ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಾಲಕಾಲಕ್ಕೆ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಅನೇಕ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಇದೀಗ ಮತ್ತೊಂದು ಬ್ಯಾಂಕ್‌ನ ಪರವಾನಗಿಯನ್ನು ಆರ್‌ಬಿಐ ರದ್ದುಗೊಳಿಸಿದೆ.
ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಈಗ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ. ಅದು ಯಾವುದು ಬ್ಯಾಂಕ್, ಆ ಬ್ಯಾಂಕ್‌ನಲ್ಲಿ ನಿಮ್ಮ ಖಾತೆಯೂ ಇದೆಯೇ?, ಗ್ರಾಹಕರಿಗೆ ಎಷ್ಟು ಹಣ ಲಭ್ಯವಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಯಾವ ಬ್ಯಾಂಕ್ ಬಂದ್?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮುಂಬೈನ 'ದಿ ಕಪೋಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್' ಪರವಾನಗಿಯನ್ನು ರದ್ದುಗೊಳಿಸಿದೆ. ಇದು ಮುಂಬೈ ಮೂಲದ ಬ್ಯಾಂಕ್ ಆಗಿರುವ ಕಾರಣ ಬೆಂಗಳೂರಿಗರ ಮೇಲೆ ಅಧಿಕ ಪ್ರಭಾವ ಬೀರದು. ಆದರೆ ಮುಂಬೈನಲ್ಲಿ ನೆಲೆಸಿರುವ ಕರ್ನಾಟಕದ ಜನರು ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ ಖಂಡಿತ ಪ್ರಭಾವ ಎದುರಿಸಬೇಕಾಗುತ್ತದೆ.
ಬ್ಯಾಂಕ್‌ನಲ್ಲಿಲ ಬಂಡವಾಳ!
ಈ ಬ್ಯಾಂಕ್‌ನಲ್ಲಿ ಸಾಕಷ್ಟು ಬಂಡವಾಳ ಅಂದರೆ ಹಣವಿಲ್ಲ. ಹಾಗೆಯೇ ಗಳಿಸುವ ಸಾಮರ್ಥ್ಯವೂ ಕೂಡಾ ಈ ಬ್ಯಾಂಕ್‌ಗೆ ಈಗ ಇಲ್ಲ. ಈ ಕಾರಣದಿಂದಾಗಿ ಆರ್‌ಬಿಐ ಈ ಬ್ಯಾಂಕ್ ಅನ್ನು ಮುಚ್ಚುವ ನಿರ್ಧಾರ ಮಾಡಬೇಕಾಯಿತು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.
ಬ್ಯಾಂಕ್‌ಗೆ ಡೆಪಾಸಿಟ್, ವಿತ್‌ಡ್ರಾ ಸಾಧ್ಯವಿಲ್ಲ!
ಪರವಾನಗಿ ರದ್ದತಿಯೊಂದಿಗೆ ಸಹಕಾರಿ ಬ್ಯಾಂಕ್ ಅನ್ನು ತಕ್ಷಣವೇ ಬ್ಯಾಂಕಿಂಗ್ ವ್ಯವಹಾರದಿಂದ ನಿಷೇಧಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಆದ್ದರಿಂದಾಗಿ ಈ ಬ್ಯಾಂಕ್‌ನಲ್ಲಿ ಯಾವ ಗ್ರಾಹಕರು ಕೂಡಾ ಹಣವನ್ನು ಡೆಪಾಸಿಟ್ ಮಾಡುವ ಅಥವಾ ಹಣವನ್ನು ವಿತ್‌ಡ್ರಾ ಮಾಡುವ ಅವಕಾಶವನ್ನು ಹೊಂದಿಲ್ಲ.
