ಇಂದು ಜನರಿಗೆ ಹಲವಾರು ಹೂಡಿಕೆ ಆಯ್ಕೆಗಳು ಲಭ್ಯವಿದೆ. ಆದರೆ ನೀವು ದೀರ್ಘಕಾಲದವರೆಗೆ ನಿಮ್ಮ ಹಣವನ್ನು ಡೆಪಾಸಿಟ್ ಮಾಡುವ ಮತ್ತು ಉತ್ತಮ ಬಡ್ಡಿಯನ್ನು ಪಡೆಯುವ ಯೋಜನೆಯ ಹುಡುಕಾಟದಲ್ಲಿದ್ದರೆ ನಿಮಗಿರುವ ಉತ್ತಮ ಆಯ್ಕೆಗಳಲ್ಲಿ ಅಂಚೆ ಕಚೇರಿ ಯೋಜನೆ ಕೂಡಾ ಒಂದಾಗಿದೆ.
ಹಾಗಾದರೆ ನಿಮಗೆ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯು ಅಂಚೆ ಕಛೇರಿಯ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ, ನಿಮ್ಮ ಮೊತ್ತವು 115 ತಿಂಗಳುಗಳಲ್ಲಿ ದುಪ್ಪಟ್ಟಾಗುತ್ತದೆ. ಪ್ರಸ್ತುತ, ಈ ಯೋಜನೆಯಲ್ಲಿ ಶೇಕಡ 7.5 ರ ಬಡ್ಡಿಯನ್ನು ನೀಡುತ್ತದೆ. ಹಾಗಾದರೆ ಯೋಜನೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ತಿಳಿಯಲು ಮುಂದೆ ಓದಿ....

ಒಂದು ಸಾವಿರ ರೂಪಾಯಿ ಹೂಡಿಕೆ ಮಾಡಿ
ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ, ನೀವು ಕನಿಷ್ಟ 1000 ರೂಪಾಯಿ ಮತ್ತು 100 ರ ಗುಣಕಗಳಲ್ಲಿ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಒಳ್ಳೆಯ ವಿಷಯವೆಂದರೆ ಈ ಯೋಜನೆಯಡಿಯಲ್ಲಿ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹುದು. ಇದಲ್ಲದೆ, ಏಕ ಮತ್ತು ಜಂಟಿ ಖಾತೆಯನ್ನು ತೆರೆಯುವ ಆಯ್ಕೆಯನ್ನು ಸಹ ನಿಮಗೆ ನೀಡಲಾಗಿದೆ.
ಹಣ ಡಬಲ್ ಆಗಲಿದೆ ನೋಡಿ
ಶೇಕಡ 7.5 ರಷ್ಟು ಬಡ್ಡಿದರವನ್ನು ನೀವು ಈ ಯೋಜನೆಯಡಿಯಲ್ಲಿ ಪಡೆಯಬಹುದಾಗಿದೆ. ಈಗ ಈ ಯೋಜನೆಯಲ್ಲಿ ನಿಮ್ಮ ಹಣ 115 ತಿಂಗಳಲ್ಲಿ ಡಬಲ್ ಆಗುತ್ತದೆ. ಅಂದರೆ, ನೀವು ಒಂದು ಲಕ್ಷ ರೂಪಾಯಿಯನ್ನು ಡೆಪಾಸಿಟ್ ಮಾಡಿದರೆ, ಅದು 115 ತಿಂಗಳಲ್ಲಿ 2 ಲಕ್ಷ ರೂಪಾಯಿ ಲಭ್ಯವಾಗುತ್ತದೆ. ನೀವು 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ 20 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಕೆವಿಪಿಯಲ್ಲಿ ಹೂಡಿಕೆ ಏಕೆ, ಪ್ರಯೋಜನಗಳೇನು?
* ಈ ಯೋಜನೆಯು ಮಾರುಕಟ್ಟೆಯ ಏರಿಳಿತದಿಂದ ಪ್ರಭಾವಕ್ಕೆ ಒಳಗಾಗುವುದಿಲ್ಲ. ನೀವು ಗ್ಯಾರಂಟಿ ಆದಾಯವನ್ನು ಪಡೆಯಬಹುದು.
* ನೀವು ಕನಿಷ್ಟ ಒಂದು ಸಾವಿರ ರೂಪಾಯಿ ಮೊತ್ತದೊಂದಿಗೆ ಕೆವಿಪಿ ಖಾತೆಯಲ್ಲಿ ಹೂಡಿಕೆಯನ್ನು ಪ್ರಾರಂಭ ಮಾಡಬಹುದು. ನಿಮ್ಮ ಹಣಕಾಸಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ಯಾವುದೇ ಗರಿಷ್ಠ ಮಿತಿ ಇಲ್ಲ.
