MPC Meeting: ಮತ್ತೆ ರೆಪೋ ದರ ಏರಿಕೆ ಸಾಧ್ಯತೆ, ಎಷ್ಟು ಹೆಚ್ಚಳ, ಇಲ್ಲಿದೆ ವಿವರ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾನಿಟರಿ ಪಾಲಿಸಿ ಕಮೀಟಿ (ಎಂಪಿಸಿ) ಸಭೆಯನ್ನು ಆರಂಭ ಮಾಡಿದೆ. ಕಳೆದ ಬಾರಿ ಎಲ್ಲ ನಿಗದಿತ ಸಭೆಯಲ್ಲೂ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದೆ. ಪ್ರಮುಖವಾಗಿ ಮೇ ತಿಂಗಳ ಬಳಿಕ ನಡೆದ ಎಲ್ಲ ಎಂಪಿಸಿ ಸಭೆಯಲ್ಲಿ ಆರ್‌ಬಿಐ ರೆಪೋ ದರ ಏರಿಸಿದ್ದು, ಈ ಬಾರಿಯೂ ರೆಪೋ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಸೋಮವಾರ ಫೆಬ್ರವರಿ 6ರಂದು ಎಂಪಿಸಿ ಸಭೆ ಆರಂಭವಾಗಿದ್ದು, ಫೆಬ್ರವರಿ 8ರವರೆಗೆ ಸಭೆ ನಡೆಯಲಿದೆ. ಹಲವಾರು ಬಾರಿ ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಆರ್‌ಬಿಐ ಕಳೆದ ವರ್ಷ ಮೇ ತಿಂಗಳಿನಿಂದ ರೆಪೋ ದರವನ್ನು ಏರಿಸುತ್ತಿದೆ. ಈಗ ಈ ಸಭೆಯ ಬಳಿಕ ಫೆಬ್ರವರಿ 8ರ ಬುಧವಾರ ಆರ್‌ಬಿಐ 25 ಮೂಲಾಂಕ ರೆಪೋ ದರವನ್ನು ಏರಿಸುವ ಸಾಧ್ಯತೆಯಿದೆ. ಈ ಹಿಂದೆ ಆರ್‌ಬಿಐ 35 ಮೂಲಾಂಕ ರೆಪೋ ದರ ಏರಿಸಿದೆ.

ಪ್ರಮುಖವಾಗಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆರ್‌ಬಿಐ ಸತತವಾಗಿ 5 ಬಾರಿ ರೆಪೋ ದರವನ್ನು ಪರಿಷ್ಕರಣೆ ಮಾಡಿದೆ. ಪ್ರಸ್ತುತ ಹಣದುಬ್ಬರವು ಕೊಂಚ ನಿಯಂತ್ರಣಕ್ಕೆ ಬಂದಿದ್ದು, ರೆಪೋ ದರ ಏರಿಕೆಯಲ್ಲಿ ಬಿಪಿಎಸ್ ಕಡಿತ ಮಾಡುವ ನಿರೀಕ್ಷೆಯಿದೆ. ಅಂದರೆ ಈ ಹಿಂದಿಗಿಂತ ಕೊಂಚ ಕಡಿಮೆ ದರ ಏರಿಕೆ ಸಾಧ್ಯತೆಯಿದೆ. ಈವರೆಗೆ ರೆಪೋ ದರವನ್ನು 5 ಬಾರಿ 225 ಮೂಲಾಂಕ ಹೆಚ್ಚಿಸಲಾಗಿದ್ದು, ಪ್ರಸ್ತುತ ದರ ಶೇಕಡ 6.25ಕ್ಕೆ ತಲುಪಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ....

 ರೆಪೋ ದರ ಎಷ್ಟಕ್ಕೆ ಏರಿಕೆಯಾಗಬಹುದು?

ರೆಪೋ ದರ ಎಷ್ಟಕ್ಕೆ ಏರಿಕೆಯಾಗಬಹುದು?

ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ತಜ್ಞರ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಫೆಬ್ರವರಿ 2023ರಲ್ಲಿ 25 ಮೂಲಾಂಕ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಪ್ರಸ್ತುತ ಹಣದುಬ್ಬರವು ಕೊಂಚ ನಿಯಂತ್ರಣಕ್ಕೆ ಬರುತ್ತಿದೆ. ಜಾಗತಿಕವಾಗಿ ವಸ್ತುಗಳ ದರವು ಕೂಡಾ ಕೊಂಚ ಇಳಿಕೆ ಕಾಣುತ್ತಿದೆ. ಆದ್ದರಿಂದಾಗಿ ಆರ್‌ಬಿಐ ರೆಪೋ ಏರಿಕೆಯನ್ನು ಮುಂದುವರಿಸಲಿದೆ, ಆದರೆ ಕಳೆದ ಬಾರಿಗಿಂತ ಕೊಂಚ ಕಡಿಮೆ ದರ ಏರಿಕೆ ಮಾಡಲಿದೆ ಎಂದು ರೇಟಿಂಗ್ ಏಜೆನ್ಸಿಯು ಭರವಸೆ ಹೊಂದಿದೆ. ಆರ್‌ಬಿಐ ಈ ಬಾರಿ 25 ಮೂಲಾಂಕ ರೆಪೋ ದರ ಏರಿಸಬಹುದು, ಇದರಿಂದಾಗಿ ರೆಪೋ ದರವು ಶೇಕಡ 6.50ಗೆ ತಲುಪಲಿದೆ ಎಂದು ತಜ್ಞರು ಹೇಳಿದ್ದಾರೆ.

 ಲಂಡನ್‌ ಬ್ಯಾಂಕ್ ಬರ್ಸೆಲ್ಸ್ ಅಭಿಪ್ರಾಯ

ಲಂಡನ್‌ ಬ್ಯಾಂಕ್ ಬರ್ಸೆಲ್ಸ್ ಅಭಿಪ್ರಾಯ

"ಆರ್‌ಬಿಐನ ಸಹಿಷ್ಣು ಮಟ್ಟಕ್ಕಿಂತ ಹಣದುಬ್ಬರ ಕಡಿಮೆಯಾಗಿದೆ. ಹೆಚ್ಚಿನ ಜನರು ತಮ್ಮ ರೆಪೋ ದರ ಏರಿಕೆಗೆ ಸಮ್ಮತಿಸಿದರೆ, ಕಮೀಟಿಯ ಇಬ್ಬರು ರೆಪೋ ದರವನ್ನು ಸ್ಥಿರವಾಗಿರಿಸಲು ವೋಟಿಂಗ್ ಮಾಡಬಹುದು. ಆದ್ದರಿಂದಾಗಿ ನಿರ್ಧಾರದಲ್ಲಿ ಕೊಂಚ ಗೊಂದಲ ಉಂಟಾಗಬಹುದು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಇತ್ತೀಚಿನ ಹೇಳಿಕೆಗಳ ಪ್ರಕಾರ ರೆಪೋ ದರವು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಫೆಬ್ರವರಿಯ ಎಂಪಿಸಿ ಸಭೆಯ ಬಳಿಕ ಆರ್‌ಬಿಐ ಮತ್ತೆ 25 ಬಿಪಿಎಸ್ ರೆಪೋ ದರ ಹೆಚ್ಚಿಸುವ ಸಾಧ್ಯತೆಯಿದೆ," ಎಂದು ಲಂಡನ್‌ನಲ್ಲಿರುವ ಬ್ಯಾಂಕ್ ಬರ್ಸೆಲ್ಸ್ ಅಭಿಪ್ರಾಯ ವ್ಯಕ್ತಪಡಿಸಿದೆ.

 ಅರ್ಥಶಾಸ್ತ್ರಜ್ಞೆ ಅಧಿತಿ ನಾಯರ್ ಹೇಳುವುದೇನು?

ಅರ್ಥಶಾಸ್ತ್ರಜ್ಞೆ ಅಧಿತಿ ನಾಯರ್ ಹೇಳುವುದೇನು?

ಇನ್ನು ಪೋಲ್ ಒಂದರ ಪ್ರಕಾರ ಆರ್‌ಬಿಐ 25ರಷ್ಟು ರೆಪೋ ದರ ಹೆಚ್ಚಿಸುವ ನಿರೀಕ್ಷೆಯಿದೆ. "ಇತರೆ ಪ್ರಮುಖ ಕೇಂದ್ರ ಬ್ಯಾಂಕ್‌ಗಳಂತೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಈ ಒಂದು ಬಾರಿ ಏರಿಸುವ ಸಾಧ್ಯತೆಯಿದೆ," ಎಂದು ವರದಿಯು ಹೇಳಿದೆ. ಐಸಿಆರ್‌ಎನ ಮುಖ್ಯ ಅರ್ಥಶಾಸ್ತ್ರಜ್ಞೆ ಅಧಿತಿ ನಾಯರ್ ಪ್ರಕಾರ, "ಸಿಪಿಐ ಹಣದುಬ್ಬರವು ನಿರೀಕ್ಷೆಗಿಂತ ಕಡಿಮೆಯಾಗಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಐಐಪಿ ಬೆಳವಣಿಗೆ ಶೇಕಡ 1.3 ಆಗಿದೆ. ಆದ್ದರಿಂದಾಗಿ ಎಂಪಿಸಿ ಫೆಬ್ರವರಿಯಲ್ಲಿ ರೆಪೋ ದರವನ್ನು ಸ್ಥಿರವಾಗಿರಿಸುವ ಸಾಧ್ಯತೆಯಿದೆ," ಎಂದು ತಿಳಿಸಿದ್ದಾರೆ.

 ರೆಪೋ ದರ ಎಷ್ಟು ಏರಿಕೆಯಾಗಿದೆ?

ರೆಪೋ ದರ ಎಷ್ಟು ಏರಿಕೆಯಾಗಿದೆ?

ಸತತ 10 ಬಾರಿ ಸ್ಥಿರವಾಗಿದ್ದ ರೆಪೋ ದರವನ್ನು ಮೇ ತಿಂಗಳಿನಲ್ಲಿ ಏರಿಸಲಾಗಿದೆ. ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್‌ಬಿಐ ಮೇ ತಿಂಗಳಿನಲ್ಲಿ 40 ಬಿಪಿಎಸ್ ದರವನ್ನು ಏರಿಸಲಾಗಿದೆ. ಅದಾದ ಬಳಿಕ ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಪ್ರಸ್ತುತ ರೆಪೋ ದರ ಶೇಕಡ 6.25 ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+