ಅಚ್ಚರಿಯ ಮಾಧ್ಯಮಗೋಷ್ಠಿಯನ್ನು ನಡೆಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ರೆಪೋ ದರವನ್ನು ಹೆಚ್ಚಳ ಮಾಡಿ ಘೋಷಣೆ ಮಾಡಿದ್ದಾರೆ. ಪ್ರಕಟಣೆಯ ಪ್ರಕಾರ, ಆರ್‌ಬಿಐ ರೆಪೋ ದರವನ್ನು 40 ಬಿಪಿಎಸ್‌ನಿಂದ ಶೇಕಡ 4.40ಕ್ಕೆ ಏರಿಕೆ ಮಾಡಲಾಗಿದೆ. ಕೊನೆಯ ಬಾರಿಗೆ ರೆಪೋ ದರವನ್ನು ಮೇ 2020 ರಲ್ಲಿ ಇಳಿಕೆ ಮಾಡಲಾಗಿತ್ತು. ಅಂದಿನಿಂದ ಬದಲಾಗದೆ ಇರಿಸಲಾಗಿತ್ತು. ಆದರೆ ಇಂದು ಏರಿಕೆ ಮಾಡಲಾಗಿದೆ.
ನಗದು ಮೀಸಲು ಅನುಪಾತವನ್ನು (CRR) 50 bps ಹೆಚ್ಚಿಸಲಾಗಿದೆ, ಇದು ಬಡ್ಡಿದರಗಳ ಮೇಲೆ ಮತ್ತಷ್ಟು ಒತ್ತಡವನ್ನು ಉಂಟುಮಾಡುತ್ತದೆ. ಸಾಲಗಾರರು ಹೆಚ್ಚುತ್ತಿರುವ ಇಎಂಐ ಹೊರೆಗೆ ಸಿದ್ದರಾಗಬೇಕಾಗಿದೆ. ಇನ್ನು ಎಫ್‌ಡಿ ಹೂಡಿಕೆದಾರರು ಹೊಸ ಎಫ್‌ಡಿಗಳ ಮೇಲೆ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು.
ಇದು ಬಡ್ಡಿದರ ಏರಿಕೆಯ ಆರಂಭವಾಗಿರಬಹುದು ಎಂದು ಸೂಚಿಸುವ ಹಲವು ಸಂಕೇತಗಳಿವೆ. ಜಾಗತಿಕ ಸೂಚಕಗಳ ಪ್ರಕಾರ, ಯುಎಸ್‌ನಲ್ಲಿನ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ 40 ವರ್ಷದಿಂದ ಶೇಕಡ 8.5ಕ್ಕೆ ಏರಿದೆ. ಮಾರ್ಚ್ 2022 ಕ್ಕೆ ಗ್ರಾಹಕ ಬೆಲೆ ಸೂಚ್ಯಂಕದಿಂದ ಅಳೆಯಲಾದ ಭಾರತದಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 6.95ಕ್ಕೆ ಏರಿಕೆ ಆಗಿದೆ. ಚಿಲ್ಲದರೆ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರ್‌ಬಿಐ ಈ ಕ್ರಮವನ್ನು ಕೈಗೊಂಡಿದೆ. ರೆಪೋ ದರ ಏರಿಕೆಯಿಂದಾಗಿ ಯಾವೆಲ್ಲಾ ವಲಯಕ್ಕೆ ಏನು ಪ್ರಭಾವ ಬೀರಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಅಲ್ಪಾವಧಿ ಠೇವಣಿ ದರಗಳು ಹೆಚ್ಚಳ ಸಾಧ್ಯತೆ
ಬಡ್ಡಿದರವು ಈಗ ಯೂಟರ್ನ್ ಹೊಡೆಯಲಿದ್ದು, ಏರಿಕೆ ಕಾಣಲಿದೆ. ಇದು ಸಾಮಾನ್ಯವಾಗಿ ಕಡಿಮೆ ಮತ್ತು ಮಧ್ಯಮ ಅವಧಿಯ ಠೇವಣಿಯ ಮೇಲೆ ಪ್ರಭಾವ ಬೀಳಲಿದೆ. ಕಡಿಮೆ ಮತ್ತು ಮಧ್ಯಮ ಅವಧಿಯ ಠೇವಣಿಯ ಬಡ್ಡಿದರ ಹೆಚ್ಚಾಗುವ ನಿರೀಕ್ಷೆ ಇದೆ. ದೀರ್ಘಾವಧಿಯ ಠೇವಣಿಯಲ್ಲಿ ಈ ದರಗಳು ಗಣನೀಯವಾಗಿ ಏರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಕಡಿಮೆ ಅವಧಿಯ ಎಫ್‌ಡಿ ಉತ್ತಮ
ನೀವು ರೆಪೋ ದರ ಏರಿಕೆ ಬಳಿಕ ಎಫ್‌ಡಿಯನ್ನು ಮಾಡಲು ಯೋಚನೆ ಮಾಡುತ್ತಿದ್ದರೆ ಅಥವಾ ಅಸ್ತಿತ್ವದಲ್ಲಿರುವ ಎಫ್‌ಡಿಯನ್ನು ನವೀಕರಿಸಲು ನಿರ್ಧಾರ ಮಾಡಿದರೆ, ಕಡಿಮೆ ಅವಧಿಯ ಎಫ್‌ಡಿಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮವಾಗಿದೆ. ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಎಫ್‌ಡಿ ಉತ್ತಮ ಆಯ್ಕೆಯಾಗಿದೆ. ಇದರಿಂದಾಗಿ ನಿಮ್ಮ ಠೇವಣಿ ಹೆಚ್ಚು ಕಾಲ ಲಾಕ್ ಆಗಿರದೆ, ನಿಮಗೆ ಎಫ್‌ಡಿಯಲ್ಲಿ ಅಧಿಕ ಬಡ್ಡಿದರವೇ ಲಭ್ಯವಾಗಲಿದೆ. ನಿಮ್ಮ ಎಫ್‌ಡಿ ಅವಧಿ ಪೂರ್ಣವಾಗುವ ಸಂದರ್ಭದಲ್ಲಿ ರೆಪೋ ದರ ಮತ್ತೆ ಏರಿಕೆಯಾದರೆ ನೀವು ಆಗ ಎಫ್‌ಡಿ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಬಹುದು.
ಇಎಂಐಗಳ ಮೇಲೆ ಏನು ಪ್ರಭಾವ ಬೀರಳಿದೆ?
ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಶೀಘ್ರದಲ್ಲೇ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸುತ್ತವೆ. ಇದರಿಂದಾಗಿ ಇಎಂಐ ದರಗಳು ಕೂಡಾ ಹೆಚ್ಚಳವಾಗಲಿದೆ. ರೆಪೋ ದರವು ಹೆಚ್ಚಳವಾಗಿರುವ ಇಎಂಐ ಪಾವತಿ ಮಾಡುತ್ತಿರುವವರ ಮೇಲೆ ಪ್ರಭಾವ ಬೀರಲಿದೆ. ಉದಾಹರಣೆಗೆ ನೀವು 30,00,000 ಸಾಲವನ್ನು ಪಡೆದಿದ್ದೀರಿ ಎಂದು ಭಾವಿಸಿಕೊಳ್ಳಿ. ಅದರ ಅವಧಿ ಇಪ್ಪತ್ತು ವರ್ಷ ಎಂದಾದರೆ ನೀವು ಈಗಿನ ಬಡ್ಡಿದರದ ಪ್ರಕಾರ ಪ್ರತಿ ತಿಂಗಳು 22,900 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಈಗಿನ ಬಡ್ಡಿದರ ಶೇಕಡ 6.8 ಆಗಿದೆ. ಆದರೆ ಹೊಸ ಬಡ್ಡಿದರ ಅಂದರೆ 7.2 ಆದರೆ, ಪ್ರತಿ ತಿಂಗಳು 23,620 ಇಎಂಐ ಪಾವತಿ ಮಾಡಬೇಕಾಗುತ್ತದೆ. ಅಂದರೆ 720 ರೂಪಾಯಿ ಅಧಿಕ ನೀವು ಪಾವತಿ ಮಾಡಬೇಕಾಗುತ್ತದೆ.
ಈಗಾಗಲೇ ಸಾಲ ಪಡೆದಿರುವವರ ಮೇಲೆ ಏನು ಪ್ರಭಾವ?
ನೀವು ಪ್ರಸ್ತುತ ಸಾಲವನ್ನು ಪಡೆದಿದ್ದರೆ, ಬಡ್ಡಿದರ ಹೆಚ್ಚಳವು ನಿಮ್ಮ ಸಾಲದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಮ್ಮ ಅಸ್ತಿತ್ವದಲ್ಲಿರುವ ಇಎಂಐ ಮುಂದುವರಿಯಬಹುದು. ಆದರೆ ಗೃಹ ಸಾಲ ಪಡೆದವರಿಗೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರುತ್ತಾರೆ. ಏಕೆಂದರೆ ಹೆಚ್ಚಿನ ಗೃಹ ಸಾಲದ ಬಡ್ಡಿದರವು ಸ್ಥಿರವಾಗಿರುವುದಿಲ್ಲ. ಬಡ್ಡಿದರ ಬದಲಾವಣೆ ಆದಂತೆ ಇಎಂಐ ಕೂಡಾ ಬದಲಾವಣೆ ಆಗಲಿದೆ. ಹಾಗೆಯೇ ಇದೇ ರೀತಿ ಆಟೋ ಖರೀದಿಗಾಗಿ ಸಾಲ ಪಡೆದವರು, ಚಿನ್ನದ ಸಾಲ ಪಡೆದವರು ಇನ್ನು ಮುಂದೆ ಅಧಿಕ ಬಡ್ಡಿಯನ್ನು ಪಾವತಿ ಮಾಡಬೇಕಾಗಬಹುದು.
ಹೊಸ ಸಾಲಗಾರರು ಹೇಗೆ ಪ್ರಭಾವಿತರಾಗುತ್ತಾರೆ?
ನೀವು ಸಾಲವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ನೀವು ಶೀಘ್ರದಲ್ಲೇ ಸಾಲವನ್ನು ಪಡೆಯುವುದು ಉತ್ತಮ. ಏಕೆಂದರೆ ಸಾಲದ ಮೇಲಿನ ಬಡ್ಡಿ ದರವು ಶೀಘ್ರದಲ್ಲೇ ಹೆಚ್ಚಾಗಬಹುದು. ನೀವು ಸಾಲವನ್ನು ಪಡೆಯುವಾಗ, ಆ ಸಾಲದಲ್ಲಿ ಈಗಿನ ಬಡ್ಡಿದರ ಅನ್ವಯವಾದರೆ ನಿಮಗೆ ಕಡಿಮೆ ಬಡ್ಡಿದರ ಬೀಳಲಿದೆ. ಆದರೆ ನೂತನ ಬಡ್ಡಿದರ ಅನ್ವಯವಾದರೆ ಹೆಚ್ಚು ಬಡ್ಡಿದರ ನೀವು ಪಾವತಿ ಮಾಡಬೇಕಾಗುತ್ತದೆ. ಇದು ಕಾರು ಹಾಗೂ ವೈಯಕ್ತಿಕ ಸಾಲದ ಮೇಲೆ ಹೆಚ್ಚು ಪ್ರಭಾವವಾಗುವುದಿಲ್ಲ. ಏಕೆಂದರೆ ಈ ಸಾಲದ ಪೂರ್ಣ ಅವಧಿಯು ಒಂದೇ ಇಎಂಐ ಅನ್ನು ಹೊಂದಿರುತ್ತದೆ.
More From GoodReturns

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

LPG Cylinder Shortage Live Updates: ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ಪಿಎಂ ಮೋದಿ ಮಹತ್ವದ ಸಭೆ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Natural Gas Supply: ದೇಶದಲ್ಲಿ ಅನಿಲ ಕೊರತೆ..ಹೊಸ ಆದೇಶದ ಪ್ರಕಾರ ಯಾರಿಗೆ ಮೊದಲ ಆದ್ಯತೆ ಎಂದು ತಿಳಿಯಿರಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Biggest Airport: ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಸಂಚಾರಕ್ಕೆ ಸಿದ್ಧ; 45 ದಿನದೊಳಗೆ ಆರಂಭ

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ



Click it and Unblock the Notifications