ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಎಂಪಿಸಿ ಸಭೆಯು ಇಂದು ಸಹಕಾರಿ ಬ್ಯಾಂಕ್‌ಗಳ ಸೇವೆ ಅಭಿವೃದ್ಧಿಗೆ ಕೆಲವು ಕ್ರಮಗಳನ್ನು ಘೋಷಿಸಿದೆ. ವಸತಿ ವಲಯಕ್ಕೆ ಸಾಲದ ಹರಿವು ಅಧಿಕ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ವಸತಿ ಯೋಜನೆಗೆ ಹಣಕಾಸು ವಿಸ್ತರಣೆ ಮಾಡಲು ಅವಕಾಶ ನೀಡಿದೆ. ಹಾಗೆಯೇ ನಗರ ಸಹಕಾರಿ ಬ್ಯಾಂಕ್‌ಗಳು ಮನೆ ಬಾಗಿಲಿಗೆ ಸೇವೆ ನೀಡಲು ಆರ್‌ಬಿಐ ಅಸ್ತು ಎಂದಿದೆ. ಇದರಿಂದಾಗಿ ನಗರ ಸಹಕಾರಿ ಬ್ಯಾಂಕ್ ಗ್ರಾಹಕರು ಮನೆಯಲ್ಲೇ ಕುಳಿತು ಬ್ಯಾಂಕ್ ಸೇವೆ ಪಡೆಯಲು ಸಾಧ್ಯವಾಗಲಿದೆ.
"ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಜನರಿಗೆ ಸೇವೆಯನ್ನು ವಿಸ್ತಾರ ಮಾಡುವ ನಿಟ್ಟಿನಲ್ಲಿ ನಗರ ಸಹಕಾರಿ ಬ್ಯಾಂಕ್‌ಗಳು (ಯುಸಿಬಿ) ತನ್ನ ಗ್ರಾಹಕರ ಮನೆ ಬಾಗಲಿಗೆ ಸೇವೆ ನೀಡುವ ಅವಕಾಶವನ್ನು ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆ ಬಾಗಿಲಿನಲ್ಲಿಯೇ ಬ್ಯಾಂಕ್ ಸೇವೆಯನ್ನು ಪಡೆಯಲು ಸಹಕಾರಿಯಾಗಲಿ ಎಂಬ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕಟಣೆಯನ್ನು ಹೊರಡಿಸಲಾಗುತ್ತದೆ," ಎಂದು ಆರ್‌ಬಿಐ ಮಾಹಿತಿ ನೀಡಿದೆ.
ಸಾಮಾನ್ಯವಾಗಿ ನಗರ ಅಥವಾ ಸೆಮಿ ಅರ್ಬನ್ ಪ್ರದೇಶದ ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳಿಗೆ ನಗರ ಸಹಕಾರಿ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಆರ್‌ಬಿಐ ಪ್ರಕಾರ ಪ್ರಾಥಮಿಕ ಸಹಕಾರಿ ಬ್ಯಾಂಕ್‌ಗಳು ಅಥವಾ ನಗರ ಸಹಕಾರಿ ಬ್ಯಾಂಕ್‌ಗಳು, ಸ್ಟೇಟ್ ಕೋಆಪರೇಟಿವ್ ಸೊಸೈಟೀಸ್ ಆಕ್ಟ್‌ನ ಅಡಿಯಲ್ಲಿ ಬರುತ್ತದೆ. ಈಗ ನಗರ ಸಹಕಾರಿ ಬ್ಯಾಂಕ್‌ಗಳಿಂದ ಜನರಿಗೆ ಮನೆ ಬಾಗಲಿಗೆ ಯಾವೆಲ್ಲಾ ಸೇವೆಗಳು ಲಭ್ಯವಾಗಲಿದೆ, ಏನು ಪ್ರಯೋಜನವಾಗಲಿದೆ ಎಂದು ತಿಳಿಯಲು ಮುಂದೆ ಓದಿ...
