For Quick Alerts
ALLOW NOTIFICATIONS  
For Daily Alerts

PPF ಖಾತೆ ಮೆಚ್ಯೂರಿಟಿ ನಂತರ ಇರುವ ಆಯ್ಕೆಗಳೇನು?

|

ಹೂಡಿಕೆಯಲ್ಲಿ ಅಪಾಯ ಬೇಡ ಅಂದುಕೊಳ್ಳುವವರಿಗೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಅತ್ಯುತ್ತಮ ಹಾಗೂ ಸುರಕ್ಷಿತ. ಜತೆಗೆ ಪಿಪಿಎಫ್ ಗೆ ಸರ್ಕಾರದ್ದೇ ಬೆಂಬಲ ಇದೆ ಮತ್ತು ನಿಶ್ಚಿತವಾದ ರಿಟರ್ನ್ಸ್ ಮತ್ತು ಬಡ್ಡಿ ದರ ದೊರೆಯುತ್ತದೆ. ಹದಿನೈದು ವರ್ಷಕ್ಕೆ ಪಿಪಿಎಫ್ ಮೆಚ್ಯೂರಿಟಿ ಆಗುತ್ತದೆ. ಅದರಲ್ಲಿ ಒಂದು ವರ್ಷಕ್ಕೆ ಕನಿಷ್ಠ 500 ರುಪಾಯಿ ಮತ್ತು ಗರಿಷ್ಠ 1,50,000 ರುಪಾಯಿ ಹೂಡಿಕೆ ಮಾಡಬಹುದು.

ಪಿಪಿಎಫ್ ನಲ್ಲಿ ಮಾಡುವ ಹೂಡಿಕೆಗೆ ಆದಾಯ ತೆರಿಗೆಯಲ್ಲಿ ಸೆಕ್ಷನ್ 80C ಅಡಿ ವಿನಾಯಿತಿ ಸಿಗುತ್ತದೆ. ಇನ್ನೂ ಒಂದು ವಿಶೇಷ ಅಂದರೆ, ಪಿಪಿಎಫ್ EEE (Exempt- Exempt- Exempt) ವಿಭಾಗದ ಅಡಿಯಲ್ಲಿ ಬರುತ್ತದೆ. ಹಾಗಂದರೆ ಪಿಪಿಎಫ್ ನಲ್ಲಿ ಹೂಡಿಕೆ ಮಾಡುವ ಮೊತ್ತ, ಅದರಿಂದ ಗಳಿಸುವ ಬಡ್ಡಿ ಹಾಗೂ ಮೆಚ್ಯೂರಿಟಿ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ವಿನಾಯಿತಿ (Exempt) ಇದೆ.

ಪಿಪಿಎಫ್ ನಲ್ಲಿ 1 ಕೋಟಿ ರುಪಾಯಿ ಉಳಿಸಲು ಎಷ್ಟು ಸಮಯ ಬೇಕು?ಪಿಪಿಎಫ್ ನಲ್ಲಿ 1 ಕೋಟಿ ರುಪಾಯಿ ಉಳಿಸಲು ಎಷ್ಟು ಸಮಯ ಬೇಕು?

ಆದ್ದರಿಂದ ಪಿಪಿಎಫ್ ಖಾತೆಯ ಮೆಚ್ಯೂರಿಟಿ ಮೊತ್ತ ಎಷ್ಟು ಎಂಬುದನ್ನು ತಿಳಿದುಕೊಂಡು, ಅದಕ್ಕಿರುವ ಆಯ್ಕೆಗಳನ್ನು ಅಳೆದು ತೂಗಿ ನೋಡಬೇಕು. ಒಂದು ಸಲ ಪಿಪಿಎಫ್ ಮೊತ್ತ ಮೆಚ್ಯೂರ್ಡ್ ಆದ ನಂತರ ಹೂಡಿಕೆದಾರರ ಮುಂದೆ ಮೂರು ಆಯ್ಕೆಗಳಿರುತ್ತವೆ. ಅವುಗಳು ಹೀಗಿವೆ:

* ಪಿಪಿಎಫ್ ಖಾತೆಯನ್ನು ಕೊನೆಗೊಳಿಸುವುದು.

* ಹೊಸದಾಗಿ ಯಾವುದೇ ಮೊತ್ತ ಹೂಡಿಕೆ ಮಾಡದೆ ಖಾತೆ ಮುಂದುವರಿಸುವುದು.

