ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊಸ ಯೋಜನೆಯೊಂದನ್ನು ಜಾರಿ ಮಾಡಿದೆ. ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಎಫ್‌ಡಿ ಯೋಜನೆಯನ್ನು ಆರಂಭ ಮಾಡಿದೆ. ಮುಖ್ಯವಾಗಿ ಸ್ಥಳೀಯ ಮತ್ತು ಎನ್‌ಆರ್‌ಐ ಗ್ರಾಹಕರಿಗೆ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಫಿಕ್ಸಿಡ್ ಡೆಪಾಸಿಟ್ ಯೋಜನೆಯು ಆಕರ್ಷಕ ಬಡ್ಡಿದರವನ್ನು ಹೊಂದಿದೆ. ಸ್ಥಳೀಯ ಮತ್ತು ಎನ್‌ಆರ್‌ಐ ಗ್ರಾಹಕರಿಗಾಗಿ ಇರುವ ಈ ಯೋಜನೆಯಲ್ಲಿ ಗ್ರಾಹಕರು ಉತ್ತಮ ಬಡ್ಡಿದರವನ್ನು ಪಡೆಯಲು ಸಾಧ್ಯವಾಗಲಿದೆ. ಈ ಯೋಜನೆಯ ಅವಧಿಯು 400 ದಿನಗಳ ಯೋಜನೆಯಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೇಳಿದೆ.
ಎಸ್‌ಬಿಐ ಅಮೃತ ಕಳಶ ಡೆಪಾಸಿಟ್ ಫಿಕ್ಸಿಡ್ ಡೆಪಾಸಿಟ್ ಯೋಜನೆಯು ಸಾಮಾನ್ಯ ಜನರಿಗೆ ಶೇಕಡ 7.10ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಎಸ್‌ಬಿಐ ಶೇಕಡ 7.60ರಷ್ಟು ಬಡ್ಡಿದರವನ್ನು ನೀಡುತ್ತದೆ. ಆದರೆ ಈ ಯೋಜನೆಯು ನಿರ್ದಿಷ್ಟ ಅವಧಿಯನ್ನು ಹೊಂದಿದೆ. ಮಾರ್ಚ್ 2023, 31ರವರೆಗೆ ಮಾತ್ರ ಈ ಯೋಜನೆಯನ್ನು ತೆರೆಯಲು ಸಾಧ್ಯವಾಗುತ್ತದೆ.

ಈ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. "ಅಮೃತ ಕಳಶ ಯೋಜನೆಯು ಸ್ಥಳೀಯ ಮತ್ತು ಎನ್‌ಆರ್‌ಐ ಗ್ರಾಹಕರು ಆಕರ್ಷಕ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯ ಅವಧಿಯು 400 ದಿನಗಳು ಆಗಿದೆ. ಅದಕ್ಕೂ ಅಧಿಕ ಅವಧಿಯನ್ನು ಕೂಡಾ ಹೊಂದಿದೆ," ಎಂದು ತಿಳಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಬಡ್ಡಿದರವನ್ನು ಕೂಡಾ ಇತ್ತೀಚೆಗೆ ಏರಿಕೆ ಮಾಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ ರೆಪೋ ದರವನ್ನು ಹೆಚ್ಚಿಸಿದೆ. ಇದಾದ ಬಳಿಕ ಹಲವಾರು ಬ್ಯಾಂಕುಗಳು ಸಾಲದ ಬಡ್ಡಿದರವನ್ನು ಮತ್ತು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಸಿದೆ. ಅದರಂತೆಯೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಸಾಲದ ಬಡ್ಡಿದರವನ್ನು 10 ಮೂಲಾಂಕ ಹೆಚ್ಚಿಸಿದೆ.
ಈ ನೂತನ ಬಡ್ಡಿದರವು ಫೆಬ್ರವರಿ 15ರಿಂದ ಜಾರಿಗೆ ಬರಲಿದೆ ಎಂದು ಎಸ್‌ಬಿಐನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಬ್ಯಾಂಕ್ 2 ವರ್ಷದಿಂದ 3 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 7ರಿಂದ ಶೇಕಡ 6.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು 3 ವರ್ಷದಿಂದ 5 ವರ್ಷದ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 6.5ರಿಂದ ಶೇಕಡ 6.25ರಷ್ಟು ಬಡ್ಡಿದರ ನೀಡಲಾಗುತ್ತದೆ.


Click it and Unblock the Notifications