ಪ್ರತಿ ವರ್ಷ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಕೆ ಮಾಡಬೇಕಾಗಿದೆ. 2,50,000 ರೂಪಾಯಿಗಿಂತ ಅಧಿಕ ವಾರ್ಷಿಕ ಆದಾಯವಿರುವ ಜನರು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಬೇಕಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ನಿಮ್ಮ ವಾರ್ಷಿಕ ಆದಾಯದ ಮಾಹಿತಿಯನ್ನು ಮತ್ತು ನೀವು ಸಲ್ಲಿಸಬೇಕಾದ ಪಾವತಿಸಬೇಕಾದ ತೆರಿಗೆಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಆದಾಯ ತೆರಿಗೆ ಕಾಯಿದೆ 1961 ರ ವಿವಿಧ ವಿಭಾಗಗಳ ಅಡಿಯಲ್ಲಿ, ಭಾರತ ಸರ್ಕಾರದಿಂದ ಕೆಲವು ತೆರಿಗೆ ರಿಯಾಯಿತಿಗಳು ಮತ್ತು ವಿನಾಯಿತಿಗಳನ್ನು ನೀಡಲಾಗುತ್ತದೆ.
ಈ ಆದಾಯ ತೆರಿಗೆ ರಿಟರ್ನ್ ಮೂಲಕ ನಾವು ಪಡೆಯಲಾಗುವ ತೆರಿಗೆ ವಿನಾಯಿತಿಯನ್ನು ಜನರಿಗೆ ಬೇರೆಡೆ ಹೂಡಿಕೆ ಮಾಡಲು ಉತ್ತೇಜನ ನೀಡುವುದು ಆಗಿದೆ. ಆದರೆ ನಾವು ಏನು ತಂತ್ರವನ್ನು ಬಳಸಿಕೊಂಡರು ನಮ್ಮ ಆದಾಯ ತೆರಿಗೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೀವು ಚಿಂತಿತರಾಗಿದ್ದಾರಾ?, ಈ 2022-23 ಹಣಕಾಸು ವರ್ಷದಲ್ಲಿ ನೀವು ತೆರಿಗೆಯನ್ನು ಯಾವೆಲ್ಲ ರೀತಿಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗಲಿದೆ ಎಂಬ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ. ಮುಂದೆ ಓದಿ...
ತೆರಿಗೆ ಉಳಿತಾಯ ಮಾಡುವ ಯೋಜನೆಯಲ್ಲಿ ಹೂಡಿಕೆ ಮಾಡಿ
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಭಾರತ ಸರ್ಕಾರವು ಕೆಲವು ತೆರಿಗೆ ವಿನಾಯಿತಿ ಅಥವಾ ತೆರಿಗೆ ಕಡಿತವನ್ನು ನೀಡುತ್ತದೆ. ನಾವು ಸುಮಾರು 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ತೆರಿಗೆ ಉಳಿತಾಯ ಮಾಡುವ ಯೋಜನೆಗಳು ಯಾವುದು ಎಂದು ಈ ಕೆಳಗೆ ಪಟ್ಟಿ ನೀಡಲಾಗಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್)
ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್‌ಎಸ್‌ಎಸ್)
ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)
ಸುಕನ್ಯ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)
ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್)
5 ವರ್ಷ ಅಥವಾ ಅದಕ್ಕಿಂತ ಅಧಿಕ ಅವಧಿಯ ಎಫ್‌ಡಿ/ಫಿಕ್ಸೆಡ್ ಡೆಪಾಸಿಟ್
ಈ ಮೇಲೆ ಉಲ್ಲೇಖ ಮಾಡಲಾದ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಆದರೆ ದೀರ್ಘಾವಧಿಯ ಹೂಡಿಕೆ ಇದಾಗಿರಬೇಕು.
ನಿರ್ದಿಷ್ಟ ತೆರಿಗೆ ಪದ್ಧತಿಯನ್ನು ಆರಿಸಿ
ಪ್ರಸ್ತುತ ಕಾಲದಲ್ಲಿ, ಭಾರತೀಯ ನಾಗರಿಕರಿಗೆ ಎರಡು ತೆರಿಗೆ ಪದ್ಧತಿಗಳು ಇದೆ. ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಸಂದರ್ಭದಲ್ಲಿ ನೀವು ಅವುಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು. ಆದರೆ ಗರಿಷ್ಠ ತೆರಿಗೆ ಉಳಿತಾಯಕ್ಕಾಗಿ, ಸೂಕ್ತವಾದ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ಹೊಸ ತೆರಿಗೆ ಪದ್ಧತಿಯು ಕಡಿಮೆ ತೆರಿಗೆ ದರಗಳನ್ನು ಪ್ರಸ್ತಾಪ ಮಾಡುತ್ತದೆ. ಆದರೆ ಇದು ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ಬಯಸುತ್ತಿದ್ದರೆ, ನೀವು ಹಳೆಯ ತೆರಿಗೆ ಪದ್ಧತಿಯನ್ನು ಪಾಲಿಸಬಹುದು. ಇಲ್ಲದಿದ್ದರೆ, ನಿಮ್ಮ ಆದಾಯ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡಲು ನೀವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಬಹುದು. ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಗಳ ಬಗ್ಗೆ ನಿಮಗೆ ಗೊಂದಲವಿದ್ದರೆ, ನೀವು ಆನ್‌ಲೈನ್ ಆದಾಯ ತೆರಿಗೆ ಕ್ಯಾಲ್ಕುಲೇಟರ್ ಸಹಾಯವನ್ನು ಪಡೆಯಬಹುದು.
ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಕೂಡಾ ತೆರಿಗೆ ಉಳಿತಾಯ ಟಿಪ್ಸ್
ನಿಮಗೆ ಹಾಗೂ ನಿಮ್ಮ ಕುಟುಂಬಸ್ಥರಿಗೆ ಆರೋಗ್ಯ ವಿಮೆಯನ್ನು ಖರೀದಿ ಮಾಡುವುದು ಕೂಡಾ ಆದಾಯ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆಯುವ ಒಂದು ಉತ್ತಮ ಮಾರ್ಗವಾಗಿದೆ. ಇದು ನಿಮಗೆ ಆರೋಗ್ಯ ತುರ್ತು ಸಂದರ್ಭದಲ್ಲಿ ಸುರಕ್ಷತೆ ಕೂಡಾ ಹೌದು. ಆದಾಯ ತೆರಿಗೆ ಕಾಯ್ದೆಯ 80ಡಿ ಅಡಿಯಲ್ಲಿ ತೆರಿಗೆದಾರರು ಆರೋಗ್ಯ ವಿಮೆಯನ್ನು ಖರೀದಿ ಮಾಡುವುದರಿಂದಾಗಿ ಸುಮಾರು ರೂಪಾಯಿ 25,000ವರೆಗೆ ತೆರಿಗೆ ಕಡಿತವನ್ನು ಪಡೆಯಲು ಸಾಧ್ಯವಾಗಲಿದೆ. ಇನ್ನು ಹಿರಿಯ ನಾಗರಿಕರು ಸುಮಾರು 50 ಸಾವಿರ ರೂಪಾಯಿವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ನೀವು ನಿಮ್ಮ ಪೋಷಕರಿಗೆ ಆರೋಗ್ಯ ವಿಮೆಯನ್ನು ಖರೀದಿ ಮಾಡಿದರೆ, ಅವರು 60 ವರ್ಷಕ್ಕಿಂತ ಅಧಿಕ ವಯಸ್ಸಿನವರಾಗಿದ್ದರೆ, ನೀವು 50 ಸಾವಿರದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ.
ಗೃಹ ಸಾಲದ ಮೇಲೆಯೂ ಇದೆ ತೆರಿಗೆ ವಿನಾಯಿತಿ
ನೀವು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಗೃಹ ಸಾಲವನ್ನು ಪಡೆದುಕೊಂಡಿದ್ದರೆ ನೀವು ನಿಮ್ಮ ತೆರಿಗೆಗೆ ಒಳಪಡುವ ಆದಾಯದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇದು ಸಾಲದ ಬಡ್ಡಿದರ ಹಾಗೂ ಪ್ರಿನ್ಸಿಪಲ್ ಮೇಲೆ ಆಧಾರಿತವಾಗಿದೆ. ಈ ಕಾಯ್ದೆ ಅಡಿಯಲ್ಲಿ ನೀವು ಸುಮಾರು ಸೆಕ್ಷನ್ 24 ಅಡಿಯಲ್ಲಿ ಸಾಲದ ಬಡ್ಡಿದರದಲ್ಲಿ 2 ಲಕ್ಷದವರೆಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇನ್ನು ಸೆಕ್ಷನ್ 80ಸಿ ಅಡಿಯಲ್ಲಿ ಸಾಲದ ಮೂಲ ಮೊತ್ತದಲ್ಲಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಾಗಲಿದೆ.
ಸರಿಯಾದ ಸಮಯಕ್ಕೆ ಐಟಿಆರ್ ಫೈಲಿಂಗ್
ಎಲ್ಲರೂ ಜುಲೈ 31ರ ಒಳಗಾಗಿ ಅಥವಾ ಆದಾಯ ತೆರಿಗೆ ಇಲಾಖೆ ಉಲ್ಲೇಖ ಮಾಡಿದ ದಿನಾಂಕದ ಒಳಗಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ನೀವು ಸರಿಯಾದ ಸಮಯಕ್ಕೆ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡದಿದ್ದರೆ ಶುಲ್ಕವನ್ನು ವಿಧಿಸಲಾಗುತ್ತದೆ. ಇದು ನಿಮಗೆ ನಷ್ಟ ಉಂಟು ಮಾಡಲಿದೆ. ಆದ್ದರಿಂದಾಗಿ ಸರಿಯಾದ ಸಮಯಕ್ಕೆ ಐಟಿಆರ್ ಫೈಲ್ ಮಾಡುವುದು ಅತೀ ಮುಖ್ಯವಾಗಿದೆ.


Click it and Unblock the Notifications