ಜುಲೈ 1, 2025 ರಿಂದ ದೂರದ ಆಧಾರದ ಮೇಲೆ ಟಿಕೆಟ್ ದರವನ್ನು ಹೆಚ್ಚಿಸುವದಾಗಿ ರೈಲ್ವೆ ಸಚಿವಾಲಯ ಹೇಳಿದೆ. ಎಸಿ ಕೋಚ್‌ನಿಂದ ಹಿಡಿದು ನಾನ್ ಎಸಿ ಮತ್ತು ಸ್ಲೀಪರ್ ಕ್ಲಾಸ್‌ವರೆಗಿನ ಟಿಕೆಟ್ ದರ ಹೆಚ್ಚಳವಾಗಲಿದೆ. ಟಿಕೆಟ್ ಏರಿಕೆಯ ಜೊತೆಗೆ, ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡಿದೆ. ಇದು ನಿಮ್ಮ ಹಣಕಾಸು ನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ. ಈ ನಿಯಮಗಳು ನಿಮ್ಮ ಪರ್ಸ್ ಮೇಲೆ ಕೂಡ ಪರಿಣಾಮ ಬಿರಲಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೌದು,ಭಾರತೀಯ ರೈಲ್ವೆ ಕೂಡ ಪ್ರಯಾಣ ದರವನ್ನು ಏರಿಕೆ ಮಾಡಲು ಬಹಳ ವರ್ಷಗಳ ಬಳಿಕ ತೀರ್ಮಾನ ವನ್ನು ಕೈಗೊಳ್ಳುತ್ತಿದೆ.ರೈಲ್ವೆ ಸಚಿವಾಲಯದ ಮೂಲಗಳ ಪ್ರಕಾರ, ಸಾಮಾನ್ಯ ಮೇಲ್/ಎಕ್ಸ್‌ಪ್ರೆಸ್ ರೈಲುಗಳ (ನಾನ್-ಎಸಿ) ದರಗಳು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗುತ್ತದೆ. ಅದೇ ಸಮಯದಲ್ಲಿ, ಎಸಿ ದರ್ಜೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚು ಪಾವತಿಯನ್ನು ಮಾಡಬೇಕಾಗುತ್ತದೆ. ದೇಶದಲ್ಲಿ ಪ್ರತಿದಿನ ಸುಮಾರು 2 ಕೋಟಿಗೂ ಅಧಿಕ ಜನರು ರೈಲ್ವೆಯಲ್ಲಿ ಪ್ರಯಾಣ ಮಾಡ್ತಾರೆ. ಇದು ಪ್ರಯಾಣಿಕರ ಜೇಬಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತದೆ.
ವರದಿಗಳ ಪ್ರಕಾರ, ಎಸಿ ದರ್ಜೆಯ ರೈಲು ಟಿಕೆಟ್‌ಗಳು ಪ್ರತಿ ಕಿಲೋಮೀಟರಿಗೆ 2 ಪೈಸೆ ಹೆಚ್ಚಳವಾಗಬಹುದು.ಎಸಿ ಅಲ್ಲದ ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ದರವನ್ನು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಿಸಲಾಗುವುದು. ಎಸಿ ಕೋಚ್ ದರ ಹೆಚ್ಚಳವು ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಇರುತ್ತದೆ. ಅಲ್ಲದೆ, 500 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ದೂರಕ್ಕೆ, ಹೆಚ್ಚಳವು ಪ್ರತಿ ಕಿಲೋಮೀಟರ್‌ಗೆ ಅರ್ಧ ಪೈಸೆ ಇರುತ್ತದೆ. ಉಪನಗರ ಮತ್ತು ಮಾಸಿಕ ಸೀಸನ್ ಟಿಕೆಟ್‌ಗಳಲ್ಲಿ ಯಾವುದೇ ಹೆಚ್ಚಳವನ್ನು ರೈಲ್ವೆ ಇಲಾಖೆ ಮಾಡಿಲ್ಲ. ಕಳೆದ ಮಾರ್ಚ್ ಆರಂಭದಲ್ಲಿ, ರೈಲ್ವೆ ಸಚಿವಾಲಯವು ಪ್ರಸ್ತುತ ರೈಲಿನಲ್ಲಿ ಪ್ರತಿ ಕಿಲೋಮೀಟರ್ ಪ್ರಯಾಣದ ವೆಚ್ಚ1.38 ರೂ ಎಂದು ಹೇಳಿತ್ತು. ಆದರೆ ಪ್ರಯಾಣಿಕರಿಗೆ ಕೇವಲ 73 ಪೈಸೆ ವಿಧಿಸಲಾಗುತ್ತದೆ ಜೊತೆಗೆ ಶೇ. 