ದೇಶದಲ್ಲಿ ಗುರುವಾರ ಎಸ್‌ಬಿಐ ತನ್ನ ಕ್ಯಾಷ್‌ಬ್ಯಾಕ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿನ ಮೊದಲ ರೀತಿಯ ಕ್ಯಾಶ್‌ಬ್ಯಾಕ್ ಕ್ರೆಡಿಟ್ ಕಾರ್ಡ್, "ಕ್ಯಾಶ್‌ಬ್ಯಾಕ್ SBI ಕಾರ್ಡ್" ಅನ್ನು ಭಾರತದ ಅತೀ ದೊಡ್ಡ ಪ್ಯೂರ್ ಪ್ಲೇ ಕ್ರೆಡಿಟ್ ಕಾರ್ಡ್ ವಿತರಕ ಸಂಸ್ಥೆ ಎಸ್‌ಬಿಐ ಕಾರ್ಡ್ ಬಿಡುಗಡೆ ಮಾಡಿದೆ.
ಮಾರುಕಟ್ಟೆಯಲ್ಲಿ ಮೊದಲ ಕ್ಯಾಶ್‌ಬ್ಯಾಕ್-ಕೇಂದ್ರಿತ ಕ್ರೆಡಿಟ್ ಕಾರ್ಡ್ ಇದಾಗಿದೆ. CASHBACK SBI ಕಾರ್ಡ್, ಯಾವುದೇ ವ್ಯಾಪಾರದ ಮಿತಿಗಳಿಲ್ಲದೆ ಎಲ್ಲಾ ಆನ್‌ಲೈನ್ ಖರೀದಿಗಳಲ್ಲಿ ಶೇಕಡ 5ರಷ್ಟು ಕ್ಯಾಶ್‌ಬ್ಯಾಕ್ ಗಳಿಸಲು ಕಾರ್ಡ್‌ದಾರರಿಗೆ ಅವಕಾಶ ನೀಡುತ್ತದೆ.
ಎಲ್ಲಾ ಗ್ರಾಹಕರಿಗೆ ಕಾರ್ಡ್ ತ್ವರಿತ, ಸುಲಭ ಮತ್ತು ಸಂಪೂರ್ಣವಾಗಿ ಡಿಜಿಟಲ್ ಸೈನ್-ಅಪ್ ಪ್ರಕ್ರಿಯೆಯನ್ನು ಒದಗಿಸುತ್ತದೆ. ಡಿಜಿಟಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ "ಎಸ್‌ಬಿಐ ಕಾರ್ಡ್ ಸ್ಪ್ರಿಂಟ್" ಮೂಲಕ, ಭಾರತದ ಗ್ರಾಹಕರು, ಶ್ರೇಣಿ 2 ಮತ್ತು 3 ನಗರಗಳಲ್ಲಿಯೂ ಸಹ, ಕೆಲವೇ ಕ್ಲಿಕ್‌ಗಳಲ್ಲಿ ಕ್ಯಾಷ್‌ಬ್ಯಾಕ್ ಪಡೆಯಲು ಸಾಧ್ಯವಾಗಲಿದೆ. ಈ ಕ್ರೆಡಿಟ್ ಕಾರ್ಡ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಪ್ರತಿ ಮಾಸಿಕ ವಹಿವಾಟಿಗೆ ಕ್ಯಾಷ್‌ಬ್ಯಾಕ್ ಹೆಚ್ಚಳ
ಮಾರ್ಚ್ 2023 ರವರೆಗೆ ಮೊದಲ ವರ್ಷಕ್ಕೆ ಸಂಪರ್ಕರಹಿತ ಕಾರ್ಡ್ ಉಚಿತವಾಗಿದೆ. ಇದು ವಿಶೇಷ ಕೊಡುಗೆಯಾಗಿದೆ. ಕ್ಯಾಶ್‌ಬ್ಯಾಕ್ SBI ಕಾರ್ಡ್ ಗ್ರಾಹಕರು ಎಲ್ಲಾ ಖರ್ಚುಗಳ ಮೇಲೆ ಅನಿಯಮಿತ ಶೇಕಡ 1 ರಷ್ಟು ಕ್ಯಾಶ್‌ಬ್ಯಾಕ್ ಗಳಿಸುತ್ತಾರೆ. ಪ್ರತಿ ಮಾಸಿಕ ವಹಿವಾಟಿಗೆ ಗರಿಷ್ಠ ರೂ 10,000 ವರೆಗೆ ಎಲ್ಲಾ ಆನ್‌ಲೈನ್ ಖರ್ಚುಗಳ ಮೇಲೆ ಕ್ಯಾಶ್‌ಬ್ಯಾಕ್ ಶೇಕಡಾ 5 ಕ್ಕೆ ಹೆಚ್ಚಾಗುತ್ತದೆ. ಕ್ಯಾಶ್‌ಬ್ಯಾಕ್ ಎಸ್‌ಬಿಐ ಕಾರ್ಡ್ ಸ್ವಯಂಚಾಲಿತ ಕ್ಯಾಶ್‌ಬ್ಯಾಕ್ ಕ್ರೆಡಿಟ್ ಫೀಚರ್ ಅನ್ನು ಹೊಂದಿದ್ದು ಸ್ಟೇಟ್‌ಮೆಂಟ್ ಆದ ಎರಡು ದಿನಗಳೊಳಗೆ ಅಧಿಕೃತ ಕ್ಯಾಶ್‌ಬ್ಯಾಕ್‌ನ ಸ್ವಯಂಚಾಲಿತ ಕ್ರೆಡಿಟ್ ಅನ್ನು ಎಸ್‌ಬಿಐ ಕಾರ್ಡ್ ಖಾತೆಗೆ ಸಕ್ರಿಯಗೊಳಿಸುತ್ತದೆ.
