ಇಂಥಾ ಯೋಜನೆ ಬಗ್ಗೆ ನೀವು ಕೇಳಿರಲ್ಲ ಬಿಡಿ! ಇದು ಬಂಪರ್ ಯೋಜನೆ! ನೀವು 5,00,000 ರೂ. ಹೂಡಿಕೆ ಮಾಡಿದ್ರೆ, ಮೆಚ್ಯೂರಿಟಿ ಬಳಿಕ ಬರೋಬ್ಬರಿ 15,00,000 ರೂ. ಮನೆಗೆ ಕೊಂಡೊಯ್ಯಬಹುದು. ಹಾಗಿದ್ರೆ ಬನ್ನಿ, ಈ ಯೋಜನೆ ಯಾವುದು? ಎಲ್ಲಿ ಈ ಯೋಜನೆಯ ಲಾಭ ಪಡೆಯಬಹುದು ಎಂಬ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಮನೆಯಲ್ಲಿ ಮಗು ಹುಟ್ಟಿದ್ದಾಗ ಅವರು ಮುಂದಿನ ಜೀವನ ಸುಖಕರವಾಗಿರಲಿ ಎಂದು ಅವರ ತಂದೆ ತಾಯಿ ಬಯಸುತ್ತಾರೆ. ಹೆತ್ತವರು ಕಷ್ಟಕ್ಕೆ ಅವರನ್ನು ದೂಡುವುದಿಲ್ಲ ಅವರಿಗಾಗಿ ಅತ್ಯುತ್ತಮವಾದ ಜೀವನವನ್ನು ರೂಪಿಸಲು ಅವರು ಕಷ್ಟಪಟ್ಟು ಹಣ ಉಳಿಸಿ ಅವರಿಗಾಗಿ ಮೀಸಲು ಇಡುತ್ತಾರೆ. ಈ ಕಾರಣದಿಂದಾಗಿ, ಮಗು ಜನಿಸಿದ ತಕ್ಷಣ ಪೋಷಕರು ಎಲ್ಲಾ ರೀತಿಯ ಆರ್ಥಿಕ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ನಿರ್ಧಾರ ಮಾಡುತ್ತಾರೆ. ಕೆಲವರು ಮಗುವಿನ ಹೆಸರಿನಲ್ಲಿ ಪಿಪಿಎಫ್, ಸುಕನ್ಯಾ ಮುಂತಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಕೆಲವರು ಮಗುವಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಎಲ್ಲೋ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಾರೆ.

ನೀವು ಕೂಡ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಬಯಸಿದ್ರೆ ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ಅಂದರೆ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು.ಅಂಚೆ ಕಚೇರಿಯಲ್ಲಿ ನೀವು 5 ವರ್ಷಗಳ ಕಾಲ ಹಣವಿಟ್ಟರೆ ಎಫ್‌ಡಿ ಬ್ಯಾಂಕ್‌ಗಳಿಗಿಂತ ಉತ್ತಮ ಬಡ್ಡಿದರವನ್ನು ನೀಡುತ್ತಿದೆ. ಈ ಯೋಜನೆಯ ಮೂಲಕ ನೀವು ಬಯಸಿದರೆ, ನೀವು ಮೊತ್ತವನ್ನು ಮೂರು ಪಟ್ಟು ಸಹ ಹೆಚ್ಚಿಗೆ ಮಾಡಬಹುದು ಅಂದರೆ ನೀವು 5,00,000 ಹೂಡಿಕೆ ಮಾಡಿದರೆ ನೀವು ಅದನ್ನು 15,00,000 ಕ್ಕಿಂತ ಹೆಚ್ಚು ಮಾಡಬಹುದು. ಅದು ಹೇಗೆ ಎಂಬ ವಿವರ ಈ ಕೆಳಗಿನಂತೆ ಇದೆ.
5 ಲಕ್ಷ 15 ಲಕ್ಷ ಆಗುವುದು ಹೀಗೆ..?
