ಸವರನ್ ಗೋಲ್ಡ್ ಬಾಂಡ್ ತೆರೆದು ಐದು ವರ್ಷಗಳು ಆಗಿದ್ದರೆ, ನೀವು ಅದನ್ನು ಅವಧಿಪೂರ್ವವಾಗಿ ವಿತ್‌ಡ್ರಾ ಮಾಡುವ ಅವಕಾಶವನ್ನು ನೀಡಲಾಗುತ್ತಿದೆ ಎಂದು ಆಗಸ್ಟ್ 4 ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಅಂತೆಯೇ, ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2016ರ ಸೀರಿಸ್ 1 ರ ಅಕಾಲಿಕ ವಿತ್‌ಡ್ರಾಗೆ ಆಗಸ್ಟ್ 8, 2023 ರಂದು ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಹಾಗೆಯೇ ಬೆಲಯನ್ನು ಕೂಡಾ ನಿಗದಿಪಡಿಸಿದೆ.
ಶುಕ್ರವಾರದ ತನ್ನ ಅಧಿಸೂಚನೆಯಲ್ಲಿ, ಆರ್‌ಬಿಐ, "ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ, ಬಡ್ಡಿಯನ್ನು ಪಾವತಿಸಬೇಕಾದ ದಿನಾಂಕದಂದು ಅಂತಹ ಚಿನ್ನದ ಬಾಂಡ್ ವಿತರಿಸಿದ ದಿನಾಂಕದಿಂದ ಐದನೇ ವರ್ಷದ ನಂತರ ಗೋಲ್ಡ್ ಬಾಂಡ್‌ನ ಅಕಾಲಿಕ ವಿತ್‌ಡ್ರಾ ಅನ್ನು ಅನುಮತಿಸಲಾಗುತ್ತದೆ. ನೀವು ಆಗಸ್ಟ್ 08, 2023 ರಂದು ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಅವಕಾಶವಿದೆ," ಎಂದು ತಿಳಿಸಿದೆ.

ಫೆಬ್ರವರಿ 8, 2016 ರಂದು ಖರೀದಿ ಮಾಡಲಾದ ಅಥವಾ ನೀಡಲಾದ ಸವರನ್ ಗೋಲ್ಡ್ ಬಾಂಡ್ 2016-I ನ ಅಕಾಲಿಕ ವಿತ್‌ಡ್ರಾ ಮಾಡಲು ಅನುಮತಿ ನೀಡಲಾಗುತ್ತದೆ. ಎಸ್‌ಜಿಬಿಯ ವಿತ್‌ಡ್ರಾ ಬೆಲೆಯನ್ನು ನಿರ್ಧಾರ ಮಾಡಲು ಇದು 999 ಶುದ್ಧತೆಯ ಚಿನ್ನದ ಮುಕ್ತಾಯದ ಬೆಲೆಯ ಸರಳ ಸರಾಸರಿಯನ್ನು ಆಧರಿಸಿದೆ ಎಂದು ಎಂದು ಆರ್‌ಬಿಐ ವಿವರಿಸಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಟೆಡ್ ಪ್ರಕಟಿಸಿದಂತೆ, ವಿತ್‌ಡ್ರಾ ಬೆಲೆಯು ಸೋಮವಾರದಿಂದ ಶುಕ್ರವಾರದವರೆಗಿನ ದರದ ಮೇಲೆ ಇರಲಿದೆ. "2023ರ ಜುಲೈ 31-ಆಗಸ್ಟ್ 04, 2023 ರ ವಾರದ ಮುಕ್ತಾಯದ ಅವಧಿಯಲ್ಲಿ ಚಿನ್ನದ ಬೆಲೆಯ ಸರಳ ಸರಾಸರಿಯನ್ನು ಆಧರಿಸಿ, 2023 ರ ಆಗಸ್ಟ್ 08 ರಂದು ಅಕಾಲಿಕ ವಿತ್‌ಡ್ರಾ ಬೆಲೆಯನ್ನು ಎಸ್‌ಜಿಬಿಯ ಪ್ರತಿ ಯೂನಿಟ್‌ಗೆ 5945 ರೂಪಾಯಿ ಆಗಿರುತ್ತದೆ," ಎಂದು ಆರ್‌ಬಿಐ ಹೇಳಿದೆ.