ಮನೆ ಬಾಗಿಲಿಗೆ ಯಾವೆಲ್ಲಾ ಸೇವೆಗಳು ಲಭ್ಯ
ಎಸ್‌ಬಿಐ ವೆಬ್‌ಸೈಟ್ ಪ್ರಕಾರ ಕೆಲವು ಸೇವೆಗಳನ್ನು ಮನೆ ಬಾಗಿಲಿಗೆ ನೀಡಲಾಗುತ್ತದೆ. ಆ ಪಟ್ಟಿ ಈ ಕೆಳಗಿದೆ. ಆದರೆ ಕೆಲವು ಬ್ಯಾಂಕ್‌ಗಳಲ್ಲಿ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಆದರೆ ಪ್ರಾಥಮಿಕ ಸೇವೆಯು ಲಭ್ಯವಾಗಲಿದೆ. ಈ ಸೇವೆಯ ಶುಲ್ಕವನ್ನು ನೀವು ಸೇವೆ ಪಡೆಯುವ ಮುನ್ನ ಪರಿಶೀಲಿಸುವುದು ಉತ್ತಮ
* ನಗದು ಪಡೆಯಲು
* ನಗದು ನೀಡಲು
* ಚೆಕ್ ಪಡೆಯಲು
* ಚೆಕ್ ಸ್ಲಿಪ್ ಪಡೆಯಲು
* ಫಾರ್ಮ್ 15H ಪಡೆಯಲು
* ಡ್ರಾಪ್ಟ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಸೇವೆ
* ಹಿರಿಯ ನಾಗರಿಕರಿಂದ ಜೀವನ ಪ್ರಮಾಣ ಪತ್ರ ಪಡೆಯಲು
* ಕೆವೈಸಿ ದಾಖಲೆ ಪಡೆಯಲು
ಮನೆ ಬಾಗಲಿಗೆ ಬ್ಯಾಂಕಿಂಗ್ ಸೇವೆ ಪಡೆಯುವುದು ಹೇಗೆ?
ಹಲವಾರು ಬ್ಯಾಂಕುಗಳು ತಮ್ಮ ಗ್ರಾಹಕರ ಮನೆ ಬಾಗಿಲಿಗೆ ಸೇವೆಯನ್ನು ನೀಡುತ್ತದೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಬ್ಯಾಂಕುಗಳು ನೀಡುತ್ತದೆ. ನಿಮ್ಮ ಸ್ಥಳೀಯ ಬ್ಯಾಂಕ್ ಮನೆ ಬಾಗಿಲಿಗೆ ಸೇವೆಯನ್ನು ನೀಡುತ್ತದೆಯೇ ಎಂಬುವುದನ್ನು ನೀವು ಮೊದಲು ಖಚಿತಪಡಿಸಿಕೊಳ್ಳಿ. ಇದನ್ನು ನೀವು ಬ್ಯಾಂಕಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು. ಕೆಲವು ಬ್ಯಾಂಕುಗಳು ಶುಲ್ಕವನ್ನು ವಿಧಿಸಲಿದೆ.
ಪುನರಾವರ್ತಿತ ಇ-ಪಾವತಿ ಮಿತಿ ಹೆಚ್ಚಳ
ಆರ್‌ಬಿಐ ಪುನರಾವರ್ತಿತ ಇ-ಪಾವತಿ ಮಿತಿಯನ್ನು ಈಗ ಹೆಚ್ಚಳ ಮಾಡಿದೆ. ಈ ಹಿಂದೆ ಐದು ಸಾವಿರವಿದ್ದ ಮಿತಿಯನ್ನು 15,000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಈ ವೇಳೆಯೇ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಮಾಡಲು ಕೂಡಾ ಅವಕಾಶ ನೀಡಲಾಗಿದೆ. ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸುವ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.
ಬೇರೆ ಯಾವೆಲ್ಲಾ ಕ್ರಮ ಘೋಷಣೆ
ಗ್ರಾಮೀಣ ಹಾಗೂ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಗೃಹ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ. ಕಳೆದ ದಶಕದಿಂದ ವಸತಿ ಸಾಲದ ಬೇಡಿಕೆ ಅಧಿಕವಾದ ಕಾರಣದಿಂದಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆರ್‌ಬಿಐ ವಸತಿ ವಲಯಕ್ಕೆ ಸಾಲದ ಹರಿವು ಅಧಿಕ ಮಾಡುವ ನಿಟ್ಟಿನಲ್ಲಿ ವಸತಿ ಯೋಜನೆಗೆ ಹಣಕಾಸು ವಿಸ್ತರಣೆ ಮಾಡಲು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಗ್ರಾಮೀಣ ಬ್ಯಾಂಕ್‌ಗಳು ಈಗ ವಾಣಿಜ್ಯ ರಿಯಲ್ ಎಸ್ಟೇಟ್ ಅಥವಾ ವಸತಿ ಯೋಜನೆಗೆ ತಮ್ಮ ಒಟ್ಟು ಆಸ್ತಿಯ ಶೇಕಡ ಐದರಷ್ಟು ಹಣವನ್ನು ಸಾಲವಾಗಿ ನೀಡಬಹುದು.


Click it and Unblock the Notifications