11 ತಿಂಗಳ ಬಾಡಿಗೆ ಒಪ್ಪಂದ: ಉದ್ಯೋಗ ಅಥವಾ ಕಲಿಕೆ ಹಿನ್ನೆಲೆಯಲ್ಲಿ ಅನೇಕ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆಯನ್ನು ಬಾಡಿಗೆ ಪಡೆಯಬೇಕಾದರೆ, ಬಾಡಿಗೆದಾರ ಹಾಗೂ ಮನೆ ಮಾಲೀಕರ ನಡುವೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ಎರಡೂ ಕಡೆಯವರ ಹೆಸರು, ಬಾಡಿಗೆ ಮೊತ್ತ, ಬಾಡಿಗೆ ಅವಧಿ ಹಾಗೂ ಇತರೆ ಬಾಡಿಗೆ ಷರತ್ತುಗಳ ವಿವರ ಅಡಗಿರುತ್ತದೆ.
ಸಾಮಾನ್ಯವಾಗಿ ಬಾಡಿಗೆ ಒಪ್ಪಂದವನ್ನು 11 ತಿಂಗಳ ಅವಧಿಗೆ ಮಾಡಲಾಗುತ್ತಿದ್ದು, ಇದು ಯಾಕೆ ಕೇವಲ 11 ತಿಂಗಳಿಗೆ ಮಾಡಲಾಗುತ್ತದೆ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ 1908ರ ನೋಂದಣಿ ಕಾಯ್ದೆ ಕಾರಣ. ಸೆಕ್ಷನ್ 17ರ ಪ್ರಕಾರ, ಲೀಸ್ ಒಪ್ಪಂದವನ್ನು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಲ್ಲ. ಅಂದರೆ, ಒಂದುವೇಳೆ ಬಾಡಿಗೆ ಒಪ್ಪಂದವು 12 ತಿಂಗಳಿಗಿಂತ ಕಡಿಮೆಯಿದ್ದರೆ, ಆ ಒಪ್ಪಂದವನ್ನು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ.

ಇದು ಮನೆ ಮಾಲೀಕರು ಹಾಗೂ ಬಾಡಿಗೆದಾರರು ಉಪ ನೋಂದಣಿ ಕಚೇರಿಗೆ ಭೇಟಿ ನೀಡುವುದು ಹಾಗೂ ನೋಂದಣಿ ಶುಲ್ಕವನ್ನು ಪಾವತಿಸುವುದನ್ನು ತಪ್ಪಿಸುತ್ತದೆ. ಹೀಗಾಗಿ, ಈ ರೀತಿಯ ನೋಂದಣಿ ಶುಲ್ಕ ಪಾವತಿಸುವುದನ್ನು ತಪ್ಪಿಸುವ ಕಾರಣಕ್ಕೆ 11 ತಿಂಗಳಿಗೆ ಸಾಮಾನ್ಯವಾಗಿ ಬಾಡಿಗೆ ಒಪ್ಪಂದ ಪತ್ರವನ್ನು ಮಾಡಿಕೊಳ್ಳಲಾಗುವುದು. ಇದಲ್ಲದೆ, ಬಾಡಿಗೆ ಅವಧಿಯು ಒಂದು ವರ್ಷಕ್ಕಿಂತ ಕಡಿಮೆಯಿದ್ದರೆ, ಬಾಡಿಗೆ ಒಪ್ಪಂದದ ನೋಂದಣಿಗೆ ಮುದ್ರಾಂಕ ಶುಲ್ಕ ಪಾವತಿಸಬೇಕಾಗಿಲ್ಲ. ಹೀಗಾಗಿ, ಮನೆ ಮಾಲೀಕರು ಹಾಗೂ ಬಾಡಿಗೆದಾರರು ಪರಸ್ಪರ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡದಿರಲು ನಿರ್ಧರಿಸುತ್ತಾರೆ.
ಬೇರೆ ಅವಧಿಗೆ ಅವಕಾಶವಿದೆಯೇ?
