ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಗ್ರಾಹಕರೇ?. ಹಾಗಿದ್ದರೆ ನೀವು ತಪ್ಪದೆ ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ಎಸ್‌ಬಿಐನ ಕೆಲವು ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಇದು ಗ್ರಾಹಕರ ಮೇಲೆ ಪ್ರಭಾವ ಬೀರುವುದಂತು ಖಂಡಿತ.
ನೀವು ಈ ಒಂದು ಕಾರ್ಯವನ್ನು ಕೊನೆಯ ದಿನಾಂಕಕ್ಕೂ ಮುನ್ನ ಮಾಡದಿದ್ದರೆ, ನಿಮ್ಮ ಖಾತೆ ಫ್ರೀಜ್ ಆಗುವುದು ಖಂಡಿತ. ಎಸ್‌ಬಿಐ ಮಾತ್ರವಲ್ಲದೆ ಇತರೆ ಬ್ಯಾಂಕ್‌ಗಳಲ್ಲಿಯೂ ಈ ನಿಯಮವನ್ನು ಜಾರಿ ಮಾಡಲಾಗುತ್ತಿದ್ದು, ಎಸ್‌ಬಿಐನಲ್ಲಿ ಈ ನಿಯಮವನ್ನು ಪಾಲಿಸದಿದ್ದರೆ ನಿಮ್ಮ ವಹಿವಾಟಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಹಾಗಾದರೆ ಕೊನೆಯ ದಿನಾಂಕ ಯಾವಾಗ, ನೀವು ಏನು ಮಾಡಬೇಕು?, ಇಲ್ಲಿದೆ ವಿವರ ಮುಂದೆ ಓದಿ...

ಏನಿದು ನಿಯಮ ತಿಳಿಯಿರಿ
ಈ ನಿಯಮವು ಮುಖ್ಯವಾಗಿ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿರುವವರಿಗೆ ಅನ್ವಯವಾಗುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿರುವ ಚಿನ್ನ, ಆಸ್ತಿ ಪತ್ರ, ಹಣ ಮೊದಲಾದವುಗಳನ್ನು ನಾವು ಬ್ಯಾಂಕ್‌ನಲ್ಲಿ ಇರಿಸುತ್ತೇವೆ. ಇದು ನಮ್ಮ ಆಸ್ತಿಯ ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮವಾಗಿದೆ.
ಆರ್‌ಬಿಐ ಈಗಾಗಲೇ ತಿಳಿಸಿರುವಂತೆ ಡಿಸೆಂಬರ್ 31 ರ ಒಳಗಾಗಿ ಪರಿಷ್ಕೃತ ಲಾಕರ್ ನಿಯಮಕ್ಕೆ ಅನುಗುಣವಾಗಿ ಲಾಕರ್ ಪಡೆದುಕೊಂಡವರು ಸಹಿ ಹಾಕಬೇಕು. ಹಲವಾರು ವರ್ಷಗಳಿಂದ ಲಾಕರ್ ನಿಯಮ ಬದಲಾವಣೆ ಮಾಡಲಾಗಿರಲಿಲ್ಲ. ಆದರೆ ಈಗ ಪರಿಷ್ಕರಣೆ ಮಾಡಲಾಗಿದೆ.
ಈ ಕಾರಣ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿರುವವರು ಕೂಡಲೇ ಅಲರ್ಟ್ ಆಗಬೇಕಾಗುತ್ತದೆ. ನೀವು ಎಸ್‌ಬಿಐನ ಗ್ರಾಹಕರಾಗಿದ್ದರೆ, ಡಿಸೆಂಬರ್ 31 ರ ಒಳಗಾಗಿ ಬ್ಯಾಂಕ್‌ನ ನಿಯಮಕ್ಕೆ ಅನುಗುಣವಾಗಿ ಸಹಕಾರ ಮಾಡಬೇಕು ಎಂದು ಆರ್‌ಬಿಐ ಮನವಿ ಮಾಡಿದೆ.
ನೀವು ನಿಗದಿತ ದಿನಾಂಕದ ಒಳಗಾಗಿ ಪರಿಷ್ಕೃತ ಲಾಕರ್ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಅದಕ್ಕಾಗಿ ನೀವು ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತದೆ. ನೀವು ಈ ಬಗ್ಗೆ ಬ್ಯಾಂಕ್‌ಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದಾದ ಬಳಿಕ ಸ್ಟ್ಯಾಂಪ್ ಪೇಪರ್‌ನಲ್ಲಿ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಮಾಡಬೇಕಾಗುತ್ತದೆ.
ನೀವು ಲಾಕರ್ ನಿಯಮ ಪರಿಷ್ಕರಣೆಯ ಒಪ್ಪಂದಕಕ್ಎ ಸಹಿ ಹಾಕುವ ಸಂದರ್ಭದಲ್ಲಿ ಆಧಾರ್ ಜಾರ್ಡ್ ಅನ್ನು ಕೂಡಾ ನೀಡಬೇಕಾಗುತ್ತದೆ. ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ, ಡಿಸೆಂಬರ್ 31 ರ ಒಳಗಾಗಿ ಈ ಕಾರ್ಯವನ್ನು ಮಾಡಿಬಿಡಿ. ಇಲ್ಲವಾದರೆ ಖಾತೆಯಲ್ಲಿನ ವಹಿವಾಟಿಗೆ ತೊಂದರೆ ಉಂಟಾಗಬಹುದು.
ಬ್ಯಾಂಕ್‌ಗೆ ಭದ್ರತೆ ಹೊಣೆಗಾರಿಕೆ
ಆರ್‌ಬಿಐ ಪ್ರಕಾರ, ಲಾಕರ್‌ಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಅಗ್ನಿ ಅವಘಡ, ಕಳ್ಳತನ, ದರೋಡೆ, ಡಕಾಯಿತಿ, ನಿರ್ಲಕ್ಷ್ಯ ಮತ್ತು ಕಟ್ಟಡ ಕುಸಿತದಂತಹ ಘಟನೆಗಳನ್ನು ತಡೆಯಲು ಬ್ಯಾಂಕುಗಳು ತಮ್ಮ ಸ್ವಂತ ನ್ಯೂನತೆಗಳು ಉಂಟಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.


Click it and Unblock the Notifications