ಹಣ ಹೂಡಿಕೆ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ಎಲ್ಲಿ ಹೂಡಿಕೆ ಮಾಡಿದರೆ ನಮ್ಮ ಹಣ ಡಬಲ್ ಆಗುತ್ತದೆ ಅಥವಾ ಅಧಿಕ ಬಡ್ಡಿದರವನ್ನು ಪಡೆಯಲು ಸಾಧ್ಯವೆಂದು ನೋಡುತ್ತೇವೆ. ಈ ನಡುವೆ ಅಂಚೆ ಕಛೇರಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ ಇದೆ.
ಇಂದು ನಾವು ಅಂಚೆ ಕಚೇರಿಯ ಅಂತಹ ಒಂದು ಯೋಜನೆಯ ಬಗ್ಗೆ ಹೇಳುತ್ತೇವೆ. ಇದರಲ್ಲಿ ನೀವು 5 ಲಕ್ಷ ರೂ.ಗಳನ್ನು ಡೆಪಾಸಿಟ್ ಮಾಡುವ ಮೂಲಕ ಪೂರ್ಣ 10 ಲಕ್ಷ ರೂ. ಪಡೆಯಬಹುದಾಗಿದೆ. ಇಂದಿಗೂ ಅಂಚೆ ಕಛೇರಿ ಹಣ ಉಳಿಸಲು ಉತ್ತಮ ಮಾರ್ಗವಾಗಿದೆ. ಇದರಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುವುದು ಗ್ಯಾರಂಟಿಯಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಏಪ್ರಿಲ್ 1 ರಿಂದ 7.5 ರಷ್ಟು ಬಡ್ಡಿ ಲಭ್ಯ
ಏಪ್ರಿಲ್ 1, 2023 ರ ನಂತರ, ಗ್ರಾಹಕರು ಶೇಕಡ 7.5 ರ ದರದಲ್ಲಿ ಬಡ್ಡಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ನೀವು ಸಮಯ ಠೇವಣಿ ಯೋಜನೆಯಲ್ಲಿ ರೂ 5 ಲಕ್ಷವನ್ನು ಹೂಡಿಕೆ ಮಾಡಿದರೆ, ನೀವು ಮುಕ್ತಾಯವಾಗುವಾಗ 7,24,974 ರೂಪಾಯಿ ಪಡೆಯಬಹುದಾಗಿದೆ. ಇದರಲ್ಲಿ ನಿಮಗೆ ಬಡ್ಡಿಯಾಗಿ 2,24,974 ರೂಪಾಯಿ ಲಭ್ಯವಾಗುತ್ತದೆ. ಉಳಿದ 5 ಲಕ್ಷ ನೀವು ಹೂಡಿಕೆ ಮಾಡಿದ ಮೊತ್ತವಾಗಿದೆ.
10 ವರ್ಷಗಳಲ್ಲಿ ಹಣ ದ್ವಿಗುಣ
ನೀವು ಈ ಹೂಡಿಕೆಯ ಮುಕ್ತಾಯದ ಅವಧಿ ಅಥವಾ ಮೆಚ್ಯೂರಿಟಿ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಿದರೆ, ನೀವು 5 ಲಕ್ಷ ರೂಪಾಯಿ ಬದಲಾಗಿ 10 ಲಕ್ಷ ರೂಪಾಯಿಯನ್ನು ಪಡೆಯಬಹುದಾಗಿದೆ. ಈ ಹಣ 10 ವರ್ಷಗಳಲ್ಲಿ 10,51,175 ರೂಪಾಯಿ ಆಗುತ್ತದೆ. ಇದರಲ್ಲಿ ನಿಮ್ಮ ಬಡ್ಡಿ ಮೊತ್ತ 5,51,175 ರೂಪಾಯಿ ಆಗಿರುತ್ತದೆ. ಇಲ್ಲಿ ನಿಮ್ಮ ಹಣವು 10 ವರ್ಷಗಳಲ್ಲಿ ದ್ವಿಗುಣಗೊಳ್ಳುವ ಭರವಸೆ ಇದೆ.
100 ರೂಪಾಯಿಗಳ ಗುಣಕಗಳಲ್ಲಿ ಹೂಡಿಕೆ
ನೀವು ಈ ಯೋಜನೆಯಲ್ಲಿ ರೂ 100 ಗುಣಕಗಳಲ್ಲಿ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ ಟಿಡಿಯಲ್ಲಿ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯದ ಮೇಲಿನ ಬಡ್ಡಿದರಗಳನ್ನು ಪರಿಶೀಲಿಸುತ್ತದೆ.
ಯೋಜನೆಯ ವಿಶೇಷತೆ ಏನು?
* ನೀವು ಹತ್ತಿರದ ಅಂಚೆ ಕಚೇರಿಯಲ್ಲಿ ಸಮಯ ಠೇವಣಿ ಖಾತೆ ಅಥವಾ ಸ್ಥಿರ ಠೇವಣಿ ಖಾತೆಯನ್ನು ತೆರೆಯಬೇಕಾಗುತ್ತದೆ.
* ಈ ಯೋಜನೆಯಲ್ಲಿ ನೀವು ರೂ 1,000 ಹೂಡಿಕೆ ಮಾಡಬಹುದು ಮತ್ತು ಯಾವುದೇ ಗರಿಷ್ಠ ಹೂಡಿಕೆ ಮೊತ್ತವನ್ನು ನಿಗದಿಪಡಿಸಲಾಗಿಲ್ಲ.
* 10 ವರ್ಷ ಮೇಲ್ಪಟ್ಟ ವ್ಯಕ್ತಿ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* ಅಪ್ರಾಪ್ತ ಮಗುವಿನ ಖಾತೆಯನ್ನು ಅವನ ಹೆತ್ತವರ ಮೇಲ್ವಿಚಾರಣೆಯಲ್ಲಿ ತೆರೆಯಲಾಗುತ್ತದೆ.
* ಈ ಯೋಜನೆಯಲ್ಲಿ ನೀವು 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದು.
* ಏಕ ಖಾತೆ ಮತ್ತು ಜಂಟಿ ಖಾತೆಯನ್ನು ಸಹ ತೆರೆಯಲಾಗುತ್ತದೆ.
ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯಿರಿ
ಅಂಚೆ ಕಚೇರಿ ಯೋಜನೆಯಡಿ ತೆರಿಗೆ ವಿನಾಯಿತಿಯ ಲಾಭವನ್ನು ನೀವು ಪಡೆಯುತ್ತೀರಿ. ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ನೀವು ರೂ 1.5 ಲಕ್ಷದವರೆಗಿನ ಹೂಡಿಕೆಗಳ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ಎಫ್‌ಡಿಯ ಮುಕ್ತಾಯದ ಮೇಲೆ ಸ್ವೀಕರಿಸಿದ ಮೊತ್ತವು ತೆರಿಗೆಗೆ ಒಳಪಡುತ್ತದೆ. ಅಂಚೆ ಕಚೇರಿ ಟಿಡಿಯಲ್ಲಿ, ವಾರ್ಷಿಕ ಬಡ್ಡಿಯು 1 ವರ್ಷಕ್ಕೆ 6.8 ಶೇಕಡಾ, 2 ವರ್ಷಕ್ಕೆ 6.9 ಶೇಕಡಾ ಮತ್ತು 3 ವರ್ಷಗಳಿಗೆ 7.0 ಶೇಕಡಾದಲ್ಲಿ ಲಭ್ಯವಿದೆ.


Click it and Unblock the Notifications