* ಖಾತೆಯನ್ನು ಇನ್ನೂ ಐದು ವರ್ಷ ಮುಂದುವರಿಸುವುದು.

PPF ಖಾತೆ ಮೆಚ್ಯೂರಿಟಿ ನಂತರ ಇರುವ ಆಯ್ಕೆಗಳೇನು?

ಪಿಪಿಎಫ್ ಖಾತೆ ಕೊನೆಗೊಳಿಸುವುದು
ಪಿಪಿಎಫ್ ಖಾತೆ ಕೊನೆಗೊಳಿಸಿ, ಆ ಮೊತ್ತವನ್ನು ಉಳಿತಾಯ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಆಯಾ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಪಿಪಿಫ್ ಖಾತೆಯ ಒರಿಜಿನಲ್ ಪಾಸ್ ಬುಕ್, ಕ್ಯಾನ್ಸಲ್ ಆದ ಚೆಕ್ ಹಾಗೂ ಅರ್ಜಿ ಸಲ್ಲಿಸಬೇಕಾಗುತ್ತದೆ.

ಯಾವುದೇ ಹೊಸ ಹೂಡಿಕೆ ಮಾಡದೆ ಖಾತೆ ಮುಂದುವರಿಸಿದಲ್ಲಿ
ಒಂದು ವೇಳೆ ಹೂಡಿಕೆದಾರರಿಗೆ ತಕ್ಷಣಕ್ಕೆ ಹಣದ ಅಗತ್ಯ ಇಲ್ಲ ಎಂದಾದಲ್ಲಿ ಪಿಪಿಎಫ್ ಖಾತೆಗೆ ಯಾವುದೇ ಹೂಡಿಕೆ ಅಥವಾ ಕೊಡುಗೆ ಹಾಕದೆ ಮುಂದುವರಿಸಬಹುದು. ಅದಕ್ಕೆ ಬಡ್ಡಿ ಬರುತ್ತದೆ. ಇದಕ್ಕೆ ಯಾವುದೇ ಅರ್ಜಿ ನೀಡುವ ಅಗತ್ಯವೂ ಇಲ್ಲ. ಹೂಡಿಕೆದಾರರಿಗೆ ಆರ್ಥಿಕ ವರ್ಷದಲ್ಲಿ ಒಮ್ಮೆ ಹಣ ವಿಥ್ ಡ್ರಾ ಮಾಡುವ ಆಯ್ಕೆ ಇರುತ್ತದೆ.

ಐದು ವರ್ಷಗಳ ಕಾಲ ಖಾತೆ ವಿಸ್ತರಣೆ
ಹೂಡಿಕೆದಾರರು ಇನ್ನೈದು ವರ್ಷಗಳ ಕಾಲ ಖಾತೆ ವಿಸ್ತರಿಸುವ ಅವಕಾಶ ಇದೆ. ಅದಕ್ಕಾಗಿ ಖಾತೆ ವಿಸ್ತರಣೆ ಅರ್ಜಿ ಸಲ್ಲಿಸಬೇಕು. ಮೆಚ್ಯೂರಿಟಿ ಆದ ಒಂದು ವರ್ಷದೊಳಗೆ ಹೀಗೆ ಮಾಡಬೇಕು.

ಗಮನದಲ್ಲಿರಲಿ
ಪಿಪಿಎಫ್ ಖಾತೆಯನ್ನು ಐದು ವರ್ಷದಂತೆ ಎಷ್ಟು ಅವಧಿಗೆ (ಅನಿರ್ದಿಷ್ಟಾವಧಿಗೆ) ಬೇಕಾದರೂ ವಿಸ್ತರಣೆ ಮಾಡಿಸಬಹುದು. ಪಿಪಿಎಫ್ ಖಾತೆ ಏಪ್ರಿಲ್ ನಲ್ಲಿ ಮೆಚ್ಯೂರಿಟಿ ಆಗುತ್ತದೆ. ಆದ್ದರಿಂದ ಹೊಸದಾಗಿ ಹೂಡಿಕೆ ಮಾಡಿ, ವಿಸ್ತರಣೆಗೆ ಮುಂದಿನ ವರ್ಷ ಏಪ್ರಿಲ್ ಗೆ ಅವಕಾಶ ದೊರೆಯುತ್ತದೆ.

English summary

PPF Account Post Maturity Options For Investors

How to manage PPF account on post maturity? Here is the informative article about small savings account PPF.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X