First Virtual Branch: ಭಾರತದ ಮೊದಲ ವರ್ಚುವಲ್ ಬ್ರ್ಯಾಂಚ್ ಆರಂಭಿಸಿದ ಪಿಎನ್‌ಬಿ, ಏನಿದು ತಿಳಿಯಿರಿ

ಭಾರತದ ಪ್ರಮುಖ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮೊದಲ ವರ್ಚುವಲ್ ಬ್ರ್ಯಾಂಚ್ ಅನ್ನು ಮೆಟಾವರ್ಸ್‌ನಲ್ಲಿ ಆರಂಭ ಮಾಡಿದೆ. ಭಾರತ ದೇಶದ ಮೊದಲ ವರ್ಚುವಲ್ ಬ್ರ್ಯಾಂಚ್ ಇದಾಗಿದೆ. ಈ ಮೂಲಕ ಗ್ರಾಹಕರಿಗೆ ವಿಭಿನ್ನವಾದ ಬ್ಯಾಂಕಿಂಗ್ ಅನುಭವವನ್ನು ನೀಡಲು ಪಿಎನ್‌ಬಿ ಮುಂದಾಗಿದೆ. ಪಿಎನ್‌ಬಿ ಗ್ರಾಹಕರು ಈಗ ಬ್ಯಾಂಕ್ ಡೆಪಾಸಿಟ್‌ಗಳು, ಡಿಜಿಟಲ್ ಪಾವತಿಗಳು, ಹಿರಿಯ ನಾಗರಿಕರ ಡೆಪಾಸಿಟ್‌ಗಳು ಮತ್ತು ಭಾರತ ಸರ್ಕಾರದ ಪ್ರಮುಖ ಯೋಜನೆಗಳನ್ನು ಪರಿಶೀಲನೆ ಮಾಡಬಹುದು.

ವರ್ಚುವಲ್ ಬ್ರ್ಯಾಂಚ್‌ ಬಗ್ಗೆ ಮಾಹಿತಿ ನೀಡಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಅತುಲ್ ಕುಮಾರ್ ಗೋಯಲ್, "ಈ ಹೊಸದಾದ ತಂತ್ರಜ್ಞಾನದ ಮೂಲಕ ನಾವು ಗ್ರಾಹಕರ ಭಾಗಿತ್ವವನ್ನು ಹೆಚ್ಚಿಸಲು ಮುಂದಾಗಿದ್ದೇವೆ. ಹಾಗೆಯೇ ಗ್ರಾಹಕರ ಸೇವೆಯನ್ನು ಕೂಡಾ ಉತ್ತಮಗೊಳಿಸಲು ಮುಂದಾಗಿದ್ದೇವೆ, ಗ್ರಾಹಕರು ವೈಯಕ್ತಿಕ ಬ್ಯಾಂಕ್ ಸೇವೆಯನ್ನು ಪಡೆಯಬಹುದಾಗಿದೆ," ಎಂದು ತಿಳಿಸಿದ್ದಾರೆ.

 ಭಾರತದ ಮೊದಲ ವರ್ಚುವಲ್ ಬ್ರ್ಯಾಂಚ್ ಆರಂಭಿಸಿದ ಪಿಎನ್‌ಬಿ, ಏನಿದು?