ನೀವು ಯಾಕೆ ಹೂಡಿಕೆ ಮಾಡಬೇಕು?
1. ಸವರನ್ ಗೋಲ್ಡ್ ಬಾಂಡ್ ಉತ್ತಮವಾದ ದೀರ್ಘಾವಧಿಯ ಹೂಡಿಕೆ ವಿಧಾನವಾಗಿದೆ. ಇದು 8 ವರ್ಷಗಳ ಅವಧಿಯನ್ನು ಹೊಂದಿದೆ.
2. ಪ್ಯೂರಿಟಿ ಬಗ್ಗೆ ಯಾವುದೇ ಆತಂಕ ನಮಗೆ ಸವರನ್ ಗೋಲ್ಡ್ ಬಾಂಡ್ ಖರೀದಿ ವೇಳೆ ಇಲ್ಲ.
3. ಡಿಫಾಲ್ಟ್ ಆಗುವ ಯಾವುದೇ ಭಯವಿಲ್ಲ. ಯಾಕೆಂದರೆ ಇದು ಉತ್ತಮ ಗ್ಯಾರಂಟಿ ಹೊಂದಿರುವ ಸರ್ಕಾರದ ಯೋಜನೆಯಾಗಿದೆ.
4. 8 ವರ್ಷಗಳ ಕಾಲ ನಾವು ಈ ಯೋಜನೆಯಲ್ಲಿ ಮುಂದುವರಿದರೆ, ತೆರಿಗೆ ವಿನಾಯಿತಿಯೂ ಕೂಡಾ ಲಭ್ಯವಾಗುತ್ತದೆ.
5. ಎಕ್ಸ್‌ಚೇಂಜ್ ಮಾರುಕಟ್ಟೆಗಳಲ್ಲಿ ಇದನ್ನು ನಾವು ಬದಲಾವಣೆ ಮಾಡಿಕೊಳ್ಳಬಹುದು. ಇದು ನಿಜವಾದ ಗೋಲ್ಡ್‌ನಂತೆ ಅಲ್ಲ.
6. ಹೂಡಿಕೆದಾರರು ತಾವು ಮಾಡಿದ ಹೂಡಿಕೆಗೆ ಶೇಕಡ 2.5ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದನ್ನುಅರ್ಧ ವಾರ್ಷಿಕವಾಗಿ ಪಾವತಿಸಲಾಗುತ್ತದೆ.
7. ಸಾಲವನ್ನು ಪಡೆಯಲು ಮೇಲಾಧಾರವಾಗಿ ಈ ಸವರನ್ ಗೋಲ್ಡ್ ಬಾಂಡ್ ಅನ್ನು ಬಳಕೆ ಮಾಡಬಹುದಾಗಿದೆ.
8. ರಿಟೇಲ್ ಹೂಡಿಕೆದಾರರು ಆನ್‌ಲೈನ್ ಮೂಲಕ ಸವರನ್ ಗೋಲ್ಡ್ ಬಾಂಡ್‌ಗೆ ಹೂಡಿಕೆ ಮಾಡಿದರೆ ರಿಯಾಯಿತಿಯನ್ನು ಪಡೆಯಲು ಸಾಧ್ಯವಿದೆ.
ಸವರನ್ ಗೋಲ್ಡ್ ಬಾಂಡ್‌ನ ಸಿರೀಸ್ IIರ ಚಂದಾದಾರಿಕೆಯು ಸೆಪ್ಟೆಂಬರ್ 11-15, 2023ರಲ್ಲಿ ನಡೆಯಲಿದೆ. ಈಗಾಗಲೇ ಹಣಕಾಸು ವರ್ಷ 2023-24ರ ಸಿರೀಸ್ I ರ ಚಂದಾದಾರಿಕೆಯು ಜೂನ್ 19-23, 2023ರಲ್ಲಿ ನಡೆದಿದೆ. ಚಂದಾದಾರಿಕೆಯ ಅವಧಿಯಲ್ಲಿ ಬಾಂಡ್‌ನ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 5,926 ರೂಪಾಯಿ ನಿಗದಿಪಡಿಸಲಾಗಿತ್ತು.


Click it and Unblock the Notifications