* ನೀವು ಯಾವುದೇ ಅಂಚೆ ಕಛೇರಿಯಲ್ಲಿ ಈ ಯೋಜನೆಯ ಖಾತೆಯನ್ನು ತೆರೆಯಬಹುದು.
* ಈ ಯೋಜನೆಯು 115 ತಿಂಗಳುಗಳಲ್ಲಿ ಮೆಚ್ಯೂರ್ ಆಗುತ್ತದೆ. ಆದರೆ ನೀವು ಮೊತ್ತವನ್ನು ಹಿಂಪಡೆಯುವವರೆಗೂ ಕೆವಿಪಿಯ ಮೆಚ್ಯೂರಿಟಿ ಆದಾಯ ಮೇಲೆ ಬಡ್ಡಿ ಪಡೆಯಬಹುದಾಗಿದೆ.
* ಸುರಕ್ಷಿತ ಸಾಲವನ್ನು ಪಡೆಯಲು ನಿಮ್ಮ ಕೆವಿಪಿ ಪ್ರಮಾಣಪತ್ರವನ್ನು ನೀವು ಬಳಸಬಹುದು.
* ನಾಮಿನೇಷನ್ ಸೌಲಭ್ಯವು ಕೂಡಾ ಲಭ್ಯವಿದೆ.
ಯಾರು ಖಾತೆಯನ್ನು ತೆರೆಯಬಹುದು?
* ಈ ಯೋಜನೆಯ ಅಡಿಯಲ್ಲಿ ಯಾವುದೇ ವಯಸ್ಕ ವ್ಯಕ್ತಿ ಏಕ ಅಥವಾ ಜಂಟಿ ಖಾತೆಯನ್ನು ತೆರೆಯಬಹುದು.
* ಇದಲ್ಲದೆ, 10 ವರ್ಷಕ್ಕಿಂತ ಮೇಲ್ಪಟ್ಟ ಮಗು ತನ್ನ ಹೆಸರಿನಲ್ಲಿ ಕಿಸಾನ್ ವಿಕಾಸ್ ಪತ್ರವನ್ನು ತೆಗೆದುಕೊಳ್ಳಬಹುದು.
* ಒಬ್ಬ ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥರ ಪರವಾಗಿ ಪಾಲಕರು ಖಾತೆಯನ್ನು ತೆರೆಯಬಹುದು.
* ಖಾತೆಯನ್ನು ತೆರೆಯುವಾಗ, ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣಪತ್ರ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಕೆವಿಪಿ ಅರ್ಜಿ ನಮೂನೆ ಮುಂತಾದ ದಾಖಲೆಗಳು ಬೇಕಾಗಬಹುದು.
ಅಕಾಲಿಕ ವಾಪಸಾತಿ ನಿಯಮಗಳು
ಕೆವಿಪಿ ಖಾತೆಯಲ್ಲಿ ಡೆಪಾಸಿಟ್ ಮಾಡಿದ ದಿನಾಂಕದಿಂದ 2 ವರ್ಷ ಮತ್ತು 6 ತಿಂಗಳ ನಂತರ ಅವಧಿಪೂರ್ವವಾಗಿ ಡೆಪಾಸಿಟ್ ಅನ್ನು ಹಿಂಪಡೆಯಬಹುದಾಗಿದೆ. ಆದಾಗ್ಯೂ, ಕೆಲವು ಷರತ್ತುಗಳು ಇದೆ. ಕೆವಿಪಿ ಹೊಂದಿರುವವರು ಅಥವಾ ಜಂಟಿ ಖಾತೆಯ ಸಂದರ್ಭದಲ್ಲಿ, ಯಾವುದೇ ಅಥವಾ ಎಲ್ಲಾ ಖಾತೆದಾರರ ಮರಣದ ಸಂದರ್ಭದಲ್ಲಿ ನೀವು ಅಕಾಲಿಕವಾಗಿ ಡೆತ್ ಆದರೆ ಹಣವನ್ನು ಅಕಾಲಿಕವಾಗಿ ವಿತ್‌ಡ್ರಾ ಮಾಡಬಹುದು. ನ್ಯಾಯಾಲಯದ ಆದೇಶದ ಮೇರೆಗೆ ಹಣವನ್ನು ವಿತ್‌ಡ್ರಾ ಮಾಡಬಹುದು.


Click it and Unblock the Notifications