47ಸಬ್ಸಿಡಿ ನೀಡಲಾಗುತ್ತದೆ, ರೈಲು ಪ್ರಯಾಣಿಕರಿಗೆ ಈ ಬದಲಾವಣೆಗಳು ಬಳಕೆದಾರರ ದೃಢೀಕರಣವನ್ನು ಹೆಚ್ಚಿಸುವ ಮತ್ತು ಯೋಜನೆಯ ದುರುಪಯೋಗವನ್ನು ಕಡಿಮೆ ಮಾಡುವ ಗುರಿಯಿಂದ ಈ ಬದಲಾವಣೆಯನ್ನು ಜಾರಿಗೆ ತಂದಿದೆ.
ಭಾರತೀಯ ರೈಲ್ವೆ ಸಚಿವಾಲಯ ಇತ್ತೀಚಿನ ನವೀಕರಣಗಳನ್ನು ದೃಢೀಕರಿಸಿಲ್ಲ ಆದ್ದರಿಂದ, ಗುಡ್‌ರಿಟರ್ನ್ಸ್ ಕನ್ನಡ ಅದನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ. ಆದರೆ ನೀವು ಅಧಿಕೃತ ವೆಬ್‌ಸೈಟ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸುವಿಕೆಗಾಗಿ ದರವನ್ನು ಯಾವಾಗಲೂ ಪರಿಶೀಲಿಸಬಹುದು. ಅದು ಹೇಗೆ ಎಂಬುವುದನ್ನು ತಿಳಿಯಲು ಮುಂದೆ ಓದಿ..
ಹಂತ 1: ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://www.indianrail.gov.in/enquiry/FARE/FareEnquiry.html?locale=en
ಹಂತ 2: ರೈಲು ಸಂಖ್ಯೆಯನ್ನು ನಮೂದಿಸಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಹಂತ 3: ತದ ನಂತರ ಮೂಲ ನಿಲ್ದಾಣವನ್ನು ನಮೂದಿಸಿ ಮತ್ತು ನೀವು ತಲುಪುಬಹುದಾದ ಗಮ್ಯಸ್ಥಾನ ನಿಲ್ದಾಣವನ್ನು ನಮೂದಿಸಿ.
ಹಂತ 4: ನೀವು ಯಾವ ಸೀಟುಗಳನ್ನು ಬುಕ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ. ಉದಾಹರಣೆಗೆ, ಸ್ಲೀಪರ್ ಕೋಚ್, ಮೊದಲ ಎಸಿ, ಎರಡನೇ ಎಸಿ, ಮೂರನೇ ಎಸಿ, ಎಸಿ ಚೇರ್ ಕಾರ್, 3 ಎಸಿ ಎಕಾನಮಿ ಮತ್ತು ಇನ್ನೂ ಹೆಚ್ಚಿನವುಗಳಿವೆ. ಅವುಗಲ್ಲಿ ನಿಮ್ಮ ಆಯ್ಕೆಯ ಸೀಟನ್ನು ಅರಿಸಿಕೊಳ್ಳಿ
ಹಂತ 5: ಕೊನೆಯ ಹಂತವೆಂದರೆ ನೀವು ಯಾವ ಕೋಟಾಕ್ಕೆ ಸೇರಿದ್ದೀರಿ ಎಂಬುದನ್ನು ಪರಿಶೀಲಿಸುವುದು. ಅದು ತತ್ಕಾಲ್, ಸಾಮಾನ್ಯ, ಮಹಿಳೆಯರು, ರಕ್ಷಣಾ, ಅಂಗವಿಕಲ, ವಿದೇಶಿ ಪ್ರವಾಸಿ, ಪ್ರೀಮಿಯಂ ತತ್ಕಾಲ್, ಲೋವರ್ ಬರ್ತ್, ಡ್ಯೂಟಿ ಪಾಸ್, ಯುವ ಮತ್ತು ಸಂಸತ್ತಿನ ಕೋಟಾ ಆಗಿರಬಹುದು. ನಂತರ 'ಶುಲ್ಕ ಪಡೆಯಿರಿ' ಆಯ್ಕೆಯನ್ನು ಆರಿಸಿ, ಮತ್ತು ಬೆಲೆಗಳು ಪರಿಶೀಲನೆಗೆ ಲಭ್ಯವಿರುವ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ.