ಅಂಚೆ ಕಚೇರಿಯಲ್ಲಿ ನೀವು 5 ಲಕ್ಷಗಳನ್ನು 15 ಲಕ್ಷಕ್ಕೆ ಮಾಡಲು ಮೊದಲು 5,00,000 ಅನ್ನು ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂಚೆ ಕಚೇರಿಯು 5 ವರ್ಷಗಳ ಎಫ್‌ಡಿಗೆ ಶೇ.7.5 ಬಡ್ಡಿಯನ್ನು ನೀಡುತ್ತಿದೆ. ಅಂತಹ ಸಂದರ್ಭದಲ್ಲಿ ಪ್ರಸ್ತುತ ಇರುವ ಬಡ್ಡಿದರದೊಂದಿಗೆ ಲೆಕ್ಕ ಮಾಡಿದ್ದರೆ 5 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತವು 7,24,974 ರೂಗಳು ಆಗುತ್ತದೆ. ನೀವು ಈ ಮೊತ್ತವನ್ನು ಹಿಂಪಡೆಯಬೇಕಾಗಿಲ್ಲ. ಅದೇ ಹಣವನ್ನು ನೀವು ಮುಂದಿನ 5 ವರ್ಷಗಳವರೆಗೆ ಮುಂದುವರಿಸಬಹುದು. ಈ ರೀತಿಯಾಗಿ ನೀವು 10 ವರ್ಷಗಳಲ್ಲಿ 5 ಲಕ್ಷಗಳ ಮೊತ್ತದ ಬಡ್ಡಿಯ ಮೂಲಕ 5,51,175 ರೂಗಳನ್ನು ಗಳಿಕೆಯನ್ನು ಮಾಡಬಹುದು ಮತ್ತು ನಿಮ್ಮ ಈ 10,51,175 ರೂ ಮೊತ್ತವು ಎರಡು ಪಟ್ಟು ಹೆಚ್ಚಾಗುತ್ತದೆ. ಆದರೆ ನೀವು ಈ ಮೊತ್ತವನ್ನು ಮತ್ತೊಮ್ಮೆ 5 ವರ್ಷಗಳವರೆಗೆ ಠೇವಣಿ ಇಡಬೇಕಾಗುತ್ತದೆ. ನೀವು ಇದನ್ನು ತಲಾ 5 ವರ್ಷಗಳವರೆಗೆ ಎರಡು ಬಾರಿ ನಿಗದಿಪಡಿಸಬೇಕು, ಈ ರೀತಿಯಲ್ಲಿ ನಿಮ್ಮ ಮೊತ್ತವನ್ನು ಒಟ್ಟು 15 ವರ್ಷಗಳವರೆಗೆ ಠೇವಣಿ ಮಾಡಲಾಗುತ್ತದೆ.
15 ವರ್ಷದಲ್ಲಿ ಮೆಚ್ಯೂರಿಟಿಯ ಸಮಯದಲ್ಲಿ ನೀವು ಹೂಡಿಕೆ ಮಾಡಿದ 5 ಲಕ್ಷಗಳ ಮೇಲೆ ಕೇವಲ ಬಡ್ಡಿಯಿಂದ 10,24,149 ರೂ ಹಣವನ್ನು ಗಳಿಸಬಹುದು. ಈ ರೀತಿಯಾಗಿ ನೀವು ಹೂಡಿಕೆ ಮಾಡಿದ 5 ಲಕ್ಷಗಳು ಮತ್ತು 10,24,149 ರೂಪಾಯಿಗಳನ್ನು ಒಟ್ಟುಗೂಡಿಸಿ, ನೀವು ಒಟ್ಟು 15,24,149 ರೂಗಳ ಮೊತ್ತವನ್ನು ಪಡೆಯಬಹುದು.
