SBI: ಬಡ್ಡಿ ದರ ಮತ್ತೆ ಕಡಿತ.. ಹೊಸ ದರ ಎಷ್ಟು? ಯಾವ ಅವಧಿಗೆ ಅನ್ವಯ?

ಮತ್ತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು ಕಡಿತಗೊಳಿಸಿದೆ. ಈ ಹೊಸ ದರಗಳು ಮೇ 16, 2025 ರಿಂದ ಅನ್ವಯವಾಗುತ್ತದೆ. ಈ ಎಸ್‌ಬಿಐ ನಿಶ್ಚಿತ ಠೇವಣಿ (FD) ಬಡ್ಡಿ ದರಗಳ ಕಡಿತ ಸಾಮಾನ್ಯ ಜನರಿಗೂ ಮತ್ತು ಹಿರಿಯ ನಾಗರಿಕರಿಗೆ ಅನ್ವಯವಾಗುತ್ತದೆ.

ಹೌದು, ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರಗಳನ್ನು ಕಡತಗೊಳಿಸಿದೆ. ಕಳೆದ ತಿಂಗಳು ಕೂಡ ಎಫ್‌ಡಿ ದರಗಳನ್ನು ಕಡಿತಗೊಳಿಸಿದ ನಂತರ ಮತ್ತೆ ದರಗಳನ್ನು ಇಳಿಕೆ ಮಾಡಿದೆ.

SBI: ಬಡ್ಡಿ ದರ ಮತ್ತೆ ಕಡಿತ.. ಹೊಸ ದರ ಎಷ್ಟು?

SBI ವೆಬ್‌ಸೈಟ್ ಪ್ರಕಾರ, ಎಫ್‌ಡಿ ದರಗಳನ್ನು ಎಲ್ಲಾ ಅವಧಿಗಳಿಗೂ 20 ಬೇಸಿಸ್ ಪಾಯಿಂಟ್‌ಗಳಷ್ಟು (bps) ಕಡಿತವಾಗಿದೆ. ಇದರಿಂದಾಗಿ ಎಫ್‌ಡಿ ಮಾಡುವವರಿಗೆ ಬಟ್ಟಿ ಕಡಿಮೆ ಸಿಗುತ್ತದೆ.

ಎಸ್‌ಬಿಐ ಎಫ್‌ಡಿಯ ಹೊಸ ಬಡ್ಡಿ ದರಗಳು

7 ರಿಂದ 45 ದಿನಗಳಿಗೆ ಶೇಕಡಾ 3.3 ರಷ್ಟು ಬಡ್ಡಿ
46ರಿಂದ179 ದಿನಗಳಿಗೆ ಶೇಕಡಾ 5.3ರಷ್ಟು ಬಡ್ಡಿ
180 ರಿಂದ 210 ದಿನಗಳಿಗೆ ಶೇಕಡಾ 6.05 ರಷ್ಟು ಬಡ್ಡಿ
211 ರಿಂದ 1 ವರ್ಷಕ್ಕಿಂತ ಕಡಿಮೆ ಅವಧಿಗೆ ಸಿಗುವ ಬಡ್ಡಿ ಶೇಕಡಾ 6.3 ರಷ್ಟು.
ಒಂದು ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ. 6.5ರಷ್ಟು ಬಡ್ಡಿ
ಎರಡು ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ. 6.7ರಷ್ಟು ಬಡ್ಡಿ
ಮೂರು ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ.6.55ರಷ್ಟು ಬಡ್ಡಿ.
ಐದು ವರ್ಷದಿಂದ 10 ವರ್ಷಗಳವರೆಗೆ ಶೇಕಡಾ 6.3ರಷ್ಟು ಬಡ್ಡಿ.

ಎಸ್‌ಬಿಐ (SBI) ತನ್ನ ಎಲ್ಲಾ ನಿಗದಿತ ಠೇವಣಿ (FD) ಬಡ್ಡಿದರಗಳನ್ನುಸಾಮಾನ್ಯ ನಾಗರಿಕರು, ಹಿರಿಯ ನಾಗರಿಕರು ಮತ್ತು ಸೂಪರ್ ಸೀನಿಯರ್ ನಾಗರಿಕರು (80 ವರ್ಷ ಮತ್ತು ಮೇಲ್ಪಟ್ಟವರು) ಎಲ್ಲರಿಗೂ 20 ಬ್ಯಾಸಿಸ್ ಪಾಯಿಂಟ್ (bps) ಇಳಿಕೆಯಾಗಿಸಿದೆ.

ಪರಿಷ್ಕೃತ FD ಬಡ್ಡಿದರಗಳ ವಿವರ (3 ಕೋಟಿಗಿಂತ ಕಡಿಮೆ ಠೇವಣಿಗೆ):
ಗ್ರೂಪ್ ಹಳೆಯ ಬಡ್ಡಿದರ ಹೊಸ ಬಡ್ಡಿದರ
ಸಾಮಾನ್ಯ ನಾಗರಿಕರು ಶೇ.4.00 - ಶೇ.7.50 ಶೇ.3.80% - ಶೇ7.30
ಹಿರಿಯ ನಾಗರಿಕರು (>= 60 ವರ್ಷ) ಶೇ.4.00 - ಶೇ.7.50 ಶೇ.3.80% - ಶೇ.7.30
ಸೂಪರ್ ಸೀನಿಯರ್ (>= 80 ವರ್ಷ) ಶೇ. 7.65 (ವಿಶೇಷ ಯೋಜನ) ಶೇ.7.45

ಅಮೃತ್ ವೃಷ್ಟಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ವರ್ಷಕ್ಕೆ ಶೇ. 7.35 ಬಡ್ಡಿ ಸಿಗುತ್ತದೆ. ಬಡ್ಡಿ ಪರಿಷ್ಕರಣೆಯ ನಂತರ, ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ (80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು) ವಾರ್ಷಿಕವಾಗಿ ಶೇ. 7.45ರಷ್ಟು ಬಡ್ಡಿ ಕೈ ಸೇರುತ್ತದೆ.

SBI ಗೃಹ ಸಾಲದ ಬಡ್ಡಿದರಗಳು
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಪ್ರಮುಖ ಸಾಲ ದರಗಳನ್ನು ಶೇ.0.25ರಷ್ಟು ಕಡಿಮೆ ಮಾಡಿದೆ. ಸಾಲ ಪಡೆಯುವವರ CIBIL ಸ್ಕೋರ್ ಆಧರಿಸಿ SBI ಗೃಹ ಸಾಲದ ಬಡ್ಡಿ ದರವು ಶೇ.8ರಿಂದ ಶೇ.8.95 ವರೆಗೆ ಸಿಗುತ್ತದೆ.ಎಸ್‌ಬಿಐ ಗೃಹ ಸಾಲದ ಮ್ಯಾಕ್ಸ್‌ಗೇನ್ OD ಬಡ್ಡಿ ದರವು ಶೇ.8.25ಮತ್ತು ಶೇ.9.15 ರ ನಡುವೆ ಬದಲಾಗುತ್ತದೆ. ಟಾಪ್ ಅಪ್ ಸಾಲಕ್ಕೆ, ಬಡ್ಡಿ ದರವು ಶೇ.8.30ಮತ್ತು ಶೇ.10.80 ರ ನಡುವೆ ಬದಲಾಗುತ್ತದೆ.

ಒಟ್ಟಾರೆಯಾಗಿ, ಎಸ್‌ಬಿಐ ತನ್ನ ಎಫ್‌ಡಿ ಬಡ್ಡಿ ದರಗಳನ್ನು ಇಳಿಕೆ ಮಾಡಿರುವುದರಿಂದ ಎಫ್‌ಡಿ ಮಾಡುವವರಿಗೆ ಕಡಿಮೆಯ ಬಡ್ಡಿ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+