ಬ್ಯಾಂಕ್ ಖಾತೆಯಲ್ಲಿ ದಿಢೀರನೇ ನಮಗೆ ಕಾರಣ ತಿಳಿಯದೆಯೇ ಅಧಿಕ ಮೊತ್ತ ವಿತ್‌ಡ್ರಾ ಆದರೆ ಆತಂಕ, ಕೋಪ ಬರುವುದಿಲ್ಲವೇ?. ಇತ್ತೀಚೆಗೆ ಈ ರೀತಿ ನಿಮ್ಮ ಖಾತೆಯಿಂದ ಮೊತ್ತ ಕಡಿತವಾಗಿದೆಯೇ?.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) 295 ರೂಪಾಯಿ ಕಡಿತವಾಗಿದೆ. ನ್ಯಾಷನಲ್ ಆಟೋಮೇಟೆಡ್ ಕ್ಲಿಯರಿಂಗ್ ಹೌಸ್ (ಎನ್‌ಎಸಿಎಚ್) (NACH) ಕಾರಣದಿಂದಾಗಿ ಮೊತ್ತ ಕಡಿತವಾಗಿದೆ. ಆದರೆ 436 ರೂಪಾಯಿ ಕಡಿತವಾಗಿದೆಯೇ?
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು 2015ರಂದು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷ ಭಿಮಾ ಯೋಜನೆ (ಪಿಎಂಎಸ್‌ಬಿವೈ) ಅನ್ನು ಜಾರಿ ಮಾಡಿದೆ. ಇದು ಸರ್ಕಾರದ ವಿಮಾ ಸುರಕ್ಷತಾ ಯೋಜನೆಯಾಗಿದೆ. ಎಸ್‌ಬಿಐ, ಅಂಚೆ ಕಚೇರಿ ಅಥವಾ ಬೇರೆ ಯಾವುದೇ ಬ್ಯಾಂಕ್ ಖಾತೆಯಲ್ಲಿ ಆಟೋ ಡೆಬಿಟ್ ಆಯ್ಕೆ ಮಾಡಿದ್ದರೆ, ನಿಮ್ಮ ಖಾತೆಯಿಂದ ಮೊತ್ತವು ಕಡಿತವಾಗುತ್ತದೆ.

18 ವರ್ಷದಿಂದ 50 ವರ್ಷದವರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿಯಲ್ಲಿ ಆಟೋ ಡೆಬಿಟ್ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಪ್ರಮುಖ ಕೆವೈಸಿ ಫಾರ್ಮ್ ಆಗಿ ಪರಿಗಣಿಸಲಾಗುತ್ತದೆ. ಹಾಗೆಯೇ ಜೂನ್‌ನಿಂದ 1ರಿಂದ ಮೇ 31ರವರೆಗಿನ 12 ತಿಂಗಳ ಅವಧಿಯ 2 ಲಕ್ಷ ರೂಪಾಯಿ ಮೊತ್ತದ ಜೀವ ವಿಮಾ ಪಾಲಿಸಿಯನ್ನು ರಿನಿವಲ್ ಮಾಡುವ ಅವಕಾಶವಿದೆ.
ವಾರ್ಷಿಕ ವಿಮೆಯಾಗಿ 436 ರೂಪಾಯಿ ಕಡಿತ
ಈ ವಿಮೆಯಲ್ಲಿ 2 ಲಕ್ಷ ರೂಪಾಯಿಯ ರಿಸ್ಕ್ ಕವರೇಜ್ ಇದೆ. ವಿಮೆ ಪಡೆದ ವ್ಯಕ್ತಿಯು ಯಾವುದೇ ಕಾರಣದಿಂದಲೂ ಸಾವನ್ನಪ್ಪಿದರೆ ಈ ವಿಮೆಯಲ್ಲಿ ರಿಸ್ಕ್ ಕವರೇಜ್ ನೀಡಲಾಗುತ್ತದೆ. ನೀವು ಯೋಜನೆಯಲ್ಲಿ ಮಾಡಿದ ಆಯ್ಕೆಯ ಆಧಾರದಲ್ಲಿ ವಾರ್ಷಿಕ ಪ್ರೀಮಿಯಂ 436 ರೂಪಾಯಿ ಆಗಿದೆ. ಈ ಮೊತ್ತವು ಪ್ರತಿ ವರ್ಷವೂ ಕೂಡಾ ಮೇ 31ಕ್ಕೂ ಮುನ್ನ ನಿಮ್ಮ ಖಾತೆಯಿಂದ ಅಂದರೆ ಚಂದಾದಾರರ ಖಾತೆಯಿಂದ ಕಡಿತ ಮಾಡಲಾಗುತ್ತದೆ.
