ಶ್ರಾವಣ ಮಾಸ ಈಗಾಗಲೇ ಆರಂಭವಾಗಿದೆ. ಮಾಸ ಆರಂಭವಾಗುತ್ತಿದ್ದಂತೆ ಇನ್ನು ಸಾಲು ಸಾಲಾಗಿ ಹಬ್ಬಗಳು ಕೂಡಾ ಶುರುವಾಗುತ್ತದೆ. ಶುಕ್ರವಾರ (ನಾಳೆ, ಆಗಸ್ಟ್ 25) ರಾಜ್ಯದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿಗಳ ಬೆಲೆಯು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ.
ನಾಳೆ ಹಬ್ಬವಾದ ಕಾರಣ ಜನರು ಇಂದೇ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಹೂವು ಹಣ್ಣುಗಳ ಖರೀದಿಯು ಭರದಿಂದ ಸಾಗುತ್ತಿದೆ. ಬೆಂಗಳೂರು ನಗರದ ಎಪಿಎಂಸಿ ಮಾರುಕಟ್ಟೆ, ಎಂಜಿ ರೋಡ್, ಬಜಾರ್ ರಸ್ತೆ, ಟೌನ್ ಹಾಲ್ ಸರ್ಕಲ್ ಇನ್ನು ಮೊದಲಾದ ಮಾರುಕಟ್ಟೆಗಳು ಇರುವ ಪ್ರದೇಶದಲ್ಲಿ ಜನಜಂಗುಳಿ ಕಂಡು ಬಂದಿದೆ. ಈ ನಡುವೆ ಹೂವು, ಹಣ್ಣು, ತರಕಾರಿ ದರ ಎಷ್ಟಿದೆ ಎಂದು ತಿಳಿಯಿರಿ ಮುಂದೆ ಓದಿ....

ಹೂವಿನ ದರ ಎಷ್ಟಿದೆ?
ಕನಕಾಂಬರ ಹೂವು: ಕೆಜಿಗೆ 1,200 - 1,500 ರೂಪಾಯಿ
ತಾವರೆ ಹೂವು: ಒಂದು ಹೂವಿಗೆ 30-50 ರೂಪಾಯಿ
ಕೇದಗೆ ಹೂವು: ಕೆಜಿಗೆ 70-100 ರೂಪಾಯಿ
ಗುಲಾಬಿ: ಕೆಜಿಗೆ 250 ರಿಂದ 300 ರೂಪಾಯಿ
ಕಾಕಡ: ಕೆಜಿಗೆ 900 ರಿಂದ 1100 ರೂಪಾಯಿ
ಚೆಂಡು ಹೂ: ಕೆಜಿಗೆ 30-60 ರೂಪಾಯಿ
ಮಲ್ಲಿಗೆ ಮೊಗ್ಗು: ಕೆಜಿಗೆ 600 - 800 ರೂಪಾಯಿ
ಮಳ್ಳೆ ಹೂ: ಕೆಜಿಗೆ 1000-1200 ರೂಪಾಯಿ
ಗ್ಲಾಡಿಯೋಲಸ್: 3 ಕಡ್ಡಿಗಳಿಗೆ 50 ರೂಪಾಯಿ
ಗುಲಾಬಿ: ಬಂಚ್ ಒಂದಕ್ಕೆ 150-200 ರೂಪಾಯಿ
ಪತ್ರೆ: ಕೆಜಿಗೆ 80 ರೂಪಾಯಿ
ಹಣ್ಣುಗಳ ದರ ಎಷ್ಟಿದೆ ನೋಡಿ
ಏಲಕ್ಕಿ ಬಾಳೆ: ಕೆಜಿಗೆ 80-120 ರೂಪಾಯಿ
ಪಚ್ಚಬಾಳೆ: ಕೆಜಿಗೆ 40-60 ರೂಪಾಯಿ
ಸೀಬೆ: ಕೆಜಿಗೆ 50-80 ರೂಪಾಯಿ
ದಾಳಿಂಬೆ: ಕೆಜಿಗೆ 100-200 ರೂಪಾಯಿ
ಪೈನಾಪಲ್: ಕೆಜಿಗೆ 120ರಿಂದ 180 ರೂಪಾಯಿ
ಸೇಬು: ಕೆಜಿಗೆ 150ರಿಂದ 200 ರೂಪಾಯಿ
ಮೂಸಂಬಿ: ಕೆಜಿಗೆ 50-80 ರೂಪಾಯಿ
ಸಪೋಟ: ಕೆಜಿಗೆ 160 ರೂಪಾಯಿ
ಮರಸೇಬು: ಕೆಜಿಗೆ 100-130 ರೂಪಾಯಿ
ಇತರೆ ವಸ್ತುಗಳ ಬೆಲೆ ಎಷ್ಟಿದೆ?
