ನಾವು ನಮ್ಮ ಹಣವನ್ನು ಉಳಿತಾಯ ಮಾಡಲು ಬಯಸಿದರೆ ಫಿಕ್ಸಿಡ್ ಡೆಪಾಸಿಟ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಆದರೆ ಅದರ ಹೂಡಿಕೆಗೆ ಅಧಿಕ ಮೊತ್ತ ಇರಬೇಕಾಗುತ್ತದೆ. ನಮ್ಮಲ್ಲಿ ಅಧಿಕ ಹೂಡಿಕೆ ಇಲ್ಲದಿದ್ದರೆ, ನಾವು ಮಾಸಿಕವಾಗಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬಹುದಾಗಿದೆ. ಅದಕ್ಕೆ ನಮಗೆ ಆರ್‌ಡಿ ಸಹಕಾರಿಯಾಗಿದೆ. ರೆಕ್ಯೂರಿಂಗ್ ಡೆಪಾಸಿಟ್ ಜನರಿಗೆ ಮಾಸಿಕ ನಿಗದಿತ ಮೊತ್ತವನ್ನು ಹೂಡಿಕೆ ಮಾಡಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಆರ್‌ಡಿ ಎಂದು ಕರೆಯಲ್ಪಡುವ ರೆಕ್ಯೂರಿಂಗ್ ಡೆಪಾಸಿಟ್ ಎಫ್‌ಡಿಗಿಂತ ಭಿನ್ನ ಮತ್ತು ವ್ಯವಸ್ಥಿತ ಹೂಡಿಕೆ ಯೋಜನೆಯಾಗಿದೆ. ಆರ್‌ಡಿಗೆ ಸಾಮಾನ್ಯವಾಗಿ ಎಫ್‌ಡಿಗಳಂತೆಯೇ ಬಡ್ಡಿದರ ಇರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಸತತವಾಗಿ ರೆಪೋ ದರವನ್ನು ಹೆಚ್ಚಿಸಿದ ನಂತರ, ಹಲವಾರು ಬ್ಯಾಂಕುಗಳು ಐದು ವರ್ಷಗಳ ಅವಧಿಯ ಆರ್‌ಡಿಗಳ ಬಡ್ಡಿದರವನ್ನು ಹೆಚ್ಚಿಸಿದೆ. ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಆರ್‌ಡಿ ಮೇಲಿನ ಬಡ್ಡಿದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ಮುಂದೆ ಓದಿ...

ಯಾವ ಬ್ಯಾಂಕ್‌ನಲ್ಲಿ ಆರ್‌ಡಿ ಬಡ್ಡಿದರ ಎಷ್ಟಿದೆ?
ಡಿಸಿಬಿ ಬ್ಯಾಂಕ್: ಐದು ವರ್ಷಗಳ ಅವಧಿಯ ರೆಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಮೇಲೆ ಡಿಸಿಬಿ ಬ್ಯಾಂಕ್ ಶೇಕಡ 7.6ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಬಡ್ಡಿದರವು 2 ಕೋಟಿ ರೂಪಾಯಿಯ ರೆಕ್ಯೂರಿಂಗ್ ಡೆಪಾಸಿಟ್ ಅಥವಾ ಆರ್‌ಡಿಗೆ ಅನ್ವಯವಾಗುತ್ತದೆ.
ಸುರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 5ರಿಂದ 10 ವರ್ಷಗಳ ಅವಧಿಯ ರೆಕ್ಯೂರಿಂಗ್ ಡೆಪಾಸಿಟ್ ಮೇಲೆ ಸುರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಇದೇ ಅವಧಿಯ ಆರ್‌ಡಿ ಮೇಲೆ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡುತ್ತದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 36ರಿಂದ 60 ತಿಂಗಳುಗಳ ಅವಧಿಯ ಆರ್‌ಡಿ ಮೇಲೆ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇಕಡ 7.2ರಷ್ಟು ಬಡ್ಡಿದರವನ್ನು ನೀಡುತ್ತದೆ. 63ರಿಂದ 120 ತಿಂಗಳುಗಳ ರೆಕ್ಯೂರಿಂಗ್ ಡೆಪಾಸಿಟ್ ಮೇಲೆ ವಾರ್ಷಿಕವಾಗಿ ಶೇಕಡ 6.5ರಷ್ಟು ಬಡ್ಡಿದರವನ್ನು ನೀಡುತ್ತದೆ.
ಡಾಯ್ಚ ಬ್ಯಾಂಕ್: ಈ ಬ್ಯಾಂಕ್‌ನಲ್ಲಿ 60 ತಿಂಗಳುಗಳಲ್ಲಿ ಮೆಚ್ಯೂರಿಟಿ ಹೊಂದುವ ಆರ್‌ಡಿಗಳ ಮೇಲೆ ಶೇಕಡ 7.25 ಬಡ್ಡಿದರವನ್ನು ನೀಡಲಾಗುತ್ತದೆ.
ಇಂಡಸ್‌ಇಂಡ್ ಬ್ಯಾಂಕ್: 61 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಆರ್‌ಡಿ ಮೇಲೆ ಇಂಡಸ್‌ಇಂಡ್ ಬ್ಯಾಂಕ್ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರು ಹೆಚ್ಚುವರಿ ಬಡ್ಡಿಯನ್ನು ಅಂದರೆ 50 ಮೂಲಾಂಕ ಬಡ್ಡಿದರವನ್ನು ನೀಡುತ್ತದೆ.
ಆಕ್ಸಿಸ್ ಬ್ಯಾಂಕ್: 5 ವರ್ಷಗಳ ಅವಧಿಯ ಆರ್‌ಡಿ ಮೇಲೆ ಆಕ್ಸಿಸ್ ಬ್ಯಾಂಕ್ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ. 5 ಕೋಟಿ ರೂಪಾಯಿಗಿಂತ ಕಡಿಮೆ ಅವಧಿಯ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರಿಗೆ ಆಕ್ಸಿಸ್ ಬ್ಯಾಂಕ್‌ನಲ್ಲಿ ಆರ್‌ಡಿ ಮೇಲೆ ಅಧಿಕವಾಗಿ 75 ಮೂಲಾಂಕ ಬಡ್ಡಿದರ ನೀಡಲಾಗುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್: ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ 5 ವರ್ಷಗಳಲ್ಲಿ ಮೆಚ್ಯೂರ್ ಆಗುವ ಆರ್‌ಡಿಗಳಿಗೆ ವಾರ್ಷಿಕವಾಗಿ ಶೇಕಡ 7ರಷ್ಟು ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರು ಶೇ.7.5ರಷ್ಟು ಬಡ್ಡಿದರವನ್ನು ಪಡೆಯುತ್ತದೆ.
ರೆಕ್ಯೂರಿಂಗ್ ಡೆಪಾಸಿಟ್‌ಗಳಿಗಾಗಿ ಹೂಡಿಕೆದಾರರು ಆರು ತಿಂಗಳಿಂದ 10 ವರ್ಷಗಳ ಅವಧಿಯನ್ನು ಆಯ್ಕೆ ಮಾಡಬಹುದು. ಕನಿಷ್ಠ ಹೂಡಿಕೆಯು 1000 ರೂಪಾಯಿ ಆಗಿದೆ. ಒಮ್ಮೆ ಅದನ್ನು ನಿಗದಿಪಡಿಸಿದ ನಂತರ ಕಂತಿನ ಮೊತ್ತವನ್ನು ಬದಲಾಯಿಸಲಾಗುವುದಿಲ್ಲ.


Click it and Unblock the Notifications