ಈಗಾಗಲೇ ಹೊಸ ಹಣಕಾಸು ವರ್ಷದ ಎರಡು ತಿಂಗಳುಗಳು ಮುಗಿದಿದೆ. ಜೂನ್ ತಿಂಗಳ ಆರಂಭಕ್ಕೆ ಇನ್ನು 2 ದಿನವಷ್ಟೇ ಬಾಕಿ ಉಳಿದಿದೆ. ಪ್ರತಿ ತಿಂಗಳ ಮೊದಲೇ ದಿನದಿಂದಲೇ ನಮ್ಮ ವೈಯಕ್ತಿಕ ಹಣಕಾಸಿಗೆ ಪ್ರಭಾವ ಬೀರುವಂತಹ ಬದಲಾವಣೆಗಳು ಆಗುತ್ತದೆ. ಜೂನ್ ತಿಂಗಳಿನಲ್ಲಿ ಎಲ್‌ಪಿಜಿ ದರ ಸೇರಿದಂತೆ ಹಲವಾರು ಬದಲಾವಣೆಗಳು ಆಗಲಿದೆ.
ಹೊಸ ತಿಂಗಳಿನಲ್ಲಿ ಪ್ರಮುಖವಾಗಿ ಪ್ರತಿ ತಿಂಗಳಿನಂತೆ ಎಲ್‌ಪಿಜಿ ಬದಲಾವಣೆ ಆಗುವ ಸಾಧ್ಯತೆಯಿದೆ. ಇಂಧನಗಳ ಬೆಲೆಗಳಲ್ಲಿ ಮೂರು ಪ್ರಮುಖ ಬದಲಾವಣೆಗಳು ಆಗಲಿದೆ. ಮಾಸಿಕವಾಗಿ ಹಣಕಾಸುಗಳ ಮೇಲೆ ಇದು ಪರಿಣಾಮ ಉಂಟು ಮಾಡಲಿದೆ. ಅದರಲ್ಲೂ ನಿಮ್ಮ ವೆಚ್ಚಗಳ ಮೇಲೆ ಪ್ರಭಾವ ಹೆಚ್ಚಾಗಲಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ದರ ಬದಲಾವಣೆ
ಪ್ರತಿ ತಿಂಗಳ ಮೊದಲ ದಿನ ಸರ್ಕಾರವು ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ತೈಲ ಕಂಪನಿಗಳು 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ದರವನ್ನು ಇಳಿಕೆ ಮಾಡಿದೆ. ಆದರೆ 14 ಕೆಜಿಯ ಗೃಹ ಬಳಕೆಯ ಸಿಲಿಂಡರ್ ದರವನ್ನು ಪರಿಷ್ಕರಣೆ ಮಾಡಲಾಗಿಲ್ಲ. ಜೂನ್ ತಿಂಗಳಿನಲ್ಲಿ ಎಲ್‌ಪಿಜಿ ದರ ಮತ್ತೆ ಪರಿಷ್ಕರಣೆ ಮಾಡುವ ಸಾಧ್ಯತೆಯಿದೆ.
ದ್ವಿಚಕ್ರ ಇವಿ ದುಬಾರಿ
ಜೂನ್ 1ರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದುಬಾರಿಯಾಗಲಿವೆ. ಸಚಿವಾಲಯವು ಮೇ 21 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿಯಲ್ಲಿ ಕಡಿತವನ್ನು ಘೋಷಿಸಿದೆ. ಈ ಹಿಂದೆ ಪ್ರತಿ kWh ಗೆ 15,000 ರೂಪಾಯಿಗಳ ಸಹಾಯಧನ ನೀಡಲಾಗುತ್ತಿತ್ತು.
ಆದರೆ ಈಗ ಪ್ರತಿ kWh ಗೆ 10,000 ರೂಪಾಯಿಗೆ ಸಬ್ಸಿಡಿಯನ್ನು ಇಳಿಕೆ ಮಾಡಲಾಗಿದೆ. ಇದರಿಂದಾಗಿ ಜೂನ್‌ನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಖರೀದಿಸಲು 25,000 ರಿಂದ 30,000 ರೂಪಾಯಿವರೆಗೆ ಹೆಚ್ಚುವರಿ ವೆಚ್ಚ ತಗುಲಲಿದೆ ಎಂಬ ನಿರೀಕ್ಷೆಯಿದೆ.
