ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳು ಸಣ್ಣ ಉಳಿತಾಯದಿಂದ ಖಚಿತವಾದ ಆದಾಯವನ್ನು ಪಡೆಯಲು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಈ ಪೈಕಿ ಒಂದು ಒಂದು ಸೂಪರ್‌ಹಿಟ್ ಯೋಜನೆಯಿದೆ.
ಈ ಸೂಪರ್‌ಹಿಟ್ ಯೋಜನೆಯಲ್ಲಿ ನೀವು ಒಮ್ಮೆ ಹಣವನ್ನು ಡೆಪಾಸಿಟ್ ಮಾಡಿದರೆ ಸಾಕು, ಪ್ರತಿ ತಿಂಗಳು ಖಚಿತವಾದ ಆದಾಯ ಲಭ್ಯವಾಗುತ್ತದೆ. ಈ ಯೋಜನೆಯೇ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಆಗಿದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಏಕ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು. ಎಂಐಎಸ್ ಖಾತೆಯಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡಬೇಕು. ಈ ಯೋಜನೆ ಐದು ವರ್ಷಗಳಲ್ಲಿ ಮೆಚ್ಯೂರಿಟಿಯಾಗುತ್ತದೆ. ಈ ಯೋಜನೆಯಲ್ಲಿ ಅಕ್ಟೋಬರ್ 1, 2023 ರಿಂದ ಶೇಕಡ 7.4 ಬಡ್ಡಿಯನ್ನು ಪಡೆಯಬಹುದಾಗಿದೆ.
ಮಾಸಿಕ ಆದಾಯವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಅಂಚೆ ಕಛೇರಿಯ ಈ ಯೋಜನೆಯಲ್ಲಿ, ನೀವು 9 ಲಕ್ಷ ರೂಪಾಯಿವರೆಗೆ ಒಂದೇ ಖಾತೆಯಲ್ಲಿ ಮತ್ತು 15 ಲಕ್ಷ ರೂಪಾಯಿವರೆಗೆ ಜಂಟಿ ಖಾತೆಯಲ್ಲಿ ಡೆಪಾಸಿಟ್ ಮಾಡಬಹುದಾಗಿದೆ. ನೀವು ಬಯಸಿದರೆ, 5 ವರ್ಷಗಳ ಮೆಚುರಿಟಿ ಅವಧಿಯ ನಂತರ ನಿಮ್ಮ ಒಟ್ಟು ಅಸಲು ಮೊತ್ತವನ್ನು ವಾಪಾಸ್ ಪಡೆಯಬಹುದಾಗಿದೆ.
ಅದೇ ಸಮಯದಲ್ಲಿ, ಇದನ್ನು ಇನ್ನೂ 5-5 ವರ್ಷಗಳವರೆಗೆ ವಿಸ್ತರಿಸಬಹುದು. ಪ್ರತಿ 5 ವರ್ಷಗಳ ನಂತರ, ಮೂಲ ಮೊತ್ತವನ್ನು ಹಿಂಪಡೆಯಲು ಅಥವಾ ಯೋಜನೆಯನ್ನು ವಿಸ್ತರಿಸಲು ಆಯ್ಕೆ ಇರುತ್ತದೆ. ಖಾತೆಯಲ್ಲಿ ಪಡೆದ ಬಡ್ಡಿಯನ್ನು ನಿಮ್ಮ ಅಂಚೆ ಕಛೇರಿಯ ಉಳಿತಾಯ ಖಾತೆಗೆ ಪ್ರತಿ ತಿಂಗಳು ಪಾವತಿಸಲಾಗುತ್ತದೆ.
5 ಲಕ್ಷ ರೂಪಾಯಿ ಡೆಪಾಸಿಟ್‌ಗೆ ಎಷ್ಟು ಆದಾಯ?