ತತ್ಕಾಲ್ ಟಿಕೆಟ್ ಬುಕಿಂಗ್ ಹೊಸ ನಿಯಮಗಳು
ಜುಲೈ 1, 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಕಾರ್ಡ್ ನ್ನು ಕಡ್ಡಾಯವನ್ನು ಮಾಡಿದೆ.ವಿವಿಧ ಬದಲಾವಣೆಗಳನ್ನು ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಜಾರಿಗೆ ತಂದಿದೆ. ಈ ಕುರಿತು ರೈಲ್ವೆ ಸಚಿವಾಲಯವು ಜೂನ್ 10 ರಂದು ಆದೇಶವನ್ನು ಹೂರಡಿಸಲಾಗಿತ್ತು.
ತತ್ಕಾಲ್ ಟಿಕೆಟ್ ಬುಕಿಂಗ್‌ಗಾಗಿ ಆಧಾರ್ ಕಡ್ಡಾಯ
ತತ್ಕಾಲ್ ಟಿಕೆಟ್ ಬುಕಿಂಗ್‌ಗಾಗಿ ಆಧಾರ್ ಕಡ್ಡಾಯವನ್ನು ಮಾಡಲಾಗಿದೆ. ನಾಳೆಯಿಂದ IRCTC ಯ ಅಧಿಕೃತ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಿದ ತತ್ಕಾಲ್ ಟಿಕೆಟ್‌ಗಳು ಆಧಾರ್‌ನೊಂದಿಗೆ ದೃಢೀಕರಿಸಿದ ಬಳಕೆದಾರರಿಗೆ ಮಾತ್ರ ಟಿಕೆಟ್‌ನ್ನು ಬಕ್ ಮಾಡಿಕೊಳ್ಳಬಹುದು. ಇದಲ್ಲದೆ, ಜುಲೈ 15, 2025 ರಿಂದ ಆನ್‌ಲೈನ್‌ನಲ್ಲಿ ಮಾಡುವ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣ ಕೂಡ ಕಡ್ಡಾಯವನ್ನು ರೈಲ್ವೆ ಇಲಾಖೆ ಮಾಡಿದೆ.
PRS ಕೌಂಟರ್‌ಗಳು ಮತ್ತು ಏಜೆಂಟ್‌ಗಳಲ್ಲಿ ಸಿಸ್ಟಮ್-ಆಧಾರಿತ OTP ದೃಢೀಕರಣ
ರೈಲು ಟಿಕೆಟ್ ಮುಂಚಿತವಾಗಿ ಬುಕ್ ಮಾಡುವಾಗ ಗಣಕೀಕೃತ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಕೌಂಟರ್‌ಗಳಲ್ಲಿ ಮತ್ತು ಅಧಿಕೃತ ಏಜೆಂಟ್‌ಗಳ ಮೂಲಕ ಬುಕ್ ಮಾಡಿದ ತತ್ಕಾಲ್ ಟಿಕೆಟ್‌ಗಳಿಗೆ ಬುಕಿಂಗ್ ಸಮಯದಲ್ಲಿ ಬಳಕೆದಾರರು ಒದಗಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ದೃಢೀಕರಣವನ್ನು ಕಳುಹಿಸಬೇಕಾಗುತ್ತದೆ. ಇದು ಜುಲೈ 15, 2025 ರಿಂದ ಜಾರಿಗೆ ಬರುತ್ತದೆ.
