2022ರಲ್ಲಿ ಒಟ್ಟಾಗಿ 34 ಲಕ್ಷ ಗೃಹ ಸಾಲವನ್ನು ನೀಡಲಾಗಿದೆ. ಅಂದರೆ ಒಟ್ಟಾಗಿ 9 ಲಕ್ಷ ಕೋಟಿ ರೂಪಾಯಿ ಮೌಲ್ಯದ ಗೃಹ ಸಾಲವನ್ನು 2022ರಲ್ಲಿ ಬಿಡುಗಡೆ ಮಾಡಲಾಗಿದೆ. ವಾರ್ಷಿಕವಾಗಿ ಗೃಹ ಸಾಲ ಪಡೆಯುವ ಪ್ರಮಾಣವು ಶೇಕಡ 18ರಷ್ಟು ಏರಿಕೆಯಾಗಿದೆ ಎಂದು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಇಕ್ವಿಫ್ಯಾಕ್ಸ್ ಮತ್ತು ಸಾಲ ವಿತರಕ ಆಂಡ್ರೊಮಿಡಾ ಅಧ್ಯಯನವನ್ನು ಬಹಿರಂಗಪಡಿಸಿದೆ.
ಒಟ್ಟಾಗಿ 9 ಲಕ್ಷ ಕೋಟಿ ರೂಪಾಯಿ ಮೌಲ್ಯದ ಗೃಹ ಸಾಲವನ್ನು 2022ರಲ್ಲಿ ನೀಡಲಾಗಿದ್ದು ಈ ಪೈಕಿ 25 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಸಾಲವನ್ನು ಅಧಿಕವಾಗಿದೆ ಪಡೆಯಲಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. 2022 ರ ಕ್ಯಾಲೆಂಡರ್ ವರ್ಷದಲ್ಲಿ ನೀಡಲಾದ ಸಾಲಗಳ ಸಂಖ್ಯೆಯು ಶೇಕಡ 17ರಷ್ಟು ಏರಿಕೆಯಾಗಿದೆ.

2022 ರಲ್ಲಿ ವೈಯಕ್ತಿಕ ಸಾಲ ವಿಭಾಗವು ಶೇಕಡ 57ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಅದು ಬಹಿರಂಗಪಡಿಸಿದೆ. ಇನ್ನು ರಿಟೇಲ್ ಉದ್ಯಮದ ಮಾರುಕಟ್ಟೆ ಗಾತ್ರವು ಡಿಸೆಂಬರ್ 2022 ರ ವೇಳೆಗೆ 100 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಬೇರೆ ಬೇರೆ ಸಾಲ ವಿಭಾಗಗಳಲ್ಲಿ, ರಿಟೇಲ್ ಉದ್ಯಮದಲ್ಲಿ 54 ಕೋಟಿ ಸಕ್ರಿಯ ಸಾಲ ವರದಿ ಮಾಡಲಾಗಿದೆ ಎಂದು ಅಧ್ಯಯನವು ಉಲ್ಲೇಖಿಸಿದೆ.
ಗೃಹ ಸಾಲ ವಿಭಾಗದ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿದ ಸಾಲ ವಿತರಕ ಆಂಡ್ರೊಮಿಡಾ ಸೇಲ್ಸ್ ಆಂಡ್ ಡಿಸ್ಟ್ರಿಬ್ಯೂಷನ್ಸ್ ಕಾರ್ಯನಿರ್ವಾಹಕ ಅಧ್ಯಕ್ಷ ವಿ ಸ್ವಾಮಿನಾಥನ್, "ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಖಾಸಗಿ ವಲಯದ ಬ್ಯಾಂಕ್‌ಗಳು ಅಥವಾ ವಸತಿ ಹಣಕಾಸು ಕಂಪನಿಗಳಲ್ಲಿಸ (ಎಚ್‌ಎಫ್‌ಸಿಗಳು) ಗೃಹ ಸಾಲ ವ್ಯವಹಾರ ಎಲ್ಲವೂ ಆರೋಗ್ಯಕರ ಬೆಳವಣಿಗೆಗೆ ಸಾಕ್ಷಿಯಾಗುತ್ತಿವೆ," ಎಂದು ತಿಳಿಸಿದ್ದಾರೆ.
