ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದೆ. ನಂತರ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಏರಿಸಿದೆ. ಅದಾದ ಬಳಿಕ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಭಾರೀ ಜನಮನಸೆಳೆದಿದೆ. ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಮೇಲಿನ ಬಡ್ಡಿದರವನ್ನು ಏರಿಸಿದೆ. ಎಸ್‌ಬಿಐನ ಹೊಸ ಬಡ್ಡಿದರವು ಫೆಬ್ರವರಿ 15, 2023ರಿಂದ ಜಾರಿಗೆ ಬರಲಿದೆ.
ಆದರೆ ಎಫ್‌ಡಿಯಿಂದ ಲಭ್ಯವಾಗುವ ರಿಟರ್ನ್ ಕ್ಯಾಲ್ಕುಲೇಟ್ ಮಾಡುವುದು ಎಲ್ಲರಿಗೂ ಕೂಡಾ ಸಾಧ್ಯವಾಗದು. ಹಲವಾರು ಮಂದಿ ಹೂಡಿಕೆ ಮಾಡುವುದಕ್ಕೂ ಮುನ್ನ ಎಷ್ಟು ರಿಟರ್ನ್ ಲಭ್ಯವಾಗಲಿದೆ ಎಂಬುವುದು ಹಲವಾರು ಮಂದಿಯ ಕುತೂಹಲವಾಗಿದೆ. ಹೂಡಿಕೆದಾರರು ಎಸ್‌ಬಿಐನಲ್ಲಿ ಎಫ್‌ಡಿ ಹೂಡಿಕೆ ಮಾಡಲು ನಿರ್ಧಾರ ಮಾಡಿದರೆ, ರಿಟರ್ನ್ ಅನ್ನು ಕಾಲ್ಕುಲೇಟ್ ಮಾಡುವುದು ಕಷ್ಟವಾಗುತ್ತದೆ. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಎಫ್‌ಡಿ ಡೆಪಾಸಿಟ್ ಕಾಲ್ಕುಲೇಟರ್ ಇದೆ. ಒಂದು ವರ್ಷಕ್ಕೆ 1 ಲಕ್ಷ ರೂ. ಹೂಡಿಕೆ ಮಾಡಿದರೆ ನಿಮಗೆಷ್ಟು ರಿಟರ್ನ್ ನೋಡಿ...

1 ಲಕ್ಷ ರೂ. ಹೂಡಿಕೆ ಮಾಡಿದರೆ ರಿಟರ್ನ್ ಎಷ್ಟು?
ಮೆಚ್ಯೂರಿಟಿ ವೇಳೆ ಬಡ್ಡಿದರದೊಂದಿಗೆ ಎಷ್ಟು ಮೊತ್ತವನ್ನು ಎಸ್‌ಬಿಐನಲ್ಲಿ ಪಡೆಯಲು ಸಾಧ್ಯ ಎಂಬುವುದು ತಿಳಿಯುವುದು ಮುಖ್ಯವಾಗಿದೆ. 1 ವರ್ಷದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಎಸ್‌ಬಿಐ ಬಡ್ಡಿದರ ಶೇಕಡ 6.80ರಷ್ಟಿದೆ. ಎಸ್‌ಬಿಐ ಫಿಕ್ಸಿಡ್ ಡೆಪಾಸಿಟ್ ಕಾಲ್ಕುಲೇಟರ್ ಪ್ರಕಾರ, ನೀವು 1 ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ, ಒಂದು ವರ್ಷದ ಅವಧಿಗೆ 6,975 ರೂಪಾಯಿ ರಿಟರ್ನ್ ಬಡ್ಡಿದರದ ಆಧಾರದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಂದರೆಎಸ್‌ಬಿಐ ಎಫ್‌ಡಿಯಲ್ಲಿ ಮೆಚ್ಯೂರಿಟಿ ವೇಳೆಗೆ ನೀವು ಒಟ್ಟಾಗಿ 1,06,975 ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ.
ಇನ್ನು ಎಸ್‌ಬಿಐ 2 ವರ್ಷದಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಬಡ್ಡಿದರವನ್ನು ಶೇಕಡ 6.75ರಿಂದ ಶೇಕಡ 7ಕ್ಕೆ ಏರಿಸಿದೆ. ನೀವು ಒಂದು ಲಕ್ಷ ರೂಪಾಯಿಯನ್ನು 2 ವರ್ಷದ ಅವಧಿಗೆ ಡೆಪಾಸಿಟ್ ಮಾಡಿದರೆ, 14,888 ರೂಪಾಯಿ ಬಡ್ಡಿದರ ಲೆಕ್ಕಾಚಾರದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಒಟ್ಟಾಗಿ ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿ, 14,888 ರೂಪಾಯಿ ಬಡ್ಡಿದರ ಸೇರಿ 1,14,888 ರೂಪಾಯಿ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
3 ವರ್ಷದ ಎಫ್‌ಡಿ ಮೇಲಿ ಬಡ್ಡಿದರವನ್ನು ಕೂಡಾ ಎಸ್‌ಬಿಐ ಶೇಕಡ 6.25ರಿಂದ ಶೇಕಡ 6.50ಕ್ಕೆ ಏರಿಸಿದೆ. ಎಸ್‌ಬಿಐನ ಕಾಲ್ಕುಲೇಟರ್ ಪ್ರಕಾರವಾಗಿ, ಮೂರು ವರ್ಷದ ಎಫ್‌ಡಿ ಮೇಲೆ 21,341 ರೂಪಾಯಿ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದರೆ ಮೂರು ವರ್ಷದಲ್ಲಿ ನಿಮ್ಮ ಮೊತ್ತವು 1,21,341 ರೂಪಾಯಿಗೆ ಏರಿಕೆಯಾಗಲಿದೆ. ಇನ್ನು 4 ವರ್ಷದ ಎಫ್‌ಡಿ ಮೇಲೆ ಎಸ್‌ಬಿಐ ವಾರ್ಷಿಕವಾಗಿ ಶೇಕಡ 6.5ರಷ್ಟು ಬಡ್ಡಿದರ ನೀಡುತ್ತದೆ.
ಎಸ್‌ಬಿಐನಲ್ಲಿ 1 ಲಕ್ಷ ರೂಪಾಯಿಯ ಎಫ್‌ಡಿಯನ್ನು 4 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ, ನೀವು 29,422 ರೂಪಾಯಿಯನ್ನು ರಿಟರ್ನ್ ಆಗಿ ಪಡೆಯಲು ಸಾಧ್ಯವಾಗುತ್ತದೆ. 5 ವರ್ಷದ ಅವಧಿಯ 1 ಲಕ್ಷ ರೂಪಾಯಿ ಎಫ್‌ಡಿ ಮೇಲೆ ನೀವು ಶೇಕಡ 6.50ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. 5 ವರ್ಷದ ಎಫ್‌ಡಿ ಮೇಲೆ 38,042 ರೂಪಾಯಿ ರಿಟರ್ನ್ ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ನಿಮಗೆ 1,38,042 ರಿಟರ್ನ್ ಲಭ್ಯವಾಗಲಿದೆ.


Click it and Unblock the Notifications