಾತೆಯನ್ನು ಸ್ವತಃ ನಿರ್ವಹಿಸುವ ಹಕ್ಕನ್ನು ಪಡೆಯಬಹುದು.
ಎಂಐಎಸ್ ಖಾತೆಗಾಗಿ ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ. ಮೆಚ್ಯೂರಿಟಿಗೂ ಮುನ್ನ ಹಣವನ್ನು ವಿತ್‌ಡ್ರಾ ಮಾಡಿದರೆ, ನಿಮಗೆ ನಷ್ಟವಾಗುತ್ತದೆ.
ಎಂಐಎಸ್‌ನ ಮುಕ್ತಾಯವು ಐದು ವರ್ಷಗಳು, ಈ ಸಂದರ್ಭದಲ್ಲಿ ಅಕಾಲಿಕವಾಗಿ ಖಾತೆಯನ್ನು ಮುಚ್ಚಬಹುದು. ಆದರೂ ನಿಯಮಗಳ ಪ್ರಕಾರ ಡೆಪಾಸಿಟ್ ಮಾಡಿದ ನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಮಾತ್ರ ನೀವು ಹಣವನ್ನು ಹಿಂಪಡೆಯಬಹುದು.
ನೀವು ಒಂದು ವರ್ಷದಿಂದ ಮೂರು ವರ್ಷಗಳ ನಡುವೆ ಅವಧಿಯಲ್ಲಿ ಹಣವನ್ನು ವಿತ್‌ಡ್ರಾ ಮಾಡಿದರೆ, ಡೆಪಾಸಿಟ್ ಮಾಡಿದ ಮೊತ್ತದ ಶೇಕಡ 2 ರಷ್ಟು ಕಡಿತಗೊಳಿಸಲಾಗುತ್ತದೆ, ಬಳಿಕ ವಾಪಾಸ್ ನೀಡಲಾಗುತ್ತದೆ. ಖಾತೆ ತೆರೆದ 3 ವರ್ಷಗಳ ನಂತರ ನೀವು ಮೆಚ್ಯೂರಿಟಿಯ ಮೊದಲು ಹಣವನ್ನು ಹಿಂಪಡೆದರೆ, ನಿಮ್ಮ ಡೆಪಾಸಿಟ್ ಮೇಲೆ ಶೇಕಡ 1 ರಷ್ಟು ಕಡಿತಗೊಳಿಸಿ, ಹಿಂದಕ್ಕೆ ನೀಡಲಾಗುತ್ತದೆ.


Click it and Unblock the Notifications