ಯಾವುದೇ ಹಬ್ಬಹರಿದಿನಗಳು ಬಂದಾಗ ನಮ್ಮ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಶಾಲಾ-ಕಾಲೇಜು, ಬ್ಯಾಂಕು, ಸರ್ಕಾರಿ ಕಚೇರಿಗಳಿಗೆ ರಜೆಯನ್ನು ಘೋಷಣೆ ಮಾಡಲಾಗುತ್ತದೆ. ಈಗ ನಾವು ರಾಮನವಮಿಯ ಆಚರಣೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ದೇಶದಲ್ಲಿ ಗುರುವಾರ ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳು ಬಂದ್ ಆಗಲಿದೆ. ಆದರೆ ಕೆಲವು ರಾಜ್ಯಗಳಲ್ಲಿ ಮಾತ್ರ ಬ್ಯಾಂಕ್ ಬಂದ್ ಆಗಲಿದೆ. ಯಾವೆಲ್ಲ ರಾಜ್ಯಗಳಲ್ಲಿ ರಾಮನವಮಿ ದಿನ ಬ್ಯಾಂಕ್ ಬಂದ್ ಆಗಿರುತ್ತದೆ ಎಂಬ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬ್ಯಾಂಕ್‌ನ ಅಧಿಕೃತ ರಜಾ ಕ್ಯಾಲೆಂಡರ್ ಪ್ರಕಾರವಾಗಿ ಮಾರ್ಚ್ 30, 2023ರ ರಾಮನವಮಿ ದಿನದಂದು ಭಾರತದಲ್ಲಿ ಬ್ಯಾಂಕುಗಳು ಬಂದ್ ಆಗಿರಲಿದೆ. ಭಗವಂತ ರಾಮನ ಜನ್ಮದಿನವನ್ನು ದೇಶದಲ್ಲಿ ಹಿಂದೂಗಳು ಇಂದು ರಾಮನವಮಿಯಾಗಿ ಆಚರಣೆ ಮಾಡುತ್ತಾರೆ. ಆದರೆ ಈ ದಿನದಂದು ಬ್ಯಾಂಕ್ ರಜೆಗಳು ರಾಜ್ಯವನ್ನು ಆಧರಿಸಿರುತ್ತದೆ. ಕೆಲವು ರಾಜ್ಯಗಳಲ್ಲಿ ಅಥವಾ ನಗರಗಳಲ್ಲಿ ರಾಮನವಮಿ ಪ್ರಯುಕ್ತ ಬ್ಯಾಂಕ್ ರಜೆ ಇದ್ದರೆ, ಕೆಲವು ಕಡೆ ಇರುವುದಿಲ್ಲ.

ಯಾವೆಲ್ಲ ನಗರಗಳಲ್ಲಿ ರಾಮನವಮಿ ಬ್ಯಾಂಕ್ ರಜೆ
ಅಹಮದಾಬಾದ್, ಬೇಲಾಪುರ, ಬೋಪಾಲ್, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಗಾಂಗ್ಟಾಕ್, ಹೈದರಾಬಾದ್, ತೆಲಂಗಾಣ, ಜೈಲುರ, ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ಪಾಟ್ನಾ, ರಾಂಚಿ, ಶಿಮ್ಲಾದಲ್ಲಿ ರಾಮನವಮಿ ಪ್ರಯುಕ್ತವಾಗಿ ಮಾರ್ಚ್ 30, 2023ರಂದು ಬ್ಯಾಂಕುಗಳು ಬಂದ್ ಆಗಿರಲಿದೆ. ಆದರೆ ಈ ರಾಜ್ಯಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಎಂದಿನಂತೆ ಲಭ್ಯವಿರಲಿದೆ. ಯಾವುದೇ ಸಂದರ್ಭದಲ್ಲಿ ಅಡೆತಡೆ ಇಲ್ಲದೆ ಆನ್‌ಲೈನ್ ಬ್ಯಾಂಕಿಂಗ್ ಸೇವೆಯನ್ನು ಪಡೆಯಬಹುದಾಗಿದೆ. ಹಾಗೆಯೇ ಎಟಿಎಂಗಳು ಕೂಡಾ ತೆರೆದಿರಲಿದೆ. ನಗದು ಬೇಕಾದಲ್ಲಿ ಎಟಿಎಂನಲ್ಲಿ ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಧಿಕೃತ ವೆಬ್‌ಸೈಟ್ (https://www.rbi.org.in/) ನಲ್ಲಿ ಬ್ಯಾಂಕ್ ರಜಾ ದಿನಗಳ ವಿವರಗಳು ಲಭ್ಯವಾಗುತ್ತದೆ. ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.
ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ಪಟ್ಟಿ
ಏಪ್ರಿಲ್ 1, 2023: ಅಜ್ವಾಲ್, ಶಿಲ್ಲಾಂಗ್, ಶಿಮ್ಲಾ, ಚಂಡೀಗಢ ಹೊರತುಪಡಿಸಿ ದೇಶಾದಾದ್ಯಂತ ಹೊಸ ಹಣಕಾಸು ವರ್ಷದ ಆರಂಭದ ದಿನ ಬ್ಯಾಂಕ್ ಬಂದ್ ಆಗಲಿದೆ.
ಏಪ್ರಿಲ್ 2, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 4, 2023: ಮಹಾವೀರ ಜಯಂತಿ, ಹಲವಾರು ನಗರಗಳಲ್ಲಿ ಬ್ಯಾಂಕ್ ಬಂದ್
ಏಪ್ರಿಲ್ 5, 2023: ಬಾಬು ಜಗ್‌ಜೀವನ್ ರಾಮ್ ಜನ್ಮ ದಿನ, ಹೈದಾರಾಬಾದ್‌ನಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 7, 2023: ಗುಡ್ ಫ್ರೈಡೆ, ಅಗರ್ತಾಲ, ಅಹಮದಾಬಾದ್, ಗುವಾಹಟಿ, ಜೈಪುರ, ಜಮ್ಮು, ಶಿಮ್ಲಾ, ಶ್ರೀನಗರ ಹೊರತುಪಡಿಸಿ ಉಳಿದೆಡೆ ಬ್ಯಾಂಕ್ ರಜೆ
ಏಪ್ರಿಲ್ 8, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 9, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 14, 2023: ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ, ಅಜ್ವಾಲ್, ಬೋಪಾಲ್, ನವದೆಹಲಿ, ರಾಯಪುರ, ಶಿಲ್ಲಾಂಗ್, ಶಿಮ್ಲಾ ಹೊರತುಪಡಿಸಿ ಉಳಿದೆಡೆ ಬ್ಯಾಂಕ್ ರಜೆ
ಏಪ್ರಿಲ್ 15, 2023: ಅಗರ್ತಾಲ, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ, ತಿರುವನಂತಪುರದಲ್ಲಿ ವಿಷು (ಬಿಸು) ಹಬ್ಬ, ಬೊಹಾಂಗ್ ಬಿಹು, ಹಿಮಾಚಲ ದಿನ, ಬೆಂಗಾಳಿ ಹೊಸ ವರ್ಷದ ಪ್ರಯುಕ್ತ ಬ್ಯಾಂಕ್ ರಜೆ
ಏಪ್ರಿಲ್ 16, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 18, 2023: ಶಾಬ್-ಇ-ಕ್ವಾದ್ರ್, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್ ಇರಲಿದೆ.
ಏಪ್ರಿಲ್ 21, 2023: ಈದ್-ಉಲ್-ಫಿತ್ರ್, ಅಗರ್ತಾಲ, ಜಮ್ಮು, ಕೊಚ್ಚಿ, ಶ್ರೀನಗರ, ತಿರುವನಂತಪುರಂನಲ್ಲಿ ಬ್ಯಾಂಕ್ ರಜೆ
ಏಪ್ರಿಲ್ 22, 2023: ಈದ್-ಉಲ್-ಫಿತ್ರ್ ಪ್ರಯುಕ್ತ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್ ಬಂದ್, ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
ಏಪ್ರಿಲ್ 23, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
ಏಪ್ರಿಲ್ 30, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್


Click it and Unblock the Notifications