ಖಾತೆ ವಿಸ್ತರಣೆಯ ನಿಯಮಗಳು
15 ಲಕ್ಷಗಳ ಮೊತ್ತವನ್ನು ಪಡೆಯಲು ನೀವು ಎರಡು ಬಾರಿ ಪೋಸ್ಟ್ ಆಫೀಸ್ FD ಅನ್ನು ವಿಸ್ತರಿಸಬೇಕು. ಇದಕ್ಕಾಗಿ ನೀವು ಕೆಲವು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ ಅವು ಕೆಳಗಿನಂತೆ ಇವೆ
ಪೋಸ್ಟ್ ಆಫೀಸ್‌ನ ಒಂದು ವರ್ಷದ ಎಫ್‌ಡಿಯನ್ನು ಮೆಚ್ಯೂರಿಟಿ ದಿನಾಂಕದಿಂದ 6 ತಿಂಗಳೊಳಗೆ ವಿಸ್ತರಿಸಬಹುದು. 2 ವರ್ಷದ ಎಫ್‌ಡಿಯನ್ನು ಮೆಚ್ಯೂರಿಟಿ ಅವಧಿಯ 12 ತಿಂಗಳೊಳಗೆ ವಿಸ್ತರಿಸಬೇಕು. ಆದರೆ 3 ಮತ್ತು 5 ವರ್ಷಗಳ FD ವಿಸ್ತರಣೆಗಾಗಿ, ಮೆಚ್ಯೂರಿಟಿ ಅವಧಿಯ 18 ತಿಂಗಳೊಳಗೆ ಅಂಚೆ ಕಚೇರಿಗೆ ತಿಳಿಸಬೇಕು. ಇದರ ಹೊರತಾಗಿ, ಖಾತೆಯನ್ನು ತೆರೆಯುವ ಸಮಯದಲ್ಲಿ ಮುಕ್ತಾಯದ ನಂತರ ಖಾತೆ ವಿಸ್ತರಣೆಗೆ ನೀವು ವಿನಂತಿಸಬಹುದು.
ಎಫ್ ಡಿ ಮುಕ್ತಾಯದ ದಿನದಂದು ಆಯಾ TD ಖಾತೆಗೆ ಅನ್ವಯವಾಗುವ ಬಡ್ಡಿ ದರವು ವಿಸ್ತೃತ ಅವಧಿಗೆ ಅನ್ವಯಿಸುತ್ತದೆ.
ಪೋಸ್ಟ್ ಆಫೀಸ್ TD ಬಡ್ಡಿ ದರಗಳು
ಬ್ಯಾಂಕ್‌ಗಳಂತೆ, ಪೋಸ್ಟ್ ಆಫೀಸ್‌ಗಳಲ್ಲಿಯೂ ನೀವು ವಿವಿಧ ಅವಧಿಯ ಎಫ್‌ಡಿಗಳ ಆಯ್ಕೆಗಳನ್ನು ಪಡೆಯಬಹುದು.ಪ್ರತಿ ಅವಧಿಗೆ ವಿಭಿನ್ನ ಬಡ್ಡಿದರಗಳನ್ನು ನೀಡಲಾಗುತ್ತದೆ. ಪ್ರಸ್ತುತ ಬಡ್ಡಿದರಗಳು ಈ ಕೆಳಗಿನಂತಿವೆ ಇದೆ.
ಒಂದು ವರ್ಷದ ಖಾತೆಯ ಮೇಲೆ ಶೇ.6.9 ವಾರ್ಷಿಕ ಬಡ್ಡಿ
ಎರಡು ವರ್ಷದ ಖಾತೆಯ ಮೇಲೆ ಶೇ.7.0 ವಾರ್ಷಿಕ ಬಡ್ಡಿ
ಮೂರು ವರ್ಷದ ಖಾತೆಯ ಮೇಲೆ ಶೇ.7.1 ವಾರ್ಷಿಕ ಬಡ್ಡಿ
ಐದು ವರ್ಷದ ಖಾತೆಯ ಮೇಲೆ ಶೇ.7.5% ವಾರ್ಷಿಕ ಬಡ್ಡಿ
ಹೀಗೆ ನೀವು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ ನಿಮ್ಮ ಮೊತ್ತವನ್ನು ಮೂರು ಪಟ್ಟು ದುಪ್ಪಟ್ಟು ಮಾಡಿಕೊಳ್ಳಬಹುದು.


Click it and Unblock the Notifications