For Quick Alerts
ALLOW NOTIFICATIONS  
For Daily Alerts

ರುಪೇ ಕ್ರೆಡಿಟ್ ಕಾರ್ಡ್‌ ಮೂಲಕ ಯುಪಿಐ ಪಾವತಿಗೆ ಗ್ರೀನ್‌ ಸಿಗ್ನಲ್: ಇಲ್ಲಿದೆ ವಿವರ

|

ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ಪಾವತಿ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಮ್ಮತಿಸಿದೆ. ಇಂದು (ಜೂನ್ 8) ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

"ಭಾರತದಲ್ಲಿ ಯುಪಿಐ ಅತೀ ಪ್ರಮುಖವಾದ ಪಾವತಿ ವಿಧಾನವಾಗಿದೆ. ಪ್ರಸ್ತುತ ಸುಮಾರು 26 ಕೋಟಿ ಜನರು ಹಾಗೂ ಐದು ಕೋಟಿ ವ್ಯಾಪಾರಿಗಳು ಯುಪಿಐ ಪಾವತಿಯನ್ನು ಅವಲಂಭಿಸಿದ್ದಾರೆ," ಎಂದು ಈ ಸಂದರ್ಭದಲ್ಲೇ ಆರ್‌ಬಿಐ ಹೇಳಿಕೆಯಲ್ಲಿ ಉಲ್ಲೇಖ ಮಾಡಿದ್ದಾರೆ.

 ಕ್ರೆಡಿಟ್, ಡೆಬಿಟ್ ಕಾರ್ಡ್‌ ಬಳಸಿ ಯುಪಿಐ ಪೇಮೆಂಟ್ ಹೀಗೆ ಮಾಡಿ ಕ್ರೆಡಿಟ್, ಡೆಬಿಟ್ ಕಾರ್ಡ್‌ ಬಳಸಿ ಯುಪಿಐ ಪೇಮೆಂಟ್ ಹೀಗೆ ಮಾಡಿ

ಮೇ 2022ರಲ್ಲೇ ಯುಪಿಐ ಬಳಕೆ ಮಾಡಿ ಸುಮಾರು 10.40 ಲಕ್ಷ ಕೋಟಿ ರೂಪಾಯಿ ಮೌಲ್ಯದ, 594.63 ಕೋಟಿ ವಹಿವಾಟು ನಡೆಸಲಾಗಿದೆ. ಈ ಡಿಜಿಟಲ್ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತಾರ ಮಾಡುವ ನಿಟ್ಟಿನಲ್ಲಿ ನಾವು ರುಪೇ ಕ್ರೆಡಿಟ್ ಕಾರ್ಡ್‌ ಮೂಲಕ ಯುಪಿಐ ಪಾವತಿಗೆ ಅವಕಾಶ ನೀಡುತ್ತಿದ್ದೇವೆ. ಇದರಿಂದಾಗಿ ಇನ್ನಷ್ಟು ಅಧಿಕ ಮಂದಿ ಯುಪಿಐ ಪಾವತಿ ವಿಧಾನ ಬಳಕೆಯಲ್ಲಿ ತೊಡಗಲಿದ್ದಾರೆ ಎಂದು ಕೂಡಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

 ರುಪೇ ಕ್ರೆಡಿಟ್ ಕಾರ್ಡ್‌ ಮೂಲಕ ಯುಪಿಐ ಪಾವತಿಗೆ ಗ್ರೀನ್‌ ಸಿಗ್ನಲ್

ಆರಂಭದಲ್ಲಿ ಬ್ಯಾಂಕ್ ಖಾತೆಗೆ ಯುಪಿಐ ಲಿಂಕ್ ಮಾಡುವ ಮೂಲಕ ಯುಪಿಐ ಬಳಕೆ ಮಾಡಲಾಗುತ್ತಿತ್ತು. ಆದರೆ ಬಳಿಕ ಯುಪಿಐ ಆಪ್‌ಗಳು ಆರಂಭವಾಗಿದೆ. ಡೆಬಿಟ್, ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ ಯುಪಿಐ ಪಾವತಿ ಮಾಡಲು ಆರಂಭಿಸಲಾಯಿತು. ಆದರೆ ಇದು ವ್ಯಾಪಾರಿಗಳಿಗೆ ವಹಿವಾಟು ಮಾಡಲು ಮಾತ್ರ ಸಾಧ್ಯವಾಗಲಿದೆ.

 ರುಪೇ ಕ್ರೆಡಿಟ್ ಕಾರ್ಡ್‌ ಮೂಲಕ ಯುಪಿಐ ಪಾವತಿಗೆ ಗ್ರೀನ್‌ ಸಿಗ್ನಲ್

ಗೂಗಲ್ ಪೇಗೆ ಕ್ರೆಡಿಟ್, ಡೆಬಿಟ್ ಕಾರ್ಡ್ ಲಿಂಕ್ ಹೇಗೆ?

ಹಂತ 1: ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ.
ಹಂತ 2: ಪಾವತಿ ವಿಧಾನಗಳ ಮೇಲೆ ಕ್ಲಿಕ್ ಮಾಡಿ.
ಹಂತ 3: ಅಪ್ಲಿಕೇಶನ್‌ನಲ್ಲಿ ಸೇರಿಸಲಾದ ಪ್ರಸ್ತುತ ಬ್ಯಾಂಕ್ ಖಾತೆಗಳನ್ನು ಅಪ್ಲಿಕೇಶನ್ ತೋರಿಸುತ್ತದೆ.
ಹಂತ 4: ಗೂಗಲ್ ಪೇನಲ್ಲಿ ನಿಮ್ಮ ಕಾರ್ಡ್ ಅನ್ನು ಸೇರಿಸಲು 'Add credit or debit card' ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ, ಸಿವಿವಿ ನಮೂದಿಸಿ
ಹಂತ 6: ಹೆಸರು ಮತ್ತು ಬಿಲ್ಲಿಂಗ್ ವಿಳಾಸವನ್ನು ನಮೂದಿಸಿ Save ಕ್ಲಿಕ್ ಮಾಡಿ.
ಹಂತ 7: ನೀವು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು
ಹಂತ 8: 'Activate' ಕ್ಲಿಕ್ ಮಾಡಬೇಕು, ಒಟಿಪಿ ಬರಲಿದ್ದು ಅದನ್ನು ನಮೂದಿಸಿದರೆ ಪ್ರಕ್ರಿಯೆ ಪೂರ್ಣ.

English summary

RBI allows UPI Payments via Rupay Credit Cards: How You Can Make UPI Payments via Credit Card

The Reserve Bank of India (RBI) on Wednesday proposed to link rupay credit cards to UPI platforms; Here is How you can make UPI payments via credit cards and debit cards.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X