ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ವಿಶೇಷ ಅವಧಿಯ ಡೆಪಾಸಿಟ್ ಯೋಜನೆ "ಅಮೃತ್ ಕಳಶ" ದ ಮಾನ್ಯತೆಯ ಅವಧಿಯನ್ನು 31ನೇ ಡಿಸೆಂಬರ್ 2023 ರವರೆಗೆ ವಿಸ್ತರಿಸಿದೆ. ಈ ಎಫ್‌ಡಿ ಡೆಪಾಸಿಟ್ ಯೋಜನೆಯು ಆಗಸ್ಟ್ 15, 2023 ರವರೆಗೆ ಮಾನ್ಯವಾಗಿತ್ತು.
ಈ 400-ದಿನಗಳ ಅವಧಿಯ ಡೆಪಾಸಿಟ್ ಯೋಜನೆಯ ಬಡ್ಡಿದರವು ಎಸ್‌ಬಿಐ ವೆಬ್‌ಸೈಟ್ ಪ್ರಕಾರ ಸಾಮಾನ್ಯ ಗ್ರಾಹಕರಿಗೆ ಶೇಕಡ 7.1 ಆಗಿದೆ. ಹಾಗೆಯೇ ಹಿರಿಯ ನಾಗರಿಕರಿಗೆ ಎಸ್‌ಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿ ಅಡಿಯಲ್ಲಿ ಸುಮಾರು ಶೇಕಡ 7.6ರಷ್ಟು ಬಡ್ಡಿದರವನ್ನು ನೀಡುತ್ತದೆ.

ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಏನಿದೆ?
"ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) "400 ದಿನಗಳ" ಯೋಜನೆಯು (ಅಮೃತ್ ಕಳಶ) 2023 ರ ಏಪ್ರಿಲ್ 12 ರಿಂದ ಜಾರಿಗೆ ಬಂದಿದ್ದು, ಈ ಯೋಜನೆಯ ಬಡ್ಡಿದರವು ಸಾಮಾನ್ಯ ನಾಗರಿಕರಿಗೆ ಶೇಕಡ 7.10 ಆಗಿದೆ. ಇನ್ನು ಹಿರಿಯ ನಾಗರಿಕರಿಗೆ ಈ ಎಫ್‌ಡಿ ಯೋಜನೆಯ ಬಡ್ಡಿದರವು ಶೇಕಡ 7.60 ಆಗಿದೆ. ಈ ಯೋಜನೆಯು 2023 ರ ಡಿಸೆಂಬರ್ 31 ರವರೆಗೆ ಮಾನ್ಯವಾಗಿರುತ್ತದೆ," ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.
ಎಸ್‌ಬಿಐ ವೆಬ್‌ಸೈಟ್ ಪ್ರಕಾರ ಅಮೃತ ಕಳಶ ಯೋಜನೆಯು ಸ್ಥಳೀಯ ರಿಟೇಲ್ ಟರ್ಮ್ ಡೆಪಾಸಿಟ್ ಯೋಜನೆಯಾಗಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ಎನ್‌ಆರ್‌ಐ ರುಪೀ ಟರ್ಮ್ ಡೆಪಾಸಿಟ್ ಇದರಲ್ಲಿ ಸೇರಿದೆ. ಈ ಯೋಜನೆಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕವಾಗಿ ಬಡ್ಡಿದರವನ್ನು ಹೂಡಿಕೆ ಮಾಡಲಾಗುತ್ತದೆ.
ಎಸ್‌ಬಿಐ ಎಫ್‌ಡಿ ಯೋಜನೆ ಬಡ್ಡಿದರ
ಮುಂದಿನ 7 ರಿಂದ 45 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇಕಡ 3ರಷ್ಟು ಬಡ್ಡಿದರವನ್ನು ನೀಡುತ್ತದೆ. 46 ರಿಂದ 179 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಡೆಪಾಸಿಟ್‌ಗಳ ಮೇಲಿನ ಬಡ್ಡಿದರವು ಶೇಕಡ 4.50 ರಷ್ಟಾಗಿದೆ.
180 ದಿನಗಳಿಂದ 210 ದಿನಗಳವರೆಗಿನ ಅವಧಿಯ ಡೆಪಾಸಿಟ್ ಯೋಜನೆಗೆ ಎಸ್‌ಬಿಐ ಶೇಕಡ 5.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು 211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್ ಮೇಲೆ ಬ್ಯಾಂಕ್ ಶೇಕಡ 5.75ರಷ್ಟು ಬಡ್ಡಿದರವನ್ನು ನೀಡುತ್ತದೆ.
1 ವರ್ಷದಿಂದ 2 ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಡೆಪಾಸಿಟ್‌ಗಳ ಮೇಲೆ ಶೇಕಡ 6.80ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 2 ವರ್ಷದಿಂದ 3 ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ. 3 ವರ್ಷದಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 6.50ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ, ಎಸ್‌ಬಿಐ ದೇಶದಾದ್ಯಂತ 300 ಶಾಖೆಗಳನ್ನು ತೆರೆಯುವ ಗುರಿ ಹೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಸಾಲ ನೀಡುವ ಬ್ಯಾಂಕ್ ಈಗ ರಾಷ್ಟ್ರದಾದ್ಯಂತ 22,405 ಶಾಖೆಗಳ ಜೊತೆಗೆ 235 ಅಂತರರಾಷ್ಟ್ರೀಯ ಶಾಖೆಗಳು ಮತ್ತು ಕಚೇರಿಗಳನ್ನು ಹೊಂದಿದೆ.


Click it and Unblock the Notifications