ಈಗ ನಾವು ಬಾಡಿಗೆಗೆ ಕೂತು, ಬಳಿಕ ಬಾಡಿಗೆಯನ್ನು ಪಾವತಿ ಮಾಡುವ (ಆರ್‌ಎನ್‌ಪಿಎಲ್) ಸೇವೆಯನ್ನು ಡಿಜಿಟಲ್ ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ ಆದ ಹೌಸಿಂಗ್.ಕಾಮ್ ಆರಂಭ ಮಾಡಿದೆ. ಬೆಂಗಳೂರು ಮೂಲದ ಹಣಕಾಸು ಸ್ಟಾರ್ಟ್‌ಅಪ್ ಸಂಸ್ಥೆಯಾದ ನೈರೋದೊಂದಿಗೆ ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ ಪಾರ್ಟ್‌ನರ್‌ಶಿಪ್ ಘೋಷಣೆ ಮಾಡಿದೆ. ಈ ಜಂಠಿ ಸಂಸ್ಥೆಯು ಗ್ರಾಹಕರಿಗೆ ಮಾರ್ಚ್ 1, 2023ರಿಂದ ಜಾರಿಗೆ ಬರುವಂತೆ ಹೊಸ ಪರಿಹಾರವನ್ನು ಜಾರಿ ಮಾಡಿದೆ.
ಬಳಕೆದಾರರು ಈಗ ಯಾವುದೇ ಶುಲ್ಕವಿಲ್ಲದೆ, 40 ದಿನಗಳ ಬಡ್ಡಿದರವಿಲ್ಲದ ಅವಧಿಯಯಲ್ಲಿ ಹೌಸಿಂಗ್.ಕಾಮ್‌ನಲ್ಲಿ ಬಾಡಿಗೆಯನ್ನು ಪಾವತಿ ಮಾಡಬಹುದಾಗಿದೆ. ಹಾಗೆಯೇ ಬಾಡಿಗೆ ಪಾವತಿಯನ್ನು ಇಎಂಐ ಆಗಿ ಪರಿವರ್ತನೆ ಮಾಡುವ ಆಯ್ಕೆಯೂ ಕೂಡಾ ಇದೆ. ಜಾರಿಗೊಳಿಸುವುದಕ್ಕೂ ಮೊದಲಿನ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಹಂತದಲ್ಲಿ 100,000 ಬಳಕೆದಾರರಿಗೆ ಈ ಆಯ್ಕೆ ನೀಡಲಾಗಿದೆ. ಮೊದಲ ಬಾಡಿಗೆ ಪಾವತಿ ಶುಲ್ಕ ಉಚಿತವಾಗಿದ್ದು, ಬಳಕೆದಾರರು 3 ಲಕ್ಷ ರೂಪಾಯಿವರೆಗೆ ಸಾಲದ ಮಿತಿ ಆಯ್ಕೆ ಮಾಡಿಕೊಳ್ಳಬಹುದು.

ಈ ಸಾಲದಿಂದಾಗಿ ಹಲವಾರು ಪ್ರಯೋಜನಗಳು ನಮಗೆ ಇದೆ. ಇಲ್ಲಿ ಸಾಲವನ್ನು ಪಡೆದು ನಾವು ಬಾಡಿಗೆಯನ್ನು ಪಾವತಿ ಮಾಡಬಹುದು. ಆ ಬಳಿಕ ಇಎಂಐ ರೂಪದಲ್ಲಿ ಬಾಡಿಗೆ ಮರುಪಾವತಿ ಮಾಡಿಕೊಳ್ಳಬಹುದಾಗಿದೆ. ಇದಲ್ಲಿ ಬಡ್ಡಿದರವಿಲ್ಲದ ಸಾಲದ ಅವಧಿ ಕೂಡಾ ಇರುತ್ತದೆ. ಹಾಗೆಯೇ ಯಾವುದೇ ಶುಲ್ಕವಿಲ್ಲದೆ ಅವಧಿ ಕೂಡಾ ಇರುತ್ತದೆ. 40 ದಿನಗಳ ಬಡ್ಡಿದರವಿಲ್ಲದ ಅವಧಿ ಲಭ್ಯವಿದೆ. ಬಾಡಿಗೆಯನ್ನು ನೀವು ಇಎಂಐಗೆ ಬದಲಾವಣೆ ಮಾಡಿಕೊಂಡರೆ ಬಾಡಿಗೆ ಹೊರೆಯು ಕಡಿಮೆಯಾಗಲಿದೆ.
ಸಾಲದ ಮಿತಿ ಎಷ್ಟಿದೆ ಎಂದು ತಿಳಿಯೋಣ
ಸುಮಾರು 3 ಲಕ್ಷ ರೂಪಾಯಿವರೆಗೂ ಕ್ರೆಡಿಟ್ ಮಿತಿಯಿದೆ. ವಿವಿಧ ಉದ್ದೇಶಗಳಿಗಾಗಿ ನಗದು ವಿತ್‌ಡ್ರಾ ಮಾಡಲು, ಕಡಿಮೆ ಬಡ್ಡಿದರದಲ್ಲಿ ಶೀಘ್ರ ಸಾಲವನ್ನು ಪಡೆಯಲು ಸಾಧ್ಯವಿದೆ. ಮಾರ್ಚ್ 1, 2023 ರಂದು ಡಿಜಿಟಲ್ ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್‌ನಿಂದ ಬಿಡುಗಡೆಯಾದ ಮಾಹಿತಿ ಪ್ರಕಾರ, ಶೇಕಡ 4ರಷ್ಟು ಮಂದಿ ಭಾರತೀಯರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಈಗ ಬಾಡಿಗೆಯಲ್ಲಿ ಕೂತು ಮತ್ತೆ ಹಣವನ್ನು ಪಾವತಿಸುವ ವ್ಯವಸ್ಥೆ ಇದಾಗಿದೆ.


Click it and Unblock the Notifications