For Quick Alerts
ALLOW NOTIFICATIONS  
For Daily Alerts

SBI ಖಾತೆದಾರರು ಗಮನಿಸಬೇಕಾದ ATM ವಿಥ್ ಡ್ರಾ ನಿಯಮ; ಶುಲ್ಕ ಬೀಳದಂತೆ ನೋಡಿಕೊಳ್ಳಿ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಜುಲೈ 1ರಿಂದ ಅನ್ವಯ ಆಗುವಂತೆ ಎಟಿಎಂ ವಿಥ್ ಡ್ರಾ ನಿಯಮಗಳನ್ನು ಪರಿಷ್ಕರಿಸಿದೆ. ಈ ಬಗ್ಗೆ ಬ್ಯಾಂಕ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ. ಆ ಪ್ರಕಾರ, ಸಾಮಾನ್ಯ ಉಳಿತಾಯ ಖಾತೆ ಹೊಂದಿರುವವರಿಗೆ ಒಂದು ತಿಂಗಳಿಗೆ ಎಂಟು ವ್ಯವಹಾರವನ್ನು ಉಚಿತವಾಗಿ ಮಾಡಲು ಅವಕಾಶ ನೀಡುತ್ತದೆ. ಅದರ ನಂತರ ಪ್ರತಿ ವ್ಯವಹಾರಕ್ಕೂ ಶುಲ್ಕ ವಿಧಿಸಲಾಗುತ್ತದೆ.

ಒಂದು ತಿಂಗಳಿಗೆ ಎಂಟರ ಪೈಕಿ ಐದು ಎಸ್ ಬಿಐನದೇ ಎಟಿಎಂ ಹಾಗೂ ಇತರ ಬ್ಯಾಂಕ್ ಎಟಿಎಂಗಳಲ್ಲಿ ಮೂರು ವ್ಯವಹಾರ ಉಚಿತವಾಗಿರುತ್ತದೆ. ಮೆಟ್ರೋ ನಗರಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಹತ್ತು ಎಟಿಎಂ ವ್ಯವಹಾರಗಳು ಉಚಿತ. ಎಸ್ ಬಿಎಂ ಎಟಿಎಂಗಳಲ್ಲಿ ಐದು, ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ಐದು ವ್ಯವಹಾರಗಳು ಉಚಿತವಾಗಿರುತ್ತದೆ.

ಪರ್ಸನಲ್ ಲೋನ್ ಕಡಿಮೆ ಬಡ್ಡಿದರಕ್ಕೆ ನೀಡುವ ಟಾಪ್ 10 ಬ್ಯಾಂಕ್ ಗಳಿವುಪರ್ಸನಲ್ ಲೋನ್ ಕಡಿಮೆ ಬಡ್ಡಿದರಕ್ಕೆ ನೀಡುವ ಟಾಪ್ 10 ಬ್ಯಾಂಕ್ ಗಳಿವು

ಯಾವ ಗ್ರಾಹಕರು ಸರಾಸರಿ ಬ್ಯಾಲೆನ್ಸ್ ಒಂದು ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಇರಿಸಿರುತ್ತಾರೋ ಅಂಥವರಿಗೆ ಎಸ್ ಬಿಐ ಗ್ರೂಪ್ ಮತ್ತು ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ಅನಿಯಮಿತವಾದ ವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡುತ್ತದೆ ಎಸ್ ಬಿಐ. ಒಂದು ವೇಳೆ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇಲ್ಲದೆ ಎಟಿಎಂನಲ್ಲಿ ವ್ಯವಹಾರ ಮಾನ್ಯವಾಗದಿದ್ದಲ್ಲಿ 20 ರುಪಾಯಿ ಶುಲ್ಕ, ಜತೆಗೆ ಜಿಎಸ್ ಟಿ ವಿಧಿಸಲಾಗುತ್ತದೆ.

SBI ಖಾತೆದಾರರು ಗಮನಿಸಬೇಕಾದ ATM ವಿಥ್ ಡ್ರಾ ನಿಯಮ

ಹತ್ತು ಸಾವಿರ ರುಪಾಯಿ ಮೇಲ್ಪಟ್ಟ ವಿಥ್ ಡ್ರಾಗೆ ಸುರಕ್ಷತಾ ವಿಧಾನದ ಅವಕಾಶ ನೀಡುತ್ತಿದೆ ಎಸ್ ಬಿಐ. ಈ ಹೊಸ ವ್ಯವಸ್ಥೆಯು ಜನವರಿ 1, 2020ರಿಂದ ಜಾರಿಗೆ ಬಂದಿದೆ. ರಾತ್ರಿ 8ರಿಂದ ಬೆಳಗ್ಗೆ 8ರ ಮಧ್ಯೆ ಎಲ್ಲ ಎಸ್ ಬಿಐ ಎಟಿಎಂಗಳಲ್ಲೂ ಒನ್ ಟೈಮ್ ಪಾಸ್ ವರ್ಡ್ (OTP) ಬಳಸಿ, ಎಟಿಎಂ ಕಾರ್ಡ್ ದಾರರು ಹಣ ವಿಥ್ ಡ್ರಾ ಮಾಡಬಹುದು.

ಎಟಿಎಂ ಕಾರ್ಡ್ ಬಳಕೆ ಮಾಡಿ ಹಣ ವಿಥ್ ಡ್ರಾ ಮಾಡುವಾಗ ವಂಚನೆಗೆ ಗುರಿಯಾಗದಂತೆ ಇರುವುದಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಎಸ್ ಬಿಐನಿಂದ ಗ್ರಾಹಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ.

English summary

SBI Account Holders Must Know Information About ATM Withdrawal

Here is the must know facts about ATM withdrawal by SBI account holders.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X