ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಪ್ರಸ್ತುತ ರಕ್ಷಾ ಬಂಧನವನ್ನು ಹಲವಾರು ಮಂದಿ ಆಚರಣೆ ಮಾಡುತ್ತಾರೆ. ರಕ್ಷಾ ಬಂಧನವು ಹಲವಾರು ನಗರಗಳಲ್ಲಿ ಆಚರಣೆ ಮಾಡಲಾಗುತ್ತಿದೆ. ಧರ್ಮದ ಗಡಿಯನ್ನು ಮೀರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ವರ್ಷ, ಆಗಸ್ಟ್ 30 ಮತ್ತು ಆಗಸ್ಟ್ 31 ರಂದು, ರಕ್ಷಾ ಬಂಧನ ಆಚರಣೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಯಾವುದೇ ಒಂದು ಹಬ್ಬ ಬಂದಾಗ ಬ್ಯಾಂಕ್ ಬಂದ್ ಆಗಿರುತ್ತದೆ. ಕೆಲವು ಹಬ್ಬಗಳಿಗೆ ದೇಶದಾದ್ಯಂತ ಬ್ಯಾಂಕ್ ಬಂದ್ ಆಗಿದ್ದರೆ, ಕೆಲವು ಹಬ್ಬಕ್ಕೆ ನಿರ್ದಿಷ್ಟ ನಗರಗಳಲ್ಲಿ ಮಾತ್ರ ಬ್ಯಾಂಕ್ ಬಂದ್ ಆಗಿರುತ್ತದೆ. ರಕ್ಷಾ ಬಂಧನದ ದಿನವು ದೇಶದಲ್ಲಿ ಹಲವಾರು ನಗರಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಯಾವೆಲ್ಲ ಪ್ರದೇಶದಲ್ಲಿ ಬ್ಯಾಂಕ್ ಬಂದ್
ಪ್ರಮುಖವಾಗಿ ಜೈಪುರ, ಶಿಮ್ಲಾ, ಡೆಹ್ರಾಡೂನ್, ಗ್ಯಾಂಗ್ಟಾಕ್, ಕಾನ್ಪುರ್, ಕೊಚ್ಚಿ, ಲಕ್ನೋ ಮತ್ತು ತಿರುವನಂತಪುರಂನಂತಹ ನಗರಗಳು ಆಗಸ್ಟ್ 30 ಅಥವಾ ಆಗಸ್ಟ್ 31 ರಂದು ರಕ್ಷಾ ಬಂಧನದ ಕಾರಣದಿಂದಾಗಿ ಬ್ಯಾಂಕ್ ಬಂದ್ ಆಗಿರುತ್ತದೆ. ಗಮನಾರ್ಹವಾಗಿ ರಕ್ಷಾ ಬಂಧನದಂದು ಕರ್ನಾಟಕದಲ್ಲಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವುದಿಲ್ಲ.
ರಕ್ಷಾ ಬಂಧನದ ಸಮಯದಲ್ಲಿ ಬ್ಯಾಂಕ್ ರಜೆ ಮಾಹಿತಿ
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ರಜಾ ಪಟ್ಟಿಯ ಪ್ರಕಾರ, ರಕ್ಷಾ ಬಂಧನವನ್ನು ಆಚರಿಸಲು ಭಾರತದಲ್ಲಿನ ಹೆಚ್ಚಿನ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಆಗಸ್ಟ್ 30 ಮತ್ತು ಆಗಸ್ಟ್ 31 ರಂದು ಮುಚ್ಚಲ್ಪಡುತ್ತವೆ.
* ಬ್ಯಾಂಕಿಂಗ್ ಸೇವೆಯನ್ನು ಪಡೆಯಬೇಕಾಗಿದ್ದರೆ, ನೀವು ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ನಿಮ್ಮ ಬ್ಯಾಂಕ್ ಬಂದ್ ಆಗಿರುತ್ತದೆಯೇ ಎಂದು ಎರಡು ಬಾರಿ ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ.
* ಆಗಸ್ಟ್ 30 ರಂದು, ಶ್ರೀನಗರ ಮತ್ತು ಜೈಪುರದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
* ಆಗಸ್ಟ್ 31 ರಂದು, ತಿರುವನಂತಪುರಂ, ಗ್ಯಾಂಗ್ಟಾಕ್, ಲಕ್ನೋ, ಕಾನ್ಪುರ್, ಡೆಹ್ರಾಡೂನ್, ಮತ್ತು ಕೊಚ್ಚಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ ತಿಂಗಳಿನಲ್ಲಿ ಒಟ್ಟು 14 ದಿನ ಬ್ಯಾಂಕ್ ಬಂದ್ ಆಗಿದ್ದು, ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆಯಾಗುತ್ತದೆ. ಇವುಗಳಲ್ಲಿ ವಾರಾಂತ್ಯಗಳು ಮತ್ತು ವಿವಿಧ ಹಬ್ಬಗಳು ಸೇರಿವೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನ, ಗಾಂಧಿ ಜಯಂತಿ ಮತ್ತು ಕ್ರಿಸ್ಮಸ್ ದಿನದಂತಹ ಮಹತ್ವದ ರಾಷ್ಟ್ರೀಯ ರಜಾದಿನಗಳಲ್ಲಿ ಬ್ಯಾಂಕ್‌ಗಳು ಸಾಮಾನ್ಯವಾಗಿ ಬಂದ್ ಆಗಿರುತ್ತದೆ. ದೀಪಾವಳಿ, ಕ್ರಿಸ್‌ಮಸ್, ಈದ್, ಗುರುನಾನಕ್ ಜಯಂತಿ ಮತ್ತು ಗುಡ್ ಫ್ರೈಡೆಯಂತಹ ಹಬ್ಬಗಳ ವೇಳೆ ಕೆಲವೊಂದು ನಗರಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ವಾಟ್ಸಾಪ್ ಬ್ಯಾಂಕಿಂಗ್ ಮೂಲಕ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳನ್ನು, ಹಣಕಾಸು ಮತ್ತು ಹಣಕಾಸೇತರ ಎರಡೂ ಕಾರ್ಯಗಳ್ನನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಬ್ಯಾಂಕಿಂಗ್ ಅಗತ್ಯಗಳನ್ನು ನೀವು ಆನ್‌ಲೈನ್‌ನಲ್ಲಿ ಮಾಡಲು ಲಾಗಿನ್, ರಿಜಿಸ್ಟಾರ್ ಆಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
ದಯವಿಟ್ಟು ಗಮನಿಸಿ: ಈ ಮಾಹಿತಿಯು ಬದಲಾವಣೆ ಆಗಬಹುದು. ಆದ್ದರಿಂದ ಸುಗಮ ಬ್ಯಾಂಕಿಂಗ್ ಸೇವೆಯನ್ನು ಪಡೆಯಬೇಕಾದರೆ, ನಿಮ್ಮ ನಗರದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆಯೇ ಎಂದು ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ.


Click it and Unblock the Notifications