ಅಧಿಕೃತ ಏಜೆಂಟ್‌ಗಳಿಗೆ ಬುಕಿಂಗ್ ಸಮಯ ನಿರ್ಬಂಧ
ತತ್ಕಾಲ್ ಟಿಕೆಟ್‌ನ್ನು ಬುಕ್ ಮಾಡಲು ಅಧಿಕೃತ ಏಜೆಂಟ್‌ಗಳಿಗೂ ಸಮಯ ನಿರ್ಬಂಧವನ್ನು ರೈಲ್ವೆ ಇಲಾಖೆ ಹೇರಿದೆ. ಆರಂಭಿಕ ಅವಧಿಯಲ್ಲಿ ಬೃಹತ್ ಬುಕಿಂಗ್‌ಗಳನ್ನು ತಡೆಗಟ್ಟಲು, ಭಾರತೀಯ ರೈಲ್ವೆಯ ಅಧಿಕೃತ ಟಿಕೆಟಿಂಗ್ ಏಜೆಂಟ್‌ಗಳು ಬುಕಿಂಗ್ ವಿಂಡೋದ ಮೊದಲ 30 ನಿಮಿಷಗಳಲ್ಲಿ ಆರಂಭಿಕ ದಿನದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗುವುದಿಲ್ಲ. ಎಸಿ ಕೋಚ್‌ಗೆ ಟಿಕೆಟ್ ಬುಕ್ ಮಾಡಲು ಏಜೆಂಟ್‌ಗಳಿಗೆ ಸಮಯ ನಿರ್ಬಂಧವು ಬೆಳಿಗ್ಗೆ 10 ರಿಂದ 10.30 ರವರೆಗೆ ಮತ್ತು ಎಸಿ ಅಲ್ಲದ ತರಗತಿಗಳಿಗೆ ಬೆಳಿಗ್ಗೆ 11 ರಿಂದ 11.30 ರವರೆಗೆ ಟಿಕೆಟ್ ಮಾಡಬಹುದು.
ನೀವು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ IRCTC ಬಳಕೆದಾರ ಐಡಿಯನ್ನು ಈ ಕೂಡಲೇ ದೃಢೀಕರಿಸಬಹುದು.
- ಮೊದಲು ನೀವು IRCTC ವೆಬ್‌ಸೈಟ್ ಅಥವಾ IRCTC ರೈಲ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ.
- ತದನಂತರ "ನನ್ನ ಖಾತೆ" ಗೆ ಹೋಗಿ. "ಬಳಕೆದಾರರನ್ನು ದೃಢೀಕರಿಸಿ" ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
IRCTC ಮೂಲಕ ರೈಲು ಮತ್ತು ಟಿಕೆಟ್ ದರಗಳನ್ನು ಪತ್ತೆ ಹೆಚ್ಚುವುದು ಹೇಗೆ..?
ಹಂತ 1: IRCTC ಯಲ್ಲಿ ಮೊದಲು ನೀವು ಒಬ್ಬ ವ್ಯಕ್ತಿಯಾಗಿ ನೋಂದಾಯಿಸಿ. ನೋಂದಣಿ ಉಚಿತವಾಗಿದ್ದು, ನೀವು ನೋದಣಿಯನ್ನು ಮಾಡಲು https://www.irctc.co.in/nget/train-search ಗೆ ಭೇಟಿ ನೀಡಿ
ಹಂತ 2: ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ.
ಹಂತ 3: ನಿಮ್ಮ ಪ್ರಯಾಣ ದಿನಾಂಕ, ನಿಲ್ದಾಣದಿಂದ ನಿಲ್ದಾಣಕ್ಕೆ ಪ್ರಯಾಣದ ದಿನಾಂಕ ಮತ್ತು ಪ್ರಯಾಣದ ವರ್ಗವನ್ನು ಒದಗಿಸಿ. ಒಂದು ವೇಳೆ ನೀವು ಯಾವುದೇ ನಿಗದಿತ ಪ್ರಯಾಣದ ದಿನಾಂಕವನ್ನು ಹೊಂದಿಲ್ಲದಿದ್ದರೆ, "ದಿನಾಂಕದೊಂದಿಗೆ ಹೊಂದಿಕೊಳ್ಳುವ" ಆಯ್ಕೆಯನ್ನು ಆರಿಸಿ. ದಿವ್ಯಾಂಗ್ ಪ್ರಯಾಣಿಕರು ಅನುಗುಣವಾದ ಪ್ರಯೋಜನಗಳನ್ನು ಪಡೆಯಲು "ದಿವ್ಯಾಂಗ್" ಆಯ್ಕೆಯನ್ನು ಆರಿಸಿಕೊಳ್ಳಬೇಕು.