100 ದಿನಗಳು 100 ಪಾವತಿ ಅಭಿಯಾನ ಜೂನ್‌ನಿಂದ ಪ್ರಾರಂಭ
"100 ದಿನಗಳು 100 ಪಾವತಿಸಿ" ಎಂಬ ಅಭಿಯಾನವನ್ನು ಮೇ 12 ರಂದು ಪರಿಚಯಿಸಲಾಗಿದೆ. ಬ್ಯಾಂಕ್‌ಗಳು 100 ದಿನಗಳಲ್ಲಿ ದೇಶದ ಪ್ರತಿ ಜಿಲ್ಲೆಯ ಪ್ರತಿ ಬ್ಯಾಂಕ್‌ನ 100 ಕ್ಲೈಮ್ ಮಾಡದ ಠೇವಣಿಗಳನ್ನು ಪತ್ತೆಹಚ್ಚಬಹುದು. ಅದನ್ನು ಇತ್ಯರ್ಥಪಡಿಸಬಹುದು.
ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ಕ್ಲೈಮ್ ಮಾಡದ ಠೇವಣಿಗಳ ಹೊರೆ ಕಡಿಮೆ ಮಾಡಲು ಮತ್ತು ಈ ಠೇವಣಿಗಳನ್ನು ಅದರ ನಿಜವಾದ ಮಾಲೀಕರು/ಹಕ್ಕುದಾರರಿಗೆ ಹಿಂದಿರುಗಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಕ್ರಮಕ್ಕೆ ಇದು ಸಹಾಯವಾಗಲಿದೆ. ಅಭಿಯಾನವು ಜೂನ್ 1 ರಂದು ಪ್ರಾರಂಭವಾಗುತ್ತದೆ.
ಮೇ ತಿಂಗಳು ಆದ ಬದಲಾವಣೆಗಳು
ಮೇ ತಿಂಗಳಿನಲ್ಲಿ ಜಿಎಸ್‌ಟಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, 100 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ತಮ್ಮ ವಹಿವಾಟಿನ ರಸೀದಿಗಳನ್ನು ಇನ್‌ವಾಯ್ಸ್ ನೋಂದಣಿ ಪೋರ್ಟಲ್‌ನಲ್ಲಿ (ಐಆರ್‌ಪಿ) 7 ದಿನಗಳ ಅಂತರದಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ. ಈ ಹಿಂದೆ ನೋಂದಣಿಗೆ ಯಾವುದೇ ಮಿತಿ ಇರಲಿಲ್ಲ.
ಮೇ 1ರಿಂದ ಕರೆ ಮತ್ತು ಎಸ್‌ಎಂಎಸ್ ಸೇವೆಯಲ್ಲಿ ಸ್ಪಾಮ್ ಫಿಲ್ಟರ್‌ಗಾಗಿ ಕೃತಕ ಬುದ್ಧಿವಂತಿಕೆ (Aritificial Intelligence -AI) ಅವಳಡಿಸುವುದನ್ನು ಟ್ರಾಯ್ (TRAI) ಟೆಲಿಕಾಂ ಸಂಸ್ಥೆಗಳಿಗೆ ಕಡ್ಡಾಯಗೊಳಿಸಿದೆ. ಸಾರ್ವಜನಿಕ ಸಾಲದಾತ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಖಾತೆಯಲ್ಲಿ ಹಣವಿಲ್ಲದೆ ಎಟಿಎಂ ವಹಿವಾಟು ವಿಫಲವಾದರೆ ವಹಿವಾಟಿನ ಮೇಲೆ ರೂ 10+ ಜಿಎಸ್‌ಟಿ ವಿಧಿಸುವುದಾಗಿ ಘೋಷಿಸಿದೆ.


Click it and Unblock the Notifications