For Quick Alerts
ALLOW NOTIFICATIONS  
For Daily Alerts

ಗ್ರಾಹಕರೇ ಗಮನಿಸಿ; ವಿಮೆಗಾಗಿ ಸಾಲ: ಶೀಘ್ರವೇ ಜಾರಿ!

|

ಭಾರತದ ವಿಮಾ ನಿಯಂತ್ರಣಾ ಸಂಸ್ಥೆ (ಐಆರ್‌ಡಿಎಐ) ಪ್ರೀಮಿಯಂ ಫಿನಾನ್ಸಿಂಗ್ ಬಗ್ಗೆ ಯೋಜನೆ ರೂಪಿಸುತ್ತಿದೆ. ಇದು ರಿಟೇಲ್ ಹಾಗೂ ಕಾರ್ಪೋರೇಟ್ ಗ್ರಾಹಕರು ವಿಮೆ ಖರೀದಿಗಾಗಿ ಸಾಲವನ್ನು ಪಡೆಯಲು ಅವಕಾಶ ನೀಡುತ್ತದೆ.

ಈ ಹೊಸ ಯೋಜನೆಯ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ. ಹಲವಾರು ಮಂದಿ ವಿಮೆ ಖರೀದಿ ಮಾಡಬೇಕು ಎಂಬ ಚಿಂತನೆ ಹೊಂದಿರುತ್ತಾರೆ. ಆದರೆ ವಿಮೆ ಖರೀದಿ ಮಾಡಲು ಹಣಕಾಸು ಸ್ಥಿತಿಯು ಅವಕಾಶ ನೀಡುವುದಿಲ್ಲ. ಅಂತಹ ಗ್ರಾಹಕರಿಗೆ ಇದು ಸಹಕಾರಿಯಾಗಲಿದೆ.

ನಿಮ್ಮ ಸಾಕು ಪ್ರಾಣಿಗೆ ವಿಮೆ ಇದೆಯೇ, ಯಾವಾಗ ಖರೀದಿಸಬೇಕು?, ಇಲ್ಲಿದೆ ವಿವರನಿಮ್ಮ ಸಾಕು ಪ್ರಾಣಿಗೆ ವಿಮೆ ಇದೆಯೇ, ಯಾವಾಗ ಖರೀದಿಸಬೇಕು?, ಇಲ್ಲಿದೆ ವಿವರ

"ಈ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಬದಲಾವಣೆ ಆಗಬೇಕಾದರೆ ವಿಮಾ ಕಾಯಿದೆಯಲ್ಲಿ ಹಲವಾರು ತಿದ್ದುಪಡಿ ಮಾಡಬೇಕಾಗುತ್ತದೆ. ಇದಕ್ಕಾಗಿ ಸರ್ಕಾರವು ಕೂಡಾ ಚಿಂತನೆ ನಡೆಸಬೇಕಾಗಿದೆ," ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಹಕರೇ ಗಮನಿಸಿ; ವಿಮೆಗಾಗಿ ಸಾಲ: ಶೀಘ್ರವೇ ಜಾರಿ!

ಸಾಲ ಪಡೆದು ವಿಮೆ ಮಾಡಿಸಿಕೊಳ್ಳಿ!

ನಾವು ವಿಮೆ ಮಾಡಿಸಿಕೊಳ್ಳಬೇಕು ಎಂಬ ಆಸಕ್ತಿಯನ್ನು ಹೊಂದಿದ್ದರೆ ನಾವು ಸಾಲವನ್ನು ಪಡೆದು ವಿಮೆ ಚಂದಾದಾರರು ಆಗುವ ಅವಕಾಶ ಶೀಘ್ರದಲ್ಲೇ ಲಭ್ಯವಾಗಲಿದೆ. ನಿಮಗೆ ವಿಮೆ ಮಾಡಿಸಿಕೊಂಡುವ ಬ್ರೋಕರ್‌ಗಳೇ ಈ ಸಾಲವನ್ನು ಮಾಡುವ ಬಗ್ಗೆ ಮಾಹಿತಿ ನೀಡಲಿದ್ದಾರೆ.

"ವಿಮೆಯನ್ನು ಪಾವತಿ ಮಾಡಲು ಸಾಲವು ಲಭ್ಯವಾಗಲಿದೆ. ಬಳಿಕ ರಿಟೇಲ್ ಗ್ರಾಹಕರಿಂದ ನೇರವಾಗಿ ಸಾಲವನ್ನು ವಾಪಾಸ್ ಪಡೆಯಲಾಗುತ್ತದೆ. ಮಾಸಿಕ ಆಧಾರದಲ್ಲಿ ಸಾಲದ ಮರುಪಾವತಿ ಪಡೆಯಲಾಗುತ್ತದೆ," ಎಂದು ವರದಿಯು ಉಲ್ಲೇಖ ಮಾಡಿದೆ. ಒಂದು ವರ್ಷದ ವಿಮೆಯನ್ನು ನಾವು ಒಮ್ಮೆಲೇ ಪಾವತಿ ಮಾಡಿಬಿಡಲು ಈ ಸಾಲ ಲಭ್ಯತೆಯು ಸಹಕಾರಿಯಾಗಲಿದೆ.

ಸಾಲ ಮರುಪಾವತಿ ಮಾಡಿದ್ದರೆ?

ಒಂದು ವೇಳೆ ಸಾಲ ಪಡೆದು ವಿಮೆ ಮಾಡಿಸಿಕೊಂಡವರು ಸಾಲವನ್ನು ಮರುಪಾವತಿ ಮಾಡದಿದ್ದರೆ, ವಿಮೆಯು ನಿಮಗೆ ಸಾಲ ನೀಡಿದ ಬ್ಯಾಂಕ್‌ಗೆ ಮರುಪಾವತಿ ರೂಪದಲ್ಲಿ ನೀಡಲಾಗುತ್ತದೆ. ಅದರಿಂದಾಗಿ ಸಾಲ ನೀಡಿದ ಸಂಸ್ಥೆಗೆ ಯಾವುದೇ ನಷ್ಟವಾಗದು.

English summary

Premium financing: Customers allowed to take loans to buy insurance soon; Details in Kannada

Premium financing: Customers might be allowed to take loans to buy insurance soon. Details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X