ಹಂತ 4: ರೈಲು ಪಟ್ಟಿಯನ್ನು ಹುಡುಕಲು, "ಹುಡುಕಾಟ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಮುಂದಿನ ಪುಟವು ಆಯ್ಕೆಮಾಡಿದ ಮಾರ್ಗಕ್ಕೆ ಲಭ್ಯವಿರುವ ರೈಲುಗಳ ಪಟ್ಟಿಯನ್ನು ನಿಮ್ಮ ತೋರಿಸುತ್ತದೆ.
ಹಂತ 5: ನೀವು ಮಾರ್ಗ ಮತ್ತು ಸಮಯವನ್ನು ತಿಳಿದುಕೊಳ್ಳಲು ಬಯಸಿದರೆ, ರೈಲು ವೇಳಾಪಟ್ಟಿ ಲಿಂಕ್ ಅನ್ನು ಕ್ಲಿಕ್ ಮಾಡಿ. ರೈಲು ಪಟ್ಟಿಯಿಂದ ರೈಲನ್ನು ಆಯ್ಕೆ ಮಾಡಲು, ಆಯ್ಕೆಮಾಡಿದ ರೈಲಿನಲ್ಲಿ ಲಭ್ಯವಿರುವ ವರ್ಗದ ಪ್ರಕಾರವನ್ನು ಕ್ಲಿಕ್ ಮಾಡಿ.
ಹಂತ 6: ಒಬ್ಬ ವಯಸ್ಕ ಪ್ರಯಾಣಿಕರಿಗೆ ದರವು ಕಾಣಿಸಿಕೊಳ್ಳುತ್ತದೆ.
ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ..?
- ಆಯ್ದ ರೈಲಿನಲ್ಲಿ ಇ-ಟಿಕೆಟ್ ಬುಕ್ ಮಾಡಲು, IRCTC ಪುಟದಲ್ಲಿರುವ "ಈಗಲೇ ಬುಕ್ ಮಾಡಿ" ಬಟನ್ ಮೇಲೆ ಕ್ಲಿಕ್ ಮಾಡಿ.
- ಪ್ರಯಾಣಿಕರ ಕಾಯ್ದಿರಿಸುವಿಕೆ ಪುಟವು ಕಾಣಿಸಿಕೊಳ್ಳುತ್ತದೆ; ಪುಟದಲ್ಲಿ ಪ್ರದರ್ಶಿಸಲಾದ ರೈಲಿನ ಹೆಸರು, ನಿಲ್ದಾಣದ ಹೆಸರುಗಳು, ವರ್ಗ ಮತ್ತು ಪ್ರಯಾಣದ ದಿನಾಂಕವು ನೀವು ಬಯಸಿದಂತೆಯೇ ಇದೆಯೇ ಎಂದು ಪರಿಶೀಲಯನ್ನು ಮಾಡಿಕೊಳ್ಳಿ.
- ಪ್ರತಿ ಪ್ರಯಾಣಿಕರಿಗೆ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳನ್ನು ನಮೂದಿಸಿ.