ರಿಟೇಲ್ ಸಾಲ ವಿತರಣೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ಕೊಡುಗೆ ಅತ್ಯಧಿಕವಾಗಿದೆ. "ನಮ್ಮ ವರದಿಯಲ್ಲಿ ಪ್ರಸ್ತುತಪಡಿಸಲಾದ ಅಂಶಗಳು ಸಾಲದಾತರಿಗೆ ಅಗಾಧವಾಗಿ ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ," ಎಂದು ಉಲ್ಲೇಖ ಮಾಡುತ್ತದೆ.
ಹೊಸ ಮನೆ ಖರೀದಿಸುವ ಮುನ್ನ ಇದನ್ನು ನೆನಪಿಡಿ
ಮನೆಯನ್ನು ಖರೀದಿ ಮಾಡುವುದು ಯಾವುದೇ ವ್ಯಕ್ತಿಯ ಜೀವನದಲ್ಲಿ ಅತೀ ಮುಖ್ಯವಾದ ನಿರ್ಧಾರವಾಗಿದೆ. ಅದು ಕೂಡಾ ನಾವು ಮೊದಲ ಬಾರಿಗೆ ಮನೆಯನ್ನು ಖರೀದಿ ಮಾಡುವುದಾದರೆ, ಮನೆಯನ್ನು ಖರೀದಿಸುವುದು ವ್ಯಕ್ತಿಯ ಜೀವನದಲ್ಲಿ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಹೊಸ ಮನೆಯನ್ನು ಖರೀದಿ ಮಾಡಲು ನೀವು ಬಯಸುತ್ತೀರಾ, ಮೊದಲ ಬಾರಿಗೆ ಮನೆ ಖರೀದಿ ಮಾಡುವವರಿಗೆ ರಿಯಲ್ ಎಸ್ಟೇಟ್ ತಜ್ಞರು ನೀಡಿರುವ ಟಿಪ್ಸ್‌ಗಳು ಇಲ್ಲಿದೆ ವಿವರ.
ನಾವು ಮುಖ್ಯವಾಗಿ ನಮಗೆ ಎಂತಹ ಮನೆ ಬೇಕು, ಯಾವ ಪ್ರದೇಶದಲ್ಲಿ ಮನೆ ಬೇಕು ಎಂಬುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಈ ಮೂಲ ಮಾಹಿತಿಯನ್ನು ನಾವು ತಿಳಿದುಕೊಂಡರೆ ನಾವು ಸುಲಭವಾಗಿ ಯಾವ ಆಸ್ತಿ ಬೇಕು ಎಂದು ನಿರ್ಧಾರ ಮಾಡಬಹುದು. ಉದಾಹರಣೆಗೆ, ಖರೀದಿದಾರನು ದೊಡ್ಡ ಜಾಗವನ್ನು ಹುಡುಕುತ್ತಿದ್ದರೆ, ಬಜೆಟ್ ಕಡಿಮೆ ಇದ್ದರೆ, ಕಡಿಮೆ ಬೆಲೆಯ ಉತ್ತಮ ವ್ಯವಹಾರವನ್ನು ಬಯಸಿದರೆ, ಹೆಸರಾಂತ ಡೆವಲಪರ್‌ಗಳಿಂದ ನಿರ್ಮಾಣ ಹಂತದಲ್ಲಿರುವ ಮನೆಯನ್ನು ಖರೀದಿ ಮಾಡುವುದು ಸೂಕ್ತವಾಗಿದೆ.
ಎರಡನೆಯ ಪ್ರಮುಖ ಅಂಶವೆಂದರೆ ಬಿಲ್ಡರ್ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡುವುದು ಆಗಿದೆ. ಬಿಲ್ಡರ್ ಈ ಹಿಂದೆ ಎಷ್ಟು ಪ್ರಾಜೆಕ್ಟ್‌ಗಳನ್ನು ವಿತರಿಸಿದ್ದಾರೆ, ಬಿಲ್ಡರ್ ಹೆಸರಿನಲ್ಲಿ ಯಾವುದೇ ವಿವಾದಿತ ಪ್ರಾಜೆಕ್ಟ್‌ಗಳು ಇದೆಯೇ, ಇತ್ಯಾದಿಗಳ ಹಿನ್ನೆಲೆ ಪರಿಶೀಲನೆ ಮಾಡುವುದು ಯಾವಾಗಲೂ ಉತ್ತಮ. ಪ್ರಸ್ತುತ ಖರೀದಿದಾರರಿಗೆ ಬಿಲ್ಡರ್‌ನ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡುವುದು RERA ಮೂಲಕ ಸುಲಭವಾಗಿದೆ.


Click it and Unblock the Notifications