ಹೊಸ ಹಣಕಾಸು ವರ್ಷದ ಒಂದು ತಿಂಗಳು ಮುಗಿದಿದೆ. ಈಗ ಏಪ್ರಿಲ್ ಕಳೆದು ಮೇ ತಿಂಗಳ ಆರಂಭಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಪ್ರತಿ ತಿಂಗಳ ಮೊದಲೇ ದಿನದಿಂದಲೇ ನಮ್ಮ ವೈಯಕ್ತಿಕ ಹಣಕಾಸಿಗೆ ಪ್ರಭಾವ ಬೀರುವಂತಹ ಬದಲಾವಣೆಗಳು ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಹೊಸ ಹಣಕಾಸು ವರ್ಷದ ಆರಂಭವಾದ ಏಪ್ರಿಲ್ ತಿಂಗಳಿನಲ್ಲಿ ಬಜೆಟ್ ಘೋಷಣೆಗಳು ಜಾರಿಗೆ ಬರುವ ಕಾರಣ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಹೆಚ್ಚಿನ ಪ್ರಭಾವವಾಗಿದೆ.
ಈಗ ನಾವು ಮೇ ತಿಂಗಳನ್ನು ಸ್ವಾಗತ ಮಾಡಲು ಸಜ್ಜಾಗಿದ್ದೇವೆ. ಮೇ ತಿಂಗಳ ಮೊದಲೇ ದಿನವೇ ಕಾರ್ಮಿಕ ದಿನಾಚರಣೆಯಾಗಿದ್ದು, ಈ ದಿನ ಬ್ಯಾಂಕ್‌ಗಳು ಬಂದ್ ಆಗಿರಲಿದೆ. ಇದರಿಂದ ಬ್ಯಾಂಕಿಂಗ್ ಚಟುವಟಿಕೆ ವ್ಯತ್ಯಯವಾಗಲಿದೆ. ಇನ್ನು ಮೇ ತಿಂಗಳಿನಲ್ಲಿಯೂ ಹಲವಾರು ಬದಲಾವಣೆಗಳು ಆಗಲಿದೆ. ಏಪ್ರಿಲ್ 1ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಇಳಿಕೆ ಮಾಡಲಾಗಿದೆ.

ಮೇ ತಿಂಗಳಿನಲ್ಲಿ ಗೃಹ ಬಳಕೆ ಸಿಲಿಂಡರ್ ದರವನ್ನು ಇಳಿಸಲಾಗುತ್ತದೆಯೇ ಎಂದು ಕಾದುನೋಡಬೇಕಾಗಿದೆ. ಮೇ ತಿಂಗಳಿನಲ್ಲಿ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಸಿಎನ್‌ಜಿ, ಎಲ್‌ಪಿಜಿ ಸಿಲಿಂಡರ್ ದರ ಏರಿಕೆ
ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ, ಸಿಎನ್‌ಜಿ ಹಾಗೂ ಪಿಎನ್‌ಜಿ ಗ್ಯಾಸ್ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಬೆಲೆ ಏರಿಕೆ ಅಥವಾ ಬೆಲೆ ಇಳಿಕೆ ಮಾಡಲಾಗುತ್ತದೆ ಅಥವಾ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ. ಕಳೆದ ತಿಂಗಳು ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಕೆ ಮಾಡಲಾಗಿಲ್ಲ. ವಾಣಿಜ್ಯ ಸಿಲಿಂಡರ್ ದರವನ್ನು ನಿರಂತರವಾಗಿ ಏರಿಸಲಾಗುತ್ತಿದೆ. ಆದರೆ ಈ ಬಾರಿ ಕೆಲವು ಹಬ್ಬಗಳು ಇರುವ ಕಾರಣದಿಂದಾಗಿ ಎಲ್‌ಪಿಜಿ ದರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಜಿಎಸ್‌ಟಿ ನಿಯಮದಲ್ಲಿ ಬದಲಾವಣೆ
ಹೊಸ ನಿಯಮದ ಪ್ರಕಾರ, 100 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ತಮ್ಮ ವಹಿವಾಟಿನ ರಸೀದಿಗಳನ್ನು ಇನ್‌ವಾಯ್ಸ್ ನೋಂದಣಿ ಪೋರ್ಟಲ್‌ನಲ್ಲಿ (ಐಆರ್‌ಪಿ) 7 ದಿನಗಳ ಅಂತರದಲ್ಲಿ ಅಪ್‌ಲೋಡ್ ಮಾಡುತ್ತವೆ. ಪ್ರಸ್ತುತ, ಸರಕುಪಟ್ಟಿ ನೋಂದಣಿಗೆ ಯಾವುದೇ ಮಿತಿಯಿಲ್ಲ.
