ಅಕ್ಟೋಬರ್ ತಿಂಗಳು ಮುಗಿದು ನವೆಂಬರ್ ಆರಂಭವಾಗಲಿದೆ. ಕಳೆದ ತಿಂಗಳಿನಂತೆಯೇ ನವೆಂಬರ್ ಕೂಡಾ ಹಬ್ಬದ ಸೀಸನ್ ಆಗಿದೆ. ನವೆಂಬರ್‌ನಲ್ಲಿ ಹಲವಾರು ಹಬ್ಬಗಳು ಇದೆ. ಇನ್ನು ಸಾಮಾನ್ಯವಾಗಿಯೇ, ಯಾವುದೇ ಹೊಸ ತಿಂಗಳ ಆರಂಭವು ಸಾಮಾನ್ಯ ಜನರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರುವ ಅನೇಕ ಆರ್ಥಿಕ ಬದಲಾವಣೆಗಳನ್ನು ಉಂಟು ಮಾಡುತ್ತದೆ.
ಹೊಸ ತಿಂಗಳ ಆರಂಭದಲ್ಲಿಯೇ ತೈಲ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು ನಿರ್ಧಾರ ಮಾಡುತ್ತದೆ. ಇನ್ನು ಹೊಸ ತಿಂಗಳ ಆರಂಭವಾಗುತ್ತಿದ್ದಂತೆ ತೈಲ ಕಂಪನಿಗಳು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಣೆ ಮಾಡುತ್ತದೆ. ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಈ ಹಬ್ಬದ ಸೀಸನ್‌ನಲ್ಲಿ ಆಗುವ ಬದಲಾವಣೆಗಳೇನು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ನವೆಂಬರ್‌ನಲ್ಲಿ ಇಷ್ಟು ದಿನ ಬ್ಯಾಂಕ್ ಬಂದ್
ನವೆಂಬರ್ ತಿಂಗಳಲ್ಲಿ ಧಂತೇರಸ್, ದೀಪಾವಳಿ, ಭಾಯ್ ದೂಜ್, ಛತ್ ಇತ್ಯಾದಿ ಹಬ್ಬಗಳ ಕಾರಣ ಬ್ಯಾಂಕ್‌ಗಳಿಗೆ ಸಾಕಷ್ಟು ದಿನ ರಜೆ ಇರುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ಶನಿವಾರ ಮತ್ತು ಭಾನುವಾರ ಸೇರಿದಂತೆ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನವೆಂಬರ್ ತಿಂಗಳಲ್ಲಿ ನೀವು ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸವನ್ನು ಹೊಂದಿದ್ದರೆ, ಪಟ್ಟಿಯನ್ನು ನೋಡಿದ ನಂತರವೇ ನಿಮ್ಮ ರಜಾದಿನಗಳನ್ನು ಲೆಕ್ಕ ಹಾಕಿಕೊಳ್ಳಿ. ಇಲ್ಲವಾದರೆ ನಂತರ ಸಮಸ್ಯೆ ಉಂಟಾಗಬಹುದು.
ಎಲ್‌ಪಿಜಿ ಸಿಲಿಂಡರ್ ಬೆಲೆ
ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ, ಪಿಎನ್‌ಜಿ ಮತ್ತು ಸಿಎನ್‌ಜಿ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೆಯ ದಿನ ನಿರ್ಧರಿಸುತ್ತವೆ. ಹೀಗಿರುವಾಗ ಹಬ್ಬ ಹರಿದಿನಗಳ ಮುನ್ನವೇ ಸರ್ಕಾರ ಜನಸಾಮಾನ್ಯರಿಗೆ ಶಾಕ್ ನೀಡುತ್ತದೋ ಅಥವಾ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತದೋ ಕಾದು ನೋಡಬೇಕಿದೆ.