ಅಂಚೆ ಕಛೇರಿಯ ಈ ಯೋಜನೆಯಲ್ಲಿ ಮಾಸಿಕ ಆದಾಯವನ್ನು ಪಡೆಯಬಹುದಾಗಿದೆ. ನೀವು ಐದು ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದ್ದರೆ, ಇದರ ಮೇಲೆ ವಾರ್ಷಿಕವಾಗಿ ಶೇಕಡ 7.4 ಬಡ್ಡಿದರವು ನಿಮಗೆ ಲಭ್ಯವಾಗುತ್ತದೆ. ಈ ಮೂಲಕ ಪ್ರತಿ ತಿಂಗಳು 3,083 ರೂಪಾಯಿ ಆದಾಯ ಬರಲಿದೆ. ಅಂದರೆ 12 ತಿಂಗಳಲ್ಲಿ 36,996 ರೂಪಾಯಿ ಲಭ್ಯವಾಗಲಿದೆ.
ನಿಯಮಗಳ ಪ್ರಕಾರ, ಎಂಐಎಸ್‌ನಲ್ಲಿ ಇಬ್ಬರು ಅಥವಾ ಮೂವರು ಜನರು ಜಂಟಿ ಖಾತೆಯನ್ನು ತೆರೆಯಬಹುದು. ಈ ಖಾತೆಯಿಂದ ಬರುವ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ.
ಜಂಟಿ ಖಾತೆಯನ್ನು ಯಾವುದೇ ಸಮಯದಲ್ಲಿ ಒಂದೇ ಖಾತೆಯಾಗಿ ಪರಿವರ್ತಿಸಬಹುದು. ಏಕ ಖಾತೆಯನ್ನು ಜಂಟಿ ಖಾತೆಯಾಗಿಯೂ ಪರಿವರ್ತಿಸಬಹುದು. ಖಾತೆಯಲ್ಲಿ ಯಾವುದೇ ಬದಲಾವಣೆ ಮಾಡಲು, ಎಲ್ಲಾ ಖಾತೆ ಸದಸ್ಯರು ಜಂಟಿ ಅರ್ಜಿಯನ್ನು ನೀಡಬೇಕು.
ಈ ಯೋಜನೆಯಲ್ಲಿ ಮೆಚ್ಯೂರಿಟಿ ಅವಧಿ ಐದು ವರ್ಷವಾಗಿದೆ. ಖಾತೆ ತೆರೆದ ದಿನಾಂಕದಿಂದ 5 ವರ್ಷಗಳ ನಂತರ ಈ ಖಾತೆಯನ್ನು ಮುಚ್ಚಲಾಗುತ್ತದೆ. ಅಕಾಲಿಕವಾಗಿಯೂ ನೀವು ಖಾತೆಯನ್ನು ಮುಚ್ಚಬಹುದಾಗಿದೆ. ಆದರೆ ಡೆಪಾಸಿಟ್ ಮಾಡಿದ ದಿನಾಂಕದಿಂದ ಒಂದು ವರ್ಷ ಪೂರ್ಣಗೊಂಡ ನಂತರ ಮಾತ್ರ ನೀವು ಹಣವನ್ನು ವಾಪಾಸ್ ಪಡೆಯಬಹುದು.
ನೀವು ಒಂದು ವರ್ಷದಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂಪಡೆದರೆ, ಡೆಪಾಸಿಟ್ ಮಾಡಿದ ಮೊತ್ತದ ಶೇಕಡ 2 ರಷ್ಟು ಕಡಿತಗೊಳಿಸಿ, ವಾಪಾಸ್ ನೀಡಲಾಗುತ್ತದೆ. ಖಾತೆ ತೆರೆದ 3 ವರ್ಷಗಳ ನಂತರ ನೀವು ಮೆಚ್ಯೂರಿಟಿಯ ಮೊದಲು ಹಣವನ್ನು ಹಿಂಪಡೆದರೆ, ನಿಮ್ಮ ಡೆಪಾಸಿಟ್‌ನ ಶೇಕಡ 1 ರಷ್ಟು ಹಣವನ್ನು ಕಡಿತಗೊಳಿಸಿ, ಹಣವನ್ನು ವಾಪಾಸ್ ನೀಡಲಾಗುತ್ತದೆ.


Click it and Unblock the Notifications