- ಹೆಸರಿನ ಗರಿಷ್ಠ ಉದ್ದ 16 ಅಕ್ಷರಗಳಿಗೆ ಸೀಮಿತವಾಗಿರಬೇಕು. ಪ್ರಯಾಣಿಕರು ಹಿರಿಯ ನಾಗರಿಕರಾಗಿದ್ದರೆ (ಪುರುಷರಿಗೆ 60 ವರ್ಷ ಮತ್ತು ಮೇಲ್ಪಟ್ಟವರಿಗೆ ಮತ್ತು ಮಹಿಳೆಯರಿಗೆ 58 ವರ್ಷ ಮತ್ತು ಮೇಲ್ಪಟ್ಟವರಿಗೆ) ಮತ್ತು ಹಿರಿಯ ನಾಗರಿಕರ ರಿಯಾಯಿತಿಯನ್ನು ಪಡೆಯಲು ಬಯಸಿದರೆ (ಪುರುಷರಿಗೆ ಮೂಲ ದರದ 40% ಮತ್ತು ಮಹಿಳೆಯರಿಗೆ ಮೂಲ ದರದ 50%), ಡ್ರಾಪ್ ಡೌನ್ ಪಟ್ಟಿಯಿಂದ ರಿಯಾಯಿತಿಯನ್ನು ಆಯ್ಕೆಮಾಡಿ. ಹಿರಿಯ ನಾಗರಿಕರು ತಮ್ಮ ಪ್ರಯಾಣದ ಸಮಯದಲ್ಲಿ ವಯಸ್ಸಿನ ಕೆಲವು ಮೂಲ ಪುರಾವೆಗಳನ್ನು ಕೊಂಡೊಯ್ಯಲು ವಿನಂತಿಸಲಾಗಿದೆ. ನಿಮ್ಮ ಅಗತ್ಯವಿರುವ ಬರ್ತ್ ಹಂಚಿಕೆಯು ಲಭ್ಯತೆಯನ್ನು ಅವಲಂಬಿಸಿರುತ್ತದೆ.
- ಸರಿಯಾದ ವಿವರಗಳನ್ನು ನೀಡಿದ ನಂತರ, "ಮುಂದುವರಿಸಿ" ಬಟನ್ ಕ್ಲಿಕ್ ಮಾಡಿ. ರೈಲು, ವರ್ಗ, ಕೋಟಾ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಬದಲಾಯಿಸಲು "ಹಿಂದೆ" ಬಟನ್ ಅನ್ನು ಬಳಸಬಹುದು.
- ಟಿಕೆಟ್ ವಿವರಗಳು, ಒಟ್ಟು ದರ (ಜಿಎಸ್‌ಟಿ ಮತ್ತು ಅನುಕೂಲಕರ ಶುಲ್ಕ ಸೇರಿದಂತೆ) ಮತ್ತು ನಿರ್ದಿಷ್ಟ ಸಮಯದಲ್ಲಿ ಬರ್ತ್‌ಗಳ ಲಭ್ಯತೆ ಪರದೆಯ ಮೇಲೆ ಕಾಣುತ್ತದೆ.
- ಪ್ರಯಾಣಿಕರಿಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಬದಲಾಯಿಸಲು, ಹಿಂದೆ ಬಟನ್ ಅನ್ನು ಬಳಕೆ ಮಾಡಿಕೊಳ್ಳಬಹುದು.
- ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ, ಪಾವತಿ ಪ್ರಕ್ರಿಯೆಗಾಗಿ ಮುಂದುವರಿಸಿ ಬಟನ್ ಕ್ಲಿಕ್ ಮಾಡಿ. ಎಲ್ಲಾ ಪಾವತಿ ಆಯ್ಕೆನನ್ನು ಅರಿಸಿಕೊಂಡು (ಉದಾ. ಕ್ರೆಡಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್, ವ್ಯಾಲೆಟ್‌ಗಳು ಮತ್ತು ಬಹು ಪಾವತಿ ಸೇವೆ ಇತ್ಯಾದಿ) ಹಣವನ್ನು ಪಾವತಿ ಮಾಡಿ
- ನಂತರ ಯಶಸ್ವಿ ಪಾವತಿ ಮತ್ತು ವಸತಿ ಬುಕಿಂಗ್ ನಂತರ, ಟಿಕೆಟ್ ದೃಢೀಕರಣ ಪುಟವು ಕಾಣಿಸಿಕೊಳ್ಳುತ್ತದೆ.
ಹೀಗೆ ನೀವು ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿಕೊಳ್ಳಬಹುದು


Click it and Unblock the Notifications