ಲ್ಯಾಪ್‌ಟಾಪ್ ಆಮದಿಗೆ ಅಂತಿಮ ದಿನಾಂಕ
ಎಚ್‌ಎಸ್‌ಎನ್ 8741 ವರ್ಗದ ಲ್ಯಾಪ್‌ಟಾಪ್‌ಗಳು, ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿತ್ತು. ನವೆಂಬರ್‌ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಬದಲಾವಣೆ ಆಗುತ್ತವೆ ಎಂಬುದರ ಕುರಿತು ಸರ್ಕಾರ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಬಿಎಸ್‌ಇ ಈಕ್ವಿಟಿ ಉತ್ಪನ್ನಗಳ ವಿಭಾಗದಲ್ಲಿ ವಹಿವಾಟು ಶುಲ್ಕ ಹೆಚ್ಚಳ
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಅಂದರೆ ಬಿಎಸ್‌ಇ ಅಕ್ಟೋಬರ್ 20, 2023 ರಂದು ಈಕ್ವಿಟಿ ಡೆರಿವೇಟಿವ್ಸ್ ವಿಭಾಗದಲ್ಲಿ ತನ್ನ ವಹಿವಾಟು ಶುಲ್ಕವನ್ನು ಹೆಚ್ಚಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಶುಲ್ಕಗಳನ್ನು S&P ಬಿಎಸ್‌ಇ ಸೆನ್ಸೆಕ್ಸ್ ಆಯ್ಕೆಗಳ ಮೇಲೆ ವಿಧಿಸಲಾಗುತ್ತದೆ. ಇದು ರಿಟೇಲ್ ಹೂಡಿಕೆದಾರರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಎಲ್‌ಐಸಿ ಪಾಲಿಸಿದಾರರು ಲ್ಯಾಪ್ಸ್ ಪಾಲಿಸಿ
ನಿಮ್ಮ ಯಾವುದೇ ಎಲ್‌ಐಸಿ ಪಾಲಿಸಿಗಳು ಲ್ಯಾಪ್ಸ್ ಆಗಿದ್ದರೆ ಮತ್ತು ನೀವು ಅದನ್ನು ಮರುಪ್ರಾರಂಭಿಸಲು ಬಯಸಿದರೆ, ನಿಮಗೆ ಅಕ್ಟೋಬರ್ 31 ರವರೆಗೆ ಅವಕಾಶವಿದೆ. ಲ್ಯಾಪ್ಸ್ ಆದ ಪಾಲಿಸಿಯನ್ನು ಮತ್ತೆ ಆಕ್ಟಿವೇಟ್ ಮಾಡಲು ಎಲ್ಐಸಿ ವಿಶೇಷ ಅಭಿಯಾನವನ್ನು (ಎಲ್ಐಸಿ ಪಾಲಿಸಿ ರಿವೈವಲ್ ಕ್ಯಾಂಪೇನ್) ಪ್ರಾರಂಭಿಸಿದೆ.
ಎಲ್‌ಐಸಿ ಪ್ರಕಾರ ಈ ವಿಶೇಷ ಅಭಿಯಾನದಲ್ಲಿ, 1 ಲಕ್ಷ ರೂಪಾಯಿ ಪ್ರೀಮಿಯಂನಲ್ಲಿ ಶೇಕಡ 30 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂದರೆ ಗರಿಷ್ಠ ರೂಪಾಯಿ ರಿಯಾಯಿತಿ ನೀಡಲಾಗುತ್ತದೆ. ಒಂದು ಲಕ್ಷ ರೂಪಾಯಿಯಿಂದ 3 ಲಕ್ಷ ರೂಪಾಯಿವರೆಗೆ ಶೇಕಡ 30 ರಷ್ಟು ರಿಯಾಯಿತಿ ಲಭ್ಯವಿದೆ. ಅಂದರೆ ಗರಿಷ್ಠ 500 ರೂಪಾಯಿ ವಿನಾಯಿತಿಯಾಗಿದೆ. 3 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತಕ್ಕೆ ಶೇಕಡ 30 ರಷ್ಟು ರಿಯಾಯಿತಿ ಅಂದರೆ ಗರಿಷ್ಠ 4 ಸಾವಿರ ರೂಪಾಯಿ ರಿಯಾಯಿತಿಯಾಗಿದೆ.


Click it and Unblock the Notifications