ತೆಂಗಿನಕಾಯಿ 5ಕ್ಕೆ 100 ರೂಪಾಯಿ
ಮಾವಿನ ತೋರಣ 20 ರೂಪಾಯಿ
ವಿಳ್ಯದೆಲೆ 100 ಕ್ಕೆ 150 ರೂಪಾಯಿ
ಬಾಳೆ ಕಂಬ ಜೋಡಿಗೆ 50 ರೂಪಾಯಿ
ಕರ್ನಾಟಕದಲ್ಲಿ ತರಕಾರಿ ದರ (ರೂಪಾಯಿ/ಕೆಜಿ) ರಿಟೇಲ್ ದರ
ಈರುಳ್ಳಿ ದೊಡ್ಡ 35-38
ಈರುಳ್ಳಿ ಸಣ್ಣ 64-71
ಟೊಮೆಟೋ 53-58
ಮೆಣಸಿನಕಾಯಿ 99-109
ಬೀಟ್‌ರೂಟ್ 35-38
ಆಲೂಗಡ್ಡೆ 36-39
ಬಾಳೆ ಕಾಯಿ 10-11
ಹರಿವೆ ಸೊಪ್ಪು 17-19
ನೆಲ್ಲಿ ಕಾಯಿ 109-121
ಬೂದಿ ಸೋರೆಕಾಯಿ 25-28
ಜೋಳ (baby corn) 69-76
ಬಾಳೆ ಹೂವು 23-25
ದೊಡ್ಡ ಮೆಣಸಿನಕಾಯಿ 56-62
ಹಾಗಲಕಾಯಿ 35-38
ಸೋರೆಕಾಯಿ 31-34
ಅವರೆಕಾಳು 56-62
ಚಪ್ಪರೆಯ ಅವರೆಕಾಳು 43-47
ಎಲೆಕೋಸು 28-30
ಕ್ಯಾರೆಟ್ 45-50
ಹೂಕೋಸು 31-34
ಗೋರಿಕಾಯಿ 46-51
ತೆಂಗಿನ ಕಾಯಿ 36-39
ಕೆಸುವಿನ ಎಲೆ 14-15
ಕೆಸವು 33-37
ಕೊತ್ತಂಬರಿ ಸೊಪ್ಪು 14-15
ಜೋಳ 31-34
ಮುಳ್ಳು ಸೌತೆ 24-27
ಕರಿಬೇವು 29-32
ನುಗ್ಗೆ ಕಾಯಿ 46-51
ಬದನೆ 28-30
ಸುವರ್ಣ ಗೆಡ್ಡೆ 29-32
ಬೆಳ್ಳುಳ್ಳಿ 167-184
ಶುಂಠಿ 167-184
ಬಟಾಣಿ 86-95
ತೊಂಡೆಕಾಯಿ 25-28
ನಿಂಬೆ ಹಣ್ಣು 54-60
ಮಾವಿನ ಕಾಯಿ 38-42
ಬೆಂಡೆಕಾಯಿ 28-30
ಕುಂಬಳಕಾಯಿ 21-23
ಮೂಲಂಗಿ 31-34
ಹೀರೆಕಾಯಿ 33-37
ಪಡುವಲಕಾಯಿ 35-38
ಬಸಳೆ 17-19


Click it and Unblock the Notifications