ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫಿಕ್ಸೆಡ್ ಡೆಪಾಸಿಟ್ ಗಳ ಮೇಲೆ ಹೂಡಿಕೆ ಮಾಡುವವರಿಗೆಶಾಕ್ ನೀಡಿದೆ.
ಹೌದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿಶೇಷ ಎಫ್‌ಡಿ ಅಮೃತ್ ವೃಷ್ಠಿ ಯೋಜನೆಯ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಿದೆ. ಇದರ ಹೊಸ ಬಡ್ಡಿದರಗಳು ನಾಳೆಯಿಂದಲ್ಲೇ ಅನ್ವಯವಾಗುತ್ತದೆ.
ಅಮೃತ್ ವೃಷ್ಠಿ ಎಫ್ ಡಿ ಯೋಜನೆಯಡಿಯಲ್ಲಿ ಹೂಡಿಕೆದಾರರು ಠೇವಣಿಗಳ ಮೇಲೆ ಹಿಂದಿನಂತೆಯೇ ಬಡ್ಡಿಯನ್ನು ಪಡೆಯಲು ಸಾಧ್ಯವಿಲ್ಲ.ಯಾಕೆಂದರೆ ಬಡ್ಡಿದರಗಳನ್ನು ಕಡಿಮೆ ಮಾಡಲಾಗಿದೆ. ಆದರೆ ಬ್ಯಾಂಕ್ ಇತರ ನಿಯಮಿತ ಎಫ್‌ಡಿ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಅಮೃತ್ ವೃಷ್ಟಿ ಯೋಜನೆಯಡಿಯಲ್ಲಿ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (bps) ಕಡಿಮೆ ಮಾಡಲಾಗಿದೆ. ಸಾಮಾನ್ಯ ಜನರಿಗೆ ಈಗ 444 ದಿನಗಳ ಅವಧಿಗೆ ವಾರ್ಷಿಕ ಶೇ. 6.6 ಬಡ್ಡಿದರವಿದೆ ಎಂದು ನೀವು ತಿಳಿದಿರಬೇಕು. ಇದಕ್ಕೂ ಮೊದಲು, ಇದರ ದರಗಳು ವಾರ್ಷಿಕ ಶೇ. 6.85 ರಷ್ಟಿತ್ತು. ಹಿರಿಯ ನಾಗರಿಕರು ಮತ್ತು ಅತಿ ಹಿರಿಯ ನಾಗರಿಕರು ಬಡ್ಡಿದರಗಳಲ್ಲಿ ಹೆಚ್ಚಿನ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.
ಬ್ಯಾಂಕಿನ ವಿಶೇಷ ಎಫ್‌ಡಿ ಯೋಜನೆಯು ಈಗ ಹಿರಿಯ ನಾಗರಿಕರಿಗೆ ವಾರ್ಷಿಕ ಶೇ. 7.10 ಬಡ್ಡಿದರವನ್ನು ನೀಡುತ್ತದೆ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ಜನರು ಬಡ್ಡಿದರದ ಮೇಲೆ ಹೆಚ್ಚುವರಿಯಾಗಿ 10 ಬೇಸಿಸ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಈ ಬದಲಾವಣೆಯ ನಂತರ, 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯ ನಾಗರಿಕರಿಗೆ ಈಗ ವಾರ್ಷಿಕ ಶೇ. 7.20ಬಡ್ಡಿದರವನ್ನು ನೀಡಲಾಗುತ್ತದೆ.
ಈ ಸಮಯಕ್ಕಿಂತ ಮೊದಲು ಹಿಂಪಡೆಯುವಿಕೆಗೆ ದಂಡ ವಿಧಿಸಲಾಗುತ್ತದೆ. ಹೂಡಿಕೆದಾರರು ಮುಕ್ತಾಯದ ಮೊದಲು ಎಫ್‌ಡಿಯನ್ನು ಮುರಿದರೆ, ಬ್ಯಾಂಕ್ ಕೆಲವು ಶುಲ್ಕಗಳನ್ನು ವಿಧಿಸುತ್ತದೆ. 5 ಲಕ್ಷ ರೂ.ವರೆಗಿನ ಚಿಲ್ಲರೆ ಎಫ್‌ಡಿಗಳಿಗೆ, ಅಕಾಲಿಕ ಹಿಂಪಡೆಯುವಿಕೆಗೆ ಶೇ.0.50 ದಂಡವನ್ನು ಪಾವತಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಈ ದಂಡವು 5 ಲಕ್ಷ ರೂ.ಗಿಂತ ಹೆಚ್ಚಿನ ಮತ್ತು 3 ಕೋಟಿ ರೂ.ಗಳವರೆಗಿನ ಎಫ್‌ಡಿಗಳಿಗೆ ಶೇ.1 ಆಗಿರುತ್ತದೆ. ಇದು ಎಲ್ಲಾ ಸಮಯದಲ್ಲೂ ಅನ್ವಯವಾಗುತ್ತದೆ.
ಬಡ್ಡಿದರಗಳನ್ನು ಏಕೆ ಕಡಿತಗೊಳಿಸಬೇಕು?
ಇತ್ತೀಚೆಗೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿಯಲ್ಲಿ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇದರಿಂದಾಗಿ, ICICI ಬ್ಯಾಂಕ್, HDFC ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಇತರ ಹಲವು ಬ್ಯಾಂಕ್‌ಗಳು ತಮ್ಮ FD ಬಡ್ಡಿದರಗಳನ್ನು ಕಡಿಮೆ ಮಾಡಿವೆ.
ಹೂಡಿಕೆ ಮಾಡುವ ಮೊದಲು ಏನು ಮಾಡಬೇಕು?
ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಹೊಸ ಬಡ್ಡಿದರಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕುತ್ತದೆ. ಈ ಯೋಜನೆಯು ಹಿರಿಯ ನಾಗರಿಕರಲ್ಲಿ ಇನ್ನೂ ಅಚ್ಚುಮೆಚ್ಚಿನದಾಗಿದೆ, ಆದರೆ ಸಾಮಾನ್ಯ ಹೂಡಿಕೆದಾರರು ಇನ್ನು ಮುಂದೆ ಮೊದಲಿನಂತೆಯೇ ಲಾಭವನ್ನು ಪಡೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಹೂಡಿಕೆ ಮಾಡುವ ಮೊದಲು ಬಡ್ಡಿದರ, ಸಮಯ ಮತ್ತು ಅಕಾಲಿಕ ಹಿಂಪಡೆಯುವಿಕೆಯ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ತುಂಬಾನೇ ಮುಖ್ಯ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಮೃತ್ ವೃಷ್ಟಿ ಯೋಜನೆಯು ಒಂದು ನಿರ್ದಿಷ್ಟ ಅವಧಿಯ ಠೇವಣಿ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಹೂಡಿಕೆದಾರರಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ಈ ಯೋಜನೆಯಲದಲಿ ಹೂಡಿಕೆ ಮಾಡುವ ಎಫ್‌ಡಿಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.
ಎಸ್‌ಬಿಐ ಅಮೃತ್ ವೃಷ್ಟಿ ಯೋಜನೆಯು 400 ದಿನಗಳ ಅವಧಿಗೆ ಲಭ್ಯವಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ. ಸಾಮಾನ್ಯ ಗ್ರಾಹಕರಿಗೆ ಹೋಲಿಸಿದರೆ ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.
ನೀವು ಯಾವುದೇ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬೇಕಾದ್ದರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಎಚ್ಚರದಿಂದ ಹೂಡಿಕೆ ಮಾಡಿ.


Click it and Unblock the Notifications