ಮತ್ತೊಂದು ನಿಯಮ ಬದಲಾವಣೆಯಲ್ಲಿ, ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ ಕಂಪನಿಗಳು ಕೆವೈಸಿ ಮಾಡಿದ ಇ-ವ್ಯಾಲೆಟ್‌ಗಳಿಂದ ಹಣವನ್ನು ಸ್ವೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ಕೇಳಿದೆ. ಅಂದರೆ ನಿಮ್ಮ ವ್ಯಾಲೆಟ್ ಕೆವೈಸಿ ಇಲ್ಲದಿದ್ದರೆ, ಅದರ ಮೂಲಕ ಹೂಡಿಕೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಮೇ 1ರಿಂದ ಈ ನಿಯಮ ಜಾರಿಗೆ ಬರಲಿದೆ.
ಟ್ರಾಯ್‌ನ ಹೊಸ ನಿಯಮ
ಮೇ 1ರಿಂದ ಕರೆ ಮತ್ತು ಎಸ್‌ಎಂಎಸ್ ಸೇವೆಯಲ್ಲಿ ಸ್ಪಾಮ್ ಫಿಲ್ಟರ್‌ಗಾಗಿ ಕೃತಕ ಬುದ್ಧಿವಂತಿಕೆ (Aritificial Intelligence -AI) ಅವಳಡಿಸುವುದನ್ನು ಟ್ರಾಯ್ (TRAI) ಟೆಲಿಕಾಂ ಸಂಸ್ಥೆಗಳಿಗೆ ಕಡ್ಡಾಯಗೊಳಿಸಿದೆ. ಎಐ ಫಿಲ್ಟರ್‌ನಿಂದಾಗಿ ಗ್ರಾಹಕರು ಸ್ಪಾಮ್, ನಕಲಿ ಕರೆಗಳನ್ನು ಕರೆ ಸ್ವೀಕಾರ ಮಾಡುವುದಕ್ಕೂ ಮುನ್ನವೇ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಶೀಘ್ರವೇ ಎಐ ಫಿಲ್ಟರ್ ಆರಂಭಿಸುವುದಾಗಿ ಹೇಳಿಕೊಂಡಿದೆ.
ಪಿಎನ್‌ಬಿ ಬ್ಯಾಂಕ್ ನಿಯಮ
ಸಾರ್ವಜನಿಕ ಸಾಲದಾತ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಖಾತೆಯಲ್ಲಿ ಹಣವಿಲ್ಲದೆ ಎಟಿಎಂ ವಹಿವಾಟು ವಿಫಲವಾದರೆ ವಹಿವಾಟಿನ ಮೇಲೆ ರೂ 10+ ಜಿಎಸ್‌ಟಿ ವಿಧಿಸುವುದಾಗಿ ಘೋಷಿಸಿದೆ. ಬ್ಯಾಂಕ್ ಮೇ 1, 2023 ರಿಂದ ಶುಲ್ಕವನ್ನು ವಿಧಿಸಲು ಪ್ರಾರಂಭಿಸುತ್ತದೆ. ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಮತ್ತು ಪ್ರಿಪೇಡ್ ಕಾರ್ಡ್ ಶುಲ್ಕ ಮತ್ತು ವಾರ್ಷಿಕ ನಿಯಂತ್ರಣ ಶುಲ್ಕವನ್ನು ಪರಿಷ್ಕರಿಸಿದೆ.


Click it and Unblock the Notifications