ಭಾರತೀಯ ಜೀವ ವಿಮಾ ಕಂಪನಿ ಮತ್ತು ಎಲ್ಲಾ ಇತರೆ ಜೀವ ವಿಮಾದಾರರು ಈ ಯೋಜನೆಯನ್ನು ಗ್ರಾಹಕರಿಗೆ ನೀಡುತ್ತಾರೆ. ಹಾಗೆಯೇ ಆ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರಿಗೆ ಅಗತ್ಯ ಅನುಮೋದನೆಗಳೊಂದಿಗೆ ನಿಯಮದ ಪ್ರಕಾರ ಈ ಯೋಜನೆಯಲ್ಲಿ ಸೇರ್ಪಡೆ ಮಾಡಲಾಗುತ್ತದೆ. ಹಾಗೆಯೇ ಈ ಯೋಜನೆಗೆ ಸೇರ್ಪಡೆಯಾಗಲು ಬಯಸುವ ಗ್ರಾಹಕರಿಗೆ ಸರಿಯಾದ ಮಾಹಿತಿ, ಮಾರ್ಗದರ್ಶನ ನೀಡುವುದು ಬ್ಯಾಂಕ್‌ನ ಜವಾಬ್ದಾರಿಯಾಗಿದೆ ಎಂಬುವುದು ನಾವು ತಿಳಿದಿರಬೇಕಾದ ವಿಚಾರ.
ನೀವು ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಯನ್ನು ಯಾವುದೇ ಕಾರಣದಿಂದಾಗಿ ಮುಂದುವರಿಸಲು ಇಚ್ಛಿಸದಿದ್ದರೆ, ನೀವು ಈ ವಾರ್ಷಿಕ ವಿಮೆ ಆಟೋ ಡೆಬಿಟ್ ಅನ್ನು ಸ್ಥಗಿತಗೊಳಿಸಬಹುದು. ಅದಕ್ಕಾಗಿ ನೀವು ಸಮೀಪದ ಬ್ಯಾಂಕ್ ಬ್ರ್ಯಾಂಚ್‌ಗೆ ಭೇಟಿ ನೀಡಬಹುದಾಗಿದೆ. ಬ್ಯಾಂಕ್‌ನಲ್ಲಿ ನಿಮಗೆ ನೀಡಿದ ಮಾರ್ಗದರ್ಶನವನ್ನು ಪಾಲಿಸಿ ನಿಮ್ಮ ಈ ಯೋಜನೆಯನ್ನು ಮುಚ್ಚಬಹುದಾಗಿದೆ.
ಇನ್ನು ಸಮಯಕ್ಕೆ ಸರಿಯಾಗಿ ನಿಮ್ಮ ಖಾತೆಯಲ್ಲಿ ಮೊತ್ತವಿಲ್ಲದಿದ್ದರೆ, ಗಡುವು ಮುಗಿದ ಕೂಡಲೇ ನಿಮ್ಮ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ ಪಾಲಿಸಿ ಅಂತ್ಯವಾಗಲಿದೆ. ಹಾಗೆಯೇ ನೀವಾಗಿಯೇ ಸಮಯಕ್ಕೆ ಸರಿಯಾಗಿ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸದಿದ್ದರೆ ಈ ವಿಮೆಯು ಮುಕ್ತಾಯವಾಗಲಿದೆ.


Click it and Unblock the Notifications