ಬ್ಯಾಂಕ್ ಮುಚ್ಚಲು ಆದೇಶ ನೀಡಲು ಮನವಿ
ಈ ಹೇಳಿಕೆಯ ಪ್ರಕಾರ, ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಸಹಕಾರ ಸಂಘಗಳ ಕೇಂದ್ರೀಯ ರಿಜಿಸ್ಟ್ರಾರ್‌ಗೆ ಬ್ಯಾಂಕ್ ಅನ್ನು ಮುಚ್ಚಲು ಆದೇಶ ನೀಡುವಂತೆ, ಹಾಗೆಯೇ ಬ್ಯಾಂಕ್‌ಗೆ ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ ನೀಡುವಂತೆ ಮನವಿ ಮಾಡಲಾಗಿದೆ.
ಗ್ರಾಹಕರಿಗೆ ಸಿಗುವ ಹಣವೆಷ್ಟು?
ಡೆಪಾಸಿಟ್ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ನಿಂದ 5 ಲಕ್ಷ ರೂಪಾಯಿವರೆಗಿನ ಡೆಪಾಸಿಟ್ ಇನ್ಶೂರೆನ್ಸ್ ಕ್ಲೈಮ್ ಮೊತ್ತವನ್ನು ಪಡೆಯಲು ಪ್ರತಿಯೊಬ್ಬ ಡೆಪಾಸಿಟ್‌ದಾರರು ಅರ್ಹರಾಗಿರುತ್ತಾರೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಈ ಲೆಕ್ಕಾಚಾರದಲ್ಲಿ ನೋಡಿದಾಗ ಬ್ಯಾಂಕಿನ ಸುಮಾರು ಶೇಕಡ 96.09 ರಷ್ಟು ಗ್ರಾಹಕರು ತಮ್ಮ ಸಂಪೂರ್ಣ ಡೆಪಾಸಿಟ್ ಮೊತ್ತವನ್ನು ಡಿಐಸಿಜಿಸಿಯಿಂದ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಉಳಿದವರು ತಮ್ಮ ಸಂಪೂರ್ಣ ಮೊತ್ತವನ್ನು ಪಡೆಯಲು ಸಾಧ್ಯವಿಲ್ಲ.
ಈ ಬ್ಯಾಂಕ್‌ಗೆ ನಿರ್ಬಂಧ
ಇದಲ್ಲದೇ, ಅಹಮದಾಬಾದ್ ಮೂಲದ ಕಲರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್‌ನ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಲವಾರು ನಿರ್ಬಂಧಗಳನ್ನು ವಿಧಿಸಿದೆ. ಗ್ರಾಹಕರು ಗರಿಷ್ಠ 50,000 ರೂಪಾಯಿ ವಿತ್‌ಡ್ರಾ ಮಾಡುವ ಅವಕಾಶವಿದೆ.
ಸೆಪ್ಟೆಂಬರ್ 25 ರಂದು ಬ್ಯಾಂಕಿಂಗ್ ವ್ಯವಹಾರವನ್ನು ಮುಚ್ಚುವುದರೊಂದಿಗೆ ತಾನು ವಿಧಿಸಿರುವ ನಿರ್ಬಂಧಗಳು ಜಾರಿಗೆ ಬಂದಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಇವುಗಳು ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ.
ಬ್ಯಾಂಕ್‌ಗೆ ಸಾಲ ನೀಡಲು ಅವಕಾಶವಿಲ್ಲ!
ಕಲರ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ ತನ್ನ ಪೂರ್ವಾನುಮತಿ ಇಲ್ಲದೆ ಸಾಲ ನೀಡುವಂತಿಲ್ಲ ಅಥವಾ ಹಳೆಯ ಸಾಲವನ್ನು ಅಪ್‌ಡೇಟ್ ಮಾಡುವಂತಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಇದಲ್ಲದೇ, ಯಾವುದೇ ಹೂಡಿಕೆ ಮತ್ತು ಹೊಸ ಡೆಪಾಸಿಟ್‌ಗಳನ್ನು ಸ್ವೀಕರಿಸುವುದನ್ನು ಸಹ ನಿರ್ಬಂಧಿಸಲಾಗಿದೆ.


Click it and Unblock the Notifications