ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೆಪ್ಟೆಂಬರ್ 30 ರಂದು 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡುವ ಗಡುವನ್ನು ವಿಸ್ತರಣೆ ಮಾಡಿದೆ. ಈ ನೋಟುಗಳನ್ನು ಬದಲಾವಣೆ ಮಾಡಲು ಅಕ್ಟೋಬರ್ 7 (ಶನಿವಾರ- ಇಂದು) ವರೆಗೆ ಆರ್‌ಬಿಐ ಅವಕಾಶ ನೀಡಿದೆ.
ನೀವು 2000 ರೂಪಾಯಿ ನೋಟುಗಳನ್ನು ಡೆಪಾಸಿಟ್ ಮಾಡಲು ಅಥವಾ ಬದಲಾವಣೆ ಮಾಡಲು ಇಂದೇ ಕೊನೆಯ ಅವಕಾಶವಾಗಿದೆ. 2000 ರೂಪಾಯಿಗಳ ನೋಟುಗಳ ಬದಲಾವಣೆಗೆ ಈ ಹಿಂದೆ ಅವಧಿ ವಿಸ್ತರಣೆ ಮಾಡಲಾಗಿದ್ದು, ಈಗ ಮತ್ತೆ ಅವಧಿ ವಿಸ್ತರಣೆ ಮಾಡಲಾಗುತ್ತಾ ಕಾದುನೋಡಬೇಕಾಗಿದೆ. ಇಲ್ಲಿದೆ ವಿವರ. ಮುಂದೆ ಓದಿ...

ಅಕ್ಟೋಬರ್ 7 ಕೊನೆಯ ದಿನಾಂಕ
ಅಕ್ಟೋಬರ್ 7 ರ ನಂತರವೂ 2,000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ" ಎಂದು ಆರ್‌ಬಿಐ ಹೇಳಿದೆ. ಆದರೆ "ಯಾವುದೇ ವಿಳಂಬವಿಲ್ಲದೆ" ನೋಟುಗಳನ್ನು ಡೆಪಾಸಿಟ್ ಮಾಡಲು ಮತ್ತು ವಿನಿಮಯ ಮಾಡಲು ಆರ್‌ಬಿಐ ಹೇಳಿದೆ.
ಅಕ್ಟೋಬರ್ 8 ರಿಂದ, ನೀವು 2000 ರೂಪಾಯಿ ನೋಟುಗಳನ್ನು ಬ್ಯಾಂಕ್ ಶಾಖೆಗಳಲ್ಲಿ ಡೆಪಾಸಿಟ್ ಮಾಡಲು, ವಿನಿಮಯ ಮಾಡಲು ಸಾಧ್ಯವಾಗುವುದಿಲ್ಲ. ಜನರು ಇನ್ನು ಮುಂದೆ ತಮ್ಮಲ್ಲಿ 2000 ರೂಪಾಯಿ ನೋಟುಗಳು ಇದ್ದರೆ, ಅದನ್ನು ಆರ್‌ಬಿಐನ 19 ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ.
ನೋಟುಗಳ ಬದಲಾವಣೆಗಾಗಿ ಪ್ರತಿ ವಹಿವಾಟಿಗೆ 20 ಸಾವಿರ ರೂಪಾಯಿ ಮಿತಿಯನ್ನು ವಿಧಿಸಲಾಗಿದೆ. ಅದಕ್ಕಿಂತ ಅಧಿಕ ಮೊತ್ತವನ್ನು ಒಂದೇ ಬಾರಿಗೆ ಬದಲಾವಣೆ ಮಾಡಲು ಅವಕಾಶವಿಲ್ಲ. ದೇಶದಲ್ಲಿ ಜನರು 2000 ರೂಪಾಯಿ ನೋಟುಗಳನ್ನು ಇಂಡಿಯಾ ಪೋಸ್ಟ್ ಮೂಲಕವೂ ಜಮೆ ಮಾಡಬಹುದು.
ನ್ಯಾಯಾಲಯಗಳು, ಸರ್ಕಾರಿ ಇಲಾಖೆಗಳು ಅಥವಾ ತನಿಖಾ ಪ್ರಕ್ರಿಯೆಗಳು ಅಥವಾ ಜಾರಿಯಲ್ಲಿ ತೊಡಗಿರುವ ಯಾವುದೇ ಸಾರ್ವಜನಿಕ ಪ್ರಾಧಿಕಾರವು ಯಾವುದೇ ಮಿತಿಯಿಲ್ಲದೆ ಯಾವುದೇ ಆರ್‌ಬಿಐ ಕಚೇರಿಗಳಲ್ಲಿ 2,000 ರೂಪಾಯಿ ನೋಟುಗಳನ್ನು ಡೆಪಾಸಿಟ್ ಮಾಡಬಹುದು/ ವಿನಿಮಯ ಮಾಡಬಹುದು ಎಂದು ಆರ್‌ಬಿಐ ಹೇಳಿದೆ.
ಶೇಕಡ 100 ರಷ್ಟು 2000 ರೂಪಾಯಿ ನೋಟುಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ಈಗ ಈ ನೋಟುಗಳ ಬದಲಾವಣೆಗೆ ಇನ್ನಷ್ಟು ಸಮಯವನ್ನು ನೀಡಲು ಈ ಹಿಂದೆ ಮುಂದಾಗಿದೆ. ಇನ್ನು ಈವರೆಗೆ ಚಲಾವಣೆಯಿಂದ ತೆಗೆದುಹಾಕಲಾದ ಒಟ್ಟು 2,000 ರೂಪಾಯಿ ಮೌಲ್ಯದ ನೋಟುಗಳಲ್ಲಿ ಶೇಕಡ 93 ರಷ್ಟು ನೋಟುಗಳನ್ನು ಬ್ಯಾಂಕ್‌ಗೆ ವಾಪಾಸ್ ನೀಡಲಾಗಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ 3.43 ಲಕ್ಷ ಕೋಟಿ ರೂಪಾಯಿಯ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗೆ ವಾಪಾಸ್ ನೀಡಲಾಗಿದೆ. ಅಕ್ಟೋಬರ್ 8 ರಿಂದ 19 ಆರ್‌ಬಿಐ ಕಚೇರಿಗಳಲ್ಲಿ ಉಳಿದ ನೋಟುಗಳನ್ನು ಬದಲಾವಣೆ ಮಾಡುವ ನಿರೀಕ್ಷೆಯಿದೆ.
ಶೇಕಡ 87 ರಷ್ಟು ನೋಟುಗಳನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ಉಳಿದವುಗಳನ್ನು ವಿನಿಮಯ ಮಾಡಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು. ಪ್ರಸ್ತುತ, 12,000 ಕೋಟಿ ರೂಪಾಯಿಗೂ ಹೆಚ್ಚು ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ದಾಸ್ ಹೇಳಿದರು.


Click it and Unblock the Notifications