ಎಸ್‌ಬಿಐ ಕಾರ್ಡ್ ಅಧಿಕಾರಿಗಳು ಏನು ಹೇಳುತ್ತಾರೆ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಬಿಐ ಕಾರ್ಡ್‌ನ ಎಂಡಿ ಮತ್ತು ಸಿಇಒ ರಾಮಮೋಹನ್ ರಾವ್ ಅಮರ, "ಕ್ಯಾಶ್‌ಬ್ಯಾಕ್ ಎಸ್‌ಬಿಐ ಕಾರ್ಡ್ ನಮ್ಮ ಕೋರ್ ಕಾರ್ಡ್ ಪೋರ್ಟ್‌ಫೋಲಿಯೊವನ್ನು ಇನ್ನಷ್ಟು ಬಲಪಡಿಸುತ್ತದೆ. ಗ್ರಾಹಕರ ಹಲವಾರು ಬೇಡಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಸ್‌ಬಿಐ ಮಾಡುತ್ತಿರುವ ಪ್ರಯತ್ನಗಳಲ್ಲಿ ಇದು ಒಂದು ಉತ್ತಮ ಉದಹರಣೆಯಾಗಿದೆ. ಆನ್‌ಲೈನ್ ಶಾಪಿಂಗ್ ಮತ್ತು ಕ್ಯಾಶ್‌ಬ್ಯಾಕ್‌ಗಳ ಬಗ್ಗೆ ಗ್ರಾಹಕರು ಎಷ್ಟು ಒಲವು ಹೊಂದಿದ್ದೇವೆ ಎಂದು ಸೂಕ್ಷ್ಮವಾಗಿ ನಿರ್ಣಯ ಮಾಡಿದ್ದೇವೆ.
ಕ್ಯಾಶ್‌ಬ್ಯಾಕ್ ಎಸ್‌ಬಿಐ ಕಾರ್ಡ್ ಪ್ರಯೋಜನವೇನು?
ಕಾರ್ಡುದಾರರಿಗೆ ಪ್ರತಿ ವರ್ಷ ನಾಲ್ಕು ಬಾರಿ ದೇಶೀಯ ವಿಮಾನ ನಿಲ್ದಾಕ್ಕೆ ಭೇಟಿ ನೀಡುವ ಅವಕಾಶ ಲಭ್ಯವಾಗಲಿದೆ (ಪ್ರತಿ ತ್ರೈಮಾಸಿಕಕ್ಕೆ ಒಂದು ಬಾರಿ ಮಾತ್ರ ಭೇಟಿ ನೀಡುವ ಅವಕಾಶವಿದೆ). ಪ್ರತಿ ಕ್ರೆಡಿಟ್ ಕಾರ್ಡ್ ಖಾತೆಗೆ ಪ್ರತಿ ಬಿಲ್ಲಿಂಗ್ ಸ್ಟೇಟ್‌ಮೆಂಟ್‌ಗೆ ಮಾಸಿಕವಾಗಿ ರೂಪಾಯಿ ನೂರರಷ್ಟು ಗರಿಷ್ಠ ಮನ್ನಾ ಮಿತಿಯಿದೆ. 500 ರಿಂದ 3,000 ರೂಪಾಯಿಗಳ ನಡುವಿನ ವಹಿವಾಟಿಗೆ ಶೇಕಡ 1 ಇಂಧನ ಶುಲ್ಕ ವಿನಾಯಿತಿ ಲಭ್ಯವಾಗಲಿದೆ. ಕಾರ್ಡ್‌ನ ವಾರ್ಷಿಕ ನವೀಕರಣ ವೆಚ್ಚವು ರೂಪಾಯಿ 999+ಯಾವುದೇ ಸಂಬಂಧಿತ ತೆರಿಗೆಗಳು ಆಗಿರುತ್ತದೆ. ಕಾರ್ಡ್ ಸದಸ್ಯತ್ವ ವರ್ಷದಲ್ಲಿ ರೂ 2 ಲಕ್ಷ ಆದಾಗ ಕ್ಯಾಷ್‌ಬ್ಯಾಕ್ ಎಸ್‌ಬಿಐ ಕಾರ್ಡ್‌ಗಳನ್ನು ಹೊಂದಿರುವವರು ನವೀಕರಣ ಶುಲ್ಕ ಮರುಪಾವತಿ ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ. VISA ಪ್ಲಾಟ್‌ಫಾರ್ಮ್ ಕ್ಯಾಶ್‌ಬ್ಯಾಕ್ SBI ಕಾರ್ಡ್ ಅನ್ನು ಬೆಂಬಲಿಸುತ್ತದೆ.


Click it and Unblock the Notifications