ನೀವು ಪಡೆಯಬಹುದು 3ಡಿ ಅನುಭವ

ಪಂಜಾಬ್ ನ್ಯಾಷನಲ್ ಬ್ಯಾಂಕಿಂಗ್ ಸಾಂಪ್ರಾದಾಯಿಕ ಬ್ಯಾಂಕಿಂಗ್ ಸೇವೆಯನ್ನು ನೀಡುವ ಜೊತೆಗೆ ಡಿಜಿಟಲೀಕರಣದ ಜೊತೆಗೆ ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಗೆ ನಿರ್ಧಾರ ಮಾಡಿದೆ. ಭಾರತ ದೇಶದ ಮೊದಲ ವರ್ಚುವಲ್ ಬ್ರ್ಯಾಂಚ್ ಅನ್ನು ಆರಂಭಿಸಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಮ್ಮ ಗ್ರಾಹಕರಿಗೆ 3ಡಿ ಅನುಭವದ ಸೇವೆಯನ್ನು ನೀಡಲು ಕೂಡಾ ನಿರ್ಧಾರ ಮಾಡಿದೆ. ಡಿಜಿಟಲ್ ಅವತಾರ್‌ಗಳ ಮೂಲಕ ಈ 3ಡಿ ಬ್ಯಾಂಕಿಂಗ್ ಅನುಭವವನ್ನು ಗ್ರಾಹಕರು ಪಡೆಯಬಹುದಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಮೆಟಾವರ್ಸ್ ಶಾಖೆಯನ್ನು ರಚಿಸಲಾಗಿದೆ ಎಂದು ಬ್ಯಾಂಕ್ ಘೋಷಿಸಿದೆ. ಬ್ಯಾಂಕ್‌ನ ಪ್ರತಿಷ್ಠಿತ ಗ್ರಾಹಕರಿಗೆ ಅವರ ಸ್ಮಾರ್ಟ್‌ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೂಲಕ ಮನೆಯಲ್ಲಿಯೇ ಅಥವಾ ವ್ಯಾಪಾರದ ಸ್ಥಳಗಳಲ್ಲಿ ವರ್ಚುವಲ್ ಬ್ರ್ಯಾಂಚ್‌ಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.

ಮೆಟಾವರ್ಸ್ ಎಂದರೇನು?

"ಮೆಟಾವರ್ಸ್ ಎನ್ನುವುದು ವರ್ಚುವಲ್ ರಿಯಾಲಿಟಿ ಆಗಿದೆ. ಸುಧಾರಿತ ಇಂಟರ್ನೆಟ್ ಮತ್ತು ಸೆಮಿಕಂಡಕ್ಟರ್ ತಂತ್ರಜ್ಞಾನವನ್ನು ಬಳಸುವ 3ಡಿ ಇರುವ ಡಿಜಿಟಲ್ ಸ್ಥಳವಾಗಿದೆ. ಜನರು ಆನ್‌ಲೈನ್‌ನಲ್ಲಿ ಬ್ಯಾಂಕಿಂಗ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ," ಎಂದು ಮೆಕಿನ್ಸೆ & ಕಂಪನಿ ತಿಳಿಸಿದೆ. ಮೆಟಾವರ್ಸ್ ವಿಭಿನ್ನ ಅನುಭವವನ್ನು ನೀಡುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಗ್ಗೆ ತಿಳಿಯಿರಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಭಾರತದ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ನವದೆಹಲಿಯಲ್ಲಿ ಇದರ ಮುಖ್ಯ ಕಚೇರಿ ಇದೆ. 1894ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರಂಭ ಮಾಡಲಾಗಿದೆ. 2017ರ ಮಾರ್ಚ್ 31ರವರೆಗಿನ ಲೆಕ್ಕಾಚಾರದ ಪ್ರಕಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ 80 ಮಿಲಿಯನ್‌ಗೂ ಅಧಿಕ ಗ್ರಾಹಕರನ್ನು ಹೊಂದಿದೆ. 764 ನಗರಗಳಲ್ಲಿ 6,937 ಬ್ರ್ಯಾಂಚ್‌ಗಳು ಮತ್ತು 10681 ಎಟಿಎಂಗಳನ್ನು ಹೊಂದಿದೆ.

ಜೂನ್‌ನಲ್ಲಿ ಎಫ್‌ಡಿ ಬಡ್ಡಿದರ ಇಳಿಸಿದೆ ಪಿಎನ್‌ಬಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದಂತೆ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡುತ್ತಾ ಸಾಗಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಈಗ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಇಳಿಕೆ ಮಾಡುವ ಆಶ್ಚರ್ಯಕರ ನಿರ್ಧಾರವನ್ನು ಕೈಗೊಂಡಿದೆ.

2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಕಡಿತಗೊಳಿಸಿದೆ. ಈ ನೂತನ ಬಡ್ಡಿದರವು ಜೂನ್ 1, 2023ರಿಂದ ಜಾರಿಗೆ ಬರಲಿದೆ. ಒಂದು ವರ್ಷದ ಡೆಪಾಸಿಟ್ ಮೇಲೆ 5 ಮೂಲಾಂಕ ಬಡ್ಡಿದರವನ್ನು ಪಿಎನ್‌ಬಿ ಕಡಿತಗೊಳಿಸಿದೆ. ಇದರಿಂದಾಗಿ ಬಡ್ಡಿದರವು ಶೇಕಡ 6.75ಕ್ಕೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+