ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶದಾದ್ಯಂತ ಕೋಟ್ಯಾಂತರ ಜನರಿಗೆ ಸೇವೆಯನ್ನು ನೀಡುತ್ತದೆ. ಗ್ರಾಮೀಣ ಹಾಗೂ ನಗರದ ಜನರು ಬ್ಯಾಂಕ್ ವಿಚಾರಕ್ಕೆ ಬಂದಾಗ ಎಸ್‌ಬಿಐ ಅನ್ನು ಆಯ್ಕೆ ಮಾಡುತ್ತಾರೆ. ಸಮಯ ಬದಲಾವಣೆಯಾಗುತ್ತಾ ಹೋದಂತೆ ಎಸ್‌ಬಿಐ ಬ್ರಾಂಚ್ ವಿಸ್ತಾರವಾಗುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕ್ ದೇಶದ ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನಸಂಖ್ಯೆಗೆ ಹೆಚ್ಚಾಗಿ ಸೇವೆಯನ್ನು ನೀಡುತ್ತದೆ. ಆದರೆ ನಿಮ್ಮ ಖಾತೆಯಲ್ಲಿ 295 ರೂಪಾಯಿ ಕಡಿತವಾಗಿದೆಯೇ?
ಹೌದು, ಅನೇಕ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ತಮ್ಮ ಉಳಿತಾಯ ಖಾತೆಯಿಂದ 295 ರೂಪಾಯಿಗಳನ್ನು ಕಡಿತಗೊಳಿಸಿದ್ದಾರೆ. ಆದರೆ ಆ ಮೊತ್ತವು ಮತ್ತೆ ಗ್ರಾಹಕರ ಖಾತೆಗೆ ಜಮೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ನೀವೂ ಸಹ ನಿಮ್ಮ ಪಾಸ್‌ಬುಕ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಇದನ್ನು ಗಮನಿಸಿರಬಹುದು. ಆದರೆ ನೀವು ಚಿಂತಿಸಬೇಕಾಗಿಲ್ಲ, ಯಾಕೆಂದರೆ ಇದನ್ನು ಹೇಗೆ ತಪ್ಪಿಸುವುದು ಮತ್ತು ಕಾರಣವೇನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ....

ಖಾತೆಯಿಂದ ಮೊತ್ತ ಕಡಿತವಾಗಲು ಕಾರಣ?
ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (ಎನ್‌ಎಸಿಎಚ್) (NACH) ಕಾರಣದಿಂದಾಗಿ ನಿಮ್ಮ ಖಾತೆಯಿಂದ ಹಣವು ಕಡಿತವಾಗಲಿದೆ. ಖಾತೆಯಿಂದ ಇಎಂಐನ ಆಟೋ ಪಾವತಿಗಾಗಿ ನಾಚ್ ಬಳಸಲಾಗುತ್ತದೆ. ಆದ್ದರಿಂದ ನೀವು ಇಎಂಐ ಮೂಲಕ ಖರೀದಿ ಮಾಡುವಾಗ, ಸಾಲ ಪಡೆಯುವಾಗ ನಿಮ್ಮ ಖಾತೆಯಿಂದ ಮೊತ್ತವನ್ನು ಕಡಿತ ಮಾಡಲಾಗುತ್ತದೆ. ಅದು ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ಇರಲಿ ಎಂಬ ನಿಟ್ಟಿನಲ್ಲಿ ಕಡಿತ ಮಾಡಲಾಗುತ್ತದೆ.
ಉದಾಹರಣೆಗೆ ಪ್ರತಿ ತಿಂಗಳ 5ನೇ ತಾರೀಖು ನಿಮ್ಮ ಖಾತೆಯಿಂದ ಇಎಂಐ ಕಡಿತವಾಗುವುದಾದರೆ, ಈ ಕನಿಷ್ಠ ಮೊತ್ತವು 4ನೇ ತಾರೀಖಿನಲ್ಲೇ ಕಡಿತವಾಗಲಿದೆ. ಎಸ್‌ಐ ಅಥವಾ ನಾಚ್ ವೈಫಲ್ಯವಾದಾಗ 295 ರೂಪಾಯಿ ಡೆಬಿಟ್ ಆಗಲಿದೆ. ಎಸ್‌ಬಿಐ ಹೊರತಾಗಿ ಬೇರೆ ಬ್ಯಾಂಕ್‌ಗಳಲ್ಲಿ ಸಾಲ ಅಥವಾ ಆರ್‌ಡಿಯನ್ನು ನೀವು ಹೊಂದಿದ್ದರೆ, ಅದರಿಂದ ನಿಗದಿತವಾಗಿ ಇಎಂಐ ಅಥವಾ ಫಿಕ್ಸಿಡ್ ಡೆಪಾಸಿಟ್ ಮೊತ್ತವು ಕಡಿತವಾಗಲಿದೆ.
ಒಂದು ವೇಳೆ ಇಎಂಐ/ಮ್ಯಾಂಡೇಟ್ ಡೆಬಿಟ್ ಆಗದಿದ್ದಲ್ಲಿ/ನೇರವಾಗಿ ಡೆಬಿಟ್ ಆಗಿದಿದ್ದರೆ, ನಿಮ್ಮ ಖಾತೆಗೆ 295 ರೂಪಾಯಿ ದಂಡವನ್ನು ಜಾರಿಗೊಳಿಸಲಾಗುತ್ತದೆ. ಕೆಲವೊಮ್ಮೆ ಬ್ಯಾಂಕ್ ತಿಂಗಳ ಆಧಾರದಲ್ಲಿ ದಂಡವನ್ನು ನಿಗದಿ ಮಾಡುವುದಿಲ್ಲ. ಬದಲಾಗಿ ಕೆಲವು ಕೆಲವು ತಿಂಗಳುಗಳವರೆಗೆ ದಂಡವನ್ನು ಸಂಗ್ರಹ ಮಾಡುತ್ತದೆ. ನಂತರ ಸಂಪೂರ್ಣವಾಗಿ ಡೆಬಿಟ್ ಮಾಡುತ್ತದೆ. ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲವಾದರೆ, ಬ್ಯಾಂಕ್ ರೂ 250 ದಂಡವನ್ನು ವಿಧಿಸುತ್ತದೆ. ಈ ಪೆನಾಲ್ಟಿಯು ಶೇಕಡ 18ರಷ್ಟು ಜಿಎಸ್‌ಟಿಯನ್ನು ನೀಡುತ್ತದೆ. ಆದ್ದರಿಂದ, 250 ರೂಪಾಯಿಯಲ್ಲಿ 45 ರೂಪಾಯಿ ಶೇಕಡ 18ರಷ್ಟು ಜಿಎಸ್‌ಟಿ ಇರುತ್ತದೆ. ರೂ 250 + ರೂ 45 = ರೂ 295 ಆಗಿರುತ್ತದೆ.


Click it and Unblock the Notifications