ಈ ನಡುವೆ 11 ತಿಂಗಳಿಗಿಂತ ಕಡಿಮೆ ಹಾಗೂ ಹೆಚ್ಚಿನ ಅವಧಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಒಂದುವೇಳೆ ಯಾವುದೇ ವ್ಯಕ್ತಿಗಳು ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡಲು ತೀರ್ಮಾನಿಸಿದರೆ, ಬಾಡಿಗೆ ಅವಧಿ ಹಾಗೂ ಬಾಡಿಗೆ ಮೊತ್ತ ಅಧರಿಸಿ ಮುದ್ರಾಂಕ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ಈ ಕಾರಣಕ್ಕೆ ಹೆಚ್ಚಿನ ಅವಧಿಗೆ ಒಪ್ಪಂದ ಪತ್ರ ಮಾಡಿಕೊಂಡರೆ ಬಾಡಿಗೆ ಮಾಡಿಕೊಳ್ಳುವವರು ಹೆಚ್ಚು ಮೊತ್ತ ಪಾವತಿಸಬೇಕು. ಆದರೆ 11 ತಿಂಗಳಿಗಿಂತ ಕಡಿಮೆ ಅವಧಿಯ ಒಪ್ಪಂದ ಮಾಡಿಕೊಳ್ಳುವುದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿರುವುದಿಲ್ಲ.
ನೋಂದಣಿ, ಮುದ್ರಾಂಕ ಶುಲ್ಕ ಪಾವತಿಸುವುದು ಸೇರಿದಂತೆ ನಾನಾ ರೀತಿ ವೆಚ್ಚ ಹಾಗೂ ಕಾನೂನು ಪಕ್ರಿಯೆಗಳನ್ನು ತಪ್ಪಿಸುವುದಕ್ಕೆ ಹೆಚ್ಚಿನ ಬಾಡಿಗೆ ಒಪ್ಪಂದಗಳನ್ನು 11 ತಿಂಗಳಿಗೆ ಮಾಡಿಕೊಳ್ಳಲಾಗುತ್ತದೆ. ಇದು ಮನೆ ಬಾಡಿಗೆ ಪಡೆಯುವವರು ಹಾಗೂ ಮನೆ ಮಾಲೀಕರಿಗೆ ಅನುಕೂಲಕರ ಮತ್ತು ಸುಲಭವಾದ ಆಯ್ಕೆಗೆ ಅವಕಾಶ ಕಲ್ಪಿಸುತ್ತದೆ.
ನೀವು ತಿಳಿದರಬೇಕಾದ ಮಾಹಿತಿ
ನೀವು ಮನೆಯನ್ನು ಬಾಡಿಗೆ ಪಡೆಯುವ ಮುನ್ನ ಕೆಲವು ಅಂಶಗಳನ್ನು ತಿಳಿದಿರಬೇಕಾಗುತ್ತದೆ. ಯಾವುದೇ ಬಾಡಿಗೆದಾರರು ಗುತ್ತಿಗೆ ಅಥವಾ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಒಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಮನೆ ಪರಿಶೀಲನೆ ಮಾತ್ರವಲ್ಲದೇ ವಿದ್ಯುತ್, ನೀರಿನ ಸಂಪರ್ಕಗಳು ಕಾರ್ಯ ನಿರ್ವಹಿಸುತ್ತಿವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಾಡಿಗೆ ಒಪ್ಪಂದಗಳಿಗೆ ನೀವು ಸಹಿ ಮಾಡುವ ಮುನ್ನ ಅದರಲ್ಲಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಭೂಮಾಲೀಕರ ವಿವರಗಳು - ಜಮೀನುದಾರನ ಮತ್ತು ಪ್ರತಿಯೊಬ್ಬ ಹಿಡುವಳಿದಾರನ ಹೆಸರು ಒಪ್ಪಂದದ ಮೇಲೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಭದ್ರತಾ ಮೊತ್ತವನ್ನು (ಮುಂಗಡಹಣ) ನಮೂದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ. ನವೀಕರಣ ನಿಯಮಗಳ ಷರತ್ತು, ದಿನಾಂಕ ಹಾಗೂ ಅಧಿಕಾರದ ಅವಧಿಯನ್ನು ಗಮನಿಸಿ. ಒಪ್ಪಂದವು ಬಾಡಿಗೆಯನ್ನು ಯಾವ ದಿನಾಂಕದಲ್ಲಿ ಪಾವತಿಸಬೇಕು ಎಂಬುದನ್ನು ಒಳಗೊಂಡಿದೆಯೆ? ಎಂಬುದನ್ನು ದೃಢಪಡಿಸಿಕೊಳ್ಳಿ ಏಕೆಂದರೆ ಇದು ನಿರ್ಣಾಯಕ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications