ಬಿಡುಗಡೆಯಾದ ಕೆಲವೇ ತಿಂಗಳ ನಂತರ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆಲೆ ಏರಿಕೆಯನ್ನು ಘೋಷಿಸಿದೆ. ಬೆಲೆ ಏರಿಕೆಯು 14,000 ರಿಂದ 16,000 ರೂಪಾಯಿಗಳ ನಡುವೆ ಇದೆ. ಮೋಟಾರ್‌ಸೈಕಲ್‌ನ ಎಲ್ಲಾ ವೇರಿಯೆಂಟ್‌ಗಳಿಗೆ ಇದು ಅನ್ವಯವಾಗುತ್ತದೆ.
ಹಿಮಾಲಯನ್‌ನ ಬೆಲೆ 2.69 ಲಕ್ಷ ರೂಪಾಯಿ ಆಗಿದ್ದು, ನವೆಂಬರ್‌ನಲ್ಲಿ ಈ ಬೆಲೆಯನ್ನು ಘೋಷಣೆ ಮಾಡಲಾಗಿದೆ. ನಾವು 2024 ಕ್ಕೆ ಬರುತ್ತಿದ್ದಂತೆ, ಈ ಹಿಂದಿನ ಬೆಲೆಯು ಕೊನೆಯಾಗಲಿದ್ದು, ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಹೊಸ ಹಿಮಾಲಯನ್ ಬಣ್ಣಕ್ಕೆ ಅನುಗುಣವಾಗಿ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಬೆಲೆ ಏರಿಕೆಯ ನಂತರ ಅತ್ಯಂತ ಕೈಗೆಟುಕುವ ವೆರಿಯೆಂಟ್ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಕಾಜಾ ಬ್ರೌನ್ ಆಗಿದೆ. ಇದರ ಶೋರೂಮ್ ಬೆಲೆಯು 2.85 ಲಕ್ಷ ರೂಪಾಯಿ ಆಗಿದೆ.
ಈ ಹಿಂದಿನ ಬೆಲೆ ಎಷ್ಟಿದೆ?
ಕಾಜಾ ಬ್ರೌನ್: 2,69,000 ರೂಪಾಯಿ
ಸ್ಲೇಟ್ ಹಿಮಾಲಯನ್ ಸಾಲ್ಟ್ / ಸ್ಲೇಟ್ ಹಿಮಾಲಯನ್ ಪಾಪಿ: 2,74,000 ರೂಪಾಯಿ
ಕಾಮೆಟ್ ವೈಟ್: 2,79,000 ರೂಪಾಯಿ
ಹ್ಯಾನ್ಲೆ ಬ್ಲ್ಯಾಕ್: 2,84,000 ರೂಪಾಯಿ
ನೂತನ ಬೆಲೆ ಎಷ್ಟಿದೆ ತಿಳಿಯಿರಿ
ಕಾಜಾ ಬ್ರೌನ್: 2,85,000 ರೂಪಾಯಿ
ಸ್ಲೇಟ್ ಹಿಮಾಲಯನ್ ಸಾಲ್ಟ್ / ಸ್ಲೇಟ್ ಹಿಮಾಲಯನ್ ಪಾಪಿ: 2,89,000 ರೂಪಾಯಿ
ಕಾಮೆಟ್ ವೈಟ್: 2,93,000 ರೂಪಾಯಿ
ಹ್ಯಾನ್ಲೆ ಬ್ಲ್ಯಾಕ್: 2,98,000 ರೂಪಾಯಿ
ಎಷ್ಟು ಬೆಲೆ ಏರಿಕೆ ತಿಳಿಯಿರಿ
ಕಾಜಾ ಬ್ರೌನ್: 16,000 ರೂಪಾಯಿ
ಸ್ಲೇಟ್ ಹಿಮಾಲಯನ ಸಾಲ್ಟ್ / ಸ್ಲೇಟ್ ಹಿಮಾಲಯನ್ ಪಾಪಿ: 15,000 ರೂಪಾಯಿ
ಕಾಮೆಟ್ ವೈಟ್: 14,000 ರೂಪಾಯಿ
ಹ್ಯಾನ್ಲೆ ಬ್ಲ್ಯಾಕ್: 14,000 ರೂಪಾಯಿ
ಬೆಲೆಯಲ್ಲಿ ಹೆಚ್ಚಳದೊಂದಿಗೆ, ಹಿಮಾಲಯನ್ ಬೆಲೆಯು ಟ್ರಯಂಫ್ ಸ್ಕ್ರ್ಯಾಂಬ್ಲರ್ 400X ಗಿಂತ ಹೆಚ್ಚು ದುಬಾರಿಯಾಗಿದೆ. ಆದರೆ ನಾವು ಫೀಚರ್‌ಗಳ ಲೆಕ್ಕಾಚಾರದಲ್ಲಿ ನೋಡಿದಾಗ ಹಿಮಾಲಯನ್ ಹೆಚ್ಚು ಉತ್ತಮ ಅನಿಸುತ್ತದೆ.
ಬೆಲೆ ಏರಿಕೆಯ ಹೊರತಾಗಿಯೂ ಹಿಮಾಲಯನ್ ತನ್ನ ಪ್ರಾಥಮಿಕ ಪ್ರತಿಸ್ಪರ್ಧಿ ಕೆಟಿಎಂ 390 ಅಡ್ವೆಂಚರ್‌ನ ಬೆಲೆಗಿಂತ ಭಾರೀ ಪ್ರಮಾಣದಲ್ಲಿ ಕಡಿಮೆ ಬೆಲೆಯನ್ನು ಹೊಂದಿದೆ. ಇನ್ನು ಎರಡನೆಯದಾಗಿ ಇದು ಅತೀ ವೇಗದ ಮೋಟಾರ್‌ಸೈಕಲ್ ಆಗಿದೆ.


Click it and Unblock the Notifications