ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳನ್ನು ಮತ್ತೆ ಕಡಿತಗೊಳಿಸಿದೆ. ಆರ್‌ಬಿಐ ಬಡ್ಡಿ ದರಗಳಲ್ಲಿ (ರೆಪೋ) ಯಥಾಸ್ಥಿತಿ ಕಾಯ್ದುಕೊಂಡ ಬಳಿಕ ಎಸ್‌ಬಿಐ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದು ಫೆಬ್ರವರಿ 10ರಿಂದಲೇ ಹೊಸ ದರಗಳು ಅನ್ವಯವಾಗಲಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲ ನಿರ್ದಿಷ್ಟ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರಗಳನ್ನು ಜನವರಿಯಲ್ಲಿ 0.15 ಪರ್ಸೆಂಟ್ ಕಡಿಮೆ ಮಾಡಿತ್ತು. 2 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳಿಗೆ ಹೊಸ ಬಡ್ಡಿ ದರಗಳು ಅನ್ವಯವಾಗಲಿದೆ. 7 ರಿಂದ 45 ದಿನಗಳ ಡೆಪಾಸಿಟ್‌ಗಳಿಗೆ ಯಾವುದೇ ಹೊಸ ದರಗಳು ಅನ್ವಯವಾಗುವುದಿಲ್ಲ.
ಫೆಬ್ರವರಿ 10ರಿಂದ ಅನ್ವಯವಾಗಲಿರುವ ಸ್ಥಿರ ಠೇವಣಿ ಮೇಲಿನ ಹೊಸ ಹೊಸ ಬಡ್ಡಿ ದರಗಳು ಈ ಕೆಳಗಿನಂತಿವೆ:
1 ವರ್ಷದೊಳಗಿನ ಸ್ಥಿರ ಠೇವಣಿಯ ಬಡ್ಡಿ ದರಗಳು
7 ರಿಂದ 45 ದಿನಗಳಿಗೆ 4.50% (ಯಾವುದೇ ಬದಲಾವಣೆ ಇಲ್ಲ)
46 ರಿಂದ 179 ದಿನಗಳವರೆಗೆ 5.00% ( 0.50% ಇಳಿಕೆ)
180 ದಿನಗಳಿಂದ 210 ದಿನಗಳವರೆಗೆ 5.50% (0.30% ಇಳಿಕೆ)
1 ರಿಂದ 10 ವರ್ಷದವರೆಗಿನ ಸ್ಥಿರ ಠೇವಣಿಯ ಬಡ್ಡಿ ದರಗಳು
1 ವರ್ಷದಿಂದ 2 ವರ್ಷದವರೆಗೆ 6.00% (0.10% ಇಳಿಕೆ)
2 ವರ್ಷದಿಂದ 3 ವರ್ಷದೊಳಗೆ 6.00% (0.10% ಇಳಿಕೆ)
3 ವರ್ಷದಿಂದ 5 ವರ್ಷದೊಳಗೆ 6.00% (0.10% ಇಳಿಕೆ)
5 ವರ್ಷದಿಂದ 10 ವರ್ಷದೊಳಗೆ 6.00% (0.10% ಇಳಿಕೆ)
ಹಿರಿಯ ನಾಗರೀಕರಿಗೆ ನೀಡುವ ಹೊಸ ಬಡ್ಡಿ ದರಗಳು
7 ರಿಂದ 45 ದಿನಗಳಿಗೆ 5.00% (ಯಾವುದೇ ಬದಲಾವಣೆ ಇಲ್ಲ)
46 ರಿಂದ 179 ದಿನಗಳವರೆಗೆ 5.50% ( 0.50% ಇಳಿಕೆ)
180 ದಿನಗಳಿಂದ 210 ದಿನಗಳವರೆಗೆ 6.00% (0.30% ಇಳಿಕೆ)
211 ದಿನಗಳಿಂದ 1 ವರ್ಷದೊಳಗೆ 6.00% (0.30% ಇಳಿಕೆ)
1 ವರ್ಷದಿಂದ 2 ವರ್ಷದವರೆಗೆ 6.50% (0.10% ಇಳಿಕೆ)
2 ವರ್ಷದಿಂದ 3 ವರ್ಷದೊಳಗೆ 6.50% (0.10% ಇಳಿಕೆ)
3 ವರ್ಷದಿಂದ 5 ವರ್ಷದೊಳಗೆ 6.50% (0.10% ಇಳಿಕೆ)
5 ವರ್ಷದಿಂದ 10 ವರ್ಷದೊಳಗೆ 6.50% (0.10% ಇಳಿಕೆ